Udayavni Special

ಅತಿಕ್ರಮಣದಾರರಿಗೆ ಕಿರುಕುಳ ನೀಡದಿರಿ


Team Udayavani, Apr 14, 2021, 4:38 PM IST

Untitled-4

ಭಟ್ಕಳ: ಜಿಲ್ಲೆಯಲ್ಲಿಯೇ ಮಾದರಿ ಆಸ್ಪತ್ರೆಯಾಗಿ ಜನರಿಗೆ ಉತ್ತಮ ಸೇವೆ ನೀಡುತ್ತಿರುವ ಇಲ್ಲಿನ ತಾಲೂಕು ಆಸ್ಪತ್ರೆ ವಾತಾವರಣವನ್ನು ಹಾಳುಮಾಡುವ ಪಿತೂರಿ ನಡೆಯುತ್ತಿದ್ದು, ಅದಕ್ಕೆ ಯಾವುದೇ ಅವಕಾಶ ನೀಡುವುದಿಲ್ಲ ಎಂದು ಶಾಸಕ ಸುನೀಲ್‌ ನಾಯ್ಕ ಹೇಳಿದರು.

ಇಲ್ಲಿನ ತಾಪಂ ಸಭಾ ಭವನದಲ್ಲಿ ನಡೆದ ತ್ತೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ತಾಲೂಕು ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ| ಸವಿತಾ ಕಾಮತ್‌ ಅವರಿಂದ ವಿವರ ಪಡೆದರು.

ಕೋವಿಡ್‌ ಲಸಿಕೆಯನ್ನು ಪ್ರಸ್ತುತ ನಿಯಮದಂತೆ ಸರ್ಕಾರಿ ಕಟ್ಟಡದಲ್ಲಿಯೇ ವ್ಯವಸ್ಥೆ ಮಾಡಬೇಕು. ಮುಂದಿನ ದಿನಗಳಲ್ಲಿ ನಿಯಮಾವಳಿಬದಲಾದರೆ ಖಾಸಗಿ ಕಟ್ಟಡಗಳಲ್ಲಿ ಲಸಿಕಾ ಅಭಿಯಾನ ಮಾಡಬಹುದು ಎಂದು ತಾಲೂಕುಆರೋಗ್ಯಾಧಿಕಾರಿ ಡಾ| ಮೂರ್ತಿರಾಜ ಭಟ್ಟ ಹೇಳಿದರು.

ಕಿಸಾನ್‌ ಕ್ರೆಡಿಟ್‌ ಕಾರ್ಡ್‌ ಯೋಜನೆ ರೈತರಿಗೆ ವರದಾನವಾಗಿದ್ದರೂ ಬ್ಯಾಂಕ್‌ನವರಅಸಹಕಾರದಿಂದ ರೈತರು ಕ್ರೆಡಿಟ್‌ ಕಾರ್ಡ್‌ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ಕೃಷಿ ಅಧಿಕಾರಿಜಿ.ಎನ್‌. ನಾಯ್ಕ ತಿಳಿಸಿದರು. ಶೀಘ್ರದಲ್ಲಿ ಬ್ಯಾಂಕ್‌ಗೆ ಭೇಟಿ ನೀಡಿ ವ್ಯವಸ್ಥಾಪಕರೊಂದಿಗೆ ಮಾತನಾಡಿಸಮಸ್ಯೆ ಬಗೆಹರಿಸುವಂತೆ ಸೂಚಿಸಿದರು.

ಅರಣ್ಯ ಇಲಾಖೆ ಪ್ರಗತಿ ಕುರಿತು ವಲಯಅರಣ್ಯಾಧಿಕಾರಿ ಸವಿತಾ ದೇವಾಡಿಗವಿವರಿಸುತ್ತಿದ್ದಂತೆಯೇ ಶಾಸಕರು ನಿಮ್ಮ ಸಿಬ್ಬಂದಿಬಹಳ ವರ್ಷಗಳಿಂದ ಅತಿಕ್ರಮಣ ಮಾಡಿಉಳಿದುಕೊಂಡಿರುವವರು ಹಾಕಿದ ಗಿಡಗಳನ್ನುಕೀಳುತ್ತಿದ್ದಾರೆನ್ನುವ ದೂರು ಬಂದಿದೆ. ಯಾವುದೇಹೊಸ ಅತಿಕ್ರಮಣಕ್ಕೆ ನಾನೂ ಬೆಂಬಲ ನೀಡುವುದಿಲ್ಲ. ಆದರೆ ಹಲವಾರು ವರ್ಷಗಳಿಂದ ಅತಿಕ್ರಮಣ ಮಾಡಿಗಿಡ ಬೆಳೆಸಿ ಬಂದವರಿಗೆ ತೊಂದರೆ ಕೊಡದಂತೆಸಿಬ್ಬಂದಿಗೆ ತಿಳಿ ಹೇಳಿ ಎಂದು ಸೂಚಿಸಿದರು.

