ಭಟ್ಕಳದಲ್ಲಿ ಹೈಟೆಕ್‌ ಬಸ್‌ ನಿಲ್ದಾಣ ಪೂರ್ಣ

|ಲೋಕಾರ್ಪಣೆಗೆ ಕಟ್ಟಡ ಸಜ್ಜು |ಉದ್ಘಾಟನೆಗೆ ನೀತಿ ಸಂಹಿತೆ ಅಡ್ಡಿ

Team Udayavani, Oct 16, 2020, 4:56 PM IST

ಭಟ್ಕಳದಲ್ಲಿ ಹೈಟೆಕ್‌ ಬಸ್‌ ನಿಲ್ದಾಣ ಪೂರ್ಣ

ಭಟ್ಕಳ: ಪಟ್ಟಣದಲ್ಲಿ ಹೈಟೆಕ್‌ ಬಸ್‌ ನಿಲ್ದಾಣ ಲೋಕಾರ್ಪಣೆಗೆ ಸಜ್ಜಾಗಿದೆ. ಚುನಾವಣಾ ನೀತಿ ಸಂಹಿತೆ ಇದಕ್ಕೆ ಅಡ್ಡಿಯಾಗಿದ್ದು, ಮುಂದಿನ ತಿಂಗಳು ಉದ್ಘಾಟನೆಯಾಗುವ ಸಾಧ್ಯತೆಯಿದೆ.

ಭಟ್ಕಳ ಪಟ್ಟಣದ ಬಸ್‌ ನಿಲ್ದಾಣಕ್ಕೆ 2017-18ನೇ ಸಾಲಿನಲ್ಲಿ ಐದು ಕೋಟಿರೂ. ಮಂಜೂರಿಯಾಗಿದ್ದು, ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರುಶಂಕು ಸ್ಥಾಪನೆ ನೆರವೇರಿಸಿದ್ದರು. ಬೆಳಗಾವಿಯ ಪ್ರೌಡ್‌ ಇಂಡಿಯಾ ಪ್ರಮೋಟರ್ ಗುತ್ತಿಗೆದಾರ ಕಂಪೆನಿಗೆಕಾಮಗಾರಿ ಟೆಂಡರ್‌ ಆಗಿದ್ದು, ಕಾಮಗಾರಿಆರಂಭಿಸಿದ ನಂತರ ಒಂದೊಂದೇ ತೊಂದರೆಗಳು ಬಂದಿದ್ದರಿಂದ ಕಟ್ಟಡ ಕಾಮಗಾರಿ ಸ್ವಲ್ಪ ವಿಳಂಬವಾಗಿದೆ ಎನ್ನಲಾಗಿದೆ. ಮೊದಲು ಡೀಸೆಲ್‌ ಬಂಕ್‌ನ್ನು ಪೆಟ್ರೋಲಿಯಂ ಕಂಪೆನಿ ಸ್ಥಳಾಂತರಿಸಲು ತಡ ಮಾಡಿದ್ದರೆ, ನಂತರ ಕೋವಿಡ್ ಒಕ್ಕರಿಸಿದ್ದರಿಂದ ಕಾಮಗಾರಿಯೇ ನಿಂತು ಹೋಗಿ ವಿಳಂಬವಾಯಿತೆನ್ನಲಾಗಿದೆ.

