Udayavni Special

ಕದ್ರಾ-ಕೊಡಸಳ್ಳಿ ನೀರು ಬಿಡುವ ಮುನ್ಸೂಚನೆ

­ಭರ್ತಿಯಾಗುವತ್ತ ಜಲಾಶಯಗಳು­ಪರಿಶೀಲನೆ ಮಾಡಿದ ಜಿಲ್ಲಾಧಿಕಾರಿ ಮುಲ್ಲೆ„ ಮುಗಿಲನ್‌ -ಕೆಪಿಸಿ ಮುಖ್ಯ ಇಂಜಿನಿಯರ್‌ ನಿಂಗಣ್ಣ

Team Udayavani, Jun 17, 2021, 6:05 PM IST

k-3

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದ್ದು, ಕದ್ರಾ ಮತ್ತು ಕೊಡಸಳ್ಳಿ ಜಲಾಶಯದಿಂದ ನೀರನ್ನು ನದಿಗೆ ಹರಿಸುವ ಸೂಚನೆಯನ್ನು ಕೆಪಿಸಿ ಮುಖ್ಯ ಎಂಜಿನಿಯರ್‌ ನಿಂಗಣ್ಣ ಬುಧವಾರ ಜಿಲ್ಲಾಡಳಿತಕ್ಕೆ ತಿಳಿಸಿದ್ದಾರೆ.

ಅಣೆಕಟ್ಟು ತುಂಬಲು ಇನ್ನು ಮೂರು ಮೀಟರ್‌ ಇದ್ದರೂ ಸಹ ಸತತ ಮಳೆ ಜಲಾಶಯಗಳ ಹಿನ್ನೀರಿನಲ್ಲಿ ಬೀಳುತ್ತಿದೆ. ಕದ್ರಾ ಜಲಾಶಯ 31 ಮೀಟರ್‌ಗೆ ನೀರಿನ ಮಟ್ಟ ತಲುಪುತ್ತಿದ್ದು, 32.50 ಮೀಟರ್‌ಗೆ ಬರುತ್ತಿದ್ದಂತೆ ಕ್ರಸ್ಟಗೇಟ್‌ ತೆಗೆಯಲು ಕೆಪಿಸಿ ನಿರ್ಧರಿಸಿದೆ. ಜಿಲ್ಲಾಡಳಿತದ ಜೊತೆ ಸತತ ಸಂಪರ್ಕದಲ್ಲಿರುವ ಕೆಪಿಸಿ, ನದಿ ದಂಡೆಯ ಜನರು ಮನೆಗಳನ್ನು ತೊರೆಯುವುದನ್ನು ತಡೆಯಲು ಯತ್ನಿಸುತ್ತಿದೆ.

ಕೊಡಸಳ್ಳಿ ಜಲಾಶಯ 70 ಮೀಟರ್‌ ಎತ್ತರಕ್ಕೆ ನೀರಿನ ಮಟ್ಟ ತಲುಪುತ್ತಿದೆ. ಹಾಗಾಗಿ 72.50 ಮೀಟರ್‌ ಎತ್ತರಕ್ಕೆ ಜಲಾಶಯದ ಮಟ್ಟ ಬರಲು ಹೆಚ್ಚು ತಡವಾಗುವುದಿಲ್ಲ. ಸತತವಾಗಿ ಇನ್ನೆರಡು ದಿನ ಮಳೆ ಬಿದ್ದರೆ ಕೊಡಸಳ್ಳಿ ಜಲಾಶಯದ ಕ್ರಸ್ಟ್‌ ಗೇಟ್‌ ಸಹ ತೆರೆಯಲಾಗುವುದು ಎಂದು ಕೆಪಿಸಿ ಹೇಳಿದೆ.

ನದಿಯಲ್ಲಿ ಮೀನು ಹಿಡಿಯುವ ಅಥವಾ ದೋಣಿಯಲ್ಲಿ ಸಂಚರಿಸಬೇಡಿ ಎಂದು ಕೆಪಿಸಿ ಹೇಳಿದೆ. ಜನ ಜಾನುವಾರುಗಳ ಬಗ್ಗೆ ಕಾಳಜಿ ವಹಿಸಿ ಎಂದೂ ಹೇಳಿದೆ. ಈಗಾಗಲೇ ಕದ್ರಾದಿಂದ 4729 ಕ್ಯೂಸೆಕ್‌ ನೀರು ಹೊರಗೆ ಹರಿಯುತ್ತಿದೆ. ಒಳ ಹರಿವು 10 ಕ್ಯೂಸೆಕ್‌ ಗೂ ಹೆಚ್ಚಿದೆ.

