ಮನೆಗಳು ನೀರು ಪಾಲು: ಜನರ ಕಣ್ಣೀರು

•ಪ್ರವಾಹ ಇಳಿಮುಖ•ಮನೆಗೆ ಹೋಗುವ ದಾರಿಗಳು ಮಾಯ•ಮನೆಯೊಳಗೆ ಹೆಚ್ಚಿದ ಕೊಳಚೆ-ರಾಡಿ ನೀರು

Team Udayavani, Aug 11, 2019, 1:24 PM IST

ಅಂಕೋಲಾ: ನೆರೆಗೆ ಮುಳುಗಿದ ಮನೆಯ ಗೋಡೆ ಮೇಲೆ ನೀರಿನ ಗುರುತು ಕಂಡು ಬಂದಿರುವುದು.

ಅಂಕೋಲಾ: ತಾಲೂಕಿನಲ್ಲಿ ಗಂಗಾವಳಿ ನದಿ ಪ್ರವಾಹವೂ ಇಳಿಮುಖವಾಗುತ್ತಿದೆ. ತಮ್ಮ ಮನೆ ಮಠವನ್ನು ಕಳೆದುಕೊಂಡ ಜನರ ಸ್ಥಿತಿ ಚಿಂತಾಜನಕ. ಕೆರೆಗಳಂತಾದ ಹೊಲ ಗದ್ದೆಗಳು, ನೀರಿನಲ್ಲಿ ಮುಳುಗಿದ ಮನೆಗಳು, ಎಲ್ಲವನ್ನೂ ನೆನೆದರೆ ಎದೆ ಒಂದು ಕ್ಷಣ ಝಲ್ ಎನಿಸುತ್ತದೆ.

ಹೌದು ಗಂಗಾವಳಿ ನದಿ ಹಿಂದೆಂದು ಕಂಡರೀಯದ ರೌದ್ರಾವತಾರಕ್ಕೆ ಅಂಕೋಲಾ ತಾಲೂಕಿನ ಭಾಗಶಃ ನಲುಗಿ ಹೋಗಿದೆ. ಕಳೆದ ಆರು ದಿನಗಳಿಂದ ಸಂಭವಿಸಿದ ಪ್ರವಾಹದಿಂದ ಎಲ್ಲೆಡೆ ತುಂಬಿಕೊಂಡಿರುವ ನೀರು ನಿಧಾನಗತಿಯಲ್ಲಿ ಸಾಗರದೊಡಲಿಗೆ ಸೇರುತ್ತಿದೆ. ಇತ್ತ ಮನೆ ತೊರೆದು ಬಂದ ಜನ ಮನೆಯತ್ತ ಮುಖ ಮಾಡಿ ಹೊರಟರೆ ಕೆಲವೆಡೆ ಮನೆಯ ಅವಶೇಷ ಮಾತ್ರ ಕಂಡು ಜನ ಕಣ್ಣೀರಿಡುತ್ತಿದ್ದಾರೆ.

ನೋಡ ನೋಡುತ್ತಿದ್ದಂತೆ ಬದುಕು ಬಾಳಿದ ಮನೆಗಳು ಕುಸಿಯಲಾರಂಭಿಸಿದೆ. ಗೋಡೆಯು ಬಿರುಕು ಬಿಡುತ್ತಿವೆ. ಮನೆಗೆ ಹೊಗಲು ಇದ್ದ ದಾರಿ ಮಾಯವಾಗಿದೆ. ಕೆಲವಡೆ ಭೂಕುಸಿತ. ಇಂತಹ ದಯನೀಯ ಘಟನೆಗಳು ನೆರೆ ಬಂದು ಹೊದ ಮೇಲೆ ಆಗುತ್ತಿದೆ. ನೆರೆ ಇಳಿಯಿತು ಎಂದು ಜನ ಮನೆಗೆ ಹೊರಟರೆ ಮನೆಯೊಳಗೆ ಕಾಲಿರಿಸಲಾಗದಷ್ಟು ಕೊಳಚೆ ಮಣ್ಣು. ಮನೆಯೊಳಗಿದ್ದ ದಿನ ಬಳಕೆ ವಸ್ತು, ಆಹಾರ ಧಾನ್ಯ ಟಿವಿ. ಪ್ರೀಜ್‌ ಎಲ್ಲವು ಉಪಯೋಗಕ್ಕೆ ಬಾರದಾಗಿದೆ. ದನ ಕರುಗಳು, ನಾಯಿಗಳು, ಕೋಳಿಗಳು ಪ್ರಾಣ ಕಳೆದು ಕೊಂಡಿವೆ. ಜನರ ಬದುಕು ಹತೋಟಿಗೆ ಬರಲು ಸರಕಾರ ಮತ್ತು ಸಂಘ ಸಂಸ್ಥೆಗಳು ಕೈ ಜೊಡಿಸಬೇಕಿದೆ.