ಈಗ ಸಂಪೂರ್ಣ ಪೂರ್ಣಗೊಂಡು ಉದ್ಘಾಟನೆಗೆ ಸಜ್ಜಾಗಿದ್ದರೂ ಚುನಾವಣಾ ನೀತಿ ಸಂಹಿತೆ ಅಡ್ಡ ಬಂದಿದೆ. ಈ ಹಿಂದೆ ಹಳೇ ಬಸ್‌ ನಿಲ್ದಾಣದಲ್ಲಿ ಜಾಗಾ ಇಕ್ಕಟ್ಟಾಗಿರುವುದರಿಂದ ಅಂದಿನ ಸಚಿವ ಎಸ್‌.ಎಂ. ಯಾಹ್ಯಾರವರು ಹೊಸಬಸ್‌ ನಿಲ್ದಾಣ ಮಂಜೂರಿ ಮಾಡಿಸಿದ್ದರು. ಹಲವಾರು ವರ್ಷಗಳ ಕಾಲ ಜನತೆಗೆ ಉತ್ತಮ ಸೇವೆ ನೀಡಿದ್ದ ಬಸ್‌ ನಿಲ್ದಾಣ ಕುಸಿದು ಬಿದ್ದ ಪರಿಣಾಮ ಜನತೆಗೆ ನಿಲ್ಲಲೂ ಸ್ಥಳವಿಲ್ಲವಾಗಿತ್ತು. ಅಂದಿನ ಶಾಸಕ ಮಂಕಾಳ ವೈದ್ಯ ಅವರು ಬಸ್‌ ನಿಲ್ದಾಣಕ್ಕೆ 5 ಕೋಟಿ ರೂಪಾಯಿ ಮಂಜೂರಿ ಮಾಡಿಸಿದ್ದರು. ಭಟ್ಕಳ ಬಸ್‌ ಡಿಪೋ ಸಾಗರ ರಸ್ತೆಗೆ ವರ್ಗಾವಣೆಗೊಂಡಿದ್ದರಿಂದ ಬಸ್‌ ಡಿಪೋ ಇರುವ ಸ್ಥಳದಲ್ಲಿಯ ಹೊಸ ಬಸ್‌ ನಿಲ್ದಾಣ ನಿರ್ಮಾಣಕ್ಕೆ ಕೆಎಸ್‌ಆರ್‌ಟಿಸಿ ಮುಂದಾಗಿದ್ದು, ಇಂದು ಅತ್ಯಂತ ಸುಸಜ್ಜಿತ ಬಸ್‌ ನಿಲ್ದಾಣ ನಿರ್ಮಾಣಗೊಂಡಿದೆ.

ಬಸ್‌ ನಿಲ್ದಾಣದಲ್ಲಿ ಎಲ್ಲ ಮೂಲ ಸೌಕರ್ಯಗಳನ್ನು ಒದಗಿಸಲಾಗಿದ್ದು, ಒಂದೇ ಬಾರಿಗೆ 12 ಬಸ್‌ಗಳು ನಿಲ್ಲಲು ವ್ಯವಸ್ಥೆಯಿದೆ. ನೆಲ ಮಾಳಿಗೆಯಲ್ಲಿ ಪ್ರತ್ಯೇಕವಾಗಿ ಮಹಿಳೆಯರ ವಿಶ್ರಾಂತಿ ಕೊಠಡಿ, ಪುರುಷರ ವಿಶ್ರಾಂತಿ ಕೊಠಡಿಯೊಂದಿಗೆ ಚಿಕ್ಕ ಮಕ್ಕಳಿಗೆ ಹಾಲುಣಿಸಲು ಪ್ರತ್ಯೇಕ ಕೋಣೆಯೂ ಮಾಡಲಾಗಿದೆ. ಟಿಕೆಟ್‌ ಕಾಯ್ದಿರಿಸುವ ಕೊಠಡಿ, ನಿಯಂತ್ರಣ ಕೊಠಡಿಸೇರಿಂದಂತೆ ಒಟ್ಟೂ 12 ವಾಣಿಯ ಮಳಿಗೆಗಳಿವೆ. ಅಲ್ಲದೇ ಒಂದು ಹೈಟೆಕ್‌ ಕ್ಯಾಂಟೀನ್‌ ವ್ಯವಸ್ಥೆ ಇದ್ದು, ವಿಶಾಲವಾದ ಹಾಲ್‌, ಪ್ರತ್ಯೇಕವಾದ ಫ್ಯಾಮಿಲಿ ರೂಮ್‌ ಇತ್ಯಾದಿ ವ್ಯವಸ್ಥೆಯಿದೆ. ಪ್ರಥಮ ಮಾಳಿಗೆಯಲ್ಲಿ ಎರಡು ಹಾಲ್‌ ಹಾಗೂ ವಾಣಿಜ್ಯ ಮಳಿಗೆಗಳಿದ್ದು, ಈಗಾಗಲೇ ಈ ಟೆಂಡರ್‌ ಮೂಲಕ ಹಲವರು ಅಂಗಡಿ ಮಳಿಗೆಗಳನ್ನು ಪಡೆದುಕೊಂಡಿದ್ದರೆ, ಇನ್ನೂ ಕೆಲವು ಖಾಲಿಯಾಗಿವೆ ಎನ್ನಲಾಗಿದೆ.

