ಲಕ್ಷಾಂತರ ರೂ. ಮೌಲ್ಯದ ಮಾತ್ರೆಗಳು ಗಟಾರದಲ್ಲಿ!

Team Udayavani, Jun 10, 2019, 3:25 PM IST

ಶಿರಸಿ: ಹೃದಯ ಕಾಯಿಲೆಗೆ ಸಂಬಂಧಿಸಿದ ಲಕ್ಷಾಂತರ ರೂ. ಮೌಲ್ಯದ ಔಷಧ ವಸ್ತುಗಳನ್ನು ಇಲ್ಲಿಯ ಚಿಪಗಿ ರಸ್ತೆಯ ಗಟಾರದಲ್ಲಿ ಎಸೆದ ಘಟನೆ ನಡೆದಿದ್ದು, ಈ ಕುರಿತು ಜೀವಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಟಾರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇಲ್ಲಿನ ಕಾಲೇಜು ರಸ್ತೆಯಿಂದ ಚಿಪಗಿ ವೃತ್ತದ ರಸ್ತೆಯಂಚಿನ ಎರಡೂ ಕಡೆಗಳಲ್ಲಿ ಹೆಬ್ಟಾರ ಮುಂದಾಳತ್ವದಲ್ಲಿ ಸ್ವಚ್ಛಗೊಳಿಸಲಾಗಿತ್ತು. ಆದರೆ ಇದೇ ರಸ್ತೆಯ ಗಟಾರದಲ್ಲಿ ಹೃದಯ ಕಾಯಿಲೆ ಔಷಧಗಳ ಜೊತೆಗೆ ಕ್ವಿಂಟಲ್ ಅಕ್ಕಿಯನ್ನೂ ಎಸೆದಿರಬಹುದು ಎಂದು ಶಂಕಿಸಲಾಗಿದೆ. ಸುಮಾರು 40ರಿಂದ 50ಕ್ಕೂ ಅಧಿಕ ಮಾತ್ರೆಗಳ ಪೆಟ್ಟಿಗೆ ಎಸೆಯಲಾಗಿದ್ದು ಅವುಗಳಲ್ಲಿ ಕೆಲವು ಬಳಕೆಗೆ ಬಂದರೆ ಕೆಲವು ಅವಧಿ ಮೀರಿದ ಮಾತ್ರೆಗಳಾಗಿವೆ.

ಗಟಾರದಲ್ಲಿ ಮೊದಲಿಗೆ ಅಕ್ಕಿ ಕಂಡು ಬಂದಿದ್ದರಿಂದ ಸ್ವತಃ ಹೆಬ್ಟಾರ ಹಾಗೂ ಕಾರ್ಯಪಡೆಯ ಎಂ.ಎಂ. ಭಟ್, ಶ್ರೀಕಾಂತ ಹೆಗಡೆ, ಅಶೋಕ ಭಟ್, ಮಂಜು ಮೊಗೇರ್‌ ಮುಂತಾದವರು ಗಟಾರದಲ್ಲಿಳಿದು ಕೋಲಿನಿಂದ ಜಾಲಾಡಿದಾಗ ಅಕ್ಕಿ ಕೆಳೆಗೆ ಮೈಕ್ರೊ ಕಂಪನಿ ಮಾತ್ರೆಗಳು ದೊರಕಿವೆ. ಕೂಡಲೆ ನಗರಸಭೆ ವಾಹನದ ಮೂಲಕ ಕಸ ವಿಲೇವಾರಿ ಮಾಡಲಾಗಿದೆ. ಈಗಾಗಲೇ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಟಾರ್‌ ಬೇಕಾಬಿಟ್ಟಿ ಕಸ ಚೆಲ್ಲುವವರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿ ನಿರಂತರ ಕಾವಲು ಕಾರ್ಯವನ್ನೂ ಮಾಡುತ್ತಿದ್ದಾರೆ.

ಕ್ರಮಕ್ಕೆ ಸೂಚನೆ: ಚಿಪಗಿ ರಸ್ತೆಯಲ್ಲಿ ಪತ್ತೆಯಾಗಿರುವ ಲಕ್ಷಾಂತರ ರೂ. ಬೆಲೆಯ ಹೃದಯ ಕಾಯಿಲೆ ಮಾತ್ರೆ ಪ್ರಕರಣವನ್ನು ಜಿಲ್ಲಾ ಆರೋಗ್ಯ ಇಲಾಖೆ ಗಂಭೀರವಾಗಿ ಪರಿಗಣಿಸಿದೆ.

