Udayavni Special

ಇಂದಿರಾ ಕ್ಯಾಂಟೀನ್‌ಗಿಲ್ಲ ಉದ್ಘಾಟನೆ ಭಾಗ್ಯ


Team Udayavani, Nov 23, 2020, 8:11 PM IST

ಇಂದಿರಾ ಕ್ಯಾಂಟೀನ್‌ಗಿಲ್ಲ ಉದ್ಘಾಟನೆ ಭಾಗ್ಯ

ಭಟ್ಕಳ: ಕಾಮಗಾರಿ ಆರಂಭವಾದ ಇಂದಿರಾ ಕ್ಯಾಂಟೀನ್‌ ಕಾಮಗಾರಿ ಕುಂಟುತ್ತಾ ಸಾಗಿ ನಂತರ ಕಳೆದ ಒಂದೂವರೆ ವರ್ಷಗಳ ಹಿಂದೆ ಪೂರ್ಣಗೊಂಡಿದ್ದರೂ ಕೂಡಾ ಇನ್ನೂ ತನಕ ಉದ್ಘಾಟನೆ ಭಾಗ್ಯ ಕಾರಣದಿರುವುದು ಬಡವರು, ಕೂಲಿ ಕಾರ್ಮಿಕರು ಸರಕಾರದ ಉತ್ತಮ ಸೌಲಭ್ಯದಿಂದ ವಂಚಿತರಾಗುವಂತೆ ಮಾಡಿದೆ.

ಇಲ್ಲಿನ ಮಧ್ಯವರ್ತಿ ಪ್ರದೇಶವಾದ ಆಸ್ಪತ್ರೆ ರಸ್ತೆಯಲ್ಲಿ ಇಂದಿರಾ ಕ್ಯಾಂಟೀನ್‌ ಕಟ್ಟಲು ಆರಂಭಿಸಲಾಯಿತು. ಸುಮಾರು ಎರಡು ವರ್ಷ ಕೇವಲ ಸಿವಿಲ್‌ ಕಾಮಗಾರಿ ಮುಗಿಸುವುದಕ್ಕೆ ಸಮಯ ತೆಗೆದುಕೊಂಡ ಗುತ್ತಿಗೆದಾರ ಕಂಪೆನಿ ಕೊನೆಗೂ ತಮ್ಮ ಕಾರ್ಯ ಮುಗಿಸಿತ್ತು. ಸಿವಿಲ್‌ ಕಾಮಗಾರಿ ಮುಗಿದ ನಂತರ ಸ್ಥಳೀಯ ಪುರಸಭೆಯವರು ಕ್ಯಾಂಟೀನ್‌ ಆರಂಭಿಸಲು ಅಗತ್ಯ ನೀರು ಸರಬರಾಜು, ಡ್ರೈನೇಜ್‌ ವ್ಯವಸ್ಥೆ, ತ್ಯಾಜ್ಯ ವಿಲೇವಾರಿಗೆ ವ್ಯವಸ್ಥೆ, ಅಡುಗೆ ಅನಿಲ ಇತ್ಯಾದಿ ವ್ಯವಸ್ಥೆ ಮಾಡಿಕೊಂಡು ಉದ್ಘಾಟಿಸಬೇಕಿತ್ತು. ಆದರೆ ಸಿವಿಲ್‌ ಕಾಮಗಾರಿ ಮಾಡಿದ ನಂತರ ಆದರ ಉದ್ಘಾಟನೆಗೆ ದಿನ ನಿಗದಿಯಾಗ ಬೇಕಿತ್ತಾದರೂ ಇನ್ನೂ ತನಕ ದಿನ ನಿಗದಿಯಾಗದೇ ಇರುವುದಕ್ಕೆ ಕಾರಣ ಮಾತ್ರ ನಿಗೂಢವಾಗಿದೆ.

ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರಕಾರ ಬಡವರಿಗಾಗಿ ಅತ್ಯಂತ ಕಡಿಮೆ ದರದಲ್ಲಿ ಊಟ, ಉಪಹಾರ ದೊರೆಯಲಿ ಎಂದು ಇಂದಿರಾ ಕ್ಯಾಂಟೀನ್‌ ಆರಂಭಿಸುವ ಯೋಜನೆ ಘೋಷಿಸಿತು. ಅದರಂತೆ ರಾಜ್ಯದಲ್ಲಿ ಒಟ್ಟೂ 249 ಇಂದಿರಾ ಕ್ಯಾಂಟೀನ್‌ ತೆರೆಯಲು ಯೋಜನೆ ರೂಪಿಸಿದ್ದರೂ ಕೂಡಾ ನಂತರದ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಸೋಲುಂಟಾಗಿ ಸಮ್ಮಿಶ್ರ ಸರಕಾರ ಬಂದಿರುವುದು ಇಂದಿರಾ ಕ್ಯಾಂಟೀನ್‌ ತೆರೆಯುವುದಕ್ಕೆ ತೊಡಕಾಯಿತು.

