Udayavni Special

ಸಿವಿಲ್ ಕಾಮಗಾರಿಯಲ್ಲಿ ದುಡಿದದ್ದು ಜಿಎಸ್‌ಟಿ ಪಾಲು


Team Udayavani, Aug 30, 2019, 12:11 PM IST

uk-tdy-2

ಕಾರವಾರ: ಎಸ್ಸಿಎಸ್ಟಿ ಗುತ್ತಿಗೆದಾರರ ತಾಲೂಕು ಸಂಘಟನೆ ಅಧ್ಯಕ್ಷ ದೀಪಕ್‌ ಕುಡಾಳಕರ್‌ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಕಾರವಾರ: ದಲಿತ ಸಮುದಾಯದ ಗುತ್ತಿಗೆದಾರರು ಸಿವಿಲ್ ಕಾಮಗಾರಿಗಳಲ್ಲಿ ದುಡಿದದ್ದರ ಹೆಚ್ಚಿನ ಪಾಲು ಜಿಎಸ್‌ಟಿ ಕಟ್ಟಲು ಹೋಗುತ್ತದೆ. ಇದನ್ನು ಸರ್ಕಾರ ಸರಿಪಡಿಸಬೇಕು. ಗುತ್ತಿಗೆ ಪಡೆಯಲು ನಾವು ಸಂಘಟಿತರಾಗಬೇಕಾಗಿದೆ. ಇದಕ್ಕಾಗಿ ಜಿಲ್ಲಾ ಮಟ್ಟದ ಸಂಘಟನೆ ಕಟ್ಟುವ ಚಿಂತನೆ ನಡೆದಿದೆ ಎಂದು ಎಸ್ಸಿಎಸ್ಟಿ ಗುತ್ತಿಗೆದಾರರ ತಾಲೂಕು ಸಂಘಟ ನೆ ಅಧ್ಯಕ್ಷ ದೀಪಕ್‌ ಕುಡಾಳಕರ್‌ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕಪಯೋಗಿ ಇಲಾಖೆ ಎಸ್‌.ಆರ್‌ ದರದ ಕಾಮಗಾರಿ ನೀಡಿದ್ದು, ಉದಾಹರಣೆಗೆ ಹತ್ತು ಲಕ್ಷದ ಕಾಮಗಾರಿ ಮಾಡಿದರೆ ಅದರಲ್ಲಿ ಶೇ.2 ಜಿಎಸ್‌ಟಿ ಕಡಿತಗೊಳಿಸುತ್ತಾರೆ, ನಂತರ ನಮ್ಮ ಕಡೆಯಿಂದ ಶೇ.10 ರಷ್ಟು ಜಿಎಸ್‌ಟಿ ತುಂಬಲು ಹೇಳುತ್ತಾರೆ. ಹಾಗಾಗಿ ದುಡಿದ ಹಣವೆಲ್ಲಾ ಜಿಎಸ್‌ಟಿ ಪಾಲಾಗುತ್ತದೆ. ಇದರ ವಿರುದ್ಧ ಹೋರಾಟ ರೂಪಿಸಲು ಎಸ್ಸಿಎಸ್ಟಿ ಗುತ್ತಿಗೆದಾರರ ಸಂಘಟನೆ ಜಿಲ್ಲಾ ಮಟ್ಟದಲ್ಲಿ ಬಲಪಡಿಸಲು ಯೋಚನೆ ನಡೆದಿದೆ. ಜಿಲ್ಲೆಯ ವಿವಿಧ ತಾಲೂಕುಗಳಲ್ಲಿರುವ ದಲಿತ ಗುತ್ತಿಗೆದಾರರು ಒಗ್ಗಟ್ಟಾಗಬೇಕಿದೆ ಎಂದು ಕುಡಾಳಕರ್‌ ಹೇಳಿದರು.

2019 ಮಾರ್ಚ್‌ ನಂತರ ಬಂದಿರುವ ಕಾಮಗಾರಿಯಲ್ಲಿ (ಕಟ್ಟಡ ಕಾಮಗಾರಿ ಹೊರತು ಪಡಿಸಿ) ಉಳಿದ ಕಾಮಗಾರಿಗಳಿಗೆ ಶೇ.12 ರಷ್ಟು ಜಿಎಸ್‌ಟಿ ನೀಡಿರುತ್ತಾರೆ. ಆದರೆ ಎಸ್ಸಿಎಸ್ಟಿ ಗುತ್ತಿಗೆದಾರರಿಗೆ ಮಾರ್ಚ್‌ 2019ರ ಹಿಂದಿನ ಕಾಮಗಾರಿಗಳಿಗೆ ಜಿಎಸ್‌ಟಿ ಕೈಬಿಡಬೇಕು ಎಂದು ಆಗ್ರಹಿಸಿದರು.

