ಶಂಕರನಾಗ್‌ ಅಭಿಮಾನಿ ಕಥೆ ಸಿನಿಮಾ ಬಿಡುಗಡೆಗೆ ಸಿದ್ಧ

Team Udayavani, Aug 9, 2019, 1:20 PM IST

ಹೊನ್ನಾವರ: ಚಿತ್ರ ನಿರ್ದೇಶಕ ದರ್ಶಿತ್‌ ಭಟ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಹೊನ್ನಾವರ: ತಾಲೂಕಿನ ಯುವಕ ದರ್ಶಿತ್‌ ಭಟ್ ನಿರ್ದೇಶನದ ಫ್ಯಾನ್‌ ಚಲನಚಿತ್ರ ಆ.23 ರಂದು ತೆರೆ ಕಾಣಲಿದ್ದು, ಈ ಚಿತ್ರವು ಉತ್ತರ ಕನ್ನಡದಲ್ಲಿ ಮತ್ತು ಇಲ್ಲಿಯ ಭಾಷೆಯನ್ನು ಶೇ.80 ರಷ್ಟು ಅಳವಡಿಸಿಕೊಂಡು ಚಿತ್ರೀಕರಣ ಮಾಡಲಾಗಿದೆ. ಜಿಲ್ಲೆಯ ಜನತೆ ಇದನ್ನು ಹೆಚ್ಚಿನ ರೀತಿಯಲ್ಲಿ ಚಲನಚಿತ್ರ ಮಂದಿರದಲ್ಲೆ ವೀಕ್ಷಿಸಿ ಪ್ರೋತ್ಸಾಹಿಸುವಂತೆ ಅವರು ಕೋರಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಚಲನ ಚಿತ್ರವನ್ನು ಶಂಕರನಾಗ್‌ ಹುಟ್ಟೂರಾದ ಹೊನ್ನಾವರ ಹಾಗೂ ಸುತ್ತುಮುತ್ತಲೇ ಶೇ.80 ರಷ್ಟು ಚಿತ್ರೀಕರಿಸಲಾಗಿದೆ. ದೊಡ್ಡ ಸಿನೆಮಾ ಸ್ಟಾರ್‌ಗಳಿಗೆ ಇರುವಷ್ಟೇ ಜನಪ್ರಿಯತೆ ಮತ್ತು ಅಭಿಮಾನಿ ಬಳಗ ಸೂಪರ್‌ ಹಿಟ್ ಸೀರಿಯಲ್ನ ಹೀರೋ- ಹೀರೋಯಿನ್‌ಗಳಿಗೆ ಇದ್ದಾರೆ. ಈ ಅಂಶವನ್ನೇ ಎಳೆಯಾಗಿಟ್ಟುಕೊಂಡು ಒಂದು ಸೂಪರ್‌ ಹಿಟ್ ಸೀರಿಯಲ್ನ ಒಬ್ಬ ಹೀರೋ ಮತ್ತು ಆ ಹೀರೋನ ಸಿಕ್ಕಾಪಟ್ಟೆ ಇಷ್ಟ ಪಡುವ ಒಬ್ಬಳು ಅಪ್ಪಟ ಅಭಿಮಾನಿ ಇವರ ನಡುವೆ ನಡೆಯುವ ಅಭಿಮಾನಿಯ ಅಭಿಮಾನದ ಕಥೆಯೇ ಫ್ಯಾನ್‌ ಸಿನಿಮಾ ಎಂದರು.

ಸಿನೆಮಾದ ಮತ್ತೂಂದು ದೊಡ್ಡ ಆಕರ್ಷಣೆ ಶಂಕರ ನಾಗ್‌, ಚಿತ್ರದ ನಾಯಕ ಶಂಕರನಾಗ ಅವರ ದೊಡ್ಡ ಅಭಿಮಾನಿ. ಹಾಸ್ಯ ಪ್ರಧಾನವಾಗಿ ಸಿನೇಮಾವನ್ನು ನಿರೂಪಿಸಲಾಗಿದೆ. ಕುಟುಂಬದ ಎಲ್ಲರೂ ಕುಳಿತು ನೋಡುವಂಥಹ ಚಿತ್ರ ಇದು ಎಂದು ಹೇಳಿದರು.

