ಅಪಾಯದಲ್ಲಿದೆ ಹಳೇ ಬಸ್‌ ನಿಲ್ದಾಣ!

Team Udayavani, Nov 9, 2019, 3:31 PM IST

ಶಿರಸಿ: ಐದಾರು ವರ್ಷಗಳಿಂದ ಶಿಥಿಲಾವಸ್ಥೆಯಲ್ಲಿರುವ ಹಳೆ ಬಸ್‌ ನಿಲ್ದಾಣ ಅಪಾಯದ ಕರೆಗಂಟೆ ಬಾರಿಸುತ್ತಿದೆ. ಆದರೆ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಕಳೆದ ನಾಲ್ಕು ವರ್ಷದ ಹಿಂದೆಯೇ ಕೆಡವಲು ಟೆಂಡರ್‌ ರೆದರೂ ಯಾರೂ ಬಂದಿಲ್ಲ!

2016-17ರಲ್ಲಿ ನಾಲ್ಕು ಸಲ ವಾಯುವ್ಯ ಸಾರಿಗೆ ಸುಮಾರು 5 ಗುಂಟೆ ಜಾಗದ ಎರಡು ಮಹಡಿ ಕಟ್ಟಡ ಕೆಡವಲು ಟೆಂಡರ್‌ ಕರೆದಿತ್ತು. ಬರೋಬ್ಬರಿ ನಾಲ್ಕು ಸಲ ಟೆಂಡರ್‌ ಕರೆದರೂ ಯಾರೂ ಹಾಕಿಲ್ಲ. ಏಕೆಂದರೆ, ಇದ್ದದ್ದು ಕೇವಲ 2,80,577 ರೂ. ಟೆಂಡರ್‌ ಮೊತ್ತ. ನಗರದ ಹೊರಗೆ ಸಿಮೆಂಟ್‌ ಇಟ್ಟಿಗೆ ಸಾಗಾಟಕ್ಕೂ ಸಮಸ್ಯೆ, ಹಣದ ಕೊರತೆ ಕೂಡ ಆಗುತ್ತಿದೆ. ಈ ಕಾರಣದಿಂದ ಟೆಂಡರ್‌ ಕರೆದರೂ ಯಾವ ಗುತ್ತಿಗೆದಾರರೂ ಕಣ್ಣೆತ್ತಿ ನೋಡುತ್ತಿಲ್ಲ. ಹಳೆ ಬಸ್‌ ನಿಲ್ದಾಣ ನಿಜಕ್ಕೂ ಮತ್ತಷ್ಟು ಹಳೆಯದಾಗುತ್ತಿದೆ.

ನಗರ ಹೃದಯ ಭಾಗದಲ್ಲಿರುವ ಹಳೆ ಬಸ್‌ ನಿಲ್ದಾಣ ಐದಾರು ದಶಕಗಳ ಹಿಂದೆ ನಿರ್ಮಾಣವಾದ ಕಟ್ಟಡ. ಅದು ತೀರಾ ಶಿಥಿಲಾವಸ್ಥೆ ತಲುಪಿದ್ದು ಮಳೆಗಾಲದಲ್ಲಿ ಸೋರುವುದು, ಕಟ್ಟಡದ ಸ್ಲಾಬ್‌ ಸಿಮೆಂಟ್‌ ಉದುರುವುದು ಕಳೆದ ಐದಾರು ವರ್ಷಗಳ ಹಿಂದೆಯೇ ಆರಂಭವಾಗಿದೆ. ಅದನ್ನು ಎಷ್ಟೇ ದುರಸ್ತಿ ಮಾಡಿದರೂ ಪ್ರಯೋಜನವಾಗಿಲ್ಲ. ನಗರ ಹೊರ ಭಾಗದಲ್ಲಿ ಹೊಸ ಬಸ್‌ ನಿಲ್ದಾಣವಿದ್ದರೂ ಮಧ್ಯದಲ್ಲಿರುವ ಹಳೆ ಬಸ್‌ ನಿಲ್ದಾಣವನ್ನೇ ಬಹುತೇಕ ಪ್ರಯಾಣಿಕರು ನಂಬಿದ್ದಾರೆ. ಇಲ್ಲಿಗೆ ನಿತ್ಯ ನೂರಾರು ಬಸ್‌ಗಳು ಬಂದು ಹೋಗುತ್ತವೆ. ದೂರ, ಗ್ರಾಮೀಣ ಸಾರಿಗೆಗಳ ಕೇಂದ್ರವಿದು. ಸಾವಿರಾರು ಪ್ರಯಾಣಿಕರ ಕೇಂದ್ರ. ಹೊಸ ಕಟ್ಟಡ ಕಟ್ಟಬೇಕು ಎಂಬುದು ಜನರ ಒತ್ತಾಯ. ಆದರೆ, ಆರಂಭದಲ್ಲೇ ದಂತ ವಿಘ್ನವಾಗಿದೆ.

