Udayavni Special

ಅಧಿಕಾರಿಗಳ ವಿರುದ್ಧ  ಶಾಸಕಿ ರೂಪಾಲಿ ಗರಂ

 ಕುಡಿಯುವ ನೀರು ಯೋಜನೆ ಅನುಷ್ಠಾನ ಅಸಮರ್ಪಕ! ­ಕೆಲಸ ಮಾಡಲಾಗದಿದ್ದರೆ ವರ್ಗಾವಣೆ ಪಡೆದು ಬೇರೆಡ ಹೋಗಿ

Team Udayavani, Apr 17, 2021, 8:04 PM IST

xdfbdsfsd

ಅಂಕೋಲಾ: ಕೇಂದ್ರ ಸರಕಾರದ ಪ್ರತಿಷ್ಠಿತ ಯೋಜನೆಯಾದ ಪ್ರತಿ ಮನೆಗೂ ಕುಡಿಯುವ ನೀರು ಜಲ ಜೀವನ ಮಿಶನ್‌ ಕಾರ್ಯರೂಪಕ್ಕೆ ತರುವಲ್ಲಿ ಇಲಾಖೆ ಅಧಿಕಾರಿಗಳು ಲೋಪವೆಸಗಿದ ಕಾರಣ ಶಾಸಕಿ ರೂಪಾಲಿ ನಾಯ್ಕ ಅಧಿಕಾರಿಗಳ ಬೆವರಿಳಿಸಿದ ಪ್ರಸಂಗ ತಾಪಂ ಸಭಾಭವನದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ನಡೆಯಿತು.

ಅಧ್ಯಕ್ಷತೆ ವಹಿಸಿದ್ದ ಶಾಸಕಿ ರೂಪಾಲಿ ನಾಯ್ಕ ಸಭೆಯಲ್ಲಿ ಹಾಜರಿದ್ದ ಜೆಜೆಎಂ ಅನುಷ್ಠಾನ ಅಧಿಕಾರಿಗಳಾದ ಗುರುದತ್‌ ಶೇಟ್‌ ಹಾಗೂ ವಿ.ಎಸ್‌. ಬಾಲಚಂದ್ರ ಇವರ ಬಳಿ ಯೋಜನೆಯ ಮಾಹಿತಿ ಕೇಳಿದರು. ಈ ಅಧಿಕಾರಿಗಳ ವಿರುದ್ಧ ಈಗಾಗಲೇ ಹಲವಾರು ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಇಂದಿನ ಸಭೆಯಲ್ಲಿ ಅವರಿಂದ ಮಾಹಿತಿ ಬಯಸಿದ್ದರು. ಅಧಿಕಾರಿಗಳು ಸಮರ್ಪಕ ಮಾಹಿತಿ ನೀಡದೆ ಕೆಲಸ ಮಾಡದೆಯೂ ಅಲ್ಲಿ ಇಲ್ಲಿ ಕೆಲಸ ಆಗಿದೆ ಪ್ರಗತಿಯಲ್ಲಿದೆ ಮುಂತಾದ ಉಡಾಫೆ ಉತ್ತರ ನೀಡಲು ಮುಂದಾದಾಗ ಶಾಸಕಿ ಕೆರಳಿ ಕೆಂಡವಾದರು. ನೀವು ಕುಡಿಯುವ ನೀರಿನ ಯೋಜನೆ ವಿಷಯದಲ್ಲಿ ಅಸಡ್ಡೆ ತೋರಿದರೆ ತಕ್ಕ ಶಾಸ್ತಿ ಮಾಡಬೇಕಾಗುವದು ಎಂದು ಎಚ್ಚರಿಕೆಯನ್ನೂ ನೀಡಿದರು.