ಬೆಂಗಳೂರು, ಹೊನ್ನಾವರ, ಚಿತ್ರಾಪುರ, ಅಗ್ರಹಾರ, ಕುಮಟಾ, ಮುರ್ಡೇಶ್ವರ, ಇಡಗುಂಜಿ ಮುಂತಾದ ಉತ್ತರ ಕನ್ನಡ ಜಿಲ್ಲೆಯ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆದಿದೆ. ಮುಖ್ಯ ತಾರಾಗಣದಲ್ಲಿ ನಾಯಕ ಆರ್ಯನ್‌, ನಾಯಕಿ ಅದ್ವಿತಿ ಶೆಟ್ಟಿ, ಸೆಲಿಬ್ರಿಟಿ ನಾಯಕಿ ಸಮೀಕ್ಷಾ, ವಿಜಯ ಕಾಶಿ, ಮಂಡ್ಯ ರಮೇಶ, ನವೀನ್‌ ಪಡೀಲ್, ರವಿ ಭಟ್, ರಘು ಪಾಂಡೇಶ್ವರ, ಸ್ವಾತಿ ವಿಟ್ಲ, ಮಂಗೇಶ ಭಟ್, ವಿಜಯಲಕ್ಷ್ಮಿ ಉಪಾಧ್ಯಾಯ, ಪ್ರಸನ್ನ ಶೆಟ್ಟಿ, ಸಂಗೀತಾ ಭಟ್, ಪೃಥ್ವಿ ಸಾಗರ, ಗಣೇಶ ಗೌಡ, ಪ್ರಣತಿ ಗಾಣಿಗ ಇದ್ದಾರೆ ಎಂದು ತಿಳಿಸಿದರು.

ಎಸ್‌ಎಲ್ಎನ್‌ ಸಿನೇಮಾಸ್‌ ಬ್ಯಾನರ್‌ ಅಡಿ ಸಿನಿಮಾ ನಿರ್ಮಾಣವಾಗಿದೆ. ಸವಿತಾ ಈಶ್ವರ ನಿರ್ಮಾಪಕರು. ರಾಜಮುಡಿ ದತ್ತ ಕಾರ್ಯಕಾರಿ ನಿರ್ಮಾಪಕರು, ಕಥೆ, ಚಿತ್ರಕಥೆ, ಸಂಭಾಷಣೆ ಬಲವಳ್ಳಿ ದರ್ಶಿತ್‌ ಭಟ್, ಛಾಯಾಗ್ರಹಣ ವಿ. ಪವನಕುಮಾರ, ಸಂಕಲನ ಗಣಪತಿ ಭಟ್, ಸಾಹಿತ್ಯ ಜಯಂತ ಕಾಯ್ಕಿಣಿ, ಯೋಗರಾಜ ಭಟ್, ದರ್ಶಿತ್‌ ಭಟ್, ಹಿನ್ನೆಲೆ ಸಂಗೀತ ಬಿ. ಅಜನೀಶ ಲೋಕನಾಥ, ಹಾಡುಗಳು ವಿಕ್ರಮ್‌- ಚಂದನ, ಹಿನ್ನೆಲೆ ಗಾಯನ ವಿಜಯ ಪ್ರಕಾಶ, ಸಂಚಿತ ಹೆಗಡೆ, ಕಾರ್ತಿಕ, ಅನನ್ಯ ಭಟ್, ಅಂಕಿತ ಕುಂದು, ನೃತ್ಯ ಸದಾ, ಬಾಲು, ಸಾಹಸ ಮಾಸ್‌ ಮಾದ ಎಂದು ತಿಳಿಸಿದರು.

