ಮೈದುಂಬಿದ ಕಾಳಿ-ಕಳೆಗಟ್ಟಿದ ಸೂಪಾ


Team Udayavani, Sep 15, 2019, 12:45 PM IST

uk-tdy-2

ಕಾರವಾರ: ಸೂಪಾ ಜಲಾಶಯದಿಂದ ನೀರು ಹೊರಬಿಟ್ಟ ಕ್ಷಣ.

ಕಾರವಾರ: ಪ್ರಸಕ್ತವರ್ಷ ಉತ್ತರ ಕನ್ನಡದ ಜೀವನದಿಗಳಾದ ಕಾಳಿ, ಗಂಗಾವಳಿ, ಅಘನಾಶಿನಿ, ಶರಾವತಿ, ಶರಾಬಿ ನದಿಗಳು ಮೈದುಂಬಿ ಹರಿದವು. ಸಮುದ್ರವನ್ನು ಸಮೃದ್ಧಗೊಳಿಸಿ ನಲಿದವು.

ನದಿ ದಂಡೆ ಗ್ರಾಮಗಳ ಜನರನ್ನು ಒಂದಿಷ್ಟು ಆತಂಕಕ್ಕೆ ತಳ್ಳಿದ್ದರೂ, ನೀರಡಿಕೆಯಿಂದ ಬಳಲಿದ್ದ ಪಶ್ಚಿಮ ಘಟ್ಟದ ಸಹ್ಯಾದ್ರಿ ಮಡಿಲನ್ನು ತಣಿಸಿ, ಮತ್ತಷ್ಟು ಸಮೃದ್ಧಗೊಳಿಸಿದವು. ಎರಡು ದಶಕಗಳ ಹಿಂದಿನ ಮಳೆಯ ವೈಭವ ಮರುಕಳಿಸಿದ್ದೆ 2019ರಲ್ಲಿ.

ಕಳೆದ ಏಪ್ರಿಲ್ -ಮೇ ತಿಂಗಳಲ್ಲಿ ನದಿ ದಂಡೆ ಗ್ರಾಮಗಳು, ಸಮುದ್ರ ದಂಡೆ ಊರುಗಳು ಕುಡಿಯುವ ನೀರಿಗಾಗಿ ಪರಿತಪಿಸಿದ್ದವು. ಗಂಗಾವಳಿ ಅಕ್ಷರಶಃ ಬತ್ತಿದ್ದಳು. ಒಂದು ರೀತಿ ಆತಂಕ ಆವರಿಸಿತ್ತು. ಉತ್ತರ ಕನ್ನಡದಲ್ಲೂ ಹೀಗಾ ಎಂದು ರಾಜ್ಯದ ಜನ ಅಚ್ಚರಿ ಪಟ್ಟಿದ್ದರು. ಈ ವರ್ಷದ ಮಳೆ ಎಲ್ಲಾ ಆತಂಕವನ್ನು ಕೊಂಚ ದೂರ ಮಾಡಿ ಹೊಸ ಆಶಾವಾದ ಹುಟ್ಟಿಸಿದೆ.