ಕಾರ್ಮಿಕ ಇಲಾಖೆಯಲ್ಲಿ ಕಾರ್ಮಿಕರ ಮಕ್ಕಳ ಮದುವೆ, ಸ್ಕಾಲರ್‌ಶಿಪ್‌ ಇತ್ಯಾದಿಗಳಿಗೆ ಅರ್ಜಿ ಸಲ್ಲಿಸಿ ವರ್ಷಗಟ್ಟಲೆಯಾದರೂ ಅವರಿಗೆ ದೊರೆತಿಲ್ಲ. ತಕ್ಷಣ ಅರ್ಜಿಗಳನ್ನು ವಿಲೇವಾರಿ ಮಾಡಿ ಎಂದು ಕಾರ್ಮಿಕ ನಿರೀಕ್ಷಕರಿಗೆ ಸೂಚಿಸಿದರು.

ರಾಷ್ಟ್ರೀಯ ಹೆದ್ದಾರಿ ವಿಭಾಗದ ಸಹಾಯಕಅಭಿಯಂತರ ಮಹೇಶ ನಾಯ್ಕ ಅವರನ್ನುಉದ್ದೇಶಿಸಿ ಮಾತನಾಡಿದ ಶಾಸಕರು, ಮುಡೇìಶ್ವರಮುಖ್ಯ ರಸ್ತೆಯ ಅವ್ಯವಸ್ಥೆಗೆ ಕಾರಣ ಏನು? ಗುತ್ತಿಗೆದಾರರಿಗೆ ಇನ್ನೆಷ್ಟು ಕಾಲಾವಕಾಶ ಬೇಕು, ಅಗೆದು ಹಾಕಿ ಎಷ್ಟು ಸಮಯವಾಗಿದೆ, ಇದೊಂದುಕಾಮಗಾರಿಯಿಂದ ಮುಜುಗರವಾಗುತ್ತಿದೆ ಎಂದು ಖಾರವಾಗಿಯೇ ಹೇಳಿದರು. ಮುಂದಿನ ಮೇ 31ರಒಳಗಾಗಿ ಕಾಮಗಾರಿಯನ್ನು ಪೂರ್ಣಗೊಳಿಸುವಭರವಸೆ ನೀಡಿದ್ದ ಅವರಿಗೆ ಪೂರ್ಣಗೊಳ್ಳದಿದ್ದಲ್ಲಿನಿಮ್ಮನ್ನೇ ಹೊಣೆಗಾರನ್ನಾಗಿ ಮಾಡುವುದಾರಿ ಎಚ್ಚರಿಕೆ ನೀಡಿದರು.

ಲೋಕೋಪಯೋಗಿ ಇಲಾಖೆಯ ಕಾಮಗಾರಿಗಳು ಮಳೆ ಬರುವ ಪೂರ್ವದಲ್ಲಿ ಮುಗಿಸುವಂತಾಗಬೇಕು. ಕುಡಿಯುವ ನೀರಿಗೆಯಾವುದೇ ಕಾರಣಕ್ಕೂ ತೊಂದರೆಯಾಗಬಾರದು.ಕಾಮಗಾರಿ ಮುಗಿಯುವ ಹಂತದಲ್ಲಿದ್ದರೆ ಶೀಘ್ರ ಮುಗಿಸಿ ನೀರು ಕೊಡುವ ಕೆಲಸ ಮಾಡಿಎಂದು ಪಂಚಾಯತ್‌ರಾಜ್‌ ಇಂಜಿನಿಯರ್‌ ಗೆ ಸೂಚಿಸಿದರು.

ಕಂದಾಯ ಇಲಾಖೆಯಲ್ಲಿಕೆಲಸ ವಿಳಂಬ ಆಗುತ್ತಿದೆ ಎನ್ನುವ ದೂರಿದೆ. ಜನರಕೆಲಸ ತ್ವರಿತಗತಿಯಲ್ಲಿ ಮಾಡಿಕೊಡಲು ಸಿಬ್ಬಂದಿಗೆ ಸೂಚಿಸಿದರು.

