ಕಮಲ ಬೆಂಬಲಿಸಿದ ಕುಮಟಾ ಜನತೆ 


Team Udayavani, May 16, 2018, 12:20 PM IST

22.jpg

ಕುಮಟಾ: ಕ್ಷೇತ್ರದಲ್ಲಿ ಹತ್ತು ವರ್ಷದ ಹಿಂದೆ ಕಾಂಗ್ರೆಸ್‌ನಿಂದ ಕೇವಲ 20 ಮತಗಳ ಅಂತರದಿಂದ ಜೆಡಿಎಸ್‌ನಿಂದ ಆರಿಸಿ ಬಂದಿದ್ದ ದಿನಕರ ಶೆಟ್ಟಿ ಈ ಬಾರಿ ಪಕ್ಷ ಬದಲಿಸಿ ಬಿಜೆಪಿಯಿಂದ ಕಾಂಗ್ರೆಸ್‌ ಪಕ್ಷದೆದುರು ಬರೋಬ್ಬರಿ 32,293 ಭಾರೀ ಮತಗಳ ಅಂತರದಿಂದ ವಿಜಯ ದಾಖಲಿಸಿದ್ದಾರೆ.

ಸಂಭ್ರಮಾಚರಣೆ: ಮತ ಎಣಿಕೆಯಲ್ಲಿ 10 ಸುತ್ತಿನ ನಂತರ ಬಿಜೆಪಿ ಅಭ್ಯರ್ಥಿ ದಿನಕರ ಶೆಟ್ಟಿ ಗೆಲುವು ಬಹುತೇಕ ಖಚಿತಗೊಂಡಿದ್ದರಿಂದ ಹೆಗಡೆ ವೃತ್ತದ ಬಳಿ ಹಾಗೂ ಸನಿಹಲ್ಲಿರುವ ಬಿಜೆಪಿ ಕಾರ್ಯಾಲಯದ ಬಳಿ ಪಕ್ಷದ ಅಭಿಮಾನಿಗಳು ಕಾರ್ಯಕರ್ತರು ಭಾರೀ ಸಂಖ್ಯೆಯಲ್ಲಿ ಜಮಾವಣೆಗೊಳ್ಳತೊಡಗಿದ್ದರು. ಅಭ್ಯರ್ಥಿ ಗೆಲುವು ಖಚಿತಗೊಂಡಂತೆ ಕೇಕೆ ಹಾಕಿ ಸಂಭ್ರಮಿಸಿದ ಕಾರ್ಯಕರ್ತರು ದಿನಕರ ಶೆಟ್ಟರನ್ನು ಹೊತ್ತು ಕುಣಿದಾಡಿದರು. ನಂತರ ಪಕ್ಷದ ಕಾರ್ಯಾಲಯದಲ್ಲಿ ಎಲ್ಲರೂ ಸೇರಿ ಪರಸ್ಪರ ಅಭಿನಂದಿಸಿ ಸಿಹಿ ವಿತರಿಸಿ ಗೆಲುವಿನ ಸಂತಸ ಹಂಚಿಕೊಂಡರು.

ವಿಶೇಷವಾಗಿ ಈ ಬಾರಿ ಚುನಾವಣಾ ಮತದಾನ ನಡೆಯುವುದಕ್ಕೆ ಮುನ್ನವೇ ಕಾಂಗ್ರೆಸ್‌ ಪಾಳಯದಲ್ಲಿ ಸೋಲಿನ ಮುನ್ಸೂಚನೆ ಸಿಕ್ಕಂತೆ ಮಂಕು ಕವಿದಿತ್ತು. ಮತ ಎಣಿಕೆ ಕೇಂದ್ರದಲ್ಲಿ ಸ್ವಂತ ಸೋಲಿನ ನೋವು ಬದಿಗಿಟ್ಟು ವಿಜೇತರಾದ ಪಕ್ಷದ ಹಿರಿಯ ಮುಖಂಡ ಆರ್‌.ವಿ. ದೇಶಪಾಂಡೆ ಹಾಗೂ ಯಲ್ಲಾಪುರ ಶಿವರಾಮ ಹೆಬ್ಟಾರರನ್ನು ಶಾರದಾ ಶೆಟ್ಟಿ ಅಭಿನಂದಿಸಿ ಹೊರಬಂದರು.