ಆದರೆ ಹಿಂದೆಯೇ ಮಂಜೂರಾಗಿದ್ದ ಇಂದಿರಾ ಕ್ಯಾಂಟೀನ್‌ ತೆರೆಯಲು ಭಟ್ಕಳ ನಗರದ ಮಧ್ಯವರ್ತಿ ಸ್ಥಳದಲ್ಲಿ ಜಾಗಾ ಗುರುತಿಸಿ ಸಿವಿಲ್‌ ಕಾಮಗಾರಿ ನಡೆಸುತ್ತಿರುವಾಗಲೇ ವರ್ಷಗಟ್ಟಲೆ ತಡ ಮಾಡಿದ ಸಿವಿಲ್‌ ಗುತ್ತಿಗೆದಾರರು ಕೊನೆಗೂ ಕೆಲಸ ಮುಗಿಸಿದ್ದರೂ ಸ್ಮಾರಕದಂತೆ ನಿಂತುಕೊಂಡಿದ್ದು ಯಾಕೆ ಎನ್ನುವುದು ಮಾತ್ರಉತ್ತರ ಸಿಗದ ಪ್ರಶ್ನೆಯಾಗಿದೆ. ಅತ್ಯಂತ ಸೂಕ್ತ ಪ್ರದೇಶದಲ್ಲಿ ನಿರ್ಮಾಣಗೊಂಡಿರುವ ಇಂದಿರಾ ಕ್ಯಾಂಟೀನ್‌ ಆರಂಭಗೊಂಡಿದ್ದರೆ ಕೋವಿಡ್‌ -19 ನಿಂದಾಗಿ ಆದಾಯವಿಲ್ಲದೇ, ದಿನದ ದುಡಿಮೆಯೂ ಇಲ್ಲದೇ ತೀವ್ರ ತೊಂದರೆಯಲ್ಲಿರುವ ಕೂಲಿ ಕಾರ್ಮಿಕರು,ಬಡ ವರ್ಗದವರು ಎಲ್ಲರಿಗೂ ಕಡಿಮೆ ದರದಲ್ಲಿ ಊಟ, ಉಪಹಾರ ಸಿಗಲು ಸಾಧ್ಯವಾಗುತ್ತಿತ್ತು.

ದಿನದಿಂದ ದಿನಕ್ಕೆ ಆಹಾರ ಸಾಮಗ್ರಿ ಸೇರಿದಂತೆ ತರಕಾರಿ ಮತ್ತಿತರ ಬೆಲೆಗಳು ಜಾಸ್ತಿಯಾಗಿರುವುದರಿಂದ ಹೊಟೆಲ್‌ ನಲ್ಲಿ ಉಪಹಾರ, ಊಟದ ದರವೂ ಅನಿವಾರ್ಯವಾಗಿ ಏರಿಕೆ ಕಂಡಿದೆ. ರಾಜ್ಯದಲ್ಲಿ ಹಲವು ಕಡೆ ಈ ಯೋಜನೆ ಯಶಸ್ವಿಯಾಗಿ ನಡೆಯುತ್ತಿದ್ದು, ವಿದ್ಯಾರ್ಥಿಗಳು,ಬಡವರಿಗೆ, ಕೂಲಿ ಕಾರ್ಮಿಕರಿಗೆ ಎಲ್ಲರಿಗೂ ಇಂದಿರಾ ಕ್ಯಾಂಟೀನ್‌ನಿಂದ ಬಹಳ ಅನುಕೂಲವಾಗಿದೆ.

ಇಲ್ಲಿನ ತಾಲೂಕು ಆಸ್ಪತ್ರೆಗೆ ಬರುವವರು,ವಾರದ ಸಂತೆಗೆ ಬರುವವರು, ಬಸ್‌ನಿಲ್ದಾಣ, ಸಹಾಯಕ ಆಯುಕ್ತರ ಕಚೇರಿ, ವಿವಿಧ ಸರಕಾರಿ ಕಚೇರಿಗಳು ಸೇರಿದಂತೆ ಎಲ್ಲರಿಗೂ ಅನುಕೂಲವಾಗಿದ್ದ ಇಂದಿರಾ ಕ್ಯಾಂಟೀನ್‌ ಶೀಘ್ರ ಆರಂಭವಾಗಲಿ ಎನ್ನುವುದು ಜನತೆಯ ಆಶಯವಾಗಿದೆ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಪತ್ರಿಕಾಗೋಷ್ಠಿ ವೇಳೆ ದಿಢೀರ್‌ ಮಧ್ಯಪ್ರವೇಶಿಸಿದ ಮಗ!: ಮಗನ ಶೂಲೇಸ್‌ ಕಟ್ಟಿದ ಸ್ಮಿತ್‌!

