ರಿಸೈಕ್ಲರ್‌ ಯಂತ್ರ ಅಳವಡಿಕೆ

•ಗ್ರಾಹಕರ ಸೇವೆಯಲ್ಲಿ ಇನ್ನೊಂದು ಮೈಲಿಗಲ್ಲು: ಅಬ್ದುಲ್ ಚೌಗುಲೆ

Team Udayavani, Aug 10, 2019, 10:56 AM IST

ಭಟ್ಕಳ: ಭಟ್ಕಳ ಅರ್ಬನ್‌ ಬ್ಯಾಂಕಿನ ಮುಖ್ಯ ಶಾಖೆ ಆವಾರದಲ್ಲಿ ರಿಸೈಕ್ಲರ್‌ ಯಂತ್ರವನ್ನು ಅಧ್ಯಕ್ಷ ಆಬ್ದುಲ್ ಮಾಜೀದ್‌ ಚೌಗುಲೆ ಉದ್ಘಾಟಿಸಿದರು.

ಭಟ್ಕಳ: ಭಟ್ಕಳ ಅರ್ಬನ್‌ ಬ್ಯಾಂಕು ಹಣ ಜಮಾ ಮಾಡುವ ಹಾಗೂ ಹಿಂಪಡೆಯುವ (ರಿಸೈಕ್ಲರ್‌)ಯಂತ್ರ ಅಳವಡಿಕೆ ಮೂಲಕ ಇನ್ನೊಂದು ಮೈಲಿಗಲ್ಲನ್ನು ದಾಟಿದೆ ಎಂದು ಬ್ಯಾಂಕಿನ ಅಧ್ಯಕ್ಷ ಅಬ್ದುಲ್ ಮಾಜೀದ್‌ ಚೌಗುಲೆ ಹೇಳಿದರು.

ಅವರು ಬ್ಯಾಂಕಿನ ಮುಖ್ಯ ಶಾಖೆ ಆವಾರದಲ್ಲಿ ಅಳವಡಿಸಲಾದ ರಿಸೈಕ್ಲರ್‌ (ಹಣ ಜಮಾ ಮಾಡುವ ಹಾಗೂ ಪಡೆಯುವ) ಯಂತ್ರವನ್ನು ಉದ್ಘಾಟಿಸಿ ಮಾತನಾಡಿದರು.

ಹೊಸ ಹೊಸ ಬ್ಯಾಂಕಿಂಗ್‌ ತಂತ್ರಜ್ಞಾನ ಅಳವಡಿಸಿ ಗ್ರಾಹಕ ಸೇವೆ ನೀಡುವಲ್ಲಿ ಮಂಚೂಣಿಯಲ್ಲಿರುವ ನಮ್ಮ ಬ್ಯಾಂಕು ಗ್ರಾಹಕರ ಕುಂದು ಕೊರತೆಗಳಿಗೆ ಸದಾ ಸ್ಪಂದಿಸುತ್ತಿದೆ. ಬ್ಯಾಂಕಿನ ಮುಖ್ಯ ಶಾಖೆಯಲ್ಲಿ ಅಳವಡಿಸಿರುವ ರಿಸೈಕ್ಲರ್‌ ಯಂತ್ರದ ಮೂಲಕ ಗ್ರಾಹಕರು ತಮ್ಮ ಖಾತೆಗೆ ಹಣ ಜಮಾ ಮಾಡಲು ಹಾಗೂ ತೆಗೆಯಲು ಅವಕಾಶವಿದ್ದು ಇನ್ಮುಂದೆ ಬ್ಯಾಂಕಿನ ನಗದು ಕೌಂಟರ್‌ನಲ್ಲಿ ಕಾಯುವ ಸಮಯ ಉಳಿತಾಯವಾಗಲಿದೆ ಎಂದರು. ರಿಸೈಕ್ಲರ್‌ ಯಂತ್ರದ ಮೂಲಕ ಅತೀ ಶೀಘ್ರ ಹಾಗೂ ಸುಲಭವಾಗಿ ಹಣ ಜಮಾ ಮಾಡಬಹುದಲ್ಲದೇ ದಿನದ 24 ಗಂಟೆಯೂ ಈ ಸೇವೆ ಲಭ್ಯವಿರುವುದರಿಂದ ಯಾವುದೇ ಸಮಯದಲ್ಲಿ ಖಾತೆಗೆ ಹಣ ಜಮಾ ಮಾಡಲು ಸಾಧ್ಯವಾಗುವುದು ಎಂದೂ ಹೇಳಿದರು.

ಈ ಹಿಂದೆಯೇ ಜನತೆಗೆ ಎಟಿಎಂ ಸೌಲಭ್ಯವನ್ನು ಒದಗಿಸುವ ಮೂಲಕ ಉತ್ತಮ ಸೇವೆಗೆ ಹೆಸರಾಗಿದ್ದ ಬ್ಯಾಂಕ್‌ ರಿಸೈಕ್ಲರ್‌ ಯಂತ್ರ ಸ್ಥಾಪಿಸುವ ಮೂಲಕ ಸೇವೆ ನೀಡುವಲ್ಲಿ ಇನ್ನೊಂದು ಹೆಜ್ಜೆ ಮುಂದೆ ಇಟ್ಟಂತಾಗಿದೆ. ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದೂ ಅವರು ಕರೆ ನೀಡಿದರು.

