ಕೋವಿಡ್ ನೆರವಿನಲ್ಲಿ ರಾಜಕೀಯ ಬೇಡ : ಆರ್.ವಿ. ದೇಶಪಾಂಡೆ
ಎಲ್ಲವನ್ನೂ ಸರ್ಕಾರದಿಂದ ಪೂರೈಸುವುದು ಸಾಧ್ಯವಿಲ್ಲ
Team Udayavani, May 30, 2021, 9:50 PM IST
ಹೊನ್ನಾವರ: ನಾವು ರಾಜಕಾರಣಿಗಳು, ನಮಗೆ ಅಗತ್ಯವಿದ್ದಾಗ ಜನರಲ್ಲಿ ಹೋಗುತ್ತೇವೆ. ಜನರಿಗೆ ಅಗತ್ಯವಿದ್ದಾಗ ನಾವು ಬರಬೇಕು. ಅದು ಮಾನವೀಯತೆ ಎಂಬ ದೃಷ್ಠಿಯಿಂದ ವಿಆರ್ ಡಿಎಂ ಟ್ರಸ್ಟ್ ಜಿಲ್ಲೆಯ ಕೋವಿಡ್ ಪೀಡಿತರಿಗಾಗಿ ಅಗತ್ಯವುಳ್ಳ ವಸ್ತುಗಳ ನೆರವು ನೀಡುತ್ತಿದೆ. ನಮಗೆ ರೋಗಿಗಳನ್ನು ತಲುಪುವುದು ಸಾಧ್ಯವಿಲ್ಲದ ಕಾರಣ ಆರೋಗ್ಯ ಇಲಾಖೆ ಮತ್ತು ತಾಲೂಕಾಡಳಿತಕ್ಕೆ ಹಸ್ತಾಂತರಿಸುತ್ತಿದ್ದೇವೆ ಎಂದು ಮಾಜಿ ಸಚಿವ ಆರ್.ವಿ. ದೇಶಪಾಂಡೆ ಹೇಳಿದರು.
ಅವರು ಮಿನಿ ವಿಧಾನಸೌಧದಲ್ಲಿ ಕಿಟ್ ವಿತರಿಸಿ ಮಾತನಾಡಿದರು. ಎಲ್ಲವನ್ನೂ ಸರ್ಕಾರದಿಂದ ಪೂರೈಸುವುದು ಸಾಧ್ಯವಿಲ್ಲ, ಆದ್ದರಿಂದ ಕೊರತೆಯಿರುವ ಸಾಮಗ್ರಿಗಳನ್ನು ಒದಗಿಸಿದ್ದೇವೆ ಎಂದು ಹೇಳಿದರು. ತಾಲೂಕಾಸ್ಪತ್ರೆಗೆ 1000 ಮೆಡಿಸಿನ್ ಕಿಟ್, ಎನ್-95 ಮಾಸ್ಕ್ ತಾಲೂಕಾಸ್ಪತ್ರೆಗೆ 240, ತಾಲೂಕಾಡಳಿತಕ್ಕೆ 340. ಆಕ್ಸಿಮೀಟರ್ ತಾಲೂಕಾಸ್ಪತ್ರೆಗೆ 100, ತಾಲೂಕಾಡಳಿತಕ್ಕೆ 100, ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ 45 ಸಾಮಗ್ರಿಗಳನ್ನು ತಹಶೀಲ್ದಾರ್ ವಿವೇಕ ಶೇಣಿÌ, ಟಿಎಚ್‌ಒ ಡಾ| ಉಷಾ ಹಾಸ್ಯಗಾರ, ತಾಲೂಕಾಸ್ಪತ್ರೆ ಆಡಳಿತ ವೈದ್ಯಾಧಿ ಕಾರಿ ಡಾ| ರಾಜೇಶ ಕಿಣಿ ಸ್ವೀಕರಿಸಿದರು.
ಈಗಾಗಲೇ ಟ್ರಸ್ಟ್‌ನಿಂದ ಪಿಪಿಇ ಕಿಟ್ ಗಳನ್ನು ವಿತರಿಸಲಾಗಿದೆ. ಜಿಲ್ಲೆಯ ಅಗತ್ಯಗಳನ್ನು ಮನಗಂಡು ನೆರವು ನೀಡುತ್ತಿದ್ದೇವೆ ಎಂದು ಪ್ರಶಾಂತ ದೇಶಪಾಂಡೆ ಹೇಳಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ ತೆಂಗೇರಿ ಸ್ವಾಗತಿಸಿದರು. ಮಾಜಿ ಶಾಸಕಿ ಶಾರದಾ ಶೆಟ್ಟಿ, ಮಾಜಿ ಶಾಸಕ ಮಂಕಾಳು ವೈದ್ಯ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ನಾಯ್ಕ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಶಿರಸಿ: ಭಾರಿ ಮಳೆಗೆ ಶಾಲಾ-ಕಾಲೇಜುಗಳಿಗೆ ರಜೆ; ಕೊನೇ ಕ್ಷಣದ ಆದೇಶಕ್ಕೆ ಆಕ್ರೋಶ
ಉತ್ತರ ಕನ್ನಡ ಭಾರೀ ಮಳೆ: ಶಾಲಾ ಕಾಲೇಜಿಗೆ ರಜೆ ಘೊಷಣೆ
ಅಂಕೋಲಾ: ನಿಯಂತ್ರಣ ತಪ್ಪಿ ವಿದ್ಯುತ್ ಟ್ರಾನ್ಸ್ ಫಾರ್ಮರ್ ಗೆ ಗುದ್ದಿದ ಕಾರು; ಓರ್ವ ಸಾವು
ಭಟ್ಕಳ: ಉದಯಪುರ ಕನ್ನಯ್ಯಲಾಲ್ ಹತ್ಯೆ ಖಂಡಿಸಿ ಹಿಂದೂಪರ ಸಂಘಟನೆಗಳಿಂದ ಪ್ರತಿಭಟನೆ
ಗೋಕರ್ಣದ ಕಡಲತೀರದಲ್ಲಿ ಪ್ರವಾಸಿಗರಿಗೆ ಸಿಕ್ಕ ದುರ್ಗಾದೇವಿ ಮೂರ್ತಿ