Udayavni Special

ಕಪ್ಪು ತೀರಕ್ಕೆ ತೂಗುಸೇತುವೆ ವಿಳಂಬ


Team Udayavani, Feb 22, 2020, 3:09 PM IST

uk-tdy-2

ಕಾರವಾರ: ರಾಜ್ಯದ ಏಕೈಕ ಕಪ್ಪು ಮರಳಿನ ಕಡಲತೀರ ಎನ್ನುವ ಖ್ಯಾತಿ ಪಡೆದಿರುವ ಕಾರವಾರ ತಾಲೂಕಿನ ಮಾಜಾಳಿಯ ತೀಳ್‌ ಮಾತಿ ಬೀಚ್‌ ಪ್ರವಾಸೋದ್ಯಮ ಪಟ್ಟಿಗೆ ಸೇರುವ ಭಾಗ್ಯದಿಂದ ದೂರವೇ ಉಳಿದಿದೆ. ಬೀಚ್‌ ತಲುಪಲು ರಸ್ತೆ ಹಾಗೂ ತೂಗು ಸೇತುವೆ ಕಾಮಗಾರಿಗೆ ಕಾಲ ಕೂಡಿಬರುತ್ತಿಲ್ಲ. ಐದು ವರ್ಷಗಳ ಹಿಂದೆ ಈ ತೀರಕ್ಕೆ ಸಂಪರ್ಕ ಕಲ್ಪಿಸಲು ಯೋಜಿಸಿದ್ದ ತೂಗು ಸೇತುವೆಯ ಕಾಮಗಾರಿ ಇನ್ನೂ ಆರಂಭವಾಗದೆ ನೆನೆಗುದಿಗೆ ಬಿದ್ದಿದ್ದು, ಇದು ಪ್ರವಾಸೋದ್ಯಮಕ್ಕೂ ಹಿನ್ನಡೆಯಾದಂತಾಗಿದೆ.

ತೀಳ್‌ಮಾತಿ ಕಡಲತೀರಕ್ಕೆ ಮಾಜಾಳಿಯಿಂದ ಗುಡ್ಡ ಹತ್ತಿ ಸುಮಾರು ಅರ್ಧ ಕಿಲೋ ಮೀಟರ್‌ ನಡೆದು ಸಾಗಬೇಕು. ಈ ನಿಟ್ಟಿನಲ್ಲಿ ಈ ಹಿಂದೆ ಪ್ರವಾಸೋದ್ಯಮ ಸಚಿವರಾಗಿದ್ದ ಆರ್‌.ವಿ. ದೇಶಪಾಂಡೆ 2014ರಲ್ಲಿ ಕಡಲತೀರಕ್ಕೆ ಸಂಪರ್ಕ ಕಲ್ಪಿಸಲು ತೂಗು ಸೇತುವೆ ನಿರ್ಮಾಣಕ್ಕೆ ಹಣ ಮಂಜೂರು ಮಾಡಿದ್ದರು. ಸುಮಾರು 5 ಕೋಟಿ ವೆಚ್ಚದಲ್ಲಿ ತೂಗು ಸೇತುವೆ ನಿರ್ಮಿಸಿ, ಪ್ರವಾಸಿಗರು ಸುಂದರ ಕಡಲತೀರಕ್ಕೆ ತೂಗು ಸೇತುವೆಯಲ್ಲಿ ಸಾಗಿ ಎಂಜಾಯ್‌ ಮಾಡಿಕೊಂಡು ವಾಪಸ್‌ ಬರುವ ಅವಕಾಶ ಮಾಡಿಕೊಡಲು ಯೋಜಿಸಲಾಗಿತ್ತು. ಇನ್ನೇನು ಕಾಮಗಾರಿ ಪ್ರಾರಂಭವಾಗುತ್ತದೆ ಎಂದು ಸಹ ಹೇಳಲಾಗಿತ್ತು. ಆದರೆ, ಹಣ ಮಂಜೂರಾಗಿ ಐದು ವರ್ಷಗಳೇ ಕಳೆದರೂ ಇಂದಿಗೂ ಕಾಮಗಾರಿ ಪ್ರಾರಂಭಿಸಿಲ್ಲ. ಇದರಿಂದ ಅನುದಾನ ಸಹ ವಾಪಾಸ್‌ ಹೋಗಿದ್ದು, ವಿಶಿಷ್ಟ ಕಡಲತೀರ ಅಭಿವೃದ್ಧಿಯಾಗದೇ ಉಳಿಯುವಂತಾಗಿದೆ.