ಮಾಳಿಗೆಯಲ್ಲಿ ಮಾಲ್‌ ನಮೂನೆಯ ಬೃಹತ್‌ ಅಂಗಡಿ ಮಾಡಲುಅವಕಾಶವಿದ್ದು, ಬ್ಯಾಂಕ್‌ ಶಾಖೆ ಮಾಡಲೂ ಅನುಕೂಲವಿದೆ ಎನ್ನಲಾಗಿದೆ. ಭಟ್ಕಳದ ಹಳೇ ಬಸ್‌ ನಿಲ್ದಾಣದ ಜಾಗಾ ಕೂಡಾ ದೊಡ್ಡದಿದ್ದು, ಅದನ್ನು ಕೂಡಾ ಬಸ್‌ ನಿಲ್ದಾಣಕ್ಕೆ ಬಳಸಿಕೊಳ್ಳಲು ಯೋಚಿಸಲಾಗಿದ್ದರೂ ಹಣ ಮಂಜೂರಿಯಾಗಬೇಕಾಗಿದೆ.ಈಗಿರುವ ಬಸ್‌ ನಿಲ್ದಾಣದ ಜಾಗ ಪ್ರಸ್ತುತಖಾಲಿಯಾಗಿರಲಿದ್ದು, ಅಲ್ಲಿ ಕೆ.ಎಸ್‌.ಆರ್‌.ಟಿ.ಸಿ. ವತಿಯಿಂದ ಪಾರ್ಕಿಂಗ್‌ ಜಾಗಾ ಮಾಡಿ ಟೆಂಡರ್‌ ಕರೆದರೆ ಇಲಾಖೆಗೂ ಆದಾಯ ಹಾಗೂ ವಾಹನ ನಿಲ್ಲಿಸಿ ಬೇರೆ ಊರಿಗೆ ಹೋಗುವವರಿಗೂ ಅನುಕೂಲವಾಗುವುದು. ಅಲ್ಲದೇ ಇಲಾಖೆಗೂ ಕೂಡಾ ಆದಾಯ ಬರುವುದು. ಮುಂದೆ ಬಸ್‌ ನಿಲ್ದಾಣಕ್ಕೆ ಅಗತ್ಯವಿರುವಷ್ಟು ಜಾಗಾವನ್ನು ಬಳಸಿಕೊಂಡು ಉಳಿದ ಜಾಗಾದಲ್ಲಿ ವಾಣಿಜ್ಯ ಸಂಕೀರ್ಣ ಮಾಡಿದರೆ ಅತ್ಯಂತ ಅನುಕೂಲವಾಗುವುದು.