2015-16 ನೇ ಸಾಲಿನಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿದ್ದಾಗ ಪರಿಶಿಷ್ಟ ಜಾತಿ ಮತ್ತು ಪಂಗಡದ ಗುತ್ತಿಗೆದಾರರಿಗೆ ಶೇ.24.75ರ ಅನುಪಾತದಲ್ಲಿ 50 ಲಕ್ಷದ ವರೆಗಿನ ಸರ್ಕಾರಿ ಕಾಮಗಾರಿಯನ್ನು (ಪಿಡಬ್ಲೂಡಿ, ಜಿ.ಪಂ. ತಾ.ಪ. ನಗರಸಭೆ ಇತ್ಯಾದಿ ಇಲಾಖೆ) ನೀಡಲು ಆದೇಶ ಹೊರಡಿಸಿದ್ದು ಅದಕ್ಕೆ ನಾವು ಸ್ವಾಗತಿಸುತ್ತಿದ್ದೇವೆ.

ಸರ್ಕಾರಿ ಆದೇಶದ ಪ್ರಕಾರ ಕಾಮಗಾರಿಯ ಶೇ.25ರಷ್ಟು ಸಮಾನಾಂತರ ಕಾಮಗಾರಿ ಪ್ರಮಾಣ ಪತ್ರ ನೀಡಲು ಸೂಚಿಸಿದ್ದು, ಇದರಿಂದಾಗಿ ದಲಿತ ಗುತ್ತಿಗೆದಾರರಿಗೆ ಕಾಮಗಾರಿ ಟೆಂಡರ್‌ ಹಾಕಲು ತೊಂದರೆಯಾಗುತ್ತಿತ್ತು. ಇದರಿಂದಾಗಿ ಕಾಮಗಾರಿಯ ಟೆಂಡರ್‌ 1, ಟೆಂಡರ್‌ 2 ಕರೆ ನೀಡಿ 3ನೇ ಕರೆಯನ್ನು ಸಾಮಾನ್ಯ ಗುತ್ತಿಗೆದಾರರಿಗೆ ನೀಡುತ್ತಿದ್ದರು.

ಇದೀಗ ನೀಡಿರುವ ಆದೇಶದ ಪ್ರಕಾರ ಸಮಾನಾಂತರ ಕಾಮಗಾರಿ ರದ್ದುಗೊಳಿಸಿ ಯಾವುದೇ ಕಾಮಗಾರಿ ಪ್ರಮಾಣ ಪತ್ರವನ್ನು ನೀಡಿ ಕೆಲಸವನ್ನು ಮಾಡಲು ಅವಕಾಶ ನೀಡಿರುತ್ತಾರೆ ಎಂದರು.

ತೊಂದರೆ ನಿವಾರಣೆಗೆ ಸಂಘಟನೆ: ಅದೇ ರೀತಿಯಾಗಿ ಅನೇಕ ತೊಂದರೆಗಳ ನಿವಾರಣೆಗೆ ದಲಿತ ಗುತ್ತಿಗೆದಾರರು ಕಾರವಾರ ತಾಲೂಕಿನಲ್ಲಿ ಸಂಘಟನೆ ಮಾಡಿಕೊಂಡಿರುತ್ತೇವೆ. ಜಿಲ್ಲೆಯ ಎಲ್ಲಾ ತಾಲೂಕಿನಲ್ಲಿರುವ ಎಸ್‌ಸ್ಸಿಎಸ್ಟಿ ಗುತ್ತಿಗೆದಾರರು ಆಯಾ ತಾಲೂಕಿನಲ್ಲಿ ಸಂಘಟನೆ ರಚಿಸಿ ಜಿಲ್ಲಾ ಸಂಘಟನೆಯನ್ನು ಮಾಡಲು ಸಹಕರಿಸಬೇಕಿದೆ.

