ಶಿರಸಿ: ಹಿಲ್ಲೂರು ಯಕ್ಷಮಿತ್ರ ಮಂಡಳಿಗೆ ಚಾಲನೆ‌


Team Udayavani, Nov 28, 2021, 7:40 PM IST

ಶಿರಸಿ: ಹಿಲ್ಲೂರು ಯಕ್ಷಮಿತ್ರ ಮಂಡಳಿಗೆ ಚಾಲನೆ‌

ಶಿರಸಿ: ಯಕ್ಷಗಾನ ಮೇಳ ನಂಬಿ ಬದುಕುವ ಕಲಾವಿದರಿಗೆ ಸಂಕಷ್ಟ ದೂರವಾಗಿಲ್ಲ ಎಂದು ಹಿರಿಯ ಯಕ್ಷಗಾನ ಕಲಾವಿದ ಬಳಕೂರು ಕೃಷ್ಣಯಾಜಿ ಆತಂಕಿಸಿದರು.

ಅವರು ಭಾನುವಾರ ನಗರದ ಟಿಎಂಎಸ್ ಸಭಾಭವನದಲ್ಲಿ  ಹಿಲ್ಲೂರು ಯಕ್ಷಮಿತ್ರ ಮಂಡಳಿ ಚಾಲನೆ‌‌ ನೀಡಿ ಮಾತನಾಡಿದರು.

ಟಿವಿ‌ ನೋಡಿದರೆ ಡಿಸೆಂಬರ್, ಜನವರಿ ಕಳೆಯುತ್ತದೋ ಗೊತ್ತಿಲ್ಲ. ಅಂಥ ಕಾಲದಲ್ಲಿ ಇದ್ದೇವೆ. ಕಾಲೋಚಿತವಾಗಿ ಸಂಸ್ಥೆಯ‌ ಮೂಲಕ ಆಸಕ್ತ ಪ್ರೇಕ್ಷಕರನ್ನು ಆಧುನಿಕ ವಿಭಾಗದಲ್ಲಿ ತಲುಪಲು ಈ ಸಂಸ್ಥೆ ಕಾರ್ಯ ಮಾಡಿದೆ. ಸಂಸ್ಥೆ ಕಟ್ಟುವಾಗ ಸಿಹಿ ಕಹಿ ಅನುಭವ ಆಗುತ್ತದೆ. ಐದು ಸಾವಿರ ರೂ. ಹೆಚ್ಚು ಕೊಟ್ಟ‌ ಕಲಾಭಿಮಾನಿಗಳೂ, ಬಣ್ಣ ಒರೆಸುವ‌ ಮೊದಲೇ ನಾಪತ್ತೆ ಆಗುವವರೂ ಇದ್ದಾರೆ. ಎಲ್ಲವನ್ನೂ ಸಹಿಸಿಕೊಂಡು ಹೋಗಬೇಕು ಎಂದರು.

ಕಲಾವಿದರ ಸಂಘಟನೆಗೆ ಮುಂದಾಗಲು ಇದು ಸೂಕ್ತ ಕಾಲ. ಸ್ವತಃ ಮೇಳ ಕಟ್ಟಿದ ಅನುಭವ ಇರುವ ನನಗೆ ಇಲ್ಲಿನ  ಸಿಹಿ ಕಹಿ ಅನುಭವಗಳ ಬಗ್ಗೆ ತಿಳಿದಿದೆ. ಇದನ್ನು ಸಂಘಟಕರು ಎದುರಿಸಲೇಬೇಕು ಎಂದೂ ಹೇಳಿದರು.