ನೆರೆ ಪ್ರದೇಶದಲ್ಲಿ ಚಿಕಿತ್ಸೆ: ಆರೋಗ್ಯ ಇಲಾಖೆಯಿಂದ ಪ್ರತಿಯೊಂದು ನೆರೆ ಪ್ರದೇಶದಲ್ಲಿ ಪ್ರತಿಯೊಬ್ಬರ ಆರೋಗ್ಯ ಚಿಕಿತ್ಸೆ ಮಾಡಲಾಗುತ್ತಿದೆ. ನೆರೆಯಿಂದ ಹರಡಬಹುದಾದ ಸಾಂಕ್ರಾಮಿಕ ರೋಗಗಳ ಕುರಿತು ಮುನ್ನೆಚ್ಚರಿಕೆ ನೀಡಲಾಗುತ್ತಿದೆ. ಆರೋಗ್ಯ ಇಲಾಖೆ, ತಾಲೂಕಿನ ಸಂಘ ಸಂಸ್ಥೆಗಳು ಪ್ರತಿಯೊಂದು ನೆರೆ ಪೀಡಿತ ಪ್ರದೇಶದಲ್ಲಿ ಔಷಧಗಳನ್ನು ಪೂರೈಸುತ್ತಿದೆ.
ನೆರೆ ಭೀತಿ: ಕರಾವಳಿ ತೀರದಲ್ಲಿ ಮಳೆ ಕಡಿಮೆ ಆಗಿದೆ. ಮಲೆನಾಡು ಭಾಗವಾದ ಯಲ್ಲಾಪುರ ಮುಂಡಗೋಡ ತಾಲೂಕಿನಲ್ಲಿ ಮಳೆ ಸುರಿಯುತ್ತಿದ್ದರೆ ಮತ್ತೆ ಗಂಗಾವಳಿ ನೆರೆ ಭೀತಿ ಎದುರಾಗುತ್ತದೆ. ಮಲೆನಾಡಿನಲ್ಲಿ ಮಳೆಯು ಆಗಾಗ ಸುರಿಯುತ್ತಿದ್ದು ತಮ್ಮ ತಮ್ಮ ಮನೆಗಳಿಗೆ ಸೇರಿಕೊಂಡಿರುವ ಜನರಲ್ಲಿ ನೆರೆ ಭೀತಿಲ್ಲಿಯೆ ನಿದ್ದೆಗೆಟ್ಟು ಕಾಲ ಕಳೆಯುವಂತಾಗಿದೆ. ತಾಲೂಕಾಡಳಿತ ನೆರೆ ಪೀಡಿತ ಪ್ರದೇಶಗಳಲ್ಲಿ ಮುಂದಿನ ಎರಡು ದಿನವು ನೆರೆಯ ಮುನ್ನೆಚ್ಚರಿಕೆ ನೀಡಿದ್ದಾರೆ.

 

•ಅರುಣ ಶೆಟ್ಟಿ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಹೊನ್ನಾವರ: ಮ್ಯಾಗ್ಸೆಸ್ಸೆ ಪ್ರಶಸ್ತಿ ಪುರಸ್ಕೃತ ಹರೀಶ ಹಂದೆಯವರ ಸೆಲ್ಕೋ ಸೋಲಾರ್‌ ಸಂಸ್ಥೆ ಸೌರಶಕ್ತಿಯನ್ನು ಬಹುಪಯೋಗಿಯಾಗಿ ಗ್ರಾಮೀಣ ಭಾಗದ ಜನತೆಗೆ ಜೀವನಾಧಾರವಾಗಿ...

  • ಭಟ್ಕಳ: ಕಳೆದ ಮೂರು ದಿನಗಳಿಂದ ಶಿರಾಲಿ ಗ್ರಾಪಂನ್ನೇ ಮೀನು ಮಾರುಕಟ್ಟೆಯನ್ನಾಗಿ ಮಾಡಿಕೊಂಡ ಮೀನುಗಾರರ ಬೇಡಿಕೆಗೆ ಸ್ಪಂದಿಸುವಲ್ಲಿ ಗ್ರಾಪಂ ವಿಫಲವಾಗಿದ್ದು...

  • ಮುಂಡಗೋಡ: ಅಪಾರ ಪ್ರಮಾಣದ ನೀರು ಹರಿದು ಬಂದು ಕೊಚ್ಚಿಕೊಂಡು ಹೋಗಿದ್ದ ತಾಲೂಕಿನ ಶಿಡ್ಲಗುಂಡಿ ಸೇತುವೆ ಕಾಮಗಾರಿ ಕಳೆದ ಎರಡು ದಿನಗಳಿಂದ ಆರಂಭವಾಗಿರುವುದು ಸಾರ್ವಜನಿಕರಿಗೆ...

  • ಶಿರಸಿ: ನಾಡಿನ ಹೆಸರಾಂತ ಮಾರಿಕಾಂಬಾ ದೇವಸ್ಥಾನಕ್ಕೂ ಅನ ಧಿಕೃತ ಫೇಸ್‌ಬುಕ್‌, ವಾಟ್ಸಆ್ಯಪ್‌, ಟ್ವಿಟ್ಟರ್‌ಗಳ ಕಾಟದಿಂದ ಅನಧಿಕೃತ ಮಾಹಿತಿಗಳು ರವಾನೆಯಾಗಿ ಅನೇಕ...

  • ಹೊನ್ನಾವರ: ಜನಜೀವನಕ್ಕೆ ಉತ್ತಮ ಸಂಸ್ಕಾರ ಯಕ್ಷಗಾನ ಕಲೆಯಿಂದ ಸಿಗುತ್ತಿದೆ. ನಾಡಿನಲ್ಲಿ ಯಕ್ಷಗಾನ ಉಳಿಯಬೇಕು. ಇದಕ್ಕೆ ಸರಕಾರ ಮತ್ತು ಸಮಾಜ ಪ್ರೋತ್ಸಾಹ ನೀಡುವ...

ಹೊಸ ಸೇರ್ಪಡೆ