ಹೆಚ್ಚಿನ ವಿವರಗಳಿಗೆ ದೀಪಕ ಕುಡಾಳಕರ 9448628953, ಕಾರ್ಯದರ್ಶಿ ಎಲಿಷಾ ಯಲಕಪಾಟಿ 9036837532 ಇವರನ್ನು ಸಂಪರ್ಕಿ ಸಬೇಕೆಂದು ವಿನಂತಿಸುತ್ತಿದ್ದೇವೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕಾರವಾರ ತಾಲೂಕಿನ ಎಸ್ಸಿಎಸ್ಟಿ ಗುತ್ತಿಗೆದಾರರ ಸಂಘದ ಪ್ರಧಾನ ಕಾರ್ಯದರ್ಶಿ ಎಲಿಷಾ ಯಲಕಪಾಟಿ, ಉಪಾಧ್ಯಕ್ಷ ಧರ್ಮರಾಯ ಮುಡಸಾಲೆ, ಖಜಾಂಚಿ ಪ್ರಕಾಶ ವಡ್ಡರ, ಸದಸ್ಯರಾದ ಭೋಜರಾಜ ದೊರೆಸ್ವಾಮಿ, ರೋಹಿತ ವೆಂಕಟೇಶ, ಚಿನ್ನಾ ಬಾಬು ಯಲಕಪಾಟಿ ಹಾಜರಿದ್ದರು.

ಉದಯವಾಣಿ ಸುದ್ದಿ ಈಗ ಟೆಲಿಗ್ರಾಂನಲ್ಲೂ ಲಭ್ಯ; ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಕರಾವಳಿಯಲ್ಲಿ ವಿಶ್ವ ಮಟ್ಟದ ಅಕ್ವೇರಿಯಂ

ಕರಾವಳಿಯಲ್ಲಿ ವಿಶ್ವ ಮಟ್ಟದ ಅಕ್ವೇರಿಯಂ

ಎಲ್ಲ ಜಿಲ್ಲೆಗಳಲ್ಲಿ ರಾಜ್ಯ ಕಾರ್ಯಕಾರಿಣಿ ಸಭೆಗೆ ತೀರ್ಮಾನ

ಎಲ್ಲ ಜಿಲ್ಲೆಗಳಲ್ಲಿ ರಾಜ್ಯ ಕಾರ್ಯಕಾರಿಣಿ ಸಭೆಗೆ ತೀರ್ಮಾನ

ಸೂರ್ಯನ ಬೆಳಕು ಬೀಳುವ ಚಂದ್ರನ ಮೇಲ್ಮೈನಲ್ಲೂ ಜಲಕಣ!

ಸೂರ್ಯನ ಬೆಳಕು ಬೀಳುವ ಚಂದ್ರನ ಮೇಲ್ಮೈನಲ್ಲೂ ಜಲಕಣ!

ಅಮಿತಾಭ್‌ಗೆ “ವಿಶ್ವಾಸಾರ್ಹ” ಪಟ್ಟ; “ನಂಬಿಕಸ್ಥ” ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ

ಅಮಿತಾಭ್‌ಗೆ “ವಿಶ್ವಾಸಾರ್ಹ” ಪಟ್ಟ; ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ “ನಂಬಿಕಸ್ಥ” ಪಟ್ಟ

ಅಪ್ಪ-ಮಗನಿಗೆ 7 ಗಂಟೆ ಪೊಲೀಸರಿಂದ ಚಿತ್ರಹಿಂಸೆ!

ಅಪ್ಪ-ಮಗನಿಗೆ 7 ಗಂಟೆ ಪೊಲೀಸರಿಂದ ಚಿತ್ರಹಿಂಸೆ!

IPL 2020‌ : ಹೈದರಾಬಾದ್‌, ಡೆಲ್ಲಿ ಮುಖಾಮುಖಿ: ವಾರ್ನರ್ ಪಡೆಗೆ 88 ರನ್ ಗಳ ಗೆಲುವು

IPL 2020‌ : ಹೈದರಾಬಾದ್‌, ಡೆಲ್ಲಿ ಮುಖಾಮುಖಿ: ಡೇವಿಡ್‌ ವಾರ್ನರ್‌ಗೆ ಗೆಲುವಿನ ಗಿಫ್ಟ್‌

ಉಪ್ಪಿನಂಗಡಿ: ಚೂರಿಯಿಂದ ತಿವಿದು 4 ಲ.ರೂ. ದರೋಡೆ

ಉಪ್ಪಿನಂಗಡಿ: ಚೂರಿಯಿಂದ ತಿವಿದು 4 ಲ.ರೂ. ದರೋಡೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