ಹೊಸ ಯತ್ನ: ಈಗ ಸುಮಾರು 5 ಕೋ.ರೂ. ಮೊತ್ತದಲ್ಲಿ ನೂತನವಾಗಿ ಬಸ್‌ ನಿಲ್ದಾಣ ಕಟ್ಟಲು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ವಿಸ್ತೃತ ವರದಿ ಕಳಿಸಲು ಸೂಚಿಸಲಾಗಿದೆ. ಭೂ ಸಾರಿಗೆ ನಿರ್ದೇಶನಾಲಯವು ಈ ಬಗ್ಗೆ ಅನುಮತಿ ನೀಡಿದ ಪರಿಣಾಮ ಬೆಂಗಳೂರಿನ ಶ್ರೇಯಸ್‌ ಕನ್ಸಲ್ಟನ್ಸಿಗೆ ಡಿಟೇಲ್‌ ಪ್ರಾಜೆಕ್ಟ್ಗೆ ಮನವಿ ಮಾಡಲಾಗಿದೆ. ಅದರ ಕೆಲಸ ಆರಂಭವಾಗಿದೆ. ಹಳೆ ಕಟ್ಟಡ ಕೆಡವಲು ಹಾಗೂ ಹೊಸ ಕಟ್ಟಡ ಕಟ್ಟಲು ಎರಡೂ ಸೇರಿಸಿ ಟೆಂಡರ್‌ ಕೊಡಬೇಕು ಎಂದು ಸಾರಿಗೆ ಸಂಸ್ಥೆ ಆಲೋಚಿಸಿದೆ. ಈ ಕಾರಣದಿಂದ 2020ರ ಮಧ್ಯಾವಧಿಯೊಳಗೆ ಕಟ್ಟಡ ಕಾಮಗಾರಿ ಆರಂಭಿಸುವ ಸಾಧ್ಯತೆ ಇದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಭಟ್ಕಳ: ಕಳೆದ ಮೂರು ದಿನಗಳಿಂದ ಶಿರಾಲಿ ಗ್ರಾಪಂನ್ನೇ ಮೀನು ಮಾರುಕಟ್ಟೆಯನ್ನಾಗಿ ಮಾಡಿಕೊಂಡ ಮೀನುಗಾರರ ಬೇಡಿಕೆಗೆ ಸ್ಪಂದಿಸುವಲ್ಲಿ ಗ್ರಾಪಂ ವಿಫಲವಾಗಿದ್ದು...

  • ಮುಂಡಗೋಡ: ಅಪಾರ ಪ್ರಮಾಣದ ನೀರು ಹರಿದು ಬಂದು ಕೊಚ್ಚಿಕೊಂಡು ಹೋಗಿದ್ದ ತಾಲೂಕಿನ ಶಿಡ್ಲಗುಂಡಿ ಸೇತುವೆ ಕಾಮಗಾರಿ ಕಳೆದ ಎರಡು ದಿನಗಳಿಂದ ಆರಂಭವಾಗಿರುವುದು ಸಾರ್ವಜನಿಕರಿಗೆ...

  • ಶಿರಸಿ: ನಾಡಿನ ಹೆಸರಾಂತ ಮಾರಿಕಾಂಬಾ ದೇವಸ್ಥಾನಕ್ಕೂ ಅನ ಧಿಕೃತ ಫೇಸ್‌ಬುಕ್‌, ವಾಟ್ಸಆ್ಯಪ್‌, ಟ್ವಿಟ್ಟರ್‌ಗಳ ಕಾಟದಿಂದ ಅನಧಿಕೃತ ಮಾಹಿತಿಗಳು ರವಾನೆಯಾಗಿ ಅನೇಕ...

