Udayavni Special

ಗ್ರಾಪಂ ಕಾರ್ಯದರ್ಶಿ ವರ್ಗಾವಣೆಗೆ ಒತ್ತಾಯ


Team Udayavani, Sep 8, 2020, 5:38 PM IST

ಗ್ರಾಪಂ ಕಾರ್ಯದರ್ಶಿ ವರ್ಗಾವಣೆಗೆ ಒತ್ತಾಯ

ಕುಮಟಾ: ತಾಲೂಕಿನ ನಾಡುಮಾಸ್ಕೇರಿ ಗ್ರಾ.ಪಂ ಗ್ರೇಡ್‌ – 2 ಕಾರ್ಯದರ್ಶಿಯಾಗಿ ವಿನಾಯಕ ಸಿದ್ದಾಪುರ ಕಳೆದ 10 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಅಲ್ಲದೇ, ಅವರು ಅತ್ಯಂತ ಭ್ರಷ್ಟರಾಗಿದ್ದು ಅವರನ್ನು ಶೀಘ್ರ ವರ್ಗಾಯಿಸಬೇಕೆಂದು ಒತ್ತಾಯಿಸಿ, ಕರವೇ ನಾಡುಮಾಸ್ಕೇರಿ ಘಟಕದ ವತಿಯಿಂದ ಉಪವಿಭಾಗಾಧಿಕಾರಿಗೆ ಸೋಮವಾರ ಮನನಿ ಸಲ್ಲಿಸಲಾಯಿತು.

ಗ್ರಾಪಂ ಆಡಳಿತದಲ್ಲಿ ಗ್ರೇಡ್‌ 2 ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿರುವ ವಿನಾಯಕ ಅವರು, ತಾನೇ ಚುನಾಯಿತ ಅಧ್ಯಕ್ಷನೆಂಬಂತೆ ವರ್ತಿಸುತ್ತಿದ್ದು, ಗ್ರಾಪಂ ಆಡಳಿತದಲ್ಲಿ ನೇರವಾಗಿ ಹಸ್ತಕ್ಷೇಪ ಮಾಡುತ್ತಿದ್ದಾರೆ. ನಾಡು ಮಾಸ್ಕೇರಿ ಗ್ರಾಪಂ ಸಾರ್ವಜನಿಕರಿಗೆ ತಪ್ಪು ಮಾರ್ಗದರ್ಶನನೀಡುತ್ತಿದ್ದಾರೆ. ಪಂಚಾಯತದ ಪ್ರತಿಯೊಂದು ಯೋಜನೆಯಲ್ಲಿ ಜನರಿಂದ ಹಣ ಪೀಕುತ್ತಿದ್ದಾರೆ. ಇವರು ಸರಕಾರಿ ನೌಕರನಾಗಿರದೆ, ರಾಜಕೀಯ ಪಕ್ಷ ಮತ್ತು ಮುಖಂಡರೊಂದಿಗೆ ಶಾಮೀಲಾಗಿ ನಾಡುಮಾಸ್ಕೇರಿ ಗ್ರಾಪಂ ಗೋಮಾಳ ಸ.ನಂ. 338 ನ್ನು ಆಟದ ಮೈದಾನ ನಿರ್ಮಿಸಲು ತಡೆ ಮಾಡುತ್ತಿದ್ದಾರೆ.

ಇವರ ಲಂಚತನಕ್ಕೆ ಸಾರ್ವಜನಿಕರು ಹೈರಾಣಾಗಿದ್ದು, ಇದರಿಂದ ಬಡ ಜನತೆ ಹಿಡಿಶಾಪ ಹಾಕುತ್ತಿದ್ದಾರೆ. ಇವರನ್ನು ಬದಲಾಯಿಸಲು ಶತಾಯಗತಾಯ ಪ್ರಯತ್ನಿಸಿದರೂ ಮೇಲಾಧಿಕಾರಿಗಳ ಕೃಪೆಯಿಂದ 10 ವರ್ಷಗಳ ಕಾಲ ವರ್ಗಾವಣೆಗೊಳ್ಳದೇ, ಒಂದೇ ಸ್ಥಳದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪ್ರತಿಯೊಂದು ಗ್ರಾಪಂ ಕೆಲಸ ಕಾರ್ಯಗಳಿಗೆ ಕಮಿಶನ್‌ ನೀಡಲು ಒತ್ತಾಯಿಸುತ್ತಾರೆ. ಹಾಗೂ ಸಾರ್ವಜನಿಕರ ಕುಂದು – ಕೊರತೆಗಳಿಗೆ ಸ್ಪಂದಿಸದೇ, ಸರಕಾರಿ ಕರ್ತವ್ಯದಲ್ಲಿ ನಿಷ್ಕಾಳಜಿ ತೋರುತ್ತಿದ್ದಾರೆ. ಈ ಬಗ್ಗೆ ಉನ್ನತ ಮಟ್ಟದ ಅಧಿಕಾರಿಗಳು ತನಿಖೆ ನಡೆಸಬೇಕು ಹಾಗೂ ಕೇಂದ್ರ ಸ್ಥಾನದಲ್ಲಿ ವಾಸ್ತವ್ಯವಿರದೇ, ಸಾರ್ವಜನಿಕರ ಕುಂದು ಕೊರತೆಗಳಿಗೆ ಸ್ಪಂದಿಸದೆ ಕರ್ತವ್ಯ ಲೋಪ ಎಸಗುತ್ತಿರುವ ವಿನಾಯಕ ಸಿದ್ದಾಪುರ ಅವರನ್ನು ವರ್ಗಾಯಿಸಬೇಕೆಂದು ಮನವಿಯಲ್ಲಿ ಒತ್ತಾಯಿಸಿದರು.