ಅಧಿಕಾರಿಗಳ ನಿರ್ಲಕ್ಷ್ಯ :  ತೀಳ್‌ಮಾತಿ ಕಡಲತೀರದಲ್ಲಿ ಸಾಕಷ್ಟು ಚಲನಚಿತ್ರಗಳ ಶೂಟಿಂಗ್‌ ಸಹ ನಡೆದಿದ್ದು, ನಾನಾ ಭಾಗದಿಂದ ಪ್ರವಾಸಿಗರು ಕಡಲತೀರದತ್ತ ಬರುತ್ತಾರೆ. ಆದರೆ, ಸರಿಯಾದ ರಸ್ತೆ ಇಲ್ಲದ ಕಾರಣ ತೂಗು ಸೇತುವೆ ನಿರ್ಮಾಣಕ್ಕೆ ಆಗಿನ ಸಚಿವರು ಆಸಕ್ತಿ ವಹಿಸಿ ಹಣ ಬಿಡುಗಡೆ ಮಾಡಿದ್ದರೂ ಅಧಿಕಾರಿಗಳ ನಿರ್ಲಕ್ಷ್ಯತನದಿಂದ ಹಣ ವಾಪಸ್‌ ಹೋಗಿದೆ. ಅನೇಕ ಬಾರಿ ಕಾಮಗಾರಿಗಳಿಗೆ ಕೆಲಸ ಮಾಡಿದರೂ ಹಣ ಬಿಡುಗಡೆ ಆಗಿಲ್ಲ ಎನ್ನುತ್ತಾರೆ. ಆದರೆ, ಇಲ್ಲಿ ಹಣ ಬಿಡುಗಡೆಯಾದರೂ ಕೆಲಸ ಕೈಗೆತ್ತಿಕೊಳ್ಳದೇ ನಿರ್ಲಕ್ಷತನ ವಹಿಸಿದ್ದರಿಂದ ಇಂದಿಗೂ ಕೆಲಸ ಪ್ರಾರಂಭವಾಗಿಲ್ಲ ಎನ್ನುವುದು ಸ್ಥಳೀಯರ ಆರೋಪ. ಈ ಬಗ್ಗೆ ಜಿಲ್ಲಾಧಿಕಾರಿಗಳನ್ನು ಕೇಳಿದರೆ ತೀಳ್‌ಮಾತಿಗೆ ತೆರಳುವ ಮಾರ್ಗ ಬಂದರು ಹಾಗೂ ಅರಣ್ಯ ಇಲಾಖೆಗೆ ಸೇರಿದ ಜಾಗದಲ್ಲಿ ಹಾದು ಹೋಗಿದ್ದರಿಂದ ಕಾಮಗಾರಿಗೆ ಅಡ್ಡಿಯಾಗಿತ್ತು. ಇದೀಗ ಎಲ್ಲ ಸಮಸ್ಯೆ ಪರಿಹಾರವಾಗಿದ್ದು, ಸೇತುವೆ ನಿರ್ಮಾಣಕ್ಕೆ ಪುನಃ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದಿದ್ದಾರೆ.