ಯಕ್ಷಗಾನ ಕೇವಲ ಮನೋರಂಜನೆಯ ಕಲೆ ಅಲ್ಲ. ಹೊಸ ಶೈಲಿಯ ಪ್ರಯೋಗದ ಜತೆ ಜತೆಗೆ ಪ್ರಚಲಿತದಲ್ಲಿಲ್ಲದ ಪೌರಾಣಿಕ ಪ್ರಸಂಗಗಳನ್ನು ಆಡಿದಲ್ಲಿ ಹೆಚ್ಚು ಯಶಸ್ಸು ಸಿಗಲಿದೆ ಎಂದ ಯಾಜಿ, ಜಿಲ್ಲೆಯ ಯುವಕರಲ್ಲಿ ಯಕ್ಷಗಾನ ಕರಗತವಾಗಿದೆ. ಹೀಗಾಗಿ ಯಕ್ಷಗಾನ ಇಲ್ಲಿ ಎಂದೂ ಜೀವಂತವಾಗಿರುತ್ತದೆ ಎಂದೂ ಹೇಳಿದರು.

ಪ್ರಾಸ್ತಾವಿಕ‌ ಮಾತನಾಡಿದ ಸಾಲಿಗ್ರಾಮ‌ ಮೇಳದ ಪ್ರಧಾನ ಭಾಗವತ ರಾಮಕೃಷ್ಣ ಹೆಗಡೆ ಹಿಲ್ಲೂರು ಪ್ರಾಸ್ತಾವಿಕ‌ ಮಾತನಾಡಿ, ಸಂಸ್ಥೆ ಬೆಳೆಸುತ್ತಲೇ ಸಮಾಜಕ್ಕೆ‌ ಕೊಡುಗೆ‌ ನೀಡುವ ಕಾರ್ಯ ಮಾಡಬೇಕು ಎಂಬುದು ನಮ್ಮ ಆಶಯ ಎಂದರು.

ಅಧ್ಯಕ್ಷತೆಯನ್ನು ವಹಿಸಿದ ಟಿಎಂಎಸ್ ಅಧ್ಯಕ್ಷ ಜಿ.ಎಂ.ಹೆಗಡೆ ಹುಳಗೋಳ ಮಾತನಾಡಿದರು.

ಧಾರವಾಡ ಹಾಲು‌ ಒಕ್ಕೂಟದ‌ ನಿರ್ದೇಶಕ‌ ಸುರೇಶ್ಚಂದ್ರ ಹೆಗಡೆ‌ ಕೆಶಿನ್ಮನೆ, ಶಿರಸಿ‌ ಜಿಲ್ಲಾ‌ ಹೋರಾಟ‌ ಸಮಿತಿ ಅಧ್ಯಕ್ಷ ಉಪೇಂದ್ರ ಪೈ, ಯಲ್ಲಾಪುರ ಟಿಎಂಎಸ್ ಉಪಾಧ್ಯಕ್ಷ ನರಸಿಂಹ ಕೋಣೆಮನೆ  ಇದ್ದರು.

ಹಿರಿಯ ಭಾಗವತ ಸುರೇಶ ಶೆಟ್ಟಿ ಇತರರು  ಇದ್ದರು. ರಮ್ಯಾ ರಾಮಕೃಷ್ಣ‌ ಸ್ವಾಗತಿಸಿದರು‌. ನಾಗರಾಜ್ ಜೋಶಿ ನಿರ್ವಹಿಸಿದರು. ವಿವೇಕ ಹೆಗಡೆ ವಂದಿಸಿದರು.

ಯಕ್ಷಗಾನದ ಜೊತೆಗೆ ಬಹುಮುಖಿಯಾಗಿ ಸಮಾಜಮುಖಿ ಕಾರ್ಯ ಮಾಡಲು ಈ‌ ಸಂಸ್ಥೆ ಆರಂಭಿಸಿದ್ದೇವೆ. – ರಾಮಕೃಷ್ಣ ಹೆಗಡೆ‌ ಹಿಲ್ಲೂರು, ಪ್ರಸಿದ್ದ ಭಾಗವತರು

