ನಗರಸಭೆಯಿಂದ ಚರಂಡಿ ಸ್ವಚ್ಛತೆ ನಿರ್ಲಕ್ಷ್ಯ

Team Udayavani, May 31, 2019, 3:28 PM IST

ಶಿರಸಿ: ಅಧಿಕಾರಿಗಳ ಸಭೆಯಲ್ಲಿ ಶಾಸಕ ಕಾಗೇರಿ ಮಾತನಾಡಿದರು.

ಶಿರಸಿ: ನಗರದ ಗಟಾರ, ಚರಂಡಿಗಳನ್ನು ಇನ್ನೂ ನಗರಸಭೆ ಹೂಳೆತ್ತಿಲ್ಲ. ವಿನಾಕಾರಣ ನಗರಸಭೆ ನಿರ್ಲಕ್ಷ್ಯ ಮಾಡುತ್ತಿದೆ. ಮಳೆ ಬಂದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ನಗರಸಭೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ನಗರಸಭೆ ಅಧಿಕಾರಿಗಳ ಹಾಗೂ ಸದಸ್ಯರ ಸಭೆಯಲ್ಲಿ ಮಾತನಾಡಿದ ಅವರು, ನಗರದಲ್ಲಿ ಮಳೆಗಾಲ ಸಮೀಪ ಬಂದರೂ ಯಾವುದೇ ಪೂರ್ವ ತಯಾರಿ ನಡೆದಿಲ್ಲ ಎಂಬ ಅಸಮಾಧಾನ ಕೂಡ ವ್ಯಕ್ತವಾಯಿತು.

ನಗರದಲ್ಲಿ ಒಟ್ಟು 38 ಕಿ.ಮೀ. ಮುಖ್ಯ ಗಟಾರ ಇದೆ. ಇವುಗಳ ಹೂಳೆತ್ತಬೇಕಿತ್ತು. ಈವರೆಗೆ ಕೇವಲ 7 ಕಿಮೀ. ಮಾತ್ರ ಸ್ವಚ್ಛತಾ ಕಾರ್ಯ ನಡೆದಿದೆ. ಇಷ್ಟು ಮೀನಮೇಷ ಯಾಕೆ, ಆಮೆ ನಡಿಗೆ ಸರಿಯಲ್ಲ ಎಂದ ಕಾಗೇರಿ, ಲಯನ್ಸ್‌ ನಗರ, ಧುಂಡಶಿನಗರ, ಪ್ರಗತಿ ನಗರ, ಮುಸ್ಲಿಂ ಗಲ್ಲಿಗಳಲ್ಲಿ ಈಗಾಗಲೇ ಗಟಾರ ಕಟ್ಟಿ ಜನತೆ ಸಮಸ್ಯೆ ಎದುರಿಸುತ್ತಿದ್ದಾರೆ ಎಂದೂ ಹೇಳಿದರು.

ನಗರ ಪ್ರದೇಶದ ಅಂಬಾಗಿರಿ, ಗಾಂಧಿನಗರ, ವಿದ್ಯಾನಗರ, ಕಾಮತ್‌ ಕಾಲೋನಿ ಸೇರಿದಂತೆ 16 ಕಡೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ಮುಸ್ಲಿಂ ಗಲ್ಲಿಯ ಬಾವಿ ಕುಸಿಯತೊಡಗಿದೆ. ಬಾಪೂಜಿ ನಗರದ ಬಾವಿ ಕಲುಶಿತಗೊಂಡಿದೆ. 3 ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಲಾಗುತ್ತಿದ್ದು, ಇನ್ನೆರಡು ಟ್ಯಾಂಕರ್‌ ಸಿದ್ಧಪಡಿಸಿಕೊಳ್ಳಲಾಗಿದೆ. ಸರ್ಕಾರದ ನಿರ್ದೇಶನದಂತೆ ಖಾಸಗಿ ಬಾವಿಯಲ್ಲಿ ನೀರಿದ್ದರೂ ಸಹ ಅದನ್ನು ಪಡೆದು ಸಾರ್ವಜನಿಕರಿಗೆ ನೀಡಲಾಗುವುದು ಎಂದೂ ಹೇಳಿದರು.