ಹೊಸದಾಗಿ 1.20 ಕೋಟಿ ರೂ. ವೆಚ್ಚದಲ್ಲಿ ತೂಗುಸೇತುವೆಗೆ ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದು, ಅನುಮೋದನೆ ಸಿಕ್ಕ ಬಳಿಕ ಕಾಮಗಾರಿ ಪ್ರಾರಂಭವಾಗಲಿದೆ. ನೆರೆಯ ಗೋವಾ ರಾಜ್ಯಕ್ಕಿಂತ ಕಾರವಾರ ಉತ್ತಮ ಕಡಲತೀರಗಳನ್ನು ಹೊಂದಿದ್ದರೂ ಅಭಿವೃದ್ಧಿ ಇಲ್ಲದೇ ಪ್ರವಾಸೋದ್ಯಮಕ್ಕೆ ಹಿನ್ನಡೆಯಾಗುವಂತಾಗಿದ್ದು, ಆದಷ್ಟು ಬೇಗ ತೀಳ್‌ಮಾತಿ ಕಡಲತೀರವನ್ನು ಅಭಿವೃದ್ಧಿಪಡಿಸಬೇಕು ಎನ್ನುವುದು ಸ್ಥಳೀಯರ ಬೇಡಿಕೆಯಾಗಿದೆ.

ತೀಳ್‌ಮಾತಿ ಕಡಲತೀರಕ್ಕೆ ಚಾರಣದ ರೂಪದಲ್ಲಿ ಹೋಗ ಬೇಕಾಗಿರುವುದರಿಂದ ದಾರಿ ನಿರ್ಮಾಣ ಮಾಡಬೇಕು ಎನ್ನುವ ಬೇಡಿಕೆ ಕಾರಣ ತೂಗುಸೇತುವೆ ಯೋಜನೆ ರೂಪಿಸಲಾಗಿತ್ತು. ಆದರೆ, ದಾರಿಗೆ ಮಧ್ಯದಲ್ಲಿ ಅರಣ್ಯ ಇಲಾಖೆ, ಬಂದರು ಇಲಾಖೆ ಭೂಮಿ ಇರುವ ಕಾರಣ ಆ ಇಲಾಖೆಗಳ ಅನುಮತಿ ಅಗತ್ಯವಿತ್ತು. ಹೀಗಾಗಿ ಕಳೆದ ಆರ್ಥಿಕ ವರ್ಷದಲ್ಲಿ ಹಣ ವಾಪಸ್ಸಾಗುವಂತಾಗಿತ್ತು. ಇದೀಗ ಎಲ್ಲ ಸಮಸ್ಯೆ ಪರಿಹಾರವಾಗಿದ್ದು, ಸರ್ಕಾರದಿಂದ ಅನುಮೋದನೆ ಬಂದ ಕೂಡಲೇ ಕಾಮಗಾರಿ ಪ್ರಾರಂಭಿಸುತ್ತೇವೆ. – ಡಾ| ಕೆ. ಹರೀಶಕುಮಾರ್‌, ಜಿಲ್ಲಾಧಿಕಾರಿ

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಅಮೆರಿಕ ಕೋವಿಡ್-19 ಸಮರ: ಮಾವನಿಗೆ ಅಳಿಯನ ಸಾಥ್‌