ತಾಲೂಕಿನ ಬಹುತೇಕ ಗ್ರಾಪಂ ಅಧ್ಯಕ್ಷರು ಹಾಗೂ ಪಿಡಿಒಗಳು ಈ ಯೋಜನೆಯ ಬಗ್ಗೆ ತಮಗೆ ಮಾಹಿತಿಯೇ ಇಲ್ಲ. ಅಧಿ ಕಾರಿಗಳು ತಮ್ಮನ್ನು ಸಂಪರ್ಕಿಸುತ್ತಿಲ್ಲ ಹಾಗೂ ಸರಿಯಾಗಿ ಸರ್ವೇ ಕೂಡ ನಡೆಸಿಲ್ಲ ಎಂದು ಆರೋಪಿಸಿದರು. 16 ಕೋಟಿ ರೂ ಯೋಜನೆಯಾದ ಜಲ ಜೀವನ ಮಿಶನ್‌ ಅನುಷ್ಠಾನ ಮಾಡಬೇಕಾದರೆ ಜನಪ್ರತಿನಿಧಿ ಗಳನ್ನು ಸಂಪರ್ಕಿಸದೇ ತಾಲೂಕು ದಂಡಾಧಿಕಾರಿಗಳನ್ನೂ, ತಾಪಂ ಕಾರ್ಯನಿರ್ವಹಣಾ  ಧಿಕಾರಿಗಳನ್ನೂ, ಶಾಸಕರನ್ನೂ ಸಂಪರ್ಕಿಸದೆ ಕ್ರಿಯಾ ಯೋಜನೆ ಸಿದ್ಧಪಡಿಸಿ ಪ್ರಮುಖ ಯೋಜನೆ ಉದ್ಘಾಟನೆಯನ್ನೂ ನಡೆಸದೆ ಇರುವ ಹಿಂದಿನ ಉದ್ದೇಶವೇನು ಎಂದು ಶಾಸಕಿ ಖಾರವಾಗಿ ಪ್ರಶ್ನಿಸಿದರು. ಒಂದು ಹಂತದಲ್ಲಿ ಸಮಜಾಯಿಶಿಯನ್ನು ನೀಡಲು ಯತ್ನಿಸಿದ ಅ ಧಿಕಾರಿಗಳ ಬೆವರಿಳಿಸಿದ ಶಾಸಕಿ ಇದು ಪ್ರಧಾನ ಮಂಗತ್ರಿಗಳ ಮಹತ್ವಾಕಾಂಕ್ಷೆ ಯೋಜನೆ ಪ್ರತೀ ಮನೆಗೂ ನೀರಿನ ಸಂಪರ್ಕ ನೀಡುವುದೇ ಉದ್ದೇಶ. ಇದನ್ನು ಹಾಳು ಮಾಡಿ ಹಣವನ್ನು ನೀರಲ್ಲಿ ಹೋಮ ಮಾಡಿದಂತಾಗಲು ಬಿಡುವುದಿಲ್ಲ. ನಿಮ್ಮಿಂದ ಆಗದಿದ್ದರೆ ರಾಜಿನಾಮೆ ನೀಡಿ ಹೋಗಿ ಬೇರೆ ಅ ಧಿಕಾರಿಗಳಿಂದ ಮಾಡಿಸುತ್ತೇವೆ ಎಂದರು.