ಬ್ಯಾಂಕಿನ ಉಪಾಧ್ಯಕ್ಷ ಶೇಖ್‌ ಶಬ್ಬೀರ್‌ ಖಾದಿರ ಬಾಷಾ, ನಿರ್ದೇಶಕರಾದ ಅಬ್ದುಲ ಖಾಲಿಕ್‌ ಸೌದಾಗರ್‌, ಮಾಸ್ತಿ ಎಸ್‌. ಮೊಗೇರ, ಶ್ರೀಧರ ನಾಯ್ಕ, ಜುಬೇರ್‌ ಕೋಲಾ, ಇಮ್ತಿಯಾಜ್‌ ಜುಬಾಪು, ಜಾಫರ್‌ ಸಾಧಿಕ್‌ ಶಾಬಂದ್ರಿ, ಪರಿ ಹುಸೇನ್‌ ಹಾಗೂ ಬ್ಯಾಂಕಿನ ಪ್ರಧಾನ ಕಾರ್ಯ ನಿರ್ವಾಹಕ ಸುಭಾಷ ಎಂ. ಶೆಟ್ಟಿ, ಸಹಾಯಕ ಪ್ರಧಾನ ಕಾರ್ಯನಿರ್ವಾಹಕ ಶಂಭು ಹೆಗಡೆ, ಮುಖ್ಯ ಶಾಖೆ ವ್ಯವಸ್ಥಾಪಕ ಗಣಪತಿ ಪ್ರಭು ಉಪಸ್ಥಿತರಿದ್ದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಹೊನ್ನಾವರ: ಮ್ಯಾಗ್ಸೆಸ್ಸೆ ಪ್ರಶಸ್ತಿ ಪುರಸ್ಕೃತ ಹರೀಶ ಹಂದೆಯವರ ಸೆಲ್ಕೋ ಸೋಲಾರ್‌ ಸಂಸ್ಥೆ ಸೌರಶಕ್ತಿಯನ್ನು ಬಹುಪಯೋಗಿಯಾಗಿ ಗ್ರಾಮೀಣ ಭಾಗದ ಜನತೆಗೆ ಜೀವನಾಧಾರವಾಗಿ...

  • ಭಟ್ಕಳ: ಕಳೆದ ಮೂರು ದಿನಗಳಿಂದ ಶಿರಾಲಿ ಗ್ರಾಪಂನ್ನೇ ಮೀನು ಮಾರುಕಟ್ಟೆಯನ್ನಾಗಿ ಮಾಡಿಕೊಂಡ ಮೀನುಗಾರರ ಬೇಡಿಕೆಗೆ ಸ್ಪಂದಿಸುವಲ್ಲಿ ಗ್ರಾಪಂ ವಿಫಲವಾಗಿದ್ದು...

  • ಮುಂಡಗೋಡ: ಅಪಾರ ಪ್ರಮಾಣದ ನೀರು ಹರಿದು ಬಂದು ಕೊಚ್ಚಿಕೊಂಡು ಹೋಗಿದ್ದ ತಾಲೂಕಿನ ಶಿಡ್ಲಗುಂಡಿ ಸೇತುವೆ ಕಾಮಗಾರಿ ಕಳೆದ ಎರಡು ದಿನಗಳಿಂದ ಆರಂಭವಾಗಿರುವುದು ಸಾರ್ವಜನಿಕರಿಗೆ...

  • ಶಿರಸಿ: ನಾಡಿನ ಹೆಸರಾಂತ ಮಾರಿಕಾಂಬಾ ದೇವಸ್ಥಾನಕ್ಕೂ ಅನ ಧಿಕೃತ ಫೇಸ್‌ಬುಕ್‌, ವಾಟ್ಸಆ್ಯಪ್‌, ಟ್ವಿಟ್ಟರ್‌ಗಳ ಕಾಟದಿಂದ ಅನಧಿಕೃತ ಮಾಹಿತಿಗಳು ರವಾನೆಯಾಗಿ ಅನೇಕ...

  • ಹೊನ್ನಾವರ: ಜನಜೀವನಕ್ಕೆ ಉತ್ತಮ ಸಂಸ್ಕಾರ ಯಕ್ಷಗಾನ ಕಲೆಯಿಂದ ಸಿಗುತ್ತಿದೆ. ನಾಡಿನಲ್ಲಿ ಯಕ್ಷಗಾನ ಉಳಿಯಬೇಕು. ಇದಕ್ಕೆ ಸರಕಾರ ಮತ್ತು ಸಮಾಜ ಪ್ರೋತ್ಸಾಹ ನೀಡುವ...

ಹೊಸ ಸೇರ್ಪಡೆ