ಬಿದಿರಿನಿಂದ ಆಕಾಶ ಬುಟ್ಟಿ ತಯಾರಿಕೆ

Team Udayavani, Nov 14, 2020, 4:28 PM IST

ಬಿದಿರಿನಿಂದ ಆಕಾಶ ಬುಟ್ಟಿ ತಯಾರಿಕೆ

ಅಂಕೋಲಾ: ದಿಪಾವಳಿ ಬಂತೆಂದರೆ ಹಿಂದೆಲ್ಲಾ ಬಿದಿರು ಕಡ್ಡಿಗಳಿಂದ ಮಾಡಿದ ಆಕಾಶ ಬುಟ್ಟಿಗಳನ್ನು ಮನೆಯೆದುರು ಕಾಣುತ್ತಿದ್ದೆವು. ಆದರೆ ಕಳೆದ 20 ವರ್ಷಗಳಿಂದ ಚೀನಾದ ಆಕಾಶ ಬುಟ್ಟಿಗಳೇ ಮಾರುಕಟ್ಟೆಯಲ್ಲಿ ಕಾಣಸಿಗುತ್ತವೆ.

ದೇಶಿ ವಸ್ತುಗಳ ಬಳಕೆ ಹಾಗೂ ಮಾರಾಟವನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಪಟ್ಟಣದ ಕೆಸಿ ರಸ್ತೆಯಲ್ಲಿರುವ ಆದಿಶೇಷ ದ್ವಿಚಕ್ರ ವಾಹನ ರಿಪೇರಿ ಮಳಿಗೆಯ ರಾಜೇಶ ಅವರು ದೀಪಾವಳಿಗೆ ದೇಶಿ ಆಕಾಶಬುಟ್ಟಿಗಳನ್ನು ತಯಾರಿಸುತ್ತಿದ್ದಾರೆ. ಮನೆ ಮುಂದೆ ಬಿದಿರಿನ ಕಡ್ಡಿಗಳಿಂದ ಮಾಡಿದ ಆಕಾಶ ಬುಟ್ಟಿಗಳು ದುಷ್ಟಶಕ್ತಿಗಳನ್ನು ಮನೆಯೊಳಗೆ ಬಾರದಂತೆ ತಡೆದರೆ, ಅದರೊಳಗೆ ಬೆಳಕು ಐಶ್ವರ್ಯದ ಲಕ್ಷ್ಮೀಯನ್ನು ಮನೆಯೊಳಗೆ ಸ್ವಾಗತಿಸುತ್ತದೆ ಎಂಬ ಪ್ರತೀಕವಿದೆ.

ಇಂತಹ ಆಕಾಶ ಗೂಡು ಪ್ರತಿಯೊಬ್ಬರು ಬಳಕೆಗೆ ಬರುವಂತೆ ಮಾಡಲು ಕಳೆದ ಹಲವಾರು ವರ್ಷಗಳಿಂದ ದ್ವಿಚಕ್ರ ವಾಹನ ದುರಸ್ತಿ ಮಳಿಗೆ ಇಟ್ಟುಕೊಂಡಿರುವ ರಾಜೇಶ ತನ್ನ ಹವ್ಯಾಸಿಯಾಗಿ ಬಿದಿರಿನ ಆಕಾಶಗೂಡು ತಯಾರಿಸುವ ಕಾರ್ಯ ಮಾಡಿ ತನ್ನ ಸ್ನೇಹಿತರಿಗೆ ಕೊಡುತ್ತಿದ್ದಾರೆ. ಬಿದಿರಿಗೆ ಗೋಂದು, ದಾರವನ್ನು ಪೋಣಿಸಿ ಆಕಾರವನ್ನಿತ್ತು ಅದಕ್ಕೆ ಬಣ್ಣದ ಹಾಳೆಗಳಿಂದ ಅಂದವನ್ನು ನೀಡುತ್ತಾರೆ. ಈ ಬಿದಿರಿನ ಆಕಾಶ ಗೂಡು ತಯಾರಿಸಲು ಮೂರು ತಾಸು ಸಮಯ ಹಿಡಿಯುತ್ತದೆ. ದಿಪಾವಳಿ ಸಮೀಪಿಸಿದಂತೆ ರಾಜೇಶ ಬೈಕ್‌ ರಿಪೇರಿ ನಡುವೆ ಆಕಾಶ ಗೂಡು ತಯಾರಿಸುತ್ತಿದ್ದಾರೆ.

ಹೀಗೆ ತಯಾರಿಸಿದ ಆಕಾಶ ಗೂಡನ್ನು ಮಾರಾಟ ಮಾಡದೆ ತನ್ನ ಸ್ನೇಹಿತರಿಗೆ ನೀಡಿದ್ದಾರೆ. ಈಗಾಗಲೆ 10ಕ್ಕೂ ಹೆಚ್ಚು ಆಕಾಶ ಗೂಡು ತಯಾರಿಸಿದ್ದಾರೆ.

ನಾನು ಗ್ಯಾರೇಜ್‌ ಕೆಲಸದ ಬಿಡುವಿನ ಸಮಯವನ್ನು ಬಿದಿರಿನಿಂದ ತಯಾರಿಸುವ ಆಕಾ ಬುಟ್ಟಿ ತಯಾರಿಕೆಗೆ ಮಿಸಲಿಡುತ್ತೇನೆ. ನಮ್ಮ ದೇಶಿಯ ವಸ್ತುಗಳನ್ನು ನಾವು ಬಳಕೆಗೆ ಅನುವು ಮಾಡಿಕೊಡಬೇಕು. ನಾನು ವ್ಯಾಪಾರಕ್ಕಾಗಿ ಮಾಡುವುದಿಲ್ಲ. ಮುಂದಿನ ದಿನದಲ್ಲಿ ಇಂತಹ ಗೂಡು ಮಾಡುವವರು ಮುಂದೆ ಬಂದು ದೇಶಿ ಉತ್ಪನ್ನ ತಯಾರಿಕೆಯಲ್ಲಿ ಕೈಜೊಡಿಸಿದರೆ ಹಲವಾರು ಜನರಿಗೆ ಉದ್ಯೋಗ ನೀಡಿದಂತಾಗುತ್ತದೆ. –ರಾಜೇಶ, ಆದಿಶೇಷ ದ್ವಿಚಕ್ರ ವಾಹನ ರಿಪೇರಿ ಮಳಿಗೆ ಮಾಲಕ

ಅರುಣ ಶೆಟ್ಟಿ

ಟಾಪ್ ನ್ಯೂಸ್

ಸಲಿಂಗಕಾಮಿ ವಿವಾಹ: ವಿಚಾರಣೆಯ ನೇರ ಪ್ರಸಾರಕ್ಕೆ ಮನವಿ

ಸಲಿಂಗಕಾಮಿ ವಿವಾಹ: ವಿಚಾರಣೆಯ ನೇರ ಪ್ರಸಾರಕ್ಕೆ ಮನವಿ

ಪದ್ಮಶ್ರೀ ಸಿರಿವೆನ್ನೆಲ ಸೀತಾರಾಮ ಶಾಸ್ತ್ರಿ ನಿಧನ

ಪದ್ಮಶ್ರೀ ಸಿರಿವೆನ್ನೆಲ ಸೀತಾರಾಮ ಶಾಸ್ತ್ರಿ ನಿಧನ

ಬಿಹಾರ ವಿಧಾನಸಭೆಯಲ್ಲಿ ಮದ್ಯದ ಬಾಟಲಿ!

ಬಿಹಾರ ವಿಧಾನಸಭೆಯಲ್ಲಿ ಮದ್ಯದ ಬಾಟಲಿ!

ಅಯೋಧ್ಯೆ ತೀರ್ಪು ಧರ್ಮಾಧಾರಿತವಲ್ಲ: ಮಾಜಿ ಸಿಜೆಐ ಗೊಗೋಯ್!

ಅಯೋಧ್ಯೆ ತೀರ್ಪು ಧರ್ಮಾಧಾರಿತವಲ್ಲ: ಮಾಜಿ ಸಿಜೆಐ ಗೊಗೋಯ್!

ಅಪ್ಪ ಅರ್ಥವಾದರೂ ಮಗನ ನಡೆ ಅರ್ಥವಾಗುತ್ತಿಲ್ಲ: ಶಂಕರ್‌

ಅಪ್ಪ ಅರ್ಥವಾದರೂ ಮಗನ ನಡೆ ಅರ್ಥವಾಗುತ್ತಿಲ್ಲ: ಶಂಕರ್‌

ಭ್ರಷ್ಟಾಚಾರ ಪ್ರಕರಣ: ವಿಚಾರಣೆಗೆ ಹಾಜರಾದ ಅನಿಲ್‌ ದೇಶ್‌ಮುಖ್‌

ಭ್ರಷ್ಟಾಚಾರ ಪ್ರಕರಣ: ವಿಚಾರಣೆಗೆ ಹಾಜರಾದ ಅನಿಲ್‌ ದೇಶ್‌ಮುಖ್‌

ಲಾಕ್‌ಡೌನ್‌ ಪ್ರಸ್ತಾಪ ಸರ್ಕಾರದ ಮುಂದಿಲ್ಲ: ನಿರಾಣಿ

ಲಾಕ್‌ಡೌನ್‌ ಪ್ರಸ್ತಾಪ ಸರ್ಕಾರದ ಮುಂದಿಲ್ಲ: ನಿರಾಣಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೆಳಕಿನ ಹಬ್ಬದಲ್ಲಿ ಕೌಟುಂಬಿಕ ಬಾಂಧವ್ಯದ ಸೊಗಡು

ಬೆಳಕಿನ ಹಬ್ಬದಲ್ಲಿ ಕೌಟುಂಬಿಕ ಬಾಂಧವ್ಯದ ಸೊಗಡು

 ದೀಪಾವಳಿ ಹಬ್ಬವು ಬಂದಿತ್ತು, ಸಡಗರ ಸಂಭ್ರಮ ತಂದಿತ್ತು..

 ದೀಪಾವಳಿ ಹಬ್ಬವು ಬಂದಿತ್ತು, ಸಡಗರ ಸಂಭ್ರಮ ತಂದಿತ್ತು..

ದೀಪಗಳ ಹಬ್ಬ…ಅನಂತವಾಗಿ ಬೆಳಗಲಿ ನಿರಂತರ ದೀಪಾವಳಿ

ದೀಪಗಳ ಹಬ್ಬ…ಅನಂತವಾಗಿ ಬೆಳಗಲಿ ನಿರಂತರ ದೀಪಾವಳಿ

ಮನೆ ಮನವನ್ನು ಬೆಳಗುವ ದೀಪಾವಳಿ

ಮನೆ ಮನವನ್ನು ಬೆಳಗುವ ದೀಪಾವಳಿ

ದೀಪ ಶಾಂತಿಯ ಸಂಕೇತ

ದೀಪ ಶಾಂತಿಯ ಸಂಕೇತ

MUST WATCH

udayavani youtube

ಕಾಪು ಪರಿಸರದಲ್ಲಿ ಗಾಳಿ, ಗುಡುಗು, ಮಿಂಚು ಸಹಿತ ಭಾರೀ ಮಳೆ

udayavani youtube

ದನಗಳ್ಳರನ್ನು ಹಿಡಿಯಲು ಹೋದವರ ಮೇಲೆ ವಾಹನ ಚಲಾಯಿಸಿ ಹಲ್ಲೆ: ಇಬ್ಬರಿಗೆ ಗಂಭೀರ ಗಾಯ

udayavani youtube

ಸುಟ್ಟಗಾಯ ಸಂರ್ಪೂಣ ನಿವಾರಣೆ ಆಗಲು ಈ ನಾಟಿ ವೈದ್ಯರ ಬಳಿ ಇದೆ ಔಷಧಿ.

udayavani youtube

ಕಸ್ತೂರಿರಂಗನ್ ಸಮೀಕ್ಷೆ ಅವೈಜ್ಞಾನಿಕ !?

udayavani youtube

ಭಾರತದಲ್ಲಿ ವ್ಯಾಸಂಗ ಮಾಡಿದ್ದನಂತೆ ಈ ತಾಲಿಬಾನ್‌ ವಕ್ತಾರ!

ಹೊಸ ಸೇರ್ಪಡೆ

ಸಲಿಂಗಕಾಮಿ ವಿವಾಹ: ವಿಚಾರಣೆಯ ನೇರ ಪ್ರಸಾರಕ್ಕೆ ಮನವಿ

ಸಲಿಂಗಕಾಮಿ ವಿವಾಹ: ವಿಚಾರಣೆಯ ನೇರ ಪ್ರಸಾರಕ್ಕೆ ಮನವಿ

ಪದ್ಮಶ್ರೀ ಸಿರಿವೆನ್ನೆಲ ಸೀತಾರಾಮ ಶಾಸ್ತ್ರಿ ನಿಧನ

ಪದ್ಮಶ್ರೀ ಸಿರಿವೆನ್ನೆಲ ಸೀತಾರಾಮ ಶಾಸ್ತ್ರಿ ನಿಧನ

ಬಿಹಾರ ವಿಧಾನಸಭೆಯಲ್ಲಿ ಮದ್ಯದ ಬಾಟಲಿ!

ಬಿಹಾರ ವಿಧಾನಸಭೆಯಲ್ಲಿ ಮದ್ಯದ ಬಾಟಲಿ!

ಅಯೋಧ್ಯೆ ತೀರ್ಪು ಧರ್ಮಾಧಾರಿತವಲ್ಲ: ಮಾಜಿ ಸಿಜೆಐ ಗೊಗೋಯ್!

ಅಯೋಧ್ಯೆ ತೀರ್ಪು ಧರ್ಮಾಧಾರಿತವಲ್ಲ: ಮಾಜಿ ಸಿಜೆಐ ಗೊಗೋಯ್!

ಅಪ್ಪ ಅರ್ಥವಾದರೂ ಮಗನ ನಡೆ ಅರ್ಥವಾಗುತ್ತಿಲ್ಲ: ಶಂಕರ್‌

ಅಪ್ಪ ಅರ್ಥವಾದರೂ ಮಗನ ನಡೆ ಅರ್ಥವಾಗುತ್ತಿಲ್ಲ: ಶಂಕರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.