ನೀರು ಪೂರೈಕೆಗೆ ಒತ್ತಾಯಿಸಿ ಧರಣಿ
Team Udayavani, Jun 9, 2020, 1:05 PM IST
ದೋಟಿಹಾಳ: ನೀರು ಪೂರೈಕೆಗೆ ಆಗ್ರಹಿಸಿ ಗ್ರಾಮದ ಒಂದನೇ ವಾರ್ಡ್ ಮಹಿಳೆಯರು ಸೋಮವಾರ ಗ್ರಾಪಂಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ಗ್ರಾಮದ ಕೆಳಗಿನ ಮಠ ಹತ್ತಿರದ ಸುಮಾರು 50ಕ್ಕೂ ಹೆಚ್ಚು ಕುಟುಂಬಗಳಿಗೆ 15 ದಿನಗಳಿಂದ ನೀರು ಸರಬರಾಜಾಗದ ಹಿನ್ನೆಲೆಯಲ್ಲಿ ಬೇಸತ್ತ ಮಹಿಳೆಯರು ಸೋಮುವಾರ ಗ್ರಾಪಂಗೆ ಖಾಲಿ ಕೊಡಗಳೊಂದಿಗೆ ಆಗಮಿಸಿ ಆಡಳಿತ ಅಧಿ ಕಾರಿಗಳು ಹಾಗೂ ಸದಸ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಶುಖಮುನಿಸ್ವಾಮಿಗಳ ಕೆಳಗಿನ ಮಠದ ಹತ್ತಿರದ ಬಾವಿಗೆ ಕೊಳವೆಬಾವಿ ಮೂಲಕ ನೀರು ಸಂಗ್ರಹ ಮಾಡಲಾಗುತ್ತಿತು. ಆದರೆ ಕೊಳವೆಬಾವಿ ಮೋಟರ್ ಸುಟ್ಟು ಹೋದ ಕಾರಣ ಜನರಿಗೆ ನೀರಿಲ್ಲ. ಗ್ರಾಮಸ್ಥರು ಕುಡಿಯುವ ನೀರಿಗಾಗಿ ಸುತ್ತಲಿನ ತೋಟಗಳಿಗೆ, ಬೇರೆ ವಾರ್ಡ್ ಗಳಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಮನೆಯಲ್ಲಿರುವ ದನಕರುಗಳಿಗೆ ನೀರಿಲ್ಲದಂತಾಗಿದೆ. ಹೀಗಾಗಿ ಬೇಸತು ಗ್ರಾಪಂ ಕಚೇರಿಗೆ ಬಂದಿದ್ದೇವೆ ಎಂದು ಪ್ರತಿಭಟನಾ ನಿರತ ಮಹಿಳೆಯರು ಹೇಳಿದರು.
ಇದರ ಬಗ್ಗೆ ಗ್ರಾಪಂ ಪಿಡಿಒ ದೇವೇಂದ್ರಪ್ಪ ಅವರನ್ನು ಸಂಪರ್ಕಿಸಿದಾಗ, ಮೋಟರ್ ಸುಟ್ಟು ಹೋದ ಕಾರಣ ಒಂದನೇ ವಾರ್ಡ್‌ನಲ್ಲಿ ನೀರಿನ ಸಮಸ್ಯೆಯಾಗಿದೆ. ಶೀಘ್ರದಲ್ಲೇ ಮೋಟರ್ ರಿಪೇರಿ ಮಾಡಿ ಜನರಿಗೆ ನೀರಿನ ವ್ಯವಸ್ಥೆ ಮಾಡಲಾಗುವುದು ಹಾಗೂ ಅಲ್ಲಿ ಮತ್ತೂಂದು ಕೊಳವೆಬಾವಿ ಕೊರೆಸುವ ವ್ಯವಸ್ಥೆ ಮಾಡುವ ಭರವಸೆ ನೀಡಿದರು. ಪಿಡಿಒ ಭರವಸೆ ಹಿನ್ನೆಲೆಯಲ್ಲಿ ಮಹಿಳೆಯರು ಪ್ರತಿಭಟನೆ ಹಿಂಪಡೆದರು.