ಟಾಪ್ ನ್ಯೂಸ್

ಪರ್ಯಾಯದ ಸುಗ್ರಾಸ ಭೋಜನಕ್ಕೆ ಮಟ್ಟುಗುಳ್ಳ

ಪರ್ಯಾಯದ ಸುಗ್ರಾಸ ಭೋಜನಕ್ಕೆ ಮಟ್ಟುಗುಳ್ಳ

ಪರ್ಯಾಯ ಶ್ರೀಗಳಿಂದ ಉಗ್ರಾಣ ವೀಕ್ಷಣೆ

ಪರ್ಯಾಯ ಶ್ರೀಗಳಿಂದ ಉಗ್ರಾಣ ವೀಕ್ಷಣೆ

ದಂಡತೀರ್ಥ ಮಠ: ಕೃಷ್ಣಾಪುರ ಶ್ರೀಗಳ ತೀರ್ಥಸ್ನಾನಕ್ಕೆ ಸಜ್ಜು

ದಂಡತೀರ್ಥ ಮಠ: ಕೃಷ್ಣಾಪುರ ಶ್ರೀಗಳ ತೀರ್ಥಸ್ನಾನಕ್ಕೆ ಸಜ್ಜು

ನೊವಾಕ್‌ ಜೊಕೋವಿಕ್‌ ಇಲ್ಲದ ಆಸ್ಟ್ರೇಲಿಯನ್‌ ಓಪನ್‌

ನೊವಾಕ್‌ ಜೊಕೋವಿಕ್‌ ಇಲ್ಲದ ಆಸ್ಟ್ರೇಲಿಯನ್‌ ಓಪನ್‌

ಪ್ರೊ ಕಬಡ್ಡಿ: ಬೆಂಗಳೂರು ಬುಲ್ಸ್‌ ಮೇಲೆ ಸವಾರಿ ಮಾಡಿದ ಪಾಟ್ನಾ ಪೈರೇಟ್ಸ್‌

ಪ್ರೊ ಕಬಡ್ಡಿ: ಬೆಂಗಳೂರು ಬುಲ್ಸ್‌ ಮೇಲೆ ಸವಾರಿ ಮಾಡಿದ ಪಾಟ್ನಾ ಪೈರೇಟ್ಸ್‌

ಮಣಿಪಾಲ: ಮಂಚಿಯ ರಾಜೀವನಗರದ ಮೀಸಲು ಅರಣ್ಯದಲ್ಲಿ ಬೆಂಕಿ ಅವಘಡ; ತಪ್ಪಿದ ಭಾರೀ ದುರಂತ

ಮಣಿಪಾಲ: ಮಂಚಿ ರಾಜೀವನಗರದ ಮೀಸಲು ಅರಣ್ಯದಲ್ಲಿ ಬೆಂಕಿ ಅವಘಡ; ತಪ್ಪಿದ ಭಾರೀ ದುರಂತ

ಫೇಸ್‌ಬುಕ್‌ ಸರಿಪಡಿಸಿ ಕೊಡುವುದಾಗಿ ವಂಚನೆ

ಫೇಸ್‌ಬುಕ್‌ ಸರಿಪಡಿಸಿ ಕೊಡುವುದಾಗಿ ವಂಚನೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಶಿರಸಿ: ಗೋಕರ್ಣಮಂಡಲ.ಇನ್ ವೆಬ್ ಸೈಟ್ ಲೋಕಾರ್ಪಣೆ