ಮತ ಎಣಿಕೆ ಸಂದರ್ಭದಲ್ಲಿ ಇವಿಎಂ ಹಾಗೂ ವಿವಿ ಪ್ಯಾಟ್‌ಗಳಲ್ಲಿ ಮತಗಳ ಹೊಂದಾಣಿಕೆ ಬಂದಿಲ್ಲ ಎಂದು ಮರು ಮತ ಎಣಿಕೆ ಮಾಡುವಂತೆ ಕಾಂಗ್ರೆಸ್‌ ಅಭ್ಯರ್ಥಿ ಶಾರದಾ ಶೆಟ್ಟಿ ಚುನಾವಣಾಧಿಕಾರಿಗೆ ಅರ್ಜಿ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.

ಅಭ್ಯರ್ಥಿಗಳ ಮತಗಳಿಕೆ: ಬಿಜೆಪಿಯ ದಿನಕರ ಶೆಟ್ಟಿ 58,756, ಕಾಂಗ್ರೆಸ್‌ನ ಶಾರದಾ ಶೆಟ್ಟಿ 26,463, ಪಕ್ಷೇತರ ಸೂರಜ ನಾಯ್ಕ 20241, ಜೆಡಿಎಸ್‌ನ ಪ್ರದೀಪ ನಾಯಕ 16,374, ಯಶೋಧರ ನಾಯ್ಕ 11,437,ಕೃಷ್ಣ ಜಟ್ಟಿ ಗೌಡ 5059, ನಾಗರಾಜ ಎನ್‌.ನಾಯ್ಕ 983, ನಾಗರಾಜ ಶೇಟ 356, ಮೋಹನ ಪಟಗಾರ 1271,  ಗಣೇಶ ಗೌಡ 411, ಪ್ರಶಾಂತ ಎಸ್‌. ನಾಯ್ಕ 530,ಸುಮನಾ ಹೆಗಡೆ 758, ನೋಟಾ 2182 ಮತ ಚಲಾವಣೆಯಾಗಿದೆ.

ಪ್ರಧಾನಿ ನರೇಂದ್ರ ಮೋದಿಯವರ ಹವಾ, ಸಚಿವ ಅನಂತಕುಮಾರ ಹೆಗಡೆ ಹಿಂದುತ್ವ,ಪರೇಶ್‌ ಮೇಸ್ತ ಹೆಸರು ಕರಾವಳಿಯಲ್ಲಿ ಬಿಜೆಪಿ ಗೆಲುವಿಗೆ ಕಾರಣವಾಗಿದ್ದು ರಿûಾ ಸಂಘದ ಅಧ್ಯಕ್ಷ ಸ್ಥಾನದಿಂದ ಆರಂಭಿಸಿ ಜನರ ಸಂಪರ್ಕ ಸಾಧಿಸಿದ ದಿನಕರ ಶೆಟ್ಟಿ ಅಧಿ ಕಾರ ಇರಲಿ, ಇಲ್ಲದಿರಲಿ ಒಂದು ಬಾರಿ ಗೆದ್ದು ಮೂರು ಬಾರಿ ಬೆರಳೆಣಿಕೆ ಅಂತರದಿಂದ ಸೋತಿದ್ದರೂ ಬೇಸರಿಸದೆ ಜನ ಸಂಪರ್ಕದಲ್ಲಿದ್ದರು.