ಕರವೇ ತಾಲೂಕಾಧ್ಯಕ್ಷ ತಿಮ್ಮಪ್ಪ ನಾಯ್ಕ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಣಪತಿ ನಾಯ್ಕ, ಪದಾಧಿಕಾರಿಗಳಾದ ವಸಂತ ಶೆಟ್ಟಿ, ಅಶೋಕ ಗೌಡ, ಸಂತೋಷ ನಾಯ್ಕ, ಮಂಜುನಾಥ ನಾಯ್ಕ, ಜಗದೀಶ ಅಂಬಿಗ, ಗಂಗಾಧರ ಅಂಬಿಗ ಸೇರಿದಂತೆ ಹಲವರಿದ್ದರು.

ಟಾಪ್ ನ್ಯೂಸ್

ಕೋಲ್ಕತಾಕ್ಕೆ  ಶರಣಾದ ಮುಂಬೈ

ಕೋಲ್ಕತಾಕ್ಕೆ  ಶರಣಾದ ಮುಂಬೈ

ಅಯೋಧ್ಯೆಯಲ್ಲಿ 500 ಡ್ರೋನ್‌ಗಳ ಮೂಲಕ ರಾಮಾಯಣ ದರ್ಶನ

ಅಯೋಧ್ಯೆಯಲ್ಲಿ 500 ಡ್ರೋನ್‌ಗಳ ಮೂಲಕ ರಾಮಾಯಣ ದರ್ಶನ

ದಿವ್ಯಾಂಗರಿಗೆ ಮನೆಯಲ್ಲೇ ಲಸಿಕೆ; ಕೇಂದ್ರ ಸರ್ಕಾರ ಘೋಷಣೆ

ದಿವ್ಯಾಂಗರಿಗೆ ಮನೆಯಲ್ಲೇ ಲಸಿಕೆ; ಕೇಂದ್ರ ಸರ್ಕಾರ ಘೋಷಣೆ

ಮೇಕಪ್‌ ಸಾಮಗ್ರಿ ಕ್ಷೇತ್ರಕ್ಕೆ ರಿಲಯನ್ಸ್‌ ಲಗ್ಗೆ?

ಮೇಕಪ್‌ ಸಾಮಗ್ರಿ ಕ್ಷೇತ್ರಕ್ಕೆ ರಿಲಯನ್ಸ್‌ ಲಗ್ಗೆ?

ಲೋಕಸಭೆ ಸ್ಪೀಕರ್‌ ಭಾಷಣ ಬಹಿಷ್ಕಾರಕ್ಕೆ ಕಾಂಗ್ರೆಸ್‌ ನಿರ್ಧಾರ

ಲೋಕಸಭೆ ಸ್ಪೀಕರ್‌ ಭಾಷಣ ಬಹಿಷ್ಕಾರಕ್ಕೆ ಕಾಂಗ್ರೆಸ್‌ ನಿರ್ಧಾರ

ಮೋದಿ ವಿಚಾರದಲ್ಲಿ ಬಿಎಸ್‌ವೈ ಹೊಗಳಿಕೆ ಸಿದ್ದರಾಮಯ್ಯ ತೆಗಳಿಕೆ

ಮೋದಿ ವಿಚಾರದಲ್ಲಿ ಬಿಎಸ್‌ವೈ ಹೊಗಳಿಕೆ ಸಿದ್ದರಾಮಯ್ಯ ತೆಗಳಿಕೆ

ಬಳಸಿದ ಮಾಸ್ಕನ್ನೇ ಇನ್ನೊಬ್ಬರಿಗೆ ಹಾಕಿದ್ರು!