ದಾಂಡೇಲಿಯಲ್ಲಿ ಅತೀಯಾದ ಮಳೆಯಾಗುತ್ತಿದ್ದು, ಕದ್ರಾ ಕೊಡಸಳ್ಳಿ ಜಲಾಶಯಗಳು ಇನ್ನೆರಡು ದಿನಗಳಲ್ಲಿ ಭರ್ತಿಯಾಗಲಿವೆ. ಕಂದಾಯ ಮತ್ತು ಪೊಲೀಸ್‌ ಇಲಾಖೆಯನ್ನು ಸನ್ನದ್ಧ ಸ್ಥಿತಿಯಲ್ಲಿ ಇಡಲಾಗಿದೆ. ಸಹಾಯಕ ಕಮಿಷನರ್‌ ಸತತವಾಗಿ ಕದ್ರಾ ಭಾಗದಲ್ಲಿ ಸಂಚರಿಸುತ್ತಿದ್ದು, ತಹಶೀಲ್ದಾರರು ಸಹ ಪರಿಸ್ಥಿತಿ ಬಗ್ಗೆ ನಿಗಾ ಇಟ್ಟಿದ್ದಾರೆ. ಜನರ ಸ್ಥಳಾಂತರ ಸನ್ನಿವೇಶ ಬಂದರೆ ಅದನ್ನು ನಿಭಾಯಿಸಲು ಜಿಲ್ಲಾಡಳಿತ ಸಜ್ಜಾಗಿದೆ.

ಕಳೆದ 24 ಗಂಟೆಯಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಬಿದ್ದ ಮಳೆಯ ಪ್ರಮಾಣ ಇಂತಿದೆ. ಅಂಕೋಲಾದಲ್ಲಿ 94.2 ಮಿ.ಮೀ, ಭಟ್ಕಳ 52.8 ಮಿ.ಮೀ, ಹಳಿಯಾಳ 62.2 ಮಿ.ಮೀ, ಹೊನ್ನಾವರ 106.9 ಮಿ.ಮೀ, ಕಾರವಾರ 107.1 ಮಿ.ಮಿ, ಕುಮಟಾ 44.2 ಮಿ.ಮೀ, ಮುಂಡಗೋಡ 34.4 ಮಿ.ಮೀ, ಸಿದ್ದಾಪುರ 108.6 ಮಿ.ಮೀ. ಶಿರಸಿ 105.0 ಮಿ.ಮೀ, ಜೋಯಿಡಾ 88.4 ಮಿ.ಮೀ, ಯಲ್ಲಾಪುರ 74.6 ಮಿ.ಮೀ. ಮಳೆಯಾಗಿದೆ. ಇನ್ನೆರಡು ದಿನ ಭಾರೀ ಮಳೆಯ ಮುನ್ಸೂಚನೆ ಇದೆ.

ಟಾಪ್ ನ್ಯೂಸ್

ಮಳೆಗಾಲದಲ್ಲೂ  ಇಲ್ಲಿ ನೀರಿಗಾಗಿ ಪರದಾಟ!

ಮಳೆಗಾಲದಲ್ಲೂ  ಇಲ್ಲಿ ನೀರಿಗಾಗಿ ಪರದಾಟ!

Ramesh

ನಳಿನ್‌ ಕುಮಾರ್‌ ಕಟೀಲ್‌ ಭೇಟಿ ಮಾಡಿದ ರಮೇಶ್‌ ಜಾರಕಿಹೊಳಿ

Pegasus

ಪೆಗಾಸಸ್‌ ಬೇಹು ನಿಜವಾದಲ್ಲಿ, ಅದು ಗಂಭೀರ ವಿಚಾರ: ಸುಪ್ರೀಂ

drone-rules

ಹೊಸ ಡ್ರೋನ್‌ ನಿಯಮಗಳು ಜಾರಿ

Swiggy

ವಿದ್ಯುಚ್‌ ಚಾಲಿತ ವಾಹನ: ಆರ್‌ಬಿಎಂಎಲ್‌- ಸ್ವಿಗ್ಗಿ ಒಪ್ಪಂದ

Dhriti-Banerjee

ಜೆಡ್‌ಎಸ್‌ಐಗೆ ಮೊದಲ ಮಹಿಳಾ ನಿರ್ದೇಶಕಿ

Prajwal-Revann

ಮೇಕೆದಾಟು ಯೋಜನೆ ರಾಜ್ಯದ ಹಕ್ಕುಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

