Udayavni Special

2025ಕ್ಕೆ ಸೀಬರ್ಡ್‌ ಏರ್ಪೋರ್ಟ್‌

Team Udayavani, Jul 26, 2019, 8:55 AM IST

Udayavani Kannada Newspaper

ಕಾರವಾರ: ಸೀಬರ್ಡ್‌ ನೌಕಾನೆಲೆಯಲ್ಲಿ ವಿಮಾನ ಬಳಕೆಗೆ ಬೇಕಾಗುವ 2000 ಮೀ. ಉದ್ದದ ರನ್‌ವೇ ನಿರ್ಮಾಣಕ್ಕೆ ನೌಕಾನೆಲೆ ಬಳಿ ಭೂಮಿ ಇದೆ. ಆದರೆ ನಾಗರಿಕ ವಿಮಾನಯಾನ ಸೌಲಭ್ಯಕ್ಕೆ ಬಳಸಲು ಇನ್ನೂ 1000 ಮೀಟರ್‌ ರನ್‌ವೇ ವಿಸ್ತರಿಸಬೇಕಿದ್ದು, 2025ರ ವೇಳೆಗೆ ಕಾರ್ಯಾರಂಭ ಮಾಡಲಿದೆ ಎಂದು ಐಎನ್‌ಎಸ್‌ ಕದಂಬ ನೌಕಾನೆಲೆ ಕಮಾಂಡರ್‌ ಮಹೇಶ್‌ ಸಿಂಗ್‌ ಹೇಳಿದರು.

ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸೀಬರ್ಡ್‌ ನೌಕಾನೆಲೆ ವಿಮಾನ ನಿಲ್ದಾಣದಲ್ಲಿ ನಾಗರಿಕ ವಿಮಾನಯಾನಕ್ಕೆ ಬಳಸಿಕೊಳ್ಳಲು ರಕ್ಷಣಾ ಇಲಾಖೆ ಸಮ್ಮಿತಿಸಿದೆ. ನೌಕಾನೆಲೆ ದಕ್ಷಿಣ ಭಾಗದಲ್ಲಿ ವಿಮಾನ ನಿಲ್ದಾಣ ಬರಲಿದೆ. 2025