ಕಾರವಾರ ವಿಶೇಷ ಕಂಟೇನ್‌ಮೆಂಟ್ ಝೋನ್
ಚಿತ್ತಾಕುಲಾ-ಮಲ್ಲಾಪುರ ಪಂಚಾಯ್ತಿಯೂ ಸೇರ್ಪಡೆ! ಜನಸಂಚಾರ ಕಡ್ಡಾಯ ನಿರ್ಬಂಧ
Team Udayavani, May 18, 2021, 4:27 PM IST
ಕಾರವಾರ: ನಗರಸಭೆ ವ್ಯಾಪ್ತಿಯಲ್ಲಿ ಮತ್ತು ಕಾರವಾರ ತಾಲೂಕಿನ ಚಿತ್ತಾಕುಲಾ ಮತ್ತು ಮಲ್ಲಾಪುರ ಗ್ರಾಪಂ ವ್ಯಾಪ್ತಿಯ ಪ್ರದೇಶಗಳನ್ನು ಸ್ಪೆಶಲ್ ಕಂಟೋನ್ಮೆಂಟ್ ಝೋನ್ ಆಗಿಸಿ ಡಿಸಿ ಆದೇಶ ಹೊರಡಿಸಿದ್ದಾರೆ.
ಈ ಪ್ರದೇಶಗಳಲ್ಲಿ ಕೋವಿಡ್-19 ಮಾರ್ಗಸೂಚಿಯನ್ವಯ ಕೈಗೊಳ್ಳಬೇಕಾದ ಕ್ರಮಗಳ ಕುರಿತಂತೆ ಡಿವೈಎಸ್ಪಿ , ತಾಪಂ ಇಒ, ಪಿಎಸ್‌ಐಗಳ ಜೊತೆ ಸಭೆ ನಡೆಸಲಾಯಿತು. ತುರ್ತು ವೈದ್ಯಕೀಯ ಸಂದರ್ಭಗಳನ್ನು ಹೊರತುಪಡಿಸಿ ಸಾರ್ವಜನಿಕರ ಓಡಾಟ ಕಡ್ಡಾಯವಾಗಿ ನಿರ್ಬಂಧಿಸಲು ಸೂಚಿಸಲಾಯಿತು.
ಹೋಟೆಲ್‌ಗಳಲ್ಲಿ ಯಾವುದೇ ಆಹಾರ ಪಾರ್ಸೆಲ್ ನೀಡದೇ ವಿತರಣೆ ಹುಡುಗರ ಮೂಲಕವೇ ಹೋಟೆಲ್‌ನವರೇ ಆಹಾರ ತಲುಪಿಸುವ ವ್ಯವಸ್ಥೆ ಮಾಡಬೇಕು. ಅನವಶ್ಯಕ ಓಡಾಡುತ್ತಿರುವವರ ವಿರುದ್ಧ ಕ್ರಮವಹಿಸಿ ಮತ್ತು ಅನುಮತಿ ಪಡೆಯದೆ ಯಾವುದೇ ಅಂಗಡಿ-ಮುಂಗಟ್ಟುಗಳು ತೆರೆದಿದ್ದರೆ ಅಂತಹವರ ವಿರುದ್ಧ ಪೋಲೀಸರಿಗೆ ಪ್ರಕರಣ ದಾಖಲಿಸಲು ತಿಳಿಸಲಾಯಿತು.