ಕೆಂಗ್ರೆ, ಅಘನಾಶಿನಿ ನದಿಯಲ್ಲಿ ನಗರಕ್ಕೆ ನೀರು ಸಂಗ್ರಹಿಸುವ ಮಾರಿಗದ್ದೆಯಲ್ಲೂ ನೀರು ಖಾಲಿ ಆಗಿದೆ. ಹತ್ತಾರು ಸಂಘಟನೆಗಳು ಮಾನವೀಯತೆ ಮೇಲೆ ನಗರದ ಜನತೆಗೆ ನೀರನ್ನು ಪೂರೈಸುತ್ತಿವೆ. ಪ್ರತಿ ಕಾಲೋನಿಗಳ ನಿವಾಸಿಗಳು ತಮ್ಮ ಭಾಗದ ಕರೆ, ಬಾವಿಗಳ ಸ್ವಚ್ಛತೆ ಕಾರ್ಯದಲ್ಲಿ ತೊಡಗಿಕೊಳ್ಳಬೇಕು. ಕುಡಿಯುವ ನೀರಿನ ಸಮಸ್ಯೆಯನ್ನು ನಿರ್ಲಕ್ಷಿಸದೇ ಅಧಿಕಾರಿಗಳು ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸಬೇಕು ಎಂದೂ ಸೂಚಿಸಿದರು

ತಹಶೀಲ್ದಾರ್‌ ಎಂ.ಆರ್‌. ಕುಲಕರ್ಣಿ, ಪೌರಾಯುಕ್ತೆ ಅಶ್ವಿ‌ನಿ ಬಿ.ಎಂ., ಇಂಜಿನಿಯರ್‌ ಜಹಗೀರದಾರ ಇದ್ದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಶಿರಸಿ: ಶಿವಮೊಗ್ಗ ಜಿಲ್ಲೆ ಶರಾವತಿ ಅಭಯಾರಣ್ಯಕ್ಕೆ ತಾಲೂಕಿನ ಹೆಬ್ರೆ, ಹುಸೂರು, ಬುಗುಡಿ ಗ್ರಾಮಗಳ ಅರಣ್ಯವಾಸಿಗಳ ಪ್ರದೇಶವನ್ನು ಕೈಬಿಡುವಂತೆ ಆಗ್ರಹಿಸಿ ಜಿಲ್ಲಾ...

  • ಹಳಿಯಾಳ: ಅಪ್ರತೀಮ ವೀರ ಛತ್ರಪತಿ ಶಿವಾಜಿ ಮಹಾರಾಜರು ದೇಶದ ಭವಿಷ್ಯಕ್ಕಾಗಿ ಹೋರಾಡಿದ ಅಗ್ರಗಣ್ಯ ನಾಯಕರಾಗಿದ್ದು ಸರ್ವರನ್ನು ಒಂದೂಗೂಡಿಸಿಕೊಂಡು ಹೋಗುತ್ತಿದ್ದ...

  • ಕಾರವಾರ: ಪರಿಶಿಷ್ಟ ಜಾತಿಗಳ ಮೀಸಲಾತಿಯನ್ನು ಜನಸಂಖ್ಯೆ ಆಧರಿಸಿ ಶೇ.15 ರಿಂದ ಶೇ. 22.5ಗೆ ಹೆಚ್ಚಿಸಬೇಕು ಹಾಗೂ ಪರಿಶಿಷ್ಟ ವರ್ಗದ ಮೀಸಲಾತಿಯನ್ನು ಶೇ.3ರಿಂದ ಶೇ.7.5 ಕ್ಕೆ...

  • ಸಾಗರ: ಇಲ್ಲಿನ ಇತಿಹಾಸ ಪ್ರಸಿದ್ಧ ಹಾಗೂ ರಾಜ್ಯದಲ್ಲಿಯೇ ಎರಡನೇ ಅತಿದೊಡ್ಡ ಜಾತ್ರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ನಗರದ ಮಾರಿಕಾಂಬಾ ದೇವಿಯ ಜಾತ್ರೆಯು...

  • ಕುಮಟಾ: ಕಳೆದ ಎರಡು ದಿನಗಳಿಂದ ತಾಲೂಕಿನ ಹೊಳೆಗದ್ದೆ ಟೋಲ್‌ ಗೇಟ್‌ನಲ್ಲಿ ಸ್ಥಳೀಯ ವಾಹನಗಳಿಗೂ ಐಆರ್‌ಬಿ ಕಂಪೆನಿ ಶುಲ್ಕ ವಸೂಲಿ ಮಾಡುತ್ತಿರುವುದನ್ನು ವಿರೋಧಿಸಿ...

ಹೊಸ ಸೇರ್ಪಡೆ