 ಬಿಜೆಪಿ ಖಾಯಂ ಮತ ಮತ್ತು ದಿನಕರ ಶೆಟ್ಟಿಯವರ ಸಾರ್ವಜನಿಕ ಸಂಪರ್ಕ 32293 ಮತಗಳ ಅಂತರದ ಗೆಲುವು ದೊರಕಿಸಿದೆ. ಸೂರಜ್‌ರ ಭಾವನಾತ್ಮಕ ಸಂಗತಿ,ಯಶೋಧರ ನಾಯ್ಕರ ಸಂಘಗಳು, ಪ್ರದೀಪರ ಸಾಮಾಜಿಕ ಕೆಲಸ ಎಲ್ಲವೂ ಹಿಂದೆ ಸರಿದಿದೆ. ಉಳಿದವರು ಠೇವಣಿ ಕಳೆದುಕೊಂಡಿದ್ದಾರೆ. ಕುಮಟಾದಲ್ಲಿ ಮಾತ್ರ ಮೊದಲ ಮೂರ್‍ನಾಲ್ಕು ಸುತ್ತು ಜೆಡಿಎಸ್‌ ಅಭ್ಯರ್ಥಿ ಸ್ವಲ್ಪ ಮುನ್ನೆಡೆಯಲ್ಲಿದ್ದರು. ಆದರೆ ನಂತರ ಬಿಜೆಪಿಯ ದಿನಕರ ಶೆಟ್ಟಿ ಕೊನೆಯ ತನಕ ಗೆಲುವಿನ ಅಂತರ ಹೆಚ್ಚಿಸಿಕೊಳ್ಳುತ್ತಲೇ ಹೋದರು. ಜಿಲ್ಲೆಯ ಆರು ಕ್ಷೇತ್ರಗಳ ಪೈಕಿ ದಿನಕರ ಶೆಟ್ಟರು 32393 ಮತಗಳ  ಅಂತರದಿಂದ ಗೆದ್ದು ದೊಡ್ಡ ಗೆಲುವು ಸಾಧಿ ಸಿದ್ದಾರೆ. ಇಲ್ಲಿ ಸಮೀಪದ ಸ್ಪರ್ಧಿಯಾಗಿ ಕಾಂಗ್ರೆಸ್‌ನ ಶಾರದಾ ಶೆಟ್ಟಿ ಇದ್ದಾರೆ.

ಈ ಗೆಲುವು ಕೇವಲ ನನ್ನದಲ್ಲ, ಜನರದ್ದು. ಪ್ರಧಾನಿ ಮೋದಿಯವರ ಶಕ್ತಿ, ವರಿಷ್ಠರು ನನಗೆ ಸ್ಪರ್ಧಿಸಲು ಕೊಟ್ಟ ಅವಕಾಶ ಹಾಗೂ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ನೀಡಿದ ಸಹಯೋಗವು ಕ್ಷೇತ್ರದ ಬಿಜೆಪಿ ಗೆಲುವಿನ ಮೂಲಕ ಸಾಬೀತಾಗಿದೆ.
 ದಿನಕರ ಶೆಟ್ಟಿ, ವಿಜೇತ ಅಭ್ಯರ್ಥಿ

ಮತ ಮಾಹಿತಿ
ಇಲ್ಲಿನ ಡಾ| ಬಾಳಿಗಾ ಕಾಲೇಜಿನಲ್ಲಿ ನಡೆದ ಮತ ಎಣಿಕೆ ಪ್ರಕ್ರಿಯೆಯಲ್ಲಿ ಒಟ್ಟೂ 16 ಸುತ್ತು ಮತ ಎಣಿಕೆ ನಡೆದಿದ್ದು ಅಂಚೆ ಮತ ಎಣಿಕೆ ಹಾಗೂ ಮೊದಲ ಸುತ್ತಿನಲ್ಲಿ ಜೆಡಿಎಸ್‌ನ ಪ್ರದೀಪ ನಾಯಕರಿಗಿಂತ ಕೊಂಚ ಕಡಿಮೆ ಇದ್ದರೂ ನಂತರ ಪ್ರತಿ ಸುತ್ತಿನಲ್ಲೂ 2 ರಿಂದ 3 ಸಾವಿರಕ್ಕೂ ಹೆಚ್ಚು ಮತಗಳನ್ನು ಪಡೆಯುತ್ತಾ ಹಿಂತಿರುಗಿ ನೋಡದೇ ಗೆಲುವಿನತ್ತ ಸಾಗಿದರು. ಅಂತಿಮ ಸುತ್ತಿನ ನಂತರ ದಿನಕರ ಶೆಟ್ಟಿ 58,756 ಮತಗಳಿಸಿ ವಿಜಯಪತಾಕೆ ಹಾರಿಸಿದರು.

