Udayavni Special

ಲಸಿಕೆ ಹಾಕುವ ಸ್ಥಳ ಬದಲಾವಣೆಗೆ ಆಗ್ರಹ

ಸರಕಾರಿ ಆಸ್ಪತ್ರೆ ಮುಂಭಾಗದಲ್ಲಿ ಹೆಚ್ಚಿದ ದಟ್ಟನೆ­ನಿರೋಗಿಗಳಿಗೂ ಸೋಂಕು ತಗುಲುವ ಆತಂಕ

Team Udayavani, Apr 30, 2021, 8:00 PM IST

hfuyt

ಶಿರಸಿ: ಇಲ್ಲಿನ ಸರಕಾರಿ ಪಂಡಿತ್‌ ಸಾರ್ವಜನಿಕ ಆಸ್ಪತ್ರೆಯಲ್ಲಿ ಕೋವಿಡ್‌ ತಪಾಸಣೆ ಹಾಗೂ ಇನ್ನೊಂದು ಪಾರ್ಶ್ವದಲ್ಲಿ ಕೋವಿಡ್‌ ಲಸಿಕೆ ಹಾಕಿಸಿಕೊಳ್ಳುವವರ ಕ್ಯೂ ಇದ್ದು, ಇದರಿಂದ ನಿರೋಗಿಗಳಿಗೂ ಸೋಂಕು ತಗುಲುವ ಆತಂಕ ನಿರ್ಮಾಣ ಆಗಿದೆ.

ಈ ಮೊದಲು ಕೋವಿಡ್‌ ತಾಪಸಣೆ ಮಾಡಿಸಿಕೊಳ್ಳುವವರ ಹಾಗೂ ಲಸಿಕೆ ಹಾಕಿಸಿಕೊಳ್ಳುವವರ ಸಂಖ್ಯೆ ಕೂಡ ಕಡಿಮೆ ಇತ್ತು. ಆದರೆ, ಈಗ ಸೋಂಕು ದ್ವಿಗುಣ ಆಗುತ್ತಿರುವುದರಿಂದ ತಪಾಸಣೆ ಹಾಗೂ ಲಸಿಕೆ ಹಾಕಿಸಿಕೊಳ್ಳುವರರ ಸಂಖ್ಯೆ ಅಧಿ ಕವಾಗುತ್ತಿದೆ. ಮೇ 1ರಿಂದ 18 ವರ್ಷ ಮೇಲ್ಪಟ್ಟವರಿಗೂ ಕೋವಿಡ್‌ ಲಸಿಕೆ ಹಾಕಲಾಗುತ್ತದೆ. ಎರಡನೇ ಅವಧಿಗೂ ಲಸಿಕೆ ಹಾಕಿಸಿಕೊಳ್ಳಲು ಬರುವವರೂ ಇದ್ದಾರೆ. ಇದರಿಂದ ಆಸ್ಪತ್ರೆ ಮುಂಭಾಗದಲ್ಲಿ ಸಹಜ ಒತ್ತಡ ನಿರ್ಮಾಣ ಆಗುತ್ತಿದೆ. ಸಹಜ ಒತ್ತಡದ ಕಾರಣದಿಂದ, ವಯಸ್ಸಾದವರೂ ಇಲ್ಲಿಗೆ ಅಧಿಕ ಸಂಖ್ಯೆಯಲ್ಲಿ ಬರುವುದರಿಂದ, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದೂ ಕಠಿಣವಾಗುತ್ತಿದೆ. ಹಾಗಾಗಿ ಕೋವಿಡ್‌ ಸೋಂಕು ಹೆಚ್ಚೋ ಭೀತಿ ಉಂಟಾಗಿದೆ.