ಭಟ್ಕಳ ಬಸ್‌ ನಿಲ್ದಾಣದ ಸಿವಿಲ್‌ ಕಾಮಗಾರಿಯು ಉತ್ತಮವಾಗಿ ಮುಕ್ತಾಯವಾಗಿದ್ದು ಉದ್ಘಾಟನೆಗೆ ಸಜ್ಜಾಗಿದೆ. ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ನೀತಿ ಸಂಹಿತೆ ಮುಗಿದ ನಂತರ ಶಾಸಕರು, ಉಸ್ತುವಾರಿ ಸಚಿವರನ್ನು ಸಂಪರ್ಕಿಸಿ ಉದ್ಘಾಟನಾ ದಿನಾಂಕ ನಿಗದಿಗೊಳಿಸಲಾಗುವುದು.  -ವಿವೇಕಾನಂದ ಹೆಗಡೆ, ಸಾರಿಗೆ ಜಿಲ್ಲಾಧಿಕಾರಿ, ಶಿರಸಿ

ಟಾಪ್ ನ್ಯೂಸ್

ಲಾಸರ್‍ದೊಡ್ಡಿಯಲ್ಲಿ ಸಿಡಿಲಿನ ಹೊಡೆತಕ್ಕೆ ಕುಸಿದ ಮನೆಯ ಗೋಡೆ: ತಪ್ಪಿದ ಭಾರೀ ಅನಾಹುತ

ಲಾಸರ್‍ದೊಡ್ಡಿಯಲ್ಲಿ ಸಿಡಿಲಿನ ಹೊಡೆತಕ್ಕೆ ಕುಸಿದ ಮನೆಯ ಗೋಡೆ: ತಪ್ಪಿದ ಭಾರೀ ಅನಾಹುತ

11 ಮಂದಿ ಚಾರಣಿಗರು ಸಾವು! 17,000 ಅಡಿ ಎತ್ತರದಲ್ಲಿ ವಾಯುಪಡೆ ಕಾರ್ಯಾಚರಣೆ

11 ಮಂದಿ ಚಾರಣಿಗರು ಸಾವು! 17,000 ಅಡಿ ಎತ್ತರದಲ್ಲಿ ವಾಯುಪಡೆ ಕಾರ್ಯಾಚರಣೆ

daily-horoscope

ಈ ರಾಶಿಯವರು ಇಂದು ಬಂಧುಮಿತ್ರರಲ್ಲಿ ವ್ಯವಹರಿಸುವಾಗ ದುಡುಕದಿರಿ. ತಾಳ್ಮೆಯಿಂದ ನಿರ್ಣಯ ನೀಡಿ.

ಟಿ-20 ವಿಶ್ವಕಪ್‌ ಕ್ರಿಕೆಟ್‌ ಯಾರು ಫೇವರಿಟ್‌ ?

ಟಿ-20 ವಿಶ್ವಕಪ್‌ ಕ್ರಿಕೆಟ್‌ ಯಾರು ಫೇವರಿಟ್‌ ?

300ರ ಬದಲು ಇರುವುದು 22 ಯಂತ್ರಗಳು !

300ರ ಬದಲು ಇರುವುದು 22 ಯಂತ್ರಗಳು !

ಡೀಮ್ಡ್ ಫಾರೆಸ್ಟ್‌ ಸಮಸ್ಯೆ ಶೀಘ್ರ ಇತ್ಯರ್ಥ

ಡೀಮ್ಡ್ ಫಾರೆಸ್ಟ್‌ ಸಮಸ್ಯೆ ಶೀಘ್ರ ಇತ್ಯರ್ಥ

ನಾಳೆ ಭಾರತ- ಪಾಕ್‌ ಹೈ ವೋಲ್ಟೇಜ್ ಹಣಾಹಣಿ

ನಾಳೆ ಭಾರತ- ಪಾಕ್‌ ಹೈ ವೋಲ್ಟೇಜ್ ಹಣಾಹಣಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

