ಅಪ್ರತಿಮ ವೀರ ಶಿವಾಜಿ ಮಹಾರಾಜ

ರಾಷ್ಟ್ರದ ಭವಿಷ್ಯಕ್ಕಾಗಿ ಬ್ರಿಟಿಷರೊಂದಿಗೆ ಹೋರಾಡಿದ ಅಗ್ರಗಣ್ಯ ನಾಯಕ: ಡಾ| ಹರೀಶಕುಮಾರ

Team Udayavani, Feb 20, 2020, 3:43 PM IST

ಹಳಿಯಾಳ: ಅಪ್ರತೀಮ ವೀರ ಛತ್ರಪತಿ ಶಿವಾಜಿ ಮಹಾರಾಜರು ದೇಶದ ಭವಿಷ್ಯಕ್ಕಾಗಿ ಹೋರಾಡಿದ ಅಗ್ರಗಣ್ಯ ನಾಯಕರಾಗಿದ್ದು ಸರ್ವರನ್ನು ಒಂದೂಗೂಡಿಸಿಕೊಂಡು ಹೋಗುತ್ತಿದ್ದ ಆ ನಾಯಕನ ತತ್ವಾದರ್ಶಗಳ ಪಾಲನೆ ಆಗಬೇಕಾದ ಅವಶ್ಯಕತೆ ಸಮಾಜಕ್ಕಿದೆ ಎಂದು ಜಿಲ್ಲಾಧಿಕಾರಿ ಡಾ| ಹರೀಶಕುಮಾರ ಅಭಿಪ್ರಾಯಪಟ್ಟರು.

ಅವರು ಪಟ್ಟಣದ ಮರಾಠಾ ಭವನದಲ್ಲಿ ನಡೆದ ಜಿಲ್ಲಾ ಮಟ್ಟದ ಶಿವಾಜಿ ಜಯಂತಿ ಉದ್ಘಾಟಿಸಿ ಮಾತನಾಡಿದರು. ಇತಿಹಾಸ ತಿಳಿದವರು ಮಾತ್ರ ಇತಿಹಾಸ ಸೃಷ್ಟಿಸಬಲ್ಲರು. ಅಂತಹವರ ಸಾಲಿನಲ್ಲಿ ಬರುವ ಶಿವಾಜಿ ಮಹಾರಾಜರ ಬಗೆಗಿನ ಜನರಲ್ಲಿರುವ ಗೌರವ ಅಭಿನಂದನಾರ್ಹ ಎಂದರು.

ಜಿಪಂ ಸದಸ್ಯೆ ಮಹೇಶ್ರಿ ಸಂಜು ಮಿಶ್ಯಾಳೆ ಮಾತನಾಡಿ ಹಿಂದವಿ ಸ್ವರಾಜ್ಯ, ಸನಾತನ ಪರಂಪರೆ, ಸಂಸ್ಕೃತೀಯ ರಕ್ಷಣೆಗೆ ಹೋರಾಡಿದ್ದ ಶಿವಾಜಿ ಮಹಾರಾಜರ ಬಗ್ಗೆ ಹೇಳುವುದು ಮಾತ್ರವಲ್ಲ ತಮ್ಮ ಮಕ್ಕಳಿಗೆ ಶಿಸ್ತು, ಸಂಸ್ಕಾರದ ಪಾಠ ಮೊದಲು ಮಾಡಬೇಕಿದೆ. ಮಕ್ಕಳು ದುಶ್ಚಟಗಳ ದಾಸರಾಗದಂತೆ ಪಾಲಕರು ನಿಗಾ ವಹಿಸಬೇಕೆಂದು ಕರೆ ನೀಡಿದರು.

ಸಮಾಜ ಸೇವಕ ಅಪ್ಪಾರಾವ ಪೂಜಾರಿ ಅವರು ಶಿವಾಜಿ ಮಹಾರಾಜರ ಬಗೆಗೆಗಿನ ರೋಚಕ ಮಾಹಿತಿಗಳನ್ನು ತಮ್ಮ ಉಪನ್ಯಾಸದಲ್ಲಿ ತೆರೆದಿಟ್ಟರು. ಮೊದಲು ಪಟ್ಟಣದ ಮಾರಾಠಾ ಭವನದ ಎದುರಿನಿಂದ ಝಾಂಜ್‌ ಪದಕ, ಡೊಳ್ಳು, ಬುಡಕಟ್ಟು ಸಿದ್ದಿ ಸಮುದಾಯ, ಗೌಳಿ ಜನಾಂಗದ ವಿಶಿಷ್ಟ ಸಾಂಪ್ರದಾಯಿಕ ನೃತ್ಯ, ಮಕ್ಕಳಿಂದ ಶಿವಾಜಿ ಮಹಾರಾಜ, ಜೀಜಾಮಾತೆಯ ಛದ್ಮವೇಶಗಳು, ಕೇಸರಿ ಬೃಹತ್‌ ಭಗವಾಧ್ವಜಗಳೊಂದಿಗೆ ಭವ್ಯ ಶೋಭಾಯಾತ್ರೆ ನಡೆಯಿತು.

ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿಯ ಕ್ರಾಂತೀವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ, ಶಿವಾಜಿ ವೃತ್ತದಲ್ಲಿರುವ ಸುಭಾಷಚಂಧ್ರ ಭೋಸ್‌ ಹಾಗೂ ಅಶ್ವಾರೂಢ ಶಿವಾಜಿ ಮಹಾರಾಜರ ಪುತ್ಥಳಿಗೆ ಬಳಿಕ ಧಾರವಾಡ ರಸ್ತೆಯಲ್ಲಿರುವ ಜಗಜ್ಯೋತಿ ಬಸವೇಶ್ವರ ಪುತ್ಥಳಿಗೆ ಮಾಲಾರ್ಪಣೆ ಮಾಡಲಾಯಿತು.

ಮರಾಠಾ ಸಮಾಜದ ಹಲವು ಕ್ಷೇತ್ರಗಳಲ್ಲಿ ಸಾಧನೆಗೈದಿರುವ ಸಾಧಕರನ್ನು ಹಾಗೂ ಪಿಯುಸಿ, ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತ್ಯುನ್ನತ ಅಂಕ ಪಡೆದಿರುವ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಬಳಿಕ ಛದ್ಮವೇಶ ಹಾಗೂ ವಿವಿಧ ಸ್ಪರ್ಧೆ ವಿಜೇತರಿಗೆ ಎಪಿಎಂಸಿ ಅಧ್ಯಕ್ಷ ಶ್ರೀನಿವಾಸ ಘೋಕ್ಲೃಕರ ಹಾಗೂ ಅವರ ಕುಟುಂಬದಿಂದ ನಗದು ಬಹುಮಾನ ಹಾಗೂ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು. ಸಿಪಿಐಗಳಾದ ಲೋಕಾಪುರ ಬಿಎಸ್‌, ಬಾಳಾಸಾಹೇಬ ಹುಲ್ಲನ್ನವರ ಇತರರು ಇದ್ದರು.

ಕರ್ನಾಟಕ ಕ್ಷತ್ರೀಯ ಮರಾಠಾ ಪರಿಷತ್‌ನ, ಹಳಿಯಾಳ ಮರಾಠಾ ಪರಿಷತ್‌ನ ಪ್ರಮುಖರು, ಮರಾಠಾ ಸಮಾಜದ ಗಣ್ಯರು, ಪುರಸಭೆ ಸದಸ್ಯರು ಇತರರು ಇದ್ದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