ಕಾಳಿ ನದಿಗೆ 1980ರ ದಶಕದಲ್ಲಿ ಸೂಪಾ ಎಂಬ ಗ್ರಾಮದ ಬಳಿ ಎರಡು ಗುಡ್ಡಗಳ ನಡುವೆ ನದಿ ಹರಿಯುವ ಪ್ರದೇಶದಲ್ಲಿ ಅಣೆಕಟ್ಟು ನಿರ್ಮಾಣಕ್ಕೆ ನಿರ್ಧರಿಸಲಾಯಿತು. ವಿದ್ಯುತ್‌ ಉತ್ಪಾದನೆ ಗುರಿಯೊಂದಿಗೆ ಈ ಯೋಜನೆ ರೂಪಿಸಲಾಯಿತು. ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅಣೆಕಟ್ಟಿಗೆ ಅಡಿಗಲ್ಲು ಹಾಕಿದ್ದ ಸೂಪಾ ಅಣೆಕಟ್ಟು ಹಿಮಾಚಲ ಪ್ರದೇಶದ ಬಾಕ್ರಾ ನಂಗಲ್ ತರಹ ಗಮನ ಸೆಳೆದಿತ್ತು. 1987ರಲ್ಲಿ ಪೂರ್ಣವಾಗಿ, ಅದೇ ವರ್ಷ ಸುರಿದ ಭಾರೀ ಮಳೆಗೆ ಭರ್ತಿಯಾಗಿದ್ದ ಸೂಪಾ, ದೇಶದ ಅತೀ ಎತ್ತರದ ಅಣೆಕಟ್ಟು ಎಂಬ ಕೀರ್ತಿಗೆ ಕಾರಣವಾಗಿತ್ತು. ಸೂಪಾ ಜಲಾಶಯ 145 ಟಿಎಂಸಿ ಅಡಿ ನೀರನ್ನು ತನ್ನ ಮಡಿಲಲ್ಲಿ ಇಟ್ಟುಕೊಂಡಿತ್ತು. ವಿದ್ಯುತ್‌ ಉತ್ಪಾದಿಸಿದ ನೀರನ್ನು ಕಾಳಿಗೆ ಬಿಡಲಾಗುತ್ತಿತ್ತು. ಹೀಗಿದ್ದ ಸೂಪಾ ಜಲಾಶಯ ಮತ್ತೆ ಭರ್ತಿಯಾದದ್ದು 2006ರಲ್ಲಿ. 564.09 ಮೀಟರ್‌ ಎತ್ತರ ಇರುವ ಈ ಅಣೆಕಟ್ಟು 2007ರಲ್ಲಿ 561.40 ಮೀಟರ್‌ ವರೆಗೆ ಭರ್ತಿಯಾಗಿತ್ತು. ನಂತರ ಅದು ದಾಖಲೆ ಪ್ರಮಾಣದಲ್ಲಿ ಭರ್ತಿಯಾದದ್ದು 2019ರಲ್ಲಿ. ಸೆಪ್ಟಂಬರ್‌ನಲ್ಲಿ. ಅಣೆಕಟ್ಟು ಪೂರ್ಣ ತುಂಬದಂತೆ ಹೆಚ್ಚು ಕಡಿಮೆ 15 ದಿನ ಜಲಾಶಯದ ಕ್ರಸ್ಟ್‌ಗೇಟ್ನಿಂದ 5000 ಕ್ಯೂಸೆಕ್ಸ್‌ ನೀರನ್ನು ಹೊರಬಿಡುತ್ತಲೇ ಇರುವಷ್ಟು ಮಳೆ ಸುರಿಯಿತು. ಆಗಸ್ಟ್‌ ಮೊದಲ ವಾರದಿಂದ ಆರಂಭಗೊಂಡ ವರ್ಷಧಾರೆ ಸೆ.8ರ ಹೊತ್ತಿಗೆ ಕ್ರಸ್ಟ್‌ ಗೇಟ್‌ಗಳಿಂದ 55000 ಕ್ಯೂಸೆಕ್‌ ನೀರು ಹೊರಬಿಟ್ಟು ದಾಖಲೆ ಬರೆಯಲಾಯಿತು. 19 ಟಿಎಂಸಿ ಅಡಿ ನೀರು ಸೂಪಾದಿಂದ ಕಾಳಿ ನದಿ ಮೂಲಕ ಅರಬ್ಬೀ ಸಮುದ್ರ ಸೇರಿತ್ತು. ಇದಕ್ಕೂ ಮುನ್ನ ಇದೇ ಜಲಾಶಯದಿಂದ ಆಗಸ್ಟ್‌ 1994 ರಲ್ಲಿ 35 ರಿಂದ 40 ಸಾವಿರ ಕ್ಯೂಸೆಕ್‌ ನೀರನ್ನು ಹೊರಬಿಡಲಾಗಿತ್ತು.

ಇದೇ ಸೆ.11 ರಂದು 21,388 ಕ್ಯೂಸೆಕ್‌ ನೀರು ಒಳಗೆ ಹರಿದು ಬರುತ್ತಿದ್ದರೆ, ಅಷ್ಟೇ ಪ್ರಮಾಣದ ನೀರು ಹೊರ ಹೋಗುತ್ತಿತ್ತು. ಸೂಪಾ ಜಲಾಶಯದಲ್ಲಿ ನೀರಿನ ಸಂಗ್ರಹದಲ್ಲಿ ಒಂದು ಸ್ಥಿರತೆ ಕಾಪಾಡಿಕೊಳ್ಳಲು ಮೂರ್‍ನಾಲ್ಕು ದಿನ ಕಣ್ಣಲ್ಲಿ ಕಣ್ಣಿಟ್ಟು ಸಿವಿಲ್ ಎಂಜಿನಿಯರ್‌ಗಳು ಕಾಯಬೇಕಾಯಿತು. ಅಷ್ಟು ಪ್ರಮಾಣದಲ್ಲಿ ಮಳೆ ಸುರಿಯುತ್ತಿತ್ತು.