ವೈದ್ಯಕೀಯ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಜನರ ಓಡಾಟಕ್ಕೆ ಅನುಕೂಲವಾಗುವಂತೆ ಆಟೋ ಚಾಲಕರ-ಮಾಲೀಕರ ಸಂಘದಿಂದ ನಿಗ ಪಡಿಸಿದ ಸ್ಥಳಗಳಲ್ಲಿ ತುರ್ತು ಸೇವೆಗಾಗಿ ಆಟೋಗಳು ಲಭ್ಯವಿರುವುದಾಗಿ ನಗರಸಭೆ ಮತ್ತು ಗ್ರಾಪಂ ವ್ಯಾಪ್ತಿಯಲ್ಲಿ ಪ್ರಚಾರ ಮಾಡಲು ಸೂಚಿಸಲಾಯಿತು. ಹೋಮ್ ಐಸೋಲೇಷನ್‌ನಲ್ಲಿ ಇದ್ದವರ ಮನೆಗಳಿಗೆ ಗುರುತಿಗಾಗಿ ಸ್ಟಿಕ್ಕರ್ ಅಂಟಿಸಿ, ನೆರೆಹೊರೆಯ ಮನೆಗಳಲ್ಲಿರುವವರಿಗೆ ಮಾಹಿತಿ ನೀಡಿ ಸೂಕ್ತ ಮುಂಜಾಗ್ರತೆ ವಹಿಸುವಂತೆ ತಿಳಿವಳಿಕೆ ನೀಡಲು ಹೇಳಲಾಯಿತು. ಕೈಗಾದಲ್ಲಿ ಕೆಲಸ ಮಾಡುತ್ತಿರುವ ನೌಕರರು ಹೆಚ್ಚಿನದಾಗಿ ಕೈಗಾ ಟೌನ್ ಶಿಪ್‌ನಲ್ಲಿ ಹಾಗೂ ಮಲ್ಲಾಪುರ ಗ್ರಾಪಂ ವ್ಯಾಪ್ತಿಯ ಪ್ರದೇಶಗಳಲ್ಲಿದ್ದು, ಅವರು ಕೈಗಾಗೆ ಕೆಲಸಕ್ಕೆ ಹೋಗಿ ಬರಲು ಮುಂಜಾಗ್ರತಾ ಕ್ರಮಗಳೊಂದಿಗೆ ಸೂಕ್ತ ವ್ಯವಸ್ಥೆ ಮಾಡುವಂತೆ ಕೈಗಾದ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸುವುದು.
ಹೋಂ ಐಸೋಲೇಶನ್ ನಲ್ಲಿ ಇದ್ದವರಿಗೆ ಮೆಡಿಕಲ್ ಕಿಟ್‌ಗಳನ್ನು ತಲುಪಿಸುವ ಬಗ್ಗೆ ಟಿಎಚ್‌ಒ ಅವರು ಕ್ರಮ ಕೈಗೊಳ್ಳಲು ಹೇಳಲಾಯಿತು. ದಿನಬಳಕೆ ವಸ್ತುಗಳನ್ನು ಮನೆ ಮನೆಗೆ ತಲುಪಿಸುವ ವ¤ಕ್ತಿಗಳು ಸೂಕ್ತ ಮುಂಜಾಗ್ರತಾ ವಹಿಸಿ ತೆರಳುವಂತೆ ಕ್ರಮ ವಹಿಸುವುದು. ನಿರ್ಬಂಧಿತ ಪ್ರದೇಶಗಳಲ್ಲಿ ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟು ಪಾಲಿಸಲು ಕ್ರಮ ಕೈಗೊಳ್ಳುವಂತೆ ತಿಳಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನಾವು ಸಂಸ್ಕೃತರಾದರೆ ಸಮಾಜದಿಂದಲೂ ಸಂಸ್ಕೃತ ನಿರೀಕ್ಷಿತ: ಕೆರೇಕೈ
ರಸ್ತೆಗಳ ಅಭಿವೃದ್ಧಿಗೆ 27.40 ಕೋಟಿ ರೂ. ವಿಶೇಷ ಅನುದಾನ ಮಂಜೂರು: ಸಚಿವ ಶಿವರಾಮ್ ಹೆಬ್ಬಾರ್
ಉತ್ತರ ಕನ್ನಡದ ಶಿಕ್ಷಣಕ್ಕೆ ಮುಕುಟಪ್ರಾಯ ಭಟ್ಕಳ ಎಜ್ಯುಕೇಶನ್ ಟ್ರಸ್ಟ್
ಕಾರವಾರ-ಅಂಕೋಲಾ ಕ್ಷೇತ್ರದಲ್ಲಿ ಅಭಿವೃದ್ಧಿಗೆ ನಾಂದಿ ಹಾಡಿದ ರೂಪಾಲಿ
ಕರಾವಳಿ ಹೆಮ್ಮೆಯ ಸಂಸ್ಥೆ : ಆರ್.ಎನ್. ಶೆಟ್ಟಿ ರೂರಲ್ ಪಾಲಿಟೆಕ್ನಿಕ್