ಈ ಹಿಂದೆ ತಾಪಂ ಸಾಮಾನ್ಯ ಸಭೆಯಲ್ಲಿ ಪ್ರತಿ ಬಾರಿಯೂ ಇದರ ಬಗ್ಗೆ ಚರ್ಚೆಯಾಗುತ್ತಲೇ ಇತ್ತು. ಅಧ್ಯಕ್ಷೆ ಸುಜಾತಾ ಗಾಂವಕರ ಕೂಡ ಹಲವಾರು ಬಾರಿ ಎಚ್ಚರಿಕೆ ನೀಡಿದ್ದರು. ಆದರೆ ಅಧಿಕಾರಿಗಳು ಮತ್ತೆ ಅದೇ ಚಾಳಿಯಲ್ಲಿದ್ದರು. ಕೆಲವು ಗ್ರಾಮಗಳಲ್ಲಿ ಕೆಲಸ ಪ್ರಾರಂಭಿಸಿದ್ದರೆ. ನೀರಿನ ಮೂಲವೇ ಇಲ್ಲ. ಕೆಲವು ಕಡೆ ಕೆಲಸವೇ ಅರ್ಧ ಮರ್ಧ ಆದರೂ ಕೆಲಸ ಆಗಿದೆ ಎನ್ನುವುದೇ ಅ ಕಾರಿಗಳ ವಾದ. ಹಿಲ್ಲೂರಿನಲ್ಲಿ ಶೆಡ್‌ ಮಾತ್ರ ಇದೆ ಮಶಿನ್ನೇ ಇಲ್ಲ. ರಾಮನಗುಳಿಯಲ್ಲಿ ನೀರಿನ ಸೌಕರ್ಯ ಇದ್ದಲ್ಲಿಯೇ ಮತ್ತೆ ಕೆಲಸ ಪ್ರಾರಂಭಿಸಿದ್ದಾರೆ. ಹಟ್ಟಿಕೇರಿಯಲ್ಲಿ ಸಮರ್ಪಕವಾಗಿ ಮಾಡಿಲ್ಲ ಹೀಗೆ ಎಲ್ಲೂ ಕೂಡ ಕೆಲಸ ಸರಯಾಗಿಲ್ಲ ಎಂಬ ಆರೋಪಗಳೇ ಕೇಳಿಬರುತ್ತಿವೆ. ತಹಶೀಲ್ದಾರ್‌ ಉದಯ ಕುಂಬಾರ ಸರಕಾರದ ಯಾವುದೇ ಯೋಜನೆಗಳನ್ನು ಜಾರಿಗೊಳಿಸುವಾಗ ಪ್ರೊಟೋಕಾಲ ಪ್ರಕಾರ ಜನಪ್ರತಿನಿಧಿಗಳಿಗೆ, ಮೇಲಧಿಕಾರಿಗಳಿಗೆ ಮಾಹಿತಿ ನೀಡಬೇಕಾಗುತ್ತದೆ. ಅದನ್ನು ಯಾಕೆ ಪಾಲನೆ ಮಾಡಿಲ್ಲ ಎಂದು ಪ್ರಶ್ನಿಸಿದರು.

ಜನರಿಗೆ ನೀರು ಕೊಡುವ ಯೋಜನೆ ಸರಿಯಾಗಿ ಮಾಡಿ ಎಂದರು. ತಾಪಂ ಇಒ ಪಿ.ವೈ. ಸಾವಂತ ಮಾತನಾಡಿ ಪ್ರತೀ ವಾರಕ್ಕೊಮ್ಮೆ ಕೆಲಸದ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ತಾಲೂಕಿನ ಕೆಲವು ಪಂಚಾಯತಗಳಲ್ಲಿ ನೀರಿನ ಅಭಾವವಿದೆ ಟ್ಯಾಂಕರ್‌ಗಳಿಂದ ನೀರು ಸರಬರಾಜು ಮಾಡಲು ಜಿಲ್ಲಾಧಿಕಾರಿಗಳಿಂದ ಆದೇಶ ಬಂದಿಲ್ಲ. 14 ನೇ ಹಣಕಾಸಿನಲ್ಲಿ ಹಣವಿಲ್ಲ ತಾತ್ಕಾಲಿಕವಾಗಿ ಗ್ರಾಪಂಗಳಿಂದಲೇ ನೀರು ಪೂರೈಸುವ ಕ್ರಮದ ಬಗ್ಗೆ ಚರ್ಚಿಸಲಾಗುವದು ಎಂದರು. ಮಳೆಗಾಲದಲ್ಲಿ ನೆರೆ ಭೀತಿಯಿರುವ ಕುರ್ವೆಯ 14 ಕುಟುಂಬಗಳಿಗೆ ಈಗಾಗಲೇ ಬೇರೆ ಕಡೆ ಜೂಗದ ಸ.ನಂ. 12/ಅ ದಲ್ಲಿ 14 ಗುಂಟೆ ಮೀಸಲಿಡಲಾಗಿದೆ. ಗ್ರಾಪಂ ಅಧ್ಯಕ್ಷರು ಹಾಗೂ ಪಿಡಿಒಗಳು ಉಪಸ್ಥಿತರಿದ್ದರು.