uk-tdy-2

ಕೋವಿಡ್‌ನಿಂದ ನಲುಗುತ್ತಿದೆ ಜಿಲ್ಲೆಯ ಆರ್ಥಿಕತೆ

UK-TDY-1

ಅಪರೂಪದ ಅಪ್ಪೆ ಮಾವಿಗೆ ಕಸಿ ಕಾಯಕಲ್ಪ

UK-TDY-1

ನೆರೆಯಿಂದ 37 ಗ್ರಾಮಗಳಿಗೆ ಹಾನಿ

uk-tdy-1

ಯಲ್ಲಾಪುರದಲ್ಲಿ ನಿವೃತ್ತ ಯೋಧರಿಗೆ ಸನ್ಮಾನ

ಕಾರವಾರ ನೌಕಾನೆಲೆಗೆ ಅಡ್ಮಿರಲ್‌ ಭೇಟಿ

ಕಾರವಾರ ನೌಕಾನೆಲೆಗೆ ಅಡ್ಮಿರಲ್‌ ಭೇಟಿ

MUST WATCH

udayavani youtube

ಭಕ್ತಿ-ಸಂಭ್ರಮದ ಮಂಗಳೂರು ದಸರಾ -2020 ಸಂಪನ್ನ

udayavani youtube

ರಸ್ತೆಯಲ್ಲಿ ಉಂಟಾದ ಕೃತಕ ನೆರೆಯಲ್ಲೇ ಈಜಾಡಿದ ಯುವಕ

udayavani youtube

ಕೊರೋನಾ: ಶೋಚನೀಯವಾದ ತಿರುಗುವ ತೊಟ್ಟಿಲು ತಿರುಗಿಸುವ ಕೈಗಳ ಕಥೆ!

udayavani youtube

Story behind Vijayadashami celebration | ವಿಜಯದಶಮಿ ಆಚರಣೆಯ ಹಿಂದಿನ ಕಥೆ | Udayavani

udayavani youtube

450 ಕ್ಕೂ ಅಧಿಕ ಬೀದಿ ಬದಿ ಶ್ವಾನಗಳಿಗೆ ನಿತ್ಯ ಆಹಾರ ನೀಡುತ್ತಾರೆ ರಜನಿ ಶೆಟ್ಟಿ!ಹೊಸ ಸೇರ್ಪಡೆ

ಮುಂಗಾರು ಬೆಳೆ ಸಮೀಕ್ಷೆ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇ. 100 ಸಾಧನೆ

ಮುಂಗಾರು ಬೆಳೆ ಸಮೀಕ್ಷೆ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇ. 100 ಸಾಧನೆ

ಸ್ವೋದ್ಯೋಗಕ್ಕೆ ಜೀವಾಮೃತವಾದ ಕೃಷಿ ಕಾಯಕ

ಸ್ವೋದ್ಯೋಗಕ್ಕೆ ಜೀವಾಮೃತವಾದ ಕೃಷಿ ಕಾಯಕ

ಕಟಪಾಡಿ : ಶಿಥಿಲಾವಸ್ಥೆಯಲ್ಲಿ ಓವರ್‌ಹೆಡ್‌ ಟ್ಯಾಂಕ್‌

ಕಟಪಾಡಿ : ಶಿಥಿಲಾವಸ್ಥೆಯಲ್ಲಿ ಓವರ್‌ಹೆಡ್‌ ಟ್ಯಾಂಕ್‌

ಕರಾವಳಿಯಲ್ಲಿ ವಿಶ್ವ ಮಟ್ಟದ ಅಕ್ವೇರಿಯಂ

ಕರಾವಳಿಯಲ್ಲಿ ವಿಶ್ವ ಮಟ್ಟದ ಅಕ್ವೇರಿಯಂ

ಎಲ್ಲ ಜಿಲ್ಲೆಗಳಲ್ಲಿ ರಾಜ್ಯ ಕಾರ್ಯಕಾರಿಣಿ ಸಭೆಗೆ ತೀರ್ಮಾನ

ಎಲ್ಲ ಜಿಲ್ಲೆಗಳಲ್ಲಿ ರಾಜ್ಯ ಕಾರ್ಯಕಾರಿಣಿ ಸಭೆಗೆ ತೀರ್ಮಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.