ಗೆಲುವಿಗೆ ಕಾರಣವೇನು?
ಟಿಕೇಟ್‌ ಆಕಾಂಕ್ಷಿಗಳಿಂದ ಉಂಟಾಗಿದ್ದ ಬಂಡಾಯದ ದುಷ್ಪರಿಣಾಮಕ್ಕಿಂತ ಲಾಭವನ್ನೇ ದಿನಕರ ಶೆಟ್ಟಿ ಪಡೆದರು. ಪ್ರಧಾನಿ ಮೋದಿ, ಹಿಂದುತ್ವ ಹಾಗೂ ಪಕ್ಷ ಅಭಿಮಾನದ ಜೊತೆಗೆ ಕಳೆದ 5 ವರ್ಷದಲ್ಲಿ ಕಾಂಗ್ರೆಸ್‌ನ ರೀತಿ ನೀತಿಗಳು ಕೂಡಾ ಸಾಕಷ್ಟು ಚರ್ಚೆಗೆ ಗ್ರಾಸವಾಗಿ ಮತದಾರನ ಮನಸ್ಸನ್ನು ಬಿಜೆಪಿಯೆಡೆಗೆ ಸೆಳೆಯಲು ಸಾಧ್ಯವಾಯಿತೆಂಬ ಅಭಿಪ್ರಾಯ ಎಲ್ಲೆಡೆ ಕೇಳಿಬಂದಿದೆ. ಮತದಾನದ ನಂತರ ಬಿಜೆಪಿ ಪಾಳಯ ಗೆಲುವಿನ ಬಗ್ಗೆ ಖಚಿತ ಲೆಕ್ಕಾಚಾರ ಹೊಂದಿದ್ದು 55 ಸಾವಿರಕ್ಕೂ ಹೆಚ್ಚು ಮತಗಳು ಬೀಳಬಹುದು ಎನ್ನಲಾಗಿತ್ತು.

ಸೋಲಿಗೆ ಕಾರಣವೇನು?

ಕ್ಷೇತ್ರದಲ್ಲಿ ಒಟ್ಟೂ ಚಲಾವಣೆಯಾದ 1,44,821 ಮತಗಳಲ್ಲಿ ಪ್ರಮುಖ ಪಕ್ಷಗಳಾದ ಕಾಂಗ್ರೆಸ್‌, ಜೆಡಿಎಸ್‌ ಹಾಗೂ ಬಿಜೆಪಿಗಳಿಗೆ ನೆರವಾಗಬಹುದಾಗಿದ್ದ ಮತಗಳಲ್ಲಿ ಇತರ ಅಭ್ಯರ್ಥಿಗಳು ಹಾಗೂ ನೋಟಾ 43,228 ಮತಗಳನ್ನು ಒಡೆದಿದ್ದು ಕೂಡಾ ಕಾಂಗ್ರೆಸ್‌ ಹಾಗೂ ಜೆಡಿಎಸ್‌ಗೆ ಮುಳ್ಳಾಯಿತೆನ್ನಬಹುದು. ಮುಖ್ಯವಾಗಿ ಬಿಜೆಪಿ ಬಂಡಾಯ ಅಭ್ಯರ್ಥಿ ಸೂರಜ್‌ ನಾಯ್ಕ ಮತಗಳಿಕೆಯಲ್ಲಿ ಮೂರನೇ ಸ್ಥಾನಕ್ಕೇರಿದರೆ ಜೆಡಿಎಸ್‌ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು.

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qeqwqwe

Kumta: ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಮರಳಿ ಕಾಂಗ್ರೆಸ್ ಸೇರ್ಪಡೆ

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

Karwar; ಬಿಜೆಪಿ ಅಭ್ಯರ್ಥಿ ಕಾಗೇರಿ ಜಿಲ್ಲಾ ವಿಭಜನೆಗೆ ಯತ್ನಿಸಿಲ್ಲ: ಸದಾನಂದ ಭಟ್

Karwar; ಬಿಜೆಪಿ ಅಭ್ಯರ್ಥಿ ಕಾಗೇರಿ ಜಿಲ್ಲಾ ವಿಭಜನೆಗೆ ಯತ್ನಿಸಿಲ್ಲ: ಸದಾನಂದ ಭಟ್

6-

Bhatkal Theft: ನಗರ, ಗ್ರಾಮೀಣ ಪ್ರದೇಶದ ಹಲವೆಡೆ ಮುಂಜಾನೆ ಸರಣಿ ಕಳ್ಳತನ

18-

Road Mishap: ಹೈಕಾಡಿಯಲ್ಲಿ ಕಾರು ಅಪಘಾತ: ನಾಲ್ವರಿಗೆ ಗಾಯ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.