ಸೂಪಾ ಸೇರಿದಂತೆ ಕಾಳಿ ನದಿಯ ಎಲ್ಲಾ ಜಲಾಶಯಗಳು ಭರ್ತಿಯಾಗಿದ್ದು, ನೀರಿನ ಸಂಗ್ರಹದ ಸ್ಥಿರತೆ ಕಾಪಾಡಿಕೊಳ್ಳಲಾಗಿದೆ. ನದಿ ದಂಡೆ ಜನರಿಗೆ ಕಾಲಕಾಲಕ್ಕೆ ಎಚ್ಚರಿಕೆ ನೀಡಿ, ನೀರನ್ನು ಜಲಾಶಯದಿಂದ ನದಿಗೆ ಹರಿಸಲಾಗಿದೆ. ಮಳೆ ಸತತ ಬೀಳುತ್ತಲೇ ಇತ್ತು. ಹಾಗಾಗಿ ಜಿಲ್ಲಾಡಳಿತದ ಮಾರ್ಗದರ್ಶನ ಪಡೆದು ನೀರನ್ನು ಹೊರ ಬಿಡಲಾಗಿತ್ತು. ಜಲಾಶಯಗಳು ಸುರಕ್ಷಿತವಾಗಿವೆ.ನಿಂಗಣ್ಣ. ಮುಖ್ಯ ಎಂಜಿನಿಯರ್‌. (ಕಾಳಿ ಕೊಳ್ಳದ ಜಲಾಶಯಗಳು) ಕೆಪಿಸಿ

ಕಾಳಿ ನದಿಗೆ 5 ಅಣೆಕಟ್ಟು ನಿರ್ಮಿಸಲಾಗಿದೆ. ಸೂಪಾ, ತಟ್ಟಿಹಳ್ಳ, ಬೊಮ್ಮನಹಳ್ಳಿ, ಕೊಡಸಳ್ಳಿ, ಕದ್ರಾ ಎಂಬಲ್ಲಿ. ವಿದ್ಯುತ್‌ ಉತ್ಪಾದನೆ ನಾಲ್ಕು ಕಡೆಯಿಂದ ಆಗುತ್ತಿದೆ. 1270 ಮೆಗಾವ್ಯಾಟ್ ವಿದ್ಯುತ್‌ ಉತ್ಪಾದಿಸಿ ರಾಜ್ಯಕ್ಕೆ ನೀಡುತ್ತಿದೆ. ಕೆಪಿಸಿ ಸೂಪಾ ಎರಡು ಘಟಕದಿಂದ 100 ಮೆಗಾವ್ಯಾಟ್, ನಾಗಝರಿ 6 ಘಟಕಗಳಿಂದ 900 ಮೆಗಾವ್ಯಾಟ್, ಕೊಡಸಳ್ಳಿ 3 ಯುನಿಟ್ ಗಳಿಂದ 120 ಮೆಗಾವ್ಯಾಟ್, ಕದ್ರಾದ 3 ಯುನಿಟ್‌ಗಳಿಂದ 150 ಮೆಗಾವ್ಯಾಟ್ ವಿದ್ಯುತ್‌ ರಾಜ್ಯ ಗ್ರಿಡ್‌ ಸೇರುತ್ತಿದೆ. 33 ವರ್ಷಗಳ ತನ್ನ ಇತಿಹಾಸದಲ್ಲಿ ಸೂಪಾ ಹೆಚ್ಚು ಸುದ್ದಿಯಾದದ್ದು 2019ರಲ್ಲಿ. ಕದ್ರಾದಿಂದ 80 ಸಾವಿರ ಕ್ಯೂಸೆಕ್‌ ನೀರನ್ನು ಆ.5 ರಂದು ಹೊರ ಬಿಟ್ಟಾಗ ನದಿ ದಂಡೆ ಜನರಿಗೆ ತೊಂದರೆಯಾದದ್ದು ನಿಜ. ಅದು ಅಂದಿನ ಮಳೆ ಹಾಗೂ ಜಲಾಶಯದಲ್ಲಿನ ನೀರಿನ ಪ್ರಮಾಣ ಕಾರಣವಾಗಿ ಅನಿವಾರ್ಯವಾಗಿತ್ತು. ಏನೆಲ್ಲಾ ಕಷ್ಟಗಳನ್ನು ಜಿಲ್ಲಾಡಳಿತದ ನೆರವಿನ ಮೂಲಕ ಕೆಪಿಸಿ ನಿಭಾಯಿಸಿತು. ನೋವಿನ ಮಧ್ಯೆಯೂ ರಾಜ್ಯಕ್ಕೆ ಬೆಳಕು ನೀಡಿತು.
•ನಾಗರಾಜ ಹರಪನಹಳ್ಳಿ