ಗುರುವಾರ ಕೂಡ ಸಾಕಷ್ಟು ಜನ ಸರತಿಯಲ್ಲಿ ನಿಂತು ಲಸಿಕೆ ಹಾಕಿಸಿಕೊಳ್ಳಲು ಬಂದಿದ್ದು ಸಾಮಾಜಿಕ ಅಂತರ ಪಾಲನೆ ಆಗುತ್ತಿಲ್ಲ ಎಂಬ ಆಪಾದನೆ ಕೇಳಿ ಬಂದಿದೆ. ಈ ಮಧ್ಯೆ ಸರಕಾರಿ ಪಂಡಿತ್‌ ಸಾರ್ವಜನಿಕ ಆಸ್ಪತ್ರೆ ಪಕ್ಕದಲ್ಲೇ ಇರುವ ಸರಕಾರಿ ರಾಯಪ್ಪ ಹುಲೇಕಲ್‌ ಶಾಲೆಯನ್ನೂ ಬಳಸಿ ಲಸಿಕೆ ಹಾಕಬಹುದು ಎಂಬುದು ನಾಗರಿಕರ ಒತ್ತಾಯವಾಗಿದೆ. ಮೇ 1ರಿಂದ ಲಸಿಕೆ ಹಾಕಿಸಿಕೊಳ್ಳುವವರ ಸಂಖ್ಯೆ ಕೂಡ ದ್ವಿಗುಣ ಆಗುವುದರಿಂದ ಸಹಜ ಒತ್ತಡ ಕೂಡ ನಿರ್ಮಾಣ ಆಗಲಿದೆ. ಇದನ್ನು ತಪ್ಪಿಸಲು ತಾಲೂಕು ಆಡಳಿತ ತಾಲೂಕು ಆಸ್ಪತ್ರೆಯಲ್ಲಿನ ವ್ಯವಸ್ಥೆ ಬದಲಾಯಿಸಬೇಕು ಎಂದು ಆಗ್ರಹಸಲಾಗಿದೆ.

ಈ ಬಗ್ಗೆ ಪ್ರತಿಕ್ರಿಯೆ ಕೇಳಲು ತಾಲೂಕು ಆಸ್ಪತ್ರೆ ವೈದ್ಯಾಧಿ  ಕಾರಿ ಡಾ| ಗಜಾನನ ಭಟ್ಟ ಫೋನ್‌ ಸ್ವೀಕರಿಸಲಿಲ್ಲ. ನೋಟಿಸ್‌ ನೀಡಿದ್ದೇವೆ: ಶಿರಸಿ ಪಂಡಿತ್‌ ಸಾರ್ವಜನಿಕ ಆಸ್ಪತ್ರೆಯಲ್ಲಿ ಮೃತಪಟ್ಟ ಕೋವಿಡ್‌ ಸೋಂಕಿತನ ತಲೆಯಿಂದ ರಕ್ತ ಸೋರುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿ ತಾಲೂಕು ದಂಡಾಧಿಕಾರಿ ಎಂ.ಆರ್‌. ಕುಲಕರ್ಣಿ ಆಸ್ಪತ್ರೆ ವೈದ್ಯಾಧಿಕಾರಿಗೆ ಕಾರಣ ಕೇಳಿ ನೋಟಿಸ್‌ ನೀಡಿದ್ದಾರೆ. ಈ ವಿಷಯ ದೃಢಪಡಿಸಿದ ತಹಶೀಲ್ದಾರರು, ಆಸ್ಪತ್ರೆ ವೈದ್ಯಾಧಿ ಕಾರಿಗಳ ಪ್ರತಿಕ್ರಿಯೆ ಬಳಿಕ ಜಿಲ್ಲಾಧಿಕಾರಿಗಳಿಗೆ ವರದಿ ನೀಡುವುದಾಗಿ ತಿಳಿಸಿದ್ದಾರೆ. ಮಂಜು ದ್ಯಾವ ಪಟಗಾರ ಎಂಬವರು ಮೃತರಾಗಿದ್ದು, ಅವರು ಕೋವಿಡ್‌ ಸೋಂಕಿತರಾಗಿದ್ದರು. ಆದರೆ, ಅವರ ಕಳೇಬರಹ ಸುಡುವ ವೇಳೆ ತಲೆಯಿಂದ ರಕ್ತ ಕಂಡು ಪಿಪಿಕಿಟ್‌ ತೆರೆದಾಗ ಗಾಯವಾಗಿದ್ದು ಕಂಡು ಬಂದ ವೀಡಿಯೋ ವೈರಲ್‌ ಆಗಿತ್ತು. ಆಸ್ಪತ್ರೆಯ ಮೂಲ ಬಾತರೂಮಿನಲ್ಲಿ ಕಾಲು ಜಾರಿ ಬಿದ್ದಿದ್ದರು ಅವರು ಎಂದು ಹೇಳಿಕೆ ನೀಡಿತ್ತು.