fgdfgdrgre

ದಾಂಡೇಲಿ : ಯುಜಿಡಿ ಅಸಮರ್ಪಕ ಕಾಮಗಾರಿಯಿಂದ ಸಾರ್ವಜನಿಕರು ಹೈರಾಣು

uyg

ಕಾರವಾರ : ಹೊರಗಿನವರಿಗೆ ನೆಗಟಿವ್‌ ವರದಿ ಕಡ್ಡಾಯ

ಮನೆಯೊಳಗೆ ಅಕ್ರಮ ಪ್ರವೇಶಿಸಿ ಅಸಭ್ಯ ವರ್ತನೆ ತೋರಿದ ವ್ಯಕ್ತಿಗೆ ಸಾರ್ವಜನಿಕರಿಂದ ಧರ್ಮದೇಟು

ಮನೆಯೊಳಗೆ ಅಕ್ರಮ ಪ್ರವೇಶಿಸಿ ಅಸಭ್ಯ ವರ್ತನೆ ತೋರಿದ ವ್ಯಕ್ತಿಗೆ ಸಾರ್ವಜನಿಕರಿಂದ ಧರ್ಮದೇಟು

ಅಂಕೋಲಾ: ಹೆಚ್ಚಾದ ಚಿರತೆ ಹಾವಳಿ :ಕ್ರಮ ಕೈಗೊಳ್ಳದ ಅರಣ್ಯ ಇಲಾಖೆ ವಿರುದ್ಧ ಗ್ರಾಮಸ್ಥರ ಆಕ್ರೋಶ

ಅಂಕೋಲಾ: ಹೆಚ್ಚಾದ ಚಿರತೆ ಹಾವಳಿ :ಕ್ರಮ ಕೈಗೊಳ್ಳದ ಅರಣ್ಯ ಇಲಾಖೆ ವಿರುದ್ಧ ಗ್ರಾಮಸ್ಥರ ಆಕ್ರೋಶ

ಕುಮಟಾ: ಈಜಲು ತೆರಳಿದ್ದ ಯುವಕ ನೀರುಪಾಲು

ಕುಮಟಾ: ಈಜಲು ತೆರಳಿದ್ದ ಯುವಕ ನೀರುಪಾಲು

MUST WATCH

udayavani youtube

ಕೋವಿಡ್‌ ನಿಯಮ ಉಲ್ಲಂಘಿಸಿದ ತಹಶೀಲ್ದಾರ್

udayavani youtube

ಉತ್ತರ ಭಾರತದ ಮಖಾನ ಉತ್ಪನ್ನಗಳು ಕರ್ನಾಟಕದ ಈ ಊರಲ್ಲಿ ತಯಾರಾಗುತ್ತಿದೆ !

udayavani youtube

ಸಂತ್ರಸ್ತೆಯ ಪೋಷಕರೊಂದಿಗಿನ ಫೋಟೋ ಹಂಚಿಕೊಂಡ ರಾಹುಲ್ ಮೇಲೆ FIR

udayavani youtube

ಖುದ್ದು ಪ್ರಧಾನಿ ಮೋದಿ ದೂರವಾಣಿ ಕರೆ ಮಾಡಿದ್ರು

udayavani youtube

ಹೆದ್ದಾರಿ ಬದಿಯಲ್ಲಿ 1000ಕ್ಕೂ ಅಧಿಕ ಗಿಡಗಳನ್ನು ನೆಟ್ಟು ಬೆಳೆಸುವ ಯೋಜನೆಗೆ

ಹೊಸ ಸೇರ್ಪಡೆ

ಮಳೆಗಾಲದಲ್ಲೂ  ಇಲ್ಲಿ ನೀರಿಗಾಗಿ ಪರದಾಟ!

ಮಳೆಗಾಲದಲ್ಲೂ  ಇಲ್ಲಿ ನೀರಿಗಾಗಿ ಪರದಾಟ!

ಪಚ್ಚನಾಡಿ ಪಾರಂಪರಿಕ ತ್ಯಾಜ್ಯ ಕರಗಿಸಲು “ಬಯೋ ಮೈನಿಂಗ್‌’ ವ್ಯವಸ್ಥೆ

ಪಚ್ಚನಾಡಿ ಪಾರಂಪರಿಕ ತ್ಯಾಜ್ಯ ಕರಗಿಸಲು “ಬಯೋ ಮೈನಿಂಗ್‌’ ವ್ಯವಸ್ಥೆ

ಕೊಡ್ಮಾಣ್‌ : ರಸ್ತೆ ಸಮಸ್ಯೆಗಳೇ ಗ್ರಾಮದ ಸವಾಲು

ಕೊಡ್ಮಾಣ್‌ : ರಸ್ತೆ ಸಮಸ್ಯೆಗಳೇ ಗ್ರಾಮದ ಸವಾಲು

ವಸತಿ ಯೋಜನೆಗೆ ಹಿಡಿದ ಗ್ರಹಣ 

ವಸತಿ ಯೋಜನೆಗೆ ಹಿಡಿದ ಗ್ರಹಣ 

ಸಾಂಪ್ರದಾಯಿಕ ಮೀನುಗಾರಿಕೆಗೆ ಧಕ್ಕೆ: ಅಗತ್ಯ ಕ್ರಮಕ್ಕೆ ಆಗ್ರಹ

ಸಾಂಪ್ರದಾಯಿಕ ಮೀನುಗಾರಿಕೆಗೆ ಧಕ್ಕೆ: ಅಗತ್ಯ ಕ್ರಮಕ್ಕೆ ಆಗ್ರಹ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.