ಯಾವುದೇ ಮಾತ್ರೆಯಾದರೂ ಈ ರೀತಿಯಾಗಿ ಎಸೆಯುವುದು ಕಾನೂನು ಪ್ರಕಾರವೂ ಸರಿಯಲ್ಲ. ಈ ಮಾತ್ರೆಗಳು ನೀರಿಗೆ ಸೇರಿದರೆ, ಪ್ರಾಣಿಗಳು ತಿಂದರೆ ಅವುಗಳ ಮೇಲೆ ಕೆಟ್ಟ ಪರಿಣಾಮ ಆಗಲಿವೆ. ಮಾತ್ರೆಗಳು ಉಳಿದರೆ ಅದನ್ನು ಕಂಪನಿಗೆ ವಾಪಸ್‌ ಕಳುಹಿಸಬೇಕು. ಅದು ಬಿಟ್ಟು ಚೆಲ್ಲುವದಲ್ಲ. ಈ ಮಾತ್ರೆಗಳ ಕುರಿತು ವರದಿ ತರಿಸಿಕೊಂಡು ಆರೋಪಿಗಳ ಪತ್ತೆ ಮಾಡಲು ಡಿಎಚ್ಒ ಡಾ| ಜಿ.ಎನ್‌. ಅಶೋಕ ಕುಮಾರ ತಾಲೂಕು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಈ ನಡುವೆ ಗಟಾರದಲ್ಲಿ ಯಾರೋ ಬಿಸಾಕಿರುವ ಲಕ್ಷಾಂತರ ರೂ ಬೆಲೆಯ ಮಾತ್ತೆಯನ್ನು ಪತ್ತೆ ಮಾಡಿರುವ ಜೀವ ಜಲ ಕಾರ್ಯಪಡೆ ಅದ್ಯಕ್ಷ ಶ್ರೀನಿವಾಸ ಹೆಬ್ಟಾರ ಮತ್ತವರ ತಂಡಕ್ಕೆ ಸಾರ್ವಜನಿಕರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಶಿರಸಿ: ಶಿವಮೊಗ್ಗ ಜಿಲ್ಲೆ ಶರಾವತಿ ಅಭಯಾರಣ್ಯಕ್ಕೆ ತಾಲೂಕಿನ ಹೆಬ್ರೆ, ಹುಸೂರು, ಬುಗುಡಿ ಗ್ರಾಮಗಳ ಅರಣ್ಯವಾಸಿಗಳ ಪ್ರದೇಶವನ್ನು ಕೈಬಿಡುವಂತೆ ಆಗ್ರಹಿಸಿ ಜಿಲ್ಲಾ...

  • ಹಳಿಯಾಳ: ಅಪ್ರತೀಮ ವೀರ ಛತ್ರಪತಿ ಶಿವಾಜಿ ಮಹಾರಾಜರು ದೇಶದ ಭವಿಷ್ಯಕ್ಕಾಗಿ ಹೋರಾಡಿದ ಅಗ್ರಗಣ್ಯ ನಾಯಕರಾಗಿದ್ದು ಸರ್ವರನ್ನು ಒಂದೂಗೂಡಿಸಿಕೊಂಡು ಹೋಗುತ್ತಿದ್ದ...

  • ಕಾರವಾರ: ಪರಿಶಿಷ್ಟ ಜಾತಿಗಳ ಮೀಸಲಾತಿಯನ್ನು ಜನಸಂಖ್ಯೆ ಆಧರಿಸಿ ಶೇ.15 ರಿಂದ ಶೇ. 22.5ಗೆ ಹೆಚ್ಚಿಸಬೇಕು ಹಾಗೂ ಪರಿಶಿಷ್ಟ ವರ್ಗದ ಮೀಸಲಾತಿಯನ್ನು ಶೇ.3ರಿಂದ ಶೇ.7.5 ಕ್ಕೆ...

  • ಸಾಗರ: ಇಲ್ಲಿನ ಇತಿಹಾಸ ಪ್ರಸಿದ್ಧ ಹಾಗೂ ರಾಜ್ಯದಲ್ಲಿಯೇ ಎರಡನೇ ಅತಿದೊಡ್ಡ ಜಾತ್ರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ನಗರದ ಮಾರಿಕಾಂಬಾ ದೇವಿಯ ಜಾತ್ರೆಯು...

  • ಕುಮಟಾ: ಕಳೆದ ಎರಡು ದಿನಗಳಿಂದ ತಾಲೂಕಿನ ಹೊಳೆಗದ್ದೆ ಟೋಲ್‌ ಗೇಟ್‌ನಲ್ಲಿ ಸ್ಥಳೀಯ ವಾಹನಗಳಿಗೂ ಐಆರ್‌ಬಿ ಕಂಪೆನಿ ಶುಲ್ಕ ವಸೂಲಿ ಮಾಡುತ್ತಿರುವುದನ್ನು ವಿರೋಧಿಸಿ...

ಹೊಸ ಸೇರ್ಪಡೆ