dandeli news

ಅನಾಥ ಜೀವಕ್ಕೆ ಆಧಾರವಾಗಿ ಮಾನವೀಯತೆ ಮೆರೆದ ಎಸ್.ಆರ್.ಗಜಾಕೋಶ

1-22

ಜನತಾ ಬಜಾರ್‌ ಜಾಗದಲ್ಲಿ 15 ಕೋಟಿ ರೂ. ವೆಚ್ಚದಲ್ಲಿ ಕೃಷಿ ವಿಭಾಗದ ಕಟ್ಟಡ ನಿರ್ಮಾಣ

sirsi news

ಗೋಡೆ ನಾರಾಯಣ ಹೆಗಡೆಯವರಿಗೆ ಒಲಿದ  ಅನಂತ ಶ್ರೀ ಪ್ರಶಸ್ತಿ

sirsi news

ಅಕ್ರಮ ಗೋ ಹತ್ಯೆ ಆರೋಪ : ಬಂಧನ

27

ಸಿಗಡಿ ಕೃಷಿಗೆ ಅವಕಾಶ ಕೊಡಬಾರದು: ಗ್ರಾಮಸ್ಥರ ಮನವಿ

MUST WATCH

udayavani youtube

ಆಟೋ ಚಾಲಕನ ನತದೃಷ್ಟ ಕಥೆಯಿದು

udayavani youtube

ನಮ್ಮ ದೇಶ ಕರ್ತವ್ಯ ಪಾಲಿಸಿದೆ : ಪ್ರಧಾನಿ ನರೇಂದ್ರ ಮೋದಿ

udayavani youtube

ಶೆಟ್ಟಿ ನೀನು ಹುಡುಗಿ ತರ ಮಾತಾಡ್ತೀಯ

udayavani youtube

POLYHOUSE ನಲ್ಲಿ ಸೌತೆಕಾಯಿ ತರಕಾರಿ ಕೃಷಿ; ಇಲ್ಲಿದೆ ಸಂಪೂರ್ಣ ಮಾಹಿತಿ…

udayavani youtube

ನೂರು ಕೋಟಿ ಡೋಸ್‌ ಲಸಿಕಾ ಗುರಿ ತಲುಪಿದ ಸಂಭ್ರಮ

ಹೊಸ ಸೇರ್ಪಡೆ

1`-school

ಮಧ್ಯಾಹ್ನದ ಬಿಸಿಯೂಟಕ್ಕೆ ಚಾಲನೆ

ಲಾಸರ್‍ದೊಡ್ಡಿಯಲ್ಲಿ ಸಿಡಿಲಿನ ಹೊಡೆತಕ್ಕೆ ಕುಸಿದ ಮನೆಯ ಗೋಡೆ: ತಪ್ಪಿದ ಭಾರೀ ಅನಾಹುತ

ಲಾಸರ್‍ದೊಡ್ಡಿಯಲ್ಲಿ ಸಿಡಿಲಿನ ಹೊಡೆತಕ್ಕೆ ಕುಸಿದ ಮನೆಯ ಗೋಡೆ: ತಪ್ಪಿದ ಭಾರೀ ಅನಾಹುತ

11 ಮಂದಿ ಚಾರಣಿಗರು ಸಾವು! 17,000 ಅಡಿ ಎತ್ತರದಲ್ಲಿ ವಾಯುಪಡೆ ಕಾರ್ಯಾಚರಣೆ

11 ಮಂದಿ ಚಾರಣಿಗರು ಸಾವು! 17,000 ಅಡಿ ಎತ್ತರದಲ್ಲಿ ವಾಯುಪಡೆ ಕಾರ್ಯಾಚರಣೆ

daily-horoscope

ಈ ರಾಶಿಯವರು ಇಂದು ಬಂಧುಮಿತ್ರರಲ್ಲಿ ವ್ಯವಹರಿಸುವಾಗ ದುಡುಕದಿರಿ. ತಾಳ್ಮೆಯಿಂದ ನಿರ್ಣಯ ನೀಡಿ.

ಟಿ-20 ವಿಶ್ವಕಪ್‌ ಕ್ರಿಕೆಟ್‌ ಯಾರು ಫೇವರಿಟ್‌ ?

ಟಿ-20 ವಿಶ್ವಕಪ್‌ ಕ್ರಿಕೆಟ್‌ ಯಾರು ಫೇವರಿಟ್‌ ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.