ಲಿಂಗನಮಕ್ಕಿ ಭರ್ತಿಗೆ ಆರು ಅಡಿ ಮಾತ್ರ ಬಾಕಿ

Team Udayavani, Aug 16, 2019, 1:25 PM IST

uk-tdy-2

ಲಿಂಗನಮಕ್ಕಿ

ಹೊನ್ನಾವರ: ಇಂದು ಸಂಜೆ 5ಕ್ಕೆ ಲಿಂಗನಮಕ್ಕಿ ಜಲಾಶಯದ ಜಲಮಟ್ಟ 1813.90 ಅಡಿಗೆ ಏರಿದೆ. ಗರಿಷ್ಠ 1819 ಮುಟ್ಟಲು ಕೇವಲ 5ಅಡಿ ಬಾಕಿ. ಇನ್ನು 3ಅಡಿ ತುಂಬಿದರೆ ಜಲಾನಯನ ಪ್ರದೇಶದ ಮಳೆಯನ್ನು ಆಧರಿಸಿ, ಒಳಹರಿವು ಪರಿಶೀಲಿಸಿ ಲಿಂಗನಮಕ್ಕಿಯಿಂದ ನೀರು ಬಿಡಲು ಆರಂಭಿಸುವ ಸಾಧ್ಯತೆ ಇದೆ.

ಲಿಂಗನಮಕ್ಕಿಯ ಒಳಹರಿವು 58,071 ಕ್ಯುಸೆಕ್‌ಗಳಿವೆ. ವಿದ್ಯುತ್‌ ಉತ್ಪಾದಿಸಿ 2,158 ಕ್ಯುಸೆಕ್‌ ನೀರನ್ನು ಹೊರಬಿಡಲಾಗುತ್ತಿದೆ. ಈ ನೀರು ಜೋಗ ಜಲಪಾತದಲ್ಲಿ ಇಳಿದು ಗೇರುಸೊಪ್ಪಾ ಅಣೆಕಟ್ಟಿಗೆ ಬಂದು ಸಂಗ್ರಹವಾಗುತ್ತದೆ. ಅಲ್ಲಿ ಗರಿಷ್ಠ ವಿದ್ಯುತ್‌ ಉತ್ಪಾದಿಸಿ, ನೀರು ಬಿಡಲಾಗುತ್ತಿದೆ. ಇಂದು ಕರಾವಳಿಯಲ್ಲಿ, ಶರಾವತಿಕೊಳ್ಳದಲ್ಲಿ ಮಳೆ ಜಾಸ್ತಿಯಾಗಿದೆ. ಲಿಂಗನಮಕ್ಕಿ ಭಾಗದಲ್ಲಿ ಸಾಧಾರಣಾ ಜಿಟಿಜಿಟಿ ಮಳೆಯಾಗುತ್ತದೆ ಎಂದು ಮಾವಿನಗುಂಡಿಯ ಹಿರಿಯ ಸಾಮಾಜಿಕ ಕಾರ್ಯಕರ್ತ ಅಶೋಕ ಹೆಗಡೆ ವರದಿ ಮಾಡುತ್ತಾರೆ.

ಯಾವಾಗ, ಎಷ್ಟು ನೀರು ಬಿಡುತ್ತೀರಿ ಎಂಬ ಪ್ರಶ್ನೆಗೆ ಕೆಪಿಸಿಯಲ್ಲೂ ಉತ್ತರವಿಲ್ಲ. ಅವರಿಗೂ ಸಂದಿಗ್ಧತೆ ಇದೆ. ಸದ್ಯ ಮಳೆ ಕಡಿಮೆ ಇದೆ, ಸಮತೋಲನ ಕಾಯ್ದುಕೊಂಡು ನೀರುತುಂಬಿಸುತ್ತಿದ್ದಾರೆ. ಕೂಡಲೇ ಮಳೆ ನಿಂತರೆ ಹಾನಿ, ಜೋರಾಗಿ ಬಂದರೂ ಕೊಳ್ಳದ ಜನಕ್ಕೆ ಹಾನಿ. ಎರಡನೇ ವಾರ ಬಂದಂತಹ ಮಳೆ ಮತ್ತೆ ಬಂದರೆ ನೀರು ಬಿಡುವುದು ಅನಿವಾರ್ಯವಾಗುತ್ತದೆ. ಮುಂದಿನ ಕೆಲವು ದಿನಗಳು ಕೆಪಿಸಿಗೆ ಸಂದಿಗ್ಧದ ದಿನಗಳು. ಶರಾವತಿಕೊಳ್ಳದ ಜನತೆಗೆ ಆತಂಕದ ದಿನಗಳು ಕೆಪಿಸಿ ಪ್ರವಾಹದ ಮೂರು ಮುನ್ನೆಚ್ಚರಿಕೆ ನೀಡಿ ಆಗಿದೆ. ತಾಲೂಕಾಡಳಿತ ಶರಾವತಿ ಎಡಬಲ ದಂಡೆಯ ಎಲ್ಲೆಡೆ 19 ಅಧಿಕಾರಿಗಳನ್ನು ನೇಮಿಸಿದೆ. ಲೈಫ್‌ ಜಾಕೆಟ್, ದೋಣಿಗಳ ವ್ಯವಸ್ಥೆ ಮಾಡಿದೆ. ಗಂಜಿಕೇಂದ್ರಕ್ಕೆ ಅಗತ್ಯ ಬಿದ್ದರೆ ಶಾಲೆಗಳನ್ನು ಒದಗಿಸುವಂತೆ ಸೂಚಿಸಲಾಗಿದೆ. ಶರಾವತಿ ನೆರೆ ಸಂತ್ರಸ್ತರ ಹಿತರಕ್ಷಣಾ ಸಮಿತಿಯ ಚಂದ್ರಕಾಂತ ಕೊಚರೇಕರ್‌, ಯೋಗೇಶ ರಾಯ್ಕರ ಮೊದಲಾದವರು ಆಕಸ್ಮಾತ್‌ ನೀರು ಬಿಟ್ಟರೆ ಆಡಳಿತದೊಂದಿಗೆ ಸಹಕರಿಸಿ, ಒಟ್ಟಾಗಿ ನೆರೆಯಿಂದಾಗುವ ಹಾನಿಯನ್ನು ತಪ್ಪಿಸಿಕೊಳ್ಳೋಣ ಎಂದು ಕರೆನೀಡಿದ್ದಾರೆ. ಕೆಪಿಸಿ ಅಂತಿಮ ಸೂಚನೆ ನೀಡಿ, ಯಾವುದೇ ಕ್ಷಣದಲ್ಲಿ ನೀರು ಬಿಡಬಹುದು ಎಂದು ಹೇಳಿದ್ದರೂ ನೀರು ಬಿಟ್ಟು ಕನಿಷ್ಠ 12ಗಂಟೆಯ ನಂತರ ಶರಾವತಿಕೊಳ್ಳಕ್ಕೆ ತಲುಪುವಂತೆ ಮಾಡಲಿದೆ.