ಟಾಪ್ ನ್ಯೂಸ್

DXSvcad

ಶವ ಹಸ್ತಾಂತರಿಸುವಾಗ ಅದಲು-ಬದಲು!

Udaya Garudachar Statement On war Room and Bed Blocking

ಬಿಬಿಎಂಪಿ ವಾರ್ ರೂಂನಲ್ಲಿ ಒಂದು ಕೋಮಿನ ವಿರುದ್ಧ ದುರ್ವತನೆ ತೋರಿಲ್ಲ: ಉದಯ್ ಗರುಡಾಚಾರ್

covid effect

ಜಿಲ್ಲೆಯಲ್ಲಿ 1,550ಕ್ಕೂ ಹೆಚ್ಚು ಜನ ಘರ್‌ ವಾಪ್ಸಿ

battele-ground

ಹೊಸ ಅವತಾರದಲ್ಲಿ ಲಗ್ಗೆಯಿಡುತ್ತಿದೆ ಪಬ್ ಜಿ: ಗೇಮ್ ಆಡಲು ಈ ನಿಯಮಗಳನ್ನು ಪಾಲಿಸಲೇಬೇಕು !

ಲಾಕ್‌ಡೌನ್‌ ಮಾಡಿದರೆ ಇಂದಿರಾ ಕ್ಯಾಂಟೀನ್‌ನಲ್ಲಿ ಉಚಿತ ಆಹಾರ ಕೊಡಿ : ಉಗ್ರಪ್ಪ ಆಗ್ರಹ

ಲಾಕ್‌ಡೌನ್‌ ಮಾಡಿದರೆ ಇಂದಿರಾ ಕ್ಯಾಂಟೀನ್‌ನಲ್ಲಿ ಉಚಿತ ಆಹಾರ ಕೊಡಿ : ಉಗ್ರಪ್ಪ ಆಗ್ರಹ

ಹುಬ್ಬಳ್ಳಿ: ಮೃತ ದೇಹ ಒಯ್ಯುತ್ತಿದ್ದಾಗ ವಿದ್ಯುತ್ ತಂತಿ ತಗುಲಿ ಓರ್ವ ಸಾವು

ಹುಬ್ಬಳ್ಳಿ: ಮೃತ ದೇಹ ಒಯ್ಯುತ್ತಿದ್ದಾಗ ವಿದ್ಯುತ್ ತಂತಿ ತಗುಲಿ ಓರ್ವ ಸಾವು

COVID-19: Why India is Pfizer’s shot at redemption

ಜಗತ್ತಿನ ದುಬಾರಿ  ಕೋವಿಡ್ ಲಸಿಕೆ  ಫೈಜರ್..!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