ಅಮೆರಿಕ ಕೋವಿಡ್-19 ಸಮರ: ಮಾವನಿಗೆ ಅಳಿಯನ ಸಾಥ್‌

1720 To 2020! ಪ್ರತಿ 100 ವರ್ಷಕ್ಕೊಮ್ಮೆ ಮನುಷ್ಯ ಜನಾಂಗಕ್ಕೆ ಭೀತಿ ಹುಟ್ಟಿಸೋ ಮಹಾಮಾರಿ

1720 To 2020! ಪ್ರತಿ 100 ವರ್ಷಕ್ಕೊಮ್ಮೆ ಮನುಷ್ಯ ಜನಾಂಗಕ್ಕೆ ಭೀತಿ ಹುಟ್ಟಿಸೋ ಮಹಾಮಾರಿ

ಕೋವಿಡ್ ಕಳವಳ: ಜಾಂಪಾ, ಡಿ ಶಾರ್ಟ್ ಸೇರಿ ಎಂಟು ಆಸೀಸ್ ಕ್ರಿಕೆಟಿಗರ ಮದುವೆ ಮುಂದೂಡಿಕೆ

ಕೋವಿಡ್ ಕಳವಳ: ಜಾಂಪಾ, ಡಿ ಶಾರ್ಟ್ ಸೇರಿ ಎಂಟು ಆಸೀಸ್ ಕ್ರಿಕೆಟಿಗರ ಮದುವೆ ಮುಂದೂಡಿಕೆ

ಸ್ವತಃ ಮಾಸ್ಕ್ ಧರಿಸದೆ ಜನರಿಗೆ ಮಾಸ್ಕ್ ವಿತರಿಸಿದ ಸಚಿವ ಶ್ರೀರಾಮುಲು

ಸ್ವತಃ ಮಾಸ್ಕ್ ಧರಿಸದೆ ಜನರಿಗೆ ಮಾಸ್ಕ್ ವಿತರಿಸಿದ ಸಚಿವ ಶ್ರೀರಾಮುಲು

ಸ್ಮಾರ್ಟ್‌ಫೋನ್‌ ಭವಿಷ್ಯ ಸ್ಮಾರ್ಟಾಗಿಲ್ಲ

ಸ್ಮಾರ್ಟ್‌ಫೋನ್‌ ಭವಿಷ್ಯ ಸ್ಮಾರ್ಟಾಗಿಲ್ಲ; 2 ಬಿ. ಡಾಲರ್‌ ನಷ್ಟದ ಭಯ

ಕೋವಿಡ್ ಆತಂಕದ ನಡುವೆ ಗಡಿಯಲ್ಲಿ ಒಳನುಸುಳಲು ಯತ್ನಿಸಿದ 9 ಉಗ್ರರ ಹತ್ಯೆಗೈದ ಸೇನಾಪಡೆ

ಕೋವಿಡ್ ಆತಂಕದ ನಡುವೆ ಗಡಿಯಲ್ಲಿ ಒಳನುಸುಳಲು ಯತ್ನಿಸಿದ 9 ಉಗ್ರರ ಹತ್ಯೆಗೈದ ಸೇನಾಪಡೆ

‘ಸೋಂಕು ಬಂದಿದೆ’ ಎಂದು‌ ಆಸ್ಪತ್ರೆಯಲ್ಲಿ ನಗುತ್ತ ಡ್ಯಾನ್ಸ್ ಮಾಡಿದ‌ ತಬ್ಲಿಘಿ ಶಂಕಿತ ವ್ಯಕ್ತಿ

‘ಸೋಂಕು ಬಂದಿದೆ’ ಎಂದು‌ ಆಸ್ಪತ್ರೆಯಲ್ಲಿ ನಗುತ್ತ ಡ್ಯಾನ್ಸ್ ಮಾಡಿದ‌ ತಬ್ಲಿಘಿ ಶಂಕಿತ ವ್ಯಕ್ತಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಆಯುಷ್ಮಾನ್‌ ಫಲಾನುಭವಿಗಳಿಗೆ ಕೋವಿಡ್ 19  ಕಂಟಕ