ಪತ್ರಿಕಾಗೋಷ್ಠಿ ವೇಳೆ ದಿಢೀರ್‌ ಮಧ್ಯಪ್ರವೇಶಿಸಿದ ಮಗ!: ಮಗನ ಶೂಲೇಸ್‌ ಕಟ್ಟಿದ ಸ್ಮಿತ್‌!

ತೊಗರಿ ರಾಶಿಗೆ ಬೆಂಕಿ ಹಚ್ಚಿ ಪಂಪ್ ಸೆಟ್ ವಿದ್ಯುತ್ ಸಂಪರ್ಕ ಕಡಿತ ಮಾಡಿದ ದುಷ್ಕರ್ಮಿಗಳು!

ತೊಗರಿ ರಾಶಿಗೆ ಬೆಂಕಿ ಹಚ್ಚಿ, ಪಂಪ್ ಸೆಟ್ ವಿದ್ಯುತ್ ಸಂಪರ್ಕ ಕಡಿತ ಮಾಡಿದ ದುಷ್ಕರ್ಮಿಗಳು!

sharan

ಶರಣ್‌ ಗುರು ಶಿಷ್ಯರು ಚಿತ್ರಕ್ಕೆ ಇಂದು ಮುಹೂರ್ತ

ಉದ್ಯಾವರ ಸೇತುವೆ ಬಳಿ ಪಲ್ಟಿಯಾದ ಟೆಂಪೋ

ಉದ್ಯಾವರ ಸೇತುವೆ ಬಳಿ ಪಲ್ಟಿಯಾದ ಟೆಂಪೋ

ಸುದೀಪ್‌ ನಿರ್ದೇಶನದ ಚಿತ್ರಕ್ಕೆ ಸ್ಕ್ರಿಪ್ಟ್ ರೆಡಿ

ಸುದೀಪ್‌ ನಿರ್ದೇಶನದ ಚಿತ್ರಕ್ಕೆ ಸ್ಕ್ರಿಪ್ಟ್ ರೆಡಿ

ಇಂದು ರಾಷ್ಟ್ರೀಯ ಪ್ರವಾಸೋದ್ಯಮ ದಿನ:ಪ್ರವಾಸಿಗರಿಗೆ ಪ್ರದರ್ಶಿಸಬೇಕಿದೆ ಸಾಂಸ್ಕೃತಿಕ ಸಂಪತ್ತು

ಇಂದು ರಾಷ್ಟ್ರೀಯ ಪ್ರವಾಸೋದ್ಯಮ ದಿನ:ಪ್ರವಾಸಿಗರಿಗೆ ಪ್ರದರ್ಶಿಸಬೇಕಿದೆ ಸಾಂಸ್ಕೃತಿಕ ಸಂಪತ್ತು

ಇಂದು ನಿಮ್ಮ ಗ್ರಹಬಲ: ಈ ರಾಶಿಯವರಿಗಿಂದು ಶತ್ರುಪೀಡೆಯಿಂದಾಗಿ ಪದೇ ಪದೇ ಕಾರ್ಯ ಹಾನಿಯಾದೀತು!

ಇಂದು ನಿಮ್ಮ ಗ್ರಹಬಲ: ಈ ರಾಶಿಯವರಿಗಿಂದು ಶತ್ರುಪೀಡೆಯಿಂದಾಗಿ ಪದೇ ಪದೇ ಕಾರ್ಯ ಹಾನಿಯಾದೀತು!ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬಜೆಟ್ ನಿರೀಕ್ಷೆಗಳು :  ಶಿರಸಿ ಪ್ರತ್ಯೇಕ ಜಿಲ್ಲೆಯಾಗಲಿದೆಯೇ?

ಬಜೆಟ್ ನಿರೀಕ್ಷೆಗಳು : ಶಿರಸಿ ಪ್ರತ್ಯೇಕ ಜಿಲ್ಲೆಯಾಗಲಿದೆಯೇ?