ಶಿರಸಿ: ಗೋಕರ್ಣಮಂಡಲ.ಇನ್ ವೆಬ್ ಸೈಟ್ ಲೋಕಾರ್ಪಣೆ

ಪ್ರಯಾಣಿಕರ ಕೊರತೆ – ಸಂಕಷ್ಟದಲ್ಲಿ ಆಟೋ ಚಾಲಕರು

ಪ್ರಯಾಣಿಕರ ಕೊರತೆ – ಸಂಕಷ್ಟದಲ್ಲಿ ಆಟೋ ಚಾಲಕರು

1-go

ಗೋಸ್ವರ್ಗದಲ್ಲಿ ಗೋವಿಗಾಗಿ ಆಲೆಮನೆ ಕಾರ್ಯಕ್ರಮ

Untitled-1

ಸರಕಾರದ ಕೋವಿಡ್ ಮಾರ್ಗಸೂಚಿಯಂತೆ ಮುರ್ಡೇಶ್ವರ ಜಾತ್ರೆ: ಮಮತಾದೇವಿ ಜಿ.ಎಸ್

ಭಟ್ಕಳ: ಬೈಕ್ ಗಳ ಮುಖಾಮುಖಿ ಢಿಕ್ಕಿ: ಓರ್ವ ಸವಾರ ಸಾವು

ಭಟ್ಕಳ: ಬೈಕ್ ಗಳ ಮುಖಾಮುಖಿ ಢಿಕ್ಕಿ; ಓರ್ವ ಸವಾರ ಸಾವು

MUST WATCH

udayavani youtube

ಸಾಲಿಗ್ರಾಮ ಗುರುನರಸಿಂಹ, ಆಂಜನೇಯ ರಥೋತ್ಸವ ಸಂಪನ್ನ

udayavani youtube

ನನ್ನಮ್ಮ ಸೂಪರ್ ಸ್ಟಾರ್ ‘ಸಮನ್ವಿ’ ಅಸ್ತಿ ಕಾವೇರಿ ನದಿಯಲ್ಲಿ ವಿಸರ್ಜನೆ

udayavani youtube

ಮೈಸೂರು ಮೃಗಾಲಯದಲ್ಲಿ ಹುಟ್ಟುಹಬ್ಬ ಆಚರಣೆಗೊರಿಲ್ಲಾ ‘Demba’ ಗೆ ಖುಷಿಯೋ ಖುಷಿ

udayavani youtube

ವಿವಿಧ ಮುಹೂರ್ತಗಳು ಪರ್ಯಾಯದ ವಿಶೇಷತೆ

udayavani youtube

ಮೂಡಿಗೆರೆ : ಇಡೀ ಹಳ್ಳಿಯ ಜನರಿಗೆ ಕೆಮ್ಮು! ಇದು ಹೆದ್ದಾರಿ ಪ್ರಾಧಿಕಾರದ ಕಾಮಗಾರಿಯ ಫಲ

ಹೊಸ ಸೇರ್ಪಡೆ

“ಸಂಸ್ಕೃತದಲ್ಲಿ ಅಭಿನಂದನೆ ಹೆಮ್ಮೆಯ ವಿಚಾರ’

“ಸಂಸ್ಕೃತದಲ್ಲಿ ಅಭಿನಂದನೆ ಹೆಮ್ಮೆಯ ವಿಚಾರ’

ಪರ್ಯಾಯದ ಸುಗ್ರಾಸ ಭೋಜನಕ್ಕೆ ಮಟ್ಟುಗುಳ್ಳ

ಪರ್ಯಾಯದ ಸುಗ್ರಾಸ ಭೋಜನಕ್ಕೆ ಮಟ್ಟುಗುಳ್ಳ

ಅಶ್ವತ್ಥ ಎಲೆಯಲ್ಲಿ ಮೂಡಿಬಂದ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು

ಅಶ್ವತ್ಥ ಎಲೆಯಲ್ಲಿ ಮೂಡಿಬಂದ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು

ಪರ್ಯಾಯ ಶ್ರೀಗಳಿಂದ ಉಗ್ರಾಣ ವೀಕ್ಷಣೆ

ಪರ್ಯಾಯ ಶ್ರೀಗಳಿಂದ ಉಗ್ರಾಣ ವೀಕ್ಷಣೆ

ದಂಡತೀರ್ಥ ಮಠ: ಕೃಷ್ಣಾಪುರ ಶ್ರೀಗಳ ತೀರ್ಥಸ್ನಾನಕ್ಕೆ ಸಜ್ಜು

ದಂಡತೀರ್ಥ ಮಠ: ಕೃಷ್ಣಾಪುರ ಶ್ರೀಗಳ ತೀರ್ಥಸ್ನಾನಕ್ಕೆ ಸಜ್ಜು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.