ಆಯುಷ್ಮಾನ್‌ ಫಲಾನುಭವಿಗಳಿಗೆ ಕೋವಿಡ್ 19 ಕಂಟಕ

uk-tdy-1

ಜಿಲ್ಲೆಯಲ್ಲಿ ಲಾಕ್‌ಡೌನ್‌ಗೆ ಉತ್ತಮ ಸ್ಪಂದನೆ

ಶಿರಸಿಯಲ್ಲಿ ಘರ್‌ ವಾಪಸಿ ಅಭಿಯಾನ

ಶಿರಸಿಯಲ್ಲಿ ಘರ್‌ ವಾಪಸಿ ಅಭಿಯಾನ

ಚಿಕಿತ್ಸೆಗೆ ಮನೆ ಬಾಗಿಲಿಗೇ ಬರಲಿದ್ದಾರೆ ವೈದ್ಯರು

ಚಿಕಿತ್ಸೆಗೆ ಮನೆ ಬಾಗಿಲಿಗೇ ಬರಲಿದ್ದಾರೆ ವೈದ್ಯರು

uk-tdy-1

ಕೋವಿಡ್ 19 ತಡೆಗಟ್ಟಲು ಜನರ ಸಹಕಾರ ಅಗತ್ಯ

MUST WATCH

udayavani youtube

Kundapura: ಖಾಲಿ ರಸ್ತೆಯಲ್ಲೂ ಅಪಘಾತ! CCTVಯಲ್ಲಿ ದಾಖಲಾಯ್ತು ಅಪಘಾತದ ದೃಶ್ಯ

udayavani youtube

Shivamogga ಜ್ವರದಿಂದ ಬಳಲುತ್ತಿದ್ದರೂ ಆದೇಶ ಉಲ್ಲಂಘಿಸಿ ನಮಾಜ್ ನಲ್ಲಿ ಭಾಗಿಯಾದರು

udayavani youtube

Covid 19 ಸೋಂಕು ತಡೆಗೆ ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಸಂದೇಶ

udayavani youtube

Udyavara Jamia Masjid ಮೈಕ್ ನಲ್ಲಿ ಮೊಳಗುತ್ತಿದೆ ಕೋವಿಡ್ ಮಹಾಮಾರಿ ಜಾಗೃತಿ ಸಂದೇಶ

udayavani youtube

ಒಂದೆರಡು ದಿನಗಳಲ್ಲಿ ರೈತರ ಎಲ್ಲಾ ಸಮಸ್ಯೆ ಸರಿಹೋಗಲಿದೆ : ಕೃಷಿ ಸಚಿವರಿಂದ ರೈತರಿಗೆ ಅಭಯ

ಹೊಸ ಸೇರ್ಪಡೆ

ಕಾಲುಜಾರಿ ಕಾಲುವೆಗೆ ಬಿದ್ದು ಮಹಿಳೆ ಸಾವು

ಕಾಲುಜಾರಿ ಕಾಲುವೆಗೆ ಬಿದ್ದು ಮಹಿಳೆ ಸಾವು

ಮಾಸ್ಕ್ ವಿತರಣೆಗೆ ಚಾಲನೆ

ಮಾಸ್ಕ್ ವಿತರಣೆಗೆ ಚಾಲನೆ

ಕೋವಿಡ್ 19 ವೈರಸ್ ಸೋಂಕಿತರ ಸಾವಿನ ಪ್ರಮಾಣ: ಜಾಗತಿಕ ದಾಖಲೆ ಬರೆದ ಅಮೆರಿಕ

ಕೋವಿಡ್ 19 ವೈರಸ್ ಸೋಂಕಿತರ ಸಾವಿನ ಪ್ರಮಾಣ: ಜಾಗತಿಕ ದಾಖಲೆ ಬರೆದ ಅಮೆರಿಕ

ಗ್ರಾಮಸ್ಥರು ಸಹಕರಿಸಿ: ಖಾದರ್‌ ಮನವಿ

ಗ್ರಾಮಸ್ಥರು ಸಹಕರಿಸಿ: ಖಾದರ್‌ ಮನವಿ

ಸುಳ್ಯ: ಒಟಿಪಿ ಇಲ್ಲದೆ ನೀಡುತ್ತಿಲ್ಲ ಪಡಿತರ

ಸುಳ್ಯ: ಒಟಿಪಿ ಇಲ್ಲದೆ ನೀಡುತ್ತಿಲ್ಲ ಪಡಿತರ