ಟಾಪ್ ನ್ಯೂಸ್

LS Election; ದಿಂಗಾಲೇಶ್ವರ ಶ್ರೀ ಟೀಕೆ ನನಗೆ ಆಶೀರ್ವಾದ ಇದ್ದಂತೆ: ಪ್ರಹ್ಲಾದ್ ಜೋಶಿ

1-wewqeq

Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ

1-eqqwqw

Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್

ವಿಕಸಿತ ಭಾರತದಂತಹ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಇನ್ನೆಷ್ಟು ವರ್ಷ ಆಳ್ವಿಕೆ ಮಾಡಿದರೂ ಬಾರದು

ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು

it

Congress ಬಳಿಕ ಸಿಪಿಐಗೂ 11 ಕೋಟಿ ರೂ.ಬಾಕಿಗಾಗಿ ಐಟಿ ನೋಟಿಸ್

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ

20-

Crime: ಗುದದ್ವಾರಕ್ಕೆ ಗಾಳಿ: ಸ್ನೇಹಿತನ ದುರ್ಮರಣ: ಕೃತ್ಯವೆಸಗಿದಾತನ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ವಿಕಸಿತ ಭಾರತದಂತಹ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಇನ್ನೆಷ್ಟು ವರ್ಷ ಆಳ್ವಿಕೆ ಮಾಡಿದರೂ ಬಾರದು

ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು

Anant KUmar Hegde

Uttara Kannada BJP; ಅನಂತ್‌ ಕುಮಾರ ಹೆಗಡೆ ತಟಸ್ಥ?: ಪ್ರಚಾರದಿಂದಲೂ ದೂರ

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

Kumta: ರಾಜಕೀಯದಲ್ಲಿ ಧರ್ಮ ಇರಬೇಕು, ಧರ್ಮದಲ್ಲಿ ರಾಜಕೀಯ ಇರಬಾರದು: ಡಿ.ಕೆ.ಶಿವಕುಮಾರ್

Kumta: ರಾಜಕೀಯದಲ್ಲಿ ಧರ್ಮ ಇರಬೇಕು, ಧರ್ಮದಲ್ಲಿ ರಾಜಕೀಯ ಇರಬಾರದು: ಡಿ.ಕೆ.ಶಿವಕುಮಾರ್

ಪಾದುಕೆ ದರ್ಶನ: ಸಂಭ್ರಮ ಹೆಚ್ಚಿಸಿದ ಮಂತ್ರಾಲಯ ಶ್ರೀಗಳ ಸಂಚಾರ

ಪಾದುಕೆ ದರ್ಶನ: ಸಂಭ್ರಮ ಹೆಚ್ಚಿಸಿದ ಮಂತ್ರಾಲಯ ಶ್ರೀಗಳ ಸಂಚಾರ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

LS Election; ದಿಂಗಾಲೇಶ್ವರ ಶ್ರೀ ಟೀಕೆ ನನಗೆ ಆಶೀರ್ವಾದ ಇದ್ದಂತೆ: ಪ್ರಹ್ಲಾದ್ ಜೋಶಿ

1-wewqeq

Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ

partner kannada movie

Kannada Cinema; ಸ್ನೇಹಿತರ ಸುತ್ತ ‘ಪಾರ್ಟ್ನರ್‌’: ಟ್ರೇಲರ್‌, ಆಡಿಯೋದಲ್ಲಿ ಹೊಸಬರ ಚಿತ್ರ

1-eqqwqw

Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್

ವಿಕಸಿತ ಭಾರತದಂತಹ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಇನ್ನೆಷ್ಟು ವರ್ಷ ಆಳ್ವಿಕೆ ಮಾಡಿದರೂ ಬಾರದು

ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.