ಹೊನ್ನಾವರ:ಹೆದ್ದಾರಿಯಲ್ಲಿ ತುಂಬಿದ್ದ ಗ್ಯಾಸ್‌ ಟ್ಯಾಂಕರ್‌ ಪಲ್ಟಿ 

Team Udayavani, Aug 1, 2017, 10:34 AM IST

ಹೊನ್ನಾವರ: ಇಲ್ಲಿ ಹೆದ್ದಾರಿಯಲ್ಲಿ ಗ್ಯಾಸ್‌ ಸಾಗಿಸುತ್ತಿದ್ದ ಟ್ಯಾಂಕರೊಂದು ಪಲ್ಟಿಯಾಗಿ ಆತಂಕಕ್ಕೆ ಕಾರಣವಾದ ಘಟನೆ ಮಂಗಳವಾರ ಬೆಳಗ್ಗೆ ನಡೆದಿದೆ. ಅದೃಷ್ಟವಷಾತ್‌ ಯಾವುದೇ ಸೋರಿಕೆ ಯಾಗಿಲ್ಲ ಮತ್ತು ಹಾನಿ ಸಂಭವಿಸಿಲ್ಲ. 

ಮಂಗಳೂರಿನಿಂದ ಸೂರತ್‌ಗೆ ತೆರಳುತ್ತಿದ್ದ ಟ್ಯಾಂಕರ್‌ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಗ್ಯಾಸ್‌ ಸೋರಿಕೆ ಇಲ್ಲಎಂದು ಸ್ಥಳಕ್ಕೆ ಭೇಟಿ ನೀಡಿದ ಹೊನ್ನಾವರ ಠಾಣಾ ಪೊಲೀಸರು ತಿಳಿಸಿದ್ದಾರೆ. 

ಟ್ಯಾಂಕರ್‌ ಪಲ್ಟಿಯಾದ ತಕ್ಷಣ ಜನರು ಭಯಭೀತರಾಗಿದ್ದರು ಎಂದು ವರದಿಯಾಗಿದೆ. ಸೋರಿಕೆ ಯಾಗಿಲ್ಲ ಎನ್ನುವ ವಿಚಾರ ತಿಳಿದು ಜದರು ನಿರಾಳರಾದರು. 

ಟ್ಯಾಂಕರನ್ನು ತೆರವುಗೊಳಿಸಲು  ಮಂಗಳೂರಿನಿಂದ ಅಧಿಕಾರಿಗಳು ಸ್ಥಳಕ್ಕೆ ತೆರಳುತ್ತಿದ್ದಾರೆ. 


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