yutyutyt

ಕೋವಿಡ್ ತಡೆಗೆ ಇಲಾಖೆಗಳಲ್ಲಿಲ್ಲ ಹೊಂದಾಣಿಕೆ

ಯಲ್ಲಾಪುರದಲ್ಲಿ 15 ಸಾವಿರ ಲೀ. ಆಕ್ಸಿಜನ್ ಉತ್ಪಾದನ ಘಟಕದ ಕೆಲಸ ನಾಳೆ ಆರಂಭ:ಸಚಿವ ಹೆಬ್ಬಾರ್

ಯಲ್ಲಾಪುರದಲ್ಲಿ 15 ಸಾವಿರ ಲೀ. ಆಕ್ಸಿಜನ್ ಉತ್ಪಾದನ ಘಟಕದ ಕೆಲಸ ನಾಳೆ ಆರಂಭ:ಸಚಿವ ಹೆಬ್ಬಾರ್

joiouoi

ಹೆಚ್ಚುತ್ತಿದೆ ಎರಡನೇ ಅಲೆ ಆರ್ಭಟ !ಸೋಂಕಿತರಿಗೆ ಮೀಸಲಿಟ್ಟ ಆಂಬ್ಯುಲೆನ್ಸ್‌

kjhkj

ಉತ್ತರ ಕನ್ನಡ ಜಿಲ್ಲೆಯಲ್ಲಿಲ್ಲ ಆಕ್ಸಿಜನ್‌ ಕೊರತೆ

Untitled-1

ಕಾರವಾರ :  ನಾಳೆ ಹಸೆಮಣೆ ಏರಬೇಕಿದ್ದ ಯುವಕ ಕೋವಿಡ್ ಸೋಂಕಿಗೆ ಬಲಿ

MUST WATCH

udayavani youtube

ನಿಮ್ಮ ಜಿಲ್ಲೆಗೆ ಎಷ್ಟು ಕೋಟಾ ಬೇಕು ಅದನ್ನ ಸಿಎಂ ಬಳಿ ತಿಳಿಸಿ : ಸಂಸದ ಪ್ರತಾಪ್ ಸಿಂಹ

udayavani youtube

ಮಂಗಳೂರಿನ ಪದವಿನಂಗಡಿಯಲ್ಲಿ ಬೈಕ್ ಗಳ ನಡುವೆ ಅಪಘಾತಭೀಕರ ಅಪಘಾತದ ದೃಶ್ಯ

udayavani youtube

ಹೋಂ ಐಸೋಲೇಷನ್ ಸಂದರ್ಭ ನಾವು ಹೇಗಿರಬೇಕು ?

udayavani youtube

ಗಾರ್ಮೆಂಟ್ ಆಸ್ಪತ್ರೆಗೆ ಹೋದ್ರೆ ಸಾಯುತ್ತಾರೆ ; ಡಿಕೆ ಶಿವಕುಮಾರ್‌ ಸರ್ಕಾರದ ವಿರುದ್ಧ ಕಿಡಿ

udayavani youtube

Junior NTR ಮಾಸ್ಕ್ ಧರಿಸಿ, ಸ್ಯಾನಿಟೈಸರ್ ಬಳಸಿ ಅಂತ ಕನ್ನಡದಲ್ಲಿ ಹೇಳಿದ್ದಾರೆ.

ಹೊಸ ಸೇರ್ಪಡೆ

ಶಾಂತಿಮೊಗರು: ಪ್ರಗತಿಯಲ್ಲಿ ಕಿಂಡಿ ಅಣೆಕಟ್ಟು ಕಾಮಗಾರಿ

ಶಾಂತಿಮೊಗರು: ಪ್ರಗತಿಯಲ್ಲಿ ಕಿಂಡಿ ಅಣೆಕಟ್ಟು ಕಾಮಗಾರಿ

7-18

ಬೆಡ್‌-ಆಕ್ಸಿಜನ್‌ ಪೂರೈಕೆಗೆ ಕ್ರಮ ಕೈಗೊಳ್ಳಿ

7-17

ಎಲ್ಲರೂ ಒಟ್ಟಾಗಿ ಶ್ರಮಿಸಿ ಕೊರೊನಾ ತಡೆಯೋಣ

7-16

ಸೋಂಕಿತರಿಗೆ ಧೈರ್ಯ ತುಂಬಿದ ಶಾಸಕ ಲಮಾಣಿ

DXSvcad

ಶವ ಹಸ್ತಾಂತರಿಸುವಾಗ ಅದಲು-ಬದಲು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.