ಬಿಇಒ ದೇವಿದಾಸ ಮೊಗೇರ, ಮೀನುಗಾರಿಕಾ ಇಲಾಖೆಯ ರವಿ, ತೋಟಗಾರಿಕಾ ಇಲಾಖೆಯ ಸಂಧ್ಯಾ ಭಟ್ಟ, ಹೆಸ್ಕಾಂ ಇಲಾಖೆಯ ಮಂಜುನಾಥ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ತಮ್ಮ ತಮ್ಮ ಇಲಾಖೆಗಳ ಪ್ರಗತಿ ವರದಿ ಮಂಡಿಸಿದರು.ತಹಶೀಲ್ದಾರ್‌ ಎಸ್‌. ರವಿಚಂದ್ರ, ತಾಪಂ ಇಒ ಪ್ರಭಾಕರ ಚಿಕ್ಕನಮನೆ ಇದ್ದರು

ಟಾಪ್ ನ್ಯೂಸ್

ರಮೇಶ್‌ ಪೊವಾರ್‌ ಮತ್ತೆ ಭಾರತೀಯ ವನಿತಾ ತಂಡದ ಪ್ರಧಾನ ಕೋಚ್‌ ಆಗಿ ನೇಮಕ

ರಮೇಶ್‌ ಪೊವಾರ್‌ ಮತ್ತೆ ಭಾರತೀಯ ವನಿತಾ ತಂಡದ ಪ್ರಧಾನ ಕೋಚ್‌ ಆಗಿ ನೇಮಕ

ವೃತ್ತಿ ಬದುಕಿನ ಒಂದು ಸಾವಿರದ ಪಂದ್ಯದಲ್ಲಿ ಸೆರೆನಾ ವಿಲಿಯಮ್ಸ್‌ಗೆ ಸೋಲು

ವೃತ್ತಿ ಬದುಕಿನ ಒಂದು ಸಾವಿರದ ಪಂದ್ಯದಲ್ಲಿ ಸೆರೆನಾ ವಿಲಿಯಮ್ಸ್‌ಗೆ ಸೋಲು

ಕೋವಿಡ್‌ ವ್ಯಾಕ್ಸಿನ್‌ ಪಡೆದ ಟೀಮ್‌ ಇಂಡಿಯಾದ ವಿಕೆಟ್‌ ಕೀಪರ್‌ ರಿಷಭ್‌ ಪಂತ್‌

ಕೋವಿಡ್‌ ವ್ಯಾಕ್ಸಿನ್‌ ಪಡೆದ ಟೀಮ್‌ ಇಂಡಿಯಾದ ವಿಕೆಟ್‌ ಕೀಪರ್‌ ರಿಷಭ್‌ ಪಂತ್‌

ಸ್ಪಿನ್ನರ್‌ ಯಜುವೇಂದ್ರ ಚಹಲ್‌ ಹೆತ್ತವರಿಗೆ ಕೋವಿಡ್ ಸೋಂಕು

ಸ್ಪಿನ್ನರ್‌ ಯಜುವೇಂದ್ರ ಚಹಲ್‌ ಹೆತ್ತವರಿಗೆ ಕೋವಿಡ್ ಪಾಸಿಟಿವ್

ದ.ಕ. ಜಿಲ್ಲೆ: ವಾರಾಂತ್ಯ ಕರ್ಫ್ಯೂ ಇಲ್ಲ :  ಜಿಲ್ಲಾಧಿಕಾರಿ ಸ್ಪಷ್ಟನೆ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಾರಾಂತ್ಯ ಕರ್ಫ್ಯೂ ಇಲ್ಲ :  ಜಿಲ್ಲಾಧಿಕಾರಿ ಸ್ಪಷ್ಟನೆ

yyyeeee

ರಾಕೆಟ್ ದಾಳಿಯಲ್ಲಿ ಮಡಿದ ಕೇರಳದ ಸೌಮ್ಯ ಕುಟುಂಬದ ಜವಾಬ್ದಾರಿ ಹೊತ್ತ  ಇಸ್ರೇಲ್ ಸರ್ಕಾರ

13-11

ಅದ್ಧೂರಿ ಕಲ್ಯಾಣ ಮಹೋತ್ಸವ ಕನಸಿಗೆ ಕೊರೊನಾ ಕೊಕ್ಕೆ !ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ; ಮುಂಜಾಗ್ರತಾ ಕ್ರಮಕ್ಕೆ ಹವಾಮಾನ ಇಲಾಖೆ ಸೂಚನೆ

ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ; ಮುಂಜಾಗ್ರತಾ ಕ್ರಮಕ್ಕೆ ಹವಾಮಾನ ಇಲಾಖೆ ಸೂಚನೆ

covid effect

ಸಚಿವರು ಜನಕ್ಕೆ-ಜನ ಆಸ್ಪತ್ರೆಗೆ ಮುಗಿದರು ಕೈ!

uyfiftuyf

ರಸ್ತೆ ನಿರ್ಬಂಧಿಸಿದ ಬ್ಯಾರಿಕೇಡ್‌; ತಪಾಸಣೆಯಲ್ಲಿ ಶಿಕ್ಷಕರೂ ಭಾಗಿ

hjfgk

ಸೋಂಕಿತರು ಮೊದಲು ಚಿಕಿತ್ಸೆ ಪಡೆದುಕೊಳ್ಳಲಿ

hjujyutyut

ಕೋವಿಡ್ ಕರ್ಫ್ಯೂ : ರೆಕ್ಕೆಪುಕ್ಕ ಕತ್ತರಿಸಿದ ಹಕ್ಕಿಯನ್ನಾಗಿಸಿ ನಮ್ಮನ್ನು ಹಾರಿಸಿದ್ದೇಕೆ ?

MUST WATCH

udayavani youtube

ತನ್ನ ಮದುವೆಗೆ ತಾನೇ ಬ್ಯಾಂಡ್ ಬಾರಿಸಿದ ಮದುಮಗ

udayavani youtube

ಸರ್ವಾಧಿಕಾರಿ ಧೋರಣೆಗೆ ಆಕ್ರೋಶ : ಉನ್ನಾವ್ನಲ್ಲಿ ವೈದ್ಯರಿಂದ ಸಾಮೂಹಿಕ ರಾಜೀನಾಮೆ

udayavani youtube

ಬೆಂಗಳೂರು: ಮನೆ ಬಾಗಿಲಿಗೆ ಬರಲಿದೆ ಆಕ್ಸಿಜನ್‌ ಬಸ್‌

udayavani youtube

18 ರಿಂದ 44 ವರ್ಷ ವಯೋಮಾನದವರಿಗೆ ಸದ್ಯಕ್ಕಿಲ್ಲ ಲಸಿಕೆ

udayavani youtube

ಕರಾವಳಿಯಲ್ಲಿ ಚಂಡಮಾರುತ ವಾರ್ನಿಂಗ್!

ಹೊಸ ಸೇರ್ಪಡೆ

ರಮೇಶ್‌ ಪೊವಾರ್‌ ಮತ್ತೆ ಭಾರತೀಯ ವನಿತಾ ತಂಡದ ಪ್ರಧಾನ ಕೋಚ್‌ ಆಗಿ ನೇಮಕ

ರಮೇಶ್‌ ಪೊವಾರ್‌ ಮತ್ತೆ ಭಾರತೀಯ ವನಿತಾ ತಂಡದ ಪ್ರಧಾನ ಕೋಚ್‌ ಆಗಿ ನೇಮಕ

ವೃತ್ತಿ ಬದುಕಿನ ಒಂದು ಸಾವಿರದ ಪಂದ್ಯದಲ್ಲಿ ಸೆರೆನಾ ವಿಲಿಯಮ್ಸ್‌ಗೆ ಸೋಲು

ವೃತ್ತಿ ಬದುಕಿನ ಒಂದು ಸಾವಿರದ ಪಂದ್ಯದಲ್ಲಿ ಸೆರೆನಾ ವಿಲಿಯಮ್ಸ್‌ಗೆ ಸೋಲು

13-22

ಹಬ್ಬದಾಚರಣೆಯಲ್ಲಿ ಗೊಂದಲ ಬೇಡ

13-21

ದಾದಿಯರ ಸೇವೆ ಅವಿಸ್ಮರಣೀಯ

13-20

ಕೊರೊನಾ ತಡೆಗೆ ತಂಡವಾಗಿ ಕೆಲಸ ಮಾಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.