  • ಹೊನ್ನಾವರ: ಜನಜೀವನಕ್ಕೆ ಉತ್ತಮ ಸಂಸ್ಕಾರ ಯಕ್ಷಗಾನ ಕಲೆಯಿಂದ ಸಿಗುತ್ತಿದೆ. ನಾಡಿನಲ್ಲಿ ಯಕ್ಷಗಾನ ಉಳಿಯಬೇಕು. ಇದಕ್ಕೆ ಸರಕಾರ ಮತ್ತು ಸಮಾಜ ಪ್ರೋತ್ಸಾಹ ನೀಡುವ...

  • ಕುಮಟಾ: ತಾಲೂಕಿನ ದಿವಗಿ ಗ್ರಾಮದಿಂದ ಕುಮಟಾ ಪಟ್ಟಣದವರೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ನಾಲ್ಕೈದು ಕಡೆಗಳಲ್ಲಿ ಬಸ್‌ ನಿಲುಗಡೆಯ ಸ್ಥಳಗಳಿದ್ದು, ಎಲ್ಲಿಯೂ ಪ್ರಯಾಣಿಕರ...

ಹೊಸ ಸೇರ್ಪಡೆ

  • ಬೆಂಗಳೂರು: ರಾಜ್ಯ ಸರಕಾರ ತನ್ನ ಸ್ವಂತ ತೆರಿಗೆ ಮೂಲದಿಂದ ನಿಗದಿತ ಆದಾಯ ಸಂಗ್ರಹ ಗುರಿ ತಲುಪುವಲ್ಲಿ ಬಹುತೇಕ ಯಶಸ್ಸು ಕಾಣುವಂತಿದೆ. ಆದರೆ ನೆರೆ ಪರಿಹಾರ ಮತ್ತು...

  • ಇ ತ್ತೀಚೆಗೆ ನವನವೀನ ಮಾದರಿಯ ಸ್ಮಾರ್ಟ್‌ ಫಿಟೆ°ಸ್‌ ಬ್ಯಾಂಡ್‌ ಹಾಗೂ ಸ್ಮಾರ್ಟ್‌ವಾಚ್‌ಗಳು ಬಿಡುಗಡೆಯಾಗುತ್ತಿವೆ. ಇವುಗಳು ಇಂದು ನಮ್ಮ ಕೆಲಸವನ್ನು ಸುಲಭ ಮಾಡುತ್ತಿವೆ....

  • ಇಂದು ಆಕರ್ಷಕ ಬೈಕ್‌ಗಳು ಹೆಚ್ಚು ಜನ ಮೆಚ್ಚುಗೆ ಪಡೆದುಕೊಳ್ಳುತ್ತಿವೆ. ಇಲ್ಲಿ ರಸ್ತೆಗಿಳಿಯಲು ಸಿದ್ಧವಾಗಿರುವ ಬೈಕ್‌ ಒಂದನ್ನು ಪರಿಚಯಿಸಲಾಗಿದೆ. ಬಜಾಜ್‌...

  • ಉಡುಪಿ ಜಿಲ್ಲೆಯ ಕೋಟದ ಹೆದ್ದಾರಿ ಸನಿಹದಲ್ಲಿ, ಮಸೀದಿಯ ಹಿಂದೆ ಇರುವ ಆ ಮನೆಯ ಅಂಗಳದಲ್ಲಿ ಹತ್ತಾರು ಜನ ಕಾದಿದ್ದರು. ಎಲ್ಲರ ಮುಖದಲ್ಲಿಯೂ "ಮಿನಿಸ್ಟರ್‌ ಎಷ್ಟು...

  • ದೆಹಲಿಯಲ್ಲಿ ಗುರು ಶ್ರದ್ಧಾನಂದರೊಂದಿಗೆ ಇದ್ದ ಸಮಯ. ಡಯರ್‌ನ ಸಿಡಿಗುಂಡುಗಳು ನೂರಿನ್ನೂರಲ್ಲ, ಸಾವಿರಕ್ಕೂ ಹೆಚ್ಚು ಮಂದಿಯನ್ನು ಕೇವಲ ಹದಿನೈದು ನಿಮಿಷದಲ್ಲಿ...