ಟಾಪ್ ನ್ಯೂಸ್

7th pay commission central may announce da hike for central govt employees in june-2021

ಕೇಂದ್ರ ನೌಕರರ ಡಿಎ ಹೆಚ್ಚಳ ಮತ್ತೆ ವಿಳಂಬ..!?

rterrr

ಕೋವಿಡ್ ಸಂಕಷ್ಟಕ್ಕೆ ಮಿಡಿದ ತಲೈವಾ : ಒಂದು ಕೋಟಿ ರೂ. ನೆರವು ನೀಡಿದ ರಜನಿ

ಅಫ್ಘಾನಿಸ್ತಾನ್: ಕಾಬೂಲ್ ಮಸೀದಿಯೊಳಗೆ ಬಾಂಬ್ ಸ್ಫೋಟ, ಇಮಾಮ್ ಸೇರಿ 12 ಮಂದಿ ಸಾವು

ಅಫ್ಘಾನಿಸ್ತಾನ್: ಕಾಬೂಲ್ ಮಸೀದಿಯೊಳಗೆ ಬಾಂಬ್ ಸ್ಫೋಟ, ಇಮಾಮ್ ಸೇರಿ 12 ಮಂದಿ ಸಾವು

groww to acquire indiabulls mf for rs 175 cr

ಇಂಡಿಯಾ ಬುಲ್ಸ್‌ ಮ್ಯೂಚುವಲ್‌ ಫಂಡ್‌ ಕಂಪನಿಯ ‘ಗ್ರೋವ್‌’ ದಾಪುಗಾಲು..!?

ಕೋವಿಡ್ 19 “ಅದೃಶ್ಯ ಶತ್ರು”…ಸೋಂಕು ನಿವಾರಣೆಗೆ ಕಠಿಣ ಹೋರಾಟ: ಪ್ರಧಾನಿ ಮೋದಿ

ಕೋವಿಡ್ 19 “ಅದೃಶ್ಯ ಶತ್ರು”…ಸೋಂಕು ನಿವಾರಣೆಗೆ ಕಠಿಣ ಹೋರಾಟ: ಪ್ರಧಾನಿ ಮೋದಿ

gfdffdfv

ಸಾವಿನ ಮನೆಯಲ್ಲಿ ಸಿದ್ದರಾಮಯ್ಯ ರಾಜಕೀಯ: ಕಾರಜೋಳ ಆಕ್ರೋಶ

ಕೋವಿಡ್ ದುರಂತ: ಪೋಷಕರನ್ನು ಕಳೆದುಕೊಂಡ ಕುಟುಂಬ, ಮಕ್ಕಳಿಗೆ ಆರ್ಥಿಕ ನೆರವು; ಕೇಜ್ರಿವಾಲ್

ಕೋವಿಡ್ ದುರಂತ: ಪೋಷಕರನ್ನು ಕಳೆದುಕೊಂಡ ಕುಟುಂಬ, ಮಕ್ಕಳಿಗೆ ಆರ್ಥಿಕ ನೆರವು; ಕೇಜ್ರಿವಾಲ್ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ; ಮುಂಜಾಗ್ರತಾ ಕ್ರಮಕ್ಕೆ ಹವಾಮಾನ ಇಲಾಖೆ ಸೂಚನೆ

ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ; ಮುಂಜಾಗ್ರತಾ ಕ್ರಮಕ್ಕೆ ಹವಾಮಾನ ಇಲಾಖೆ ಸೂಚನೆ

covid effect

ಸಚಿವರು ಜನಕ್ಕೆ-ಜನ ಆಸ್ಪತ್ರೆಗೆ ಮುಗಿದರು ಕೈ!

uyfiftuyf

ರಸ್ತೆ ನಿರ್ಬಂಧಿಸಿದ ಬ್ಯಾರಿಕೇಡ್‌; ತಪಾಸಣೆಯಲ್ಲಿ ಶಿಕ್ಷಕರೂ ಭಾಗಿ

hjfgk

ಸೋಂಕಿತರು ಮೊದಲು ಚಿಕಿತ್ಸೆ ಪಡೆದುಕೊಳ್ಳಲಿ

hjujyutyut

ಕೋವಿಡ್ ಕರ್ಫ್ಯೂ : ರೆಕ್ಕೆಪುಕ್ಕ ಕತ್ತರಿಸಿದ ಹಕ್ಕಿಯನ್ನಾಗಿಸಿ ನಮ್ಮನ್ನು ಹಾರಿಸಿದ್ದೇಕೆ ?

MUST WATCH

udayavani youtube

ಕೋವಿಡ್ ಲಸಿಕೆ ವಿತರಣೆಗೆ ಕಾಂಗ್ರೆಸ್ ಪಕ್ಷ 100 ಕೋಟಿ

udayavani youtube

ಸರ್ಕಾರ ಚಿತ್ರರಂಗದ ಕೈ ಹಿಡಿಯಲಿ

udayavani youtube

ಮರವಂತೆಯಲ್ಲಿ‌ ತೀವ್ರಗೊಂಡ‌ ಕಡಲ್ಕೊರೆತ

udayavani youtube

ಸ್ವ್ಯಾಬ್ ಕಲಕ್ಷನ್​ಗೆ ಬಂದ ಆರೋಗ್ಯ ಸಿಬ್ಬಂದಿ ಮೇಲೆ ಅವಾಜ್​ ಹಾಕಿದ ವ್ಯಕ್ತಿ

udayavani youtube

ರಾಬರ್ಟ್ ಚಿತ್ರ Tonic ಆಯ್ತು

ಹೊಸ ಸೇರ್ಪಡೆ

7th pay commission central may announce da hike for central govt employees in june-2021

ಕೇಂದ್ರ ನೌಕರರ ಡಿಎ ಹೆಚ್ಚಳ ಮತ್ತೆ ವಿಳಂಬ..!?

rterrr

ಕೋವಿಡ್ ಸಂಕಷ್ಟಕ್ಕೆ ಮಿಡಿದ ತಲೈವಾ : ಒಂದು ಕೋಟಿ ರೂ. ನೆರವು ನೀಡಿದ ರಜನಿ

ಅಫ್ಘಾನಿಸ್ತಾನ್: ಕಾಬೂಲ್ ಮಸೀದಿಯೊಳಗೆ ಬಾಂಬ್ ಸ್ಫೋಟ, ಇಮಾಮ್ ಸೇರಿ 12 ಮಂದಿ ಸಾವು

ಅಫ್ಘಾನಿಸ್ತಾನ್: ಕಾಬೂಲ್ ಮಸೀದಿಯೊಳಗೆ ಬಾಂಬ್ ಸ್ಫೋಟ, ಇಮಾಮ್ ಸೇರಿ 12 ಮಂದಿ ಸಾವು

groww to acquire indiabulls mf for rs 175 cr

ಇಂಡಿಯಾ ಬುಲ್ಸ್‌ ಮ್ಯೂಚುವಲ್‌ ಫಂಡ್‌ ಕಂಪನಿಯ ‘ಗ್ರೋವ್‌’ ದಾಪುಗಾಲು..!?

may_13_tmk_ph_02______1305bg_2

ಹೋಂ ಕ್ವಾರಂಟೈನ್‌: ಮನೆಮಂದಿಗೆಲ್ಲ ಸೋಂಕು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.