ಆರಂಭದಲ್ಲಿ ನಿಧಾನವಾಗಿ ನೀರು ಬಿಡಲಿದೆ. ಆ ಪರಿಸ್ಥಿತಿ ಬರದಿರಲಿ, ಅಣೆಕಟ್ಟು ತುಂಬಿಸಿ, ನೆರೆ ನಿಲ್ಲಲಿ ಎಂದು ಪ್ರಾರ್ಥಿಸಬೇಕಾಗಿದೆ.

ಟಾಪ್ ನ್ಯೂಸ್

pramod-muthalik

Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

7-bng

Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್‌ ಆತ್ಮಹತ್ಯೆ

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

6-bng-crime

Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ

ಬೊಮ್ಮಾಯಿ

Hubli; ಕಾನೂನು ವ್ಯವಸ್ಥೆ ಹೀಗೆ ಮುಂದುವರಿದರೆ ರಾಜ್ಯ ಬಿಹಾರವಾಗುತ್ತದೆ: ಬಸವರಾಜ ಬೊಮ್ಮಾಯಿ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Karwar; ಬಿಜೆಪಿ ಅಭ್ಯರ್ಥಿ ಕಾಗೇರಿ ಜಿಲ್ಲಾ ವಿಭಜನೆಗೆ ಯತ್ನಿಸಿಲ್ಲ: ಸದಾನಂದ ಭಟ್

Karwar; ಬಿಜೆಪಿ ಅಭ್ಯರ್ಥಿ ಕಾಗೇರಿ ಜಿಲ್ಲಾ ವಿಭಜನೆಗೆ ಯತ್ನಿಸಿಲ್ಲ: ಸದಾನಂದ ಭಟ್

6-

Bhatkal Theft: ನಗರ, ಗ್ರಾಮೀಣ ಪ್ರದೇಶದ ಹಲವೆಡೆ ಮುಂಜಾನೆ ಸರಣಿ ಕಳ್ಳತನ

18-

Road Mishap: ಹೈಕಾಡಿಯಲ್ಲಿ ಕಾರು ಅಪಘಾತ: ನಾಲ್ವರಿಗೆ ಗಾಯ

Bhatkal ನೀರು ಪೋಲು; ಜಾಲಿ ಪಟ್ಟಣ ಪಂಚಾಯತ್ ನಿರ್ಲಕ್ಷ್ಯ; ಜನರ ಆಕ್ರೋಶ

Bhatkal ನೀರು ಪೋಲು; ಜಾಲಿ ಪಟ್ಟಣ ಪಂಚಾಯತ್ ನಿರ್ಲಕ್ಷ್ಯ; ಜನರ ಆಕ್ರೋಶ

1-weqewqe

Yallapur: ಸಾತೊಡ್ಡಿ ಜಲಪಾತದಲ್ಲಿ ಪ್ರವಾಸಿಗರ ಮೇಲೆ ಜೇನು ನೊಣಗಳ ದಾಳಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

8-ptr

Puttur: ಶ್ರೀ ಮಹಾಲಿಂಗೇಶ್ವರ ದೇವರ ಅವಭೃಥ ಸವಾರಿ

pramod-muthalik

Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

jagadish shettar

Belagavi; ಕಾಂಗ್ರೆಸ್ ಸರ್ಕಾರದ ಓಲೈಕೆಯಿಂದ ಜಿಹಾದಿ ಕೃತ್ಯಗಳು ಹೆಚ್ಚುತ್ತಿದೆ: ಶೆಟ್ಟರ್

7-bng

Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್‌ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.