ಬಳಸಿದ ಮಾಸ್ಕನ್ನೇ ಇನ್ನೊಬ್ಬರಿಗೆ ಹಾಕಿದ್ರು!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

vghfgh

ಚರಂಡಿಯಲ್ಲಿ ಬಿದ್ದಿದ್ದ ಹೋರಿ ರಕ್ಷಣೆ

gyhdtryt6

ಮುಂಡಗೋಡ : ಪಿಡಿಒ ಮೇಲೆ ಎಸ್‍ಡಿಎಮ್‍ಸಿ ಅಧ್ಯಕ್ಷನಿಂದ ಹಲ್ಲೆ

dandeli news

ವಿಸರ್ಜನೆಗೆ ಬರಲೊಪ್ಪದ ಗಣಪ! ಬೈಲುಪಾರ್ ನಲ್ಲೊಂದು ವಿಚಿತ್ರ ಘಟನೆ

ಕಾರವಾರ:  ಪ್ರವಾಸೋದ್ಯಮ, ಜಲಸಾಹಸ ಕ್ರೀಡೆಗೆ ಸರ್ಕಾರದ ಅನುಮತಿ

ಕಾರವಾರ:  ಪ್ರವಾಸೋದ್ಯಮ, ಜಲಸಾಹಸ ಕ್ರೀಡೆಗೆ ಸರ್ಕಾರದ ಅನುಮತಿ

Tourism

ದಾಂಡೇಲಿ-ಜೊಯಿಡಾ ತಾಲೂಕಿನಲ್ಲಿ ಚುರುಕುಗೊಂಡ ಪ್ರವಾಸೋದ್ಯಮ ಚಟುವಟಿಕೆ

MUST WATCH

udayavani youtube

ಚರಂಡಿಯಲ್ಲಿ ಬಿದ್ದಿದ್ದ ಹೋರಿ ರಕ್ಷಣೆ

udayavani youtube

ಈ ಅಂಗಡಿಯಲ್ಲಿ ದೊರೆಯುವ ಎಲ್ಲಾ ಸಾಮಗ್ರಿಗಳು ಶೇ.100 ರಷ್ಟು ರಾಸಾಯನಿಕ ರಹಿತ!

udayavani youtube

LIVE : ವಿಧಾನಸಭೆ​ ಕಲಾಪ ನೇರ ಪ್ರಸಾರ | 15th Assembly | 10th Session | 23-09-2021

udayavani youtube

ಮಹಿಳೆಯಿಂದ ಮಸಾಜ್‌ ಮಾಡಿಸಿಕೊಂಡ ಶಿಕ್ಷಕ ಅಮಾನತು|

udayavani youtube

ಉಡುಪಿ ಮುಳುಗುತ್ತಾ ?

ಹೊಸ ಸೇರ್ಪಡೆ

Untitled-2

ಮಲ್ಪೆ: ಸಮುದ್ರ ಪಾಲಾಗುತ್ತಿದ್ದ ನಾಲ್ವರು ಪ್ರವಾಸಿಗರ ರಕ್ಷಣೆ 

ಕೋಲ್ಕತಾಕ್ಕೆ  ಶರಣಾದ ಮುಂಬೈ

ಕೋಲ್ಕತಾಕ್ಕೆ  ಶರಣಾದ ಮುಂಬೈ

ಅಯೋಧ್ಯೆಯಲ್ಲಿ 500 ಡ್ರೋನ್‌ಗಳ ಮೂಲಕ ರಾಮಾಯಣ ದರ್ಶನ

ಅಯೋಧ್ಯೆಯಲ್ಲಿ 500 ಡ್ರೋನ್‌ಗಳ ಮೂಲಕ ರಾಮಾಯಣ ದರ್ಶನ

ದಿವ್ಯಾಂಗರಿಗೆ ಮನೆಯಲ್ಲೇ ಲಸಿಕೆ; ಕೇಂದ್ರ ಸರ್ಕಾರ ಘೋಷಣೆ

ದಿವ್ಯಾಂಗರಿಗೆ ಮನೆಯಲ್ಲೇ ಲಸಿಕೆ; ಕೇಂದ್ರ ಸರ್ಕಾರ ಘೋಷಣೆ

ಗದ್ದಲದ ಗೂಡಾದ ಉದ್ಯಾವರ ಗ್ರಾಮ ಸಭೆ

ಗದ್ದಲದ ಗೂಡಾದ ಉದ್ಯಾವರ ಗ್ರಾಮ ಸಭೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.