Clean up at Sadashivagada by Rotary Club

ರೋಟರಿ ಕ್ಲಬ್‌ನಿಂದ ಸದಾಶಿವಗಡದಲ್ಲಿ ಸ್ವಚ್ಛತೆ

Create a fear-free environment for children

ಮಕ್ಕಳಿಗೆ ಭಯ ರಹಿತ ವಾತಾವರಣ ಸೃಷ್ಟಿಸಿ

Consultation to run an all-day school from February

ಫೆಬ್ರವರಿಯಿಂದ ಇಡೀ ದಿನ ಶಾಲೆ ನಡೆಸಲು ಸಮಾಲೋಚನೆ

New look for CRC building

ಸಿಆರ್‌ಸಿ ಕಟ್ಟಡಕ್ಕೆ ಹೊಸ ರೂಪ

MUST WATCH

udayavani youtube

ಸಮುದ್ರದಲ್ಲಿ ಪದ್ಮಾಸನ ಭಂಗಿ: ಕಾಲಿಗೆ ಸರಪಳಿ ಬಿಗಿದು ಈಜಿ ದಾಖಲೆ ಬರೆದ ಗಂಗಾಧರ್ ಜಿ.

udayavani youtube

ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ ಚಾಲಕನ ಅವಾಂತರ: ನೂರಾರು ಮಂದಿಯ ಪ್ರಾಣ ಉಳಿಸಿದ ಕಾಪು ಎಸ್ಐ

udayavani youtube

ಅಹಿತಕರ ಬೆಳವಣಿಗೆಗಳು ಕಂಡುಬಂದರೆ ವಾಟ್ಸಾಪ್ ಮೂಲಕ ಮಾಹಿತಿ ಹಂಚಿಕೊಳ್ಳಿ; Compol ಶಶಿಕುಮಾರ್

udayavani youtube

ತಲೆಕೂದಲು, ಮೀಸೆ ಬೋಳಿಸುವಂತೆ ರಾಗಿಂಗ್: ಮಂಗಳೂರಿನಲ್ಲಿ 9 ವಿದ್ಯಾರ್ಥಿಗಳ ಬಂಧನ

udayavani youtube

ನೇತಾಜಿಯವರ ಜನ್ಮ ದಿನದಂದು ಅವರ ಆಪ್ತರ ಪುತ್ರಿಯಾದ ಜೊತೆ ಉಡುಪಿಯಲ್ಲಿ ಮಾತುಕತೆ,

ಹೊಸ ಸೇರ್ಪಡೆ

ಪತ್ರಿಕಾಗೋಷ್ಠಿ ವೇಳೆ ದಿಢೀರ್‌ ಮಧ್ಯಪ್ರವೇಶಿಸಿದ ಮಗ!: ಮಗನ ಶೂಲೇಸ್‌ ಕಟ್ಟಿದ ಸ್ಮಿತ್‌!

ಪತ್ರಿಕಾಗೋಷ್ಠಿ ವೇಳೆ ದಿಢೀರ್‌ ಮಧ್ಯಪ್ರವೇಶಿಸಿದ ಮಗ!: ಮಗನ ಶೂಲೇಸ್‌ ಕಟ್ಟಿದ ಸ್ಮಿತ್‌!

ತೊಗರಿ ರಾಶಿಗೆ ಬೆಂಕಿ ಹಚ್ಚಿ ಪಂಪ್ ಸೆಟ್ ವಿದ್ಯುತ್ ಸಂಪರ್ಕ ಕಡಿತ ಮಾಡಿದ ದುಷ್ಕರ್ಮಿಗಳು!

ತೊಗರಿ ರಾಶಿಗೆ ಬೆಂಕಿ ಹಚ್ಚಿ, ಪಂಪ್ ಸೆಟ್ ವಿದ್ಯುತ್ ಸಂಪರ್ಕ ಕಡಿತ ಮಾಡಿದ ದುಷ್ಕರ್ಮಿಗಳು!

sharan

ಶರಣ್‌ ಗುರು ಶಿಷ್ಯರು ಚಿತ್ರಕ್ಕೆ ಇಂದು ಮುಹೂರ್ತ

ಉದ್ಯಾವರ ಸೇತುವೆ ಬಳಿ ಪಲ್ಟಿಯಾದ ಟೆಂಪೋ

ಉದ್ಯಾವರ ಸೇತುವೆ ಬಳಿ ಪಲ್ಟಿಯಾದ ಟೆಂಪೋ

ಸುದೀಪ್‌ ನಿರ್ದೇಶನದ ಚಿತ್ರಕ್ಕೆ ಸ್ಕ್ರಿಪ್ಟ್ ರೆಡಿ

ಸುದೀಪ್‌ ನಿರ್ದೇಶನದ ಚಿತ್ರಕ್ಕೆ ಸ್ಕ್ರಿಪ್ಟ್ ರೆಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.