ಹಿರಿಯ ಸಾಹಿತಿ ಶ್ರೀಪಾದ ಶೆಟ್ಟಿ ಮಾತನಾಡಿ ನಮ್ಮ ತಾಲೂಕಿನ ಯುವಕ ದರ್ಶಿತ್‌ ಭಟ್ ನಿರ್ದೇಶನದ ಚಲನಚಿತ್ರ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು. ಸಿನಿಮಾ ತಂಡಕ್ಕೆ ಸತ್ಯ ಜಾವಗಲ್, ಮಂಜುನಾಥ ಗೌಡ ನಾಜಗಾರ ಅಭಿನಂದಿಸಿದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಹೊನ್ನಾವರ: ಮ್ಯಾಗ್ಸೆಸ್ಸೆ ಪ್ರಶಸ್ತಿ ಪುರಸ್ಕೃತ ಹರೀಶ ಹಂದೆಯವರ ಸೆಲ್ಕೋ ಸೋಲಾರ್‌ ಸಂಸ್ಥೆ ಸೌರಶಕ್ತಿಯನ್ನು ಬಹುಪಯೋಗಿಯಾಗಿ ಗ್ರಾಮೀಣ ಭಾಗದ ಜನತೆಗೆ ಜೀವನಾಧಾರವಾಗಿ...

  • ಭಟ್ಕಳ: ಕಳೆದ ಮೂರು ದಿನಗಳಿಂದ ಶಿರಾಲಿ ಗ್ರಾಪಂನ್ನೇ ಮೀನು ಮಾರುಕಟ್ಟೆಯನ್ನಾಗಿ ಮಾಡಿಕೊಂಡ ಮೀನುಗಾರರ ಬೇಡಿಕೆಗೆ ಸ್ಪಂದಿಸುವಲ್ಲಿ ಗ್ರಾಪಂ ವಿಫಲವಾಗಿದ್ದು...

  • ಮುಂಡಗೋಡ: ಅಪಾರ ಪ್ರಮಾಣದ ನೀರು ಹರಿದು ಬಂದು ಕೊಚ್ಚಿಕೊಂಡು ಹೋಗಿದ್ದ ತಾಲೂಕಿನ ಶಿಡ್ಲಗುಂಡಿ ಸೇತುವೆ ಕಾಮಗಾರಿ ಕಳೆದ ಎರಡು ದಿನಗಳಿಂದ ಆರಂಭವಾಗಿರುವುದು ಸಾರ್ವಜನಿಕರಿಗೆ...

  • ಶಿರಸಿ: ನಾಡಿನ ಹೆಸರಾಂತ ಮಾರಿಕಾಂಬಾ ದೇವಸ್ಥಾನಕ್ಕೂ ಅನ ಧಿಕೃತ ಫೇಸ್‌ಬುಕ್‌, ವಾಟ್ಸಆ್ಯಪ್‌, ಟ್ವಿಟ್ಟರ್‌ಗಳ ಕಾಟದಿಂದ ಅನಧಿಕೃತ ಮಾಹಿತಿಗಳು ರವಾನೆಯಾಗಿ ಅನೇಕ...

  • ಹೊನ್ನಾವರ: ಜನಜೀವನಕ್ಕೆ ಉತ್ತಮ ಸಂಸ್ಕಾರ ಯಕ್ಷಗಾನ ಕಲೆಯಿಂದ ಸಿಗುತ್ತಿದೆ. ನಾಡಿನಲ್ಲಿ ಯಕ್ಷಗಾನ ಉಳಿಯಬೇಕು. ಇದಕ್ಕೆ ಸರಕಾರ ಮತ್ತು ಸಮಾಜ ಪ್ರೋತ್ಸಾಹ ನೀಡುವ...

ಹೊಸ ಸೇರ್ಪಡೆ