ಮಾರಿಕಾಂಬಾ ಕ್ರೀಡಾಂಗಣ ಸಮಸ್ಯೆಗಳ ಅಂಕಣ

•ಸುವ್ಯವಸ್ಥೆ ಕಾಪಾಡುವಲ್ಲಿ ಯುವಜನ ಸೇವಾ ಇಲಾಖೆ ನಿರ್ಲಕ್ಷ್ಯ: ಆರೋಪ•ಓಡುವ ಟ್ರ್ಯಾಕ್‌ ಸರಿಪಡಿಸಲು ಆಗ್ರಹ

Team Udayavani, Jul 8, 2019, 4:09 PM IST

ಶಿರಸಿ: ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದ ಅವಸ್ಥೆಯ ನೋಟ.

ಶಿರಸಿ: ಜಿಲ್ಲೆಯ ಕ್ರೀಡಾಳುಗಳಿಗೆ ಪ್ರೇರಣೆ ನೀಡಬೇಕಿದ್ದ ಹೆಮ್ಮೆಯ ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದಲ್ಲಿ ಮಳೆಗಾಲ ಬಂದರೆ ಅವ್ಯವಸ್ಥೆ ತಾಂಡವವಾಡುತ್ತದೆ. ಕ್ರೀಡಾಪಟುಗಳಿಗೆ ಕ್ರೀಡಾಚಟುವಟಿಕೆ ನಡೆಸಲು ಇರಲೇ ಬೇಕಿದ್ದ ಅವಶ್ಯ ಮತ್ತು ಪೂರಕವಾದ ವ್ಯವಸ್ಥೆಯನ್ನು ನೀಡುವಲ್ಲಿ ಹಾಗೂ ಕ್ರೀಡಾಂಗಣದ ಸುವ್ಯವಸ್ಥೆ ಕಾಪಾಡಿಕೊಂಡು ಹೋಗುವಲ್ಲಿ ಯುವಜನಾಸೇವಾ ಇಲಾಖೆ ಅಕ್ಷರಶಃ ನಿರ್ಲಕ್ಷತನ ಮಾಡಿದೆ.

ಮಕ್ಕಳು, ಆಸಕ್ತರು, ಕ್ರೀಡಾಳುಗಳಿಗೆ ನೆರವಾಗಬೇಕಿದ್ದ ಇಲಾಖೆ ತನ್ನ ಕರ್ತವ್ಯದಲ್ಲಿ ವ್ಯೆಫಲ್ಯತನ ತೋರಿಸಿರುವುದಕ್ಕೆ ಇಲ್ಲಿನ ಸ್ಪಂದನ ನ್ಪೋರ್ಟ್ಸ್ ಅಕಾಡೆಮಿಯು ತೀವ್ರವಾದ ಆಕ್ಷೇಪವನ್ನು ವ್ಯಕ್ತಪಡಿಸಿದೆ. ಇನ್ನೇನು ಪ್ರಾಥಮಿಕ, ಪ್ರೌಢ, ಪಿಯು ಮಕ್ಕಳ ಹಾಗೂ ದಸರಾ ಕ್ರೀಡಾಕೂಟಗಳು ಆರಂಭವಾಗುವ ನಿಟ್ಟಿನಲ್ಲಿ ಜಿಲ್ಲಾ ಕ್ರೀಡಾಂಗಣವನ್ನು ಸುವ್ಯವಸ್ಥೆಯಲ್ಲಿ ಇಡುವಂತೆ ಮತ್ತು ಓಟದ ಪಥವನ್ನು(ಟ್ರಾಕ್‌) ಸರಿಪಡಿಸುವಂತೆ ಅಧ್ಯಕ್ಷ ರವೀಂದ್ರ ನಾಯ್ಕ ಯುವಜನಾಸೇವಾ ಇಲಾಖೆಯನ್ನು ಆಗ್ರಹಿಸಿದ್ದಾರೆ.

ಕಳೆದ ಒಂದು ದಶಕದಿಂದ ಸ್ಥಳೀಯ ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದ ಓಟದ ಪಥ, ಜಿಗಿತದ ಅಂಕಣದ ದುರವಸ್ಥೆ ಹಾಗೂ ಸ್ವಚ್ಛತೆ ಕುರಿತು ಆಡಳಿತದ ವ್ಯವಸ್ಥೆ ಮೇಲೆ ಒತ್ತಡ ಹೇರಲಾಗಿತ್ತು. ಇದರ ಪರಿಣಾಮವಾಗಿ ಕಳೆದ ವರ್ಷ ಕ್ರೀಡಾಂಗಣದಲ್ಲಿ ಮಹತ್ವಪೂರ್ಣವಾದ ಕಾಮಗಾರಿ ಜರುಗಿತು. ಆದರೆ ಕಳೆದ ವರ್ಷ ಇದ್ದಂತಹ ಕ್ರೀಡಾಂಗಣದ ಸ್ಥಿತಿಗತಿ ಮುಂದುವರಿಸಿಕೊಂಡು ಹೋಗುವ ನಿಟ್ಟಿನಲ್ಲಿ ಇಲಾಖೆ ಸಂಪೂರ್ಣ ನಿರ್ಲಕ್ಷ್ಯ ತೋರಿದೆ ಎಂಬುದು ಆರೋಪವಾಗಿದೆ.

ಓಟದ ಪಥದಲ್ಲಿ ನಿಂತಿರುವ ನೀರನ್ನು ಶುಚಿಗೊಳಿಸುವ ಕನಿಷ್ಠ ಕಾಮಗಾರಿಯು ಮಾಡಿಲ್ಲ. ಓಟದ ಪಥದಲ್ಲಿ ಮುಂಜಾಗ್ರತೆ ಕ್ರಮವಾಗಿ ಹುಲ್ಲು ನಿಯಂತ್ರಿಸುವ ಕಾರ್ಯ ಜರುಗಿಸಿಲ್ಲ. ಕ್ರೀಡಾಂಗಣದ ಓಟದ ಪಥದಲ್ಲಿ ನೀರು ನಿಂತು ಕೊಳಚೆ ನೀರಿನಲ್ಲಿ ಕ್ರೀಡಾಪಟುಗಳು ಅಭ್ಯಾಸ ಜರುಗಿಸುತ್ತಿರುವುದು ಅನಿವಾರ್ಯವಾಗಿದೆ. ಮುಂಬರುವ ದಿನಗಳಲ್ಲಿ ಕ್ರೀಡಾಕೂಟಗಳನ್ನು ಕಳಪೆಮಟ್ಟದ ಕ್ರೀಡಾಂಗಣದಲ್ಲಿ ನಡೆಸುವುದು ದುರಂತ ಎಂದೂ ರವೀಂದ್ರ ನಾಯ್ಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪ್ರತಿವರ್ಷವೂ ಕನಿಷ್ಠ ಮೊತ್ತದ ಹಣವನ್ನು ವಿಶೇಷವಾಗಿ ನಿರ್ವಹಣೆ ಮತ್ತು ತುರ್ತು ಕಾರ್ಯಕ್ಕೆ ಕಾಯ್ದಿರಿಸದೇ ಇರುವುದರಿಂದ ವರ್ಷದಿಂದ ವರ್ಷಕ್ಕೆ ಕ್ರೀಡಾಂಗಣದ ಸ್ಥಿತಿ-ಗತಿ ಕಳಪೆ ಮಟ್ಟಕ್ಕೆ ಹೋಗುತ್ತಿದೆ. ಈ ಮಧ್ಯೆ ಕಳೆದ ದಶಕದಿಂದ ಕ್ರೀಡಾಂಗಣದ ಬಾಡಿಗೆಯಿಂದ ಬಂದಂತಹ ಹಣವನ್ನೂ ಸಹಿತ ಕ್ರೀಡಾಂಗಣದ ಅಭಿವೃದ್ಧಿ ಸುವ್ಯವಸ್ಥೆಯ ಕಾಮಗಾರಿಗೆ ಉಪಯೋಗಿಸಿಲ್ಲ. ಸಾರ್ವಜನಿಕರಿಂದ ಬಂದ ಬಾಡಿಗೆ ಮತ್ತು ಕ್ರೀಡಾಂಗಣದ ಅಭಿವೃದ್ಧಿಗೆ ವೆಚ್ಚ ಮಾಡಿರುವ ಮಾಹಿತಿ ಕೇಳಿದ್ದರೂ ಇನ್ನೂ ಕೊಟ್ಟಿಲ್ಲ. ಮಾಹಿತಿ ಕೇಳಿ ವರ್ಷ ಸಮಿಪಿಸುತ್ತಿದ್ದರೂ ಇಲಾಖೆಯು ದಾಖಲೆ ನೀಡದಿರುವುದು ಖಂಡನಾರ್ಹ ಎಂದು ಅಕಾಡೆಮಿ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದ್ದಾರೆ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಕಾರವಾರ: ಜಿಲ್ಲೆಯನ್ನು ಸ್ವಚ್ಛ ಜಿಲ್ಲೆಯನ್ನಾಗಿ ಮಾಡಬೇಕಾಗಿರುವುದು ಎಲ್ಲರ ಜವಾಬ್ದಾರಿಯಾಗಿದೆ. ಉತ್ತರ ಕನ್ನಡ ಜಿಲ್ಲೆಯನ್ನು ಸ್ವಚ್ಛ ಜಿಲ್ಲೆಯಾಗಿ ರಾಜ್ಯದಲ್ಲಿ...

  • ಭಟ್ಕಳ: ರಾಷ್ಟ್ರೀಯ ಹೆದ್ದಾರಿ 66 (ಈ ಹಿಂದಿನ ರಾ.ಹೆ.17) ಅಗಲೀಕರಣ ಕಾಮಗಾರಿ ಆರಂಭವಾಗಿ 6-7 ವರ್ಷವಾದರೂ ಕಾಮಗಾರಿ ಇನ್ನೂ ಮುಗಿಯದೇ ಗೊಂದಲದ ಗೂಡಾಗಿದೆ. ಒಂದೆಡೆ ರಾಷ್ಟ್ರೀಯ...

  • ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಅಧೀನದಲ್ಲಿರುವ ಕ್ರೀಡಾಂಗಣಗಳಲ್ಲಿ ಕ್ರೀಡಾಪಟುಗಳು ಮೂಲ ಸೌಕರ್ಯಗಳಿಂದ ವಂಚಿತರಾಗಿ...

  • ಹಳಿಯಾಳ: ರಾಜ್ಯ ಸರ್ಕಾರದ 2018ರ ರೈತರ ಸಾಲಮನ್ನಾ ಹಣ ಸರ್ಕಾರದಿಂದ ಮಂಜೂರಿಯಾಗಿದ್ದರೂ ಹಣಕಾಸು ಇಲಾಖೆಯಿಂದ ಜಿಲ್ಲೆಯ ಕೆಡಿಸಿಸಿ ಬ್ಯಾಂಕ್‌ಗೆ ಹಣ ಬಿಡುಗಡೆಯಾಗದೆ...

  • ಹಳಿಯಾಳ: ರಾಜ್ಯದ 22 ಜಿಲ್ಲೆಗಳಲ್ಲಿ ಪ್ರವಾಹದ ಹಾನಿಗೆ ಒಳಗಾಗಿ 8 ಲಕ್ಷಕ್ಕೂ ಅಧಿಕ ಹೆಕ್ಟೇರ್‌ ಪ್ರದೇಶದ ಬೆಳೆ ಹಾನಿಯಾಗಿದ್ದು, 7 ಲಕ್ಷಕ್ಕೂ ಹೆಚ್ಚು ಜನರು ಇದರಿಂದ...

ಹೊಸ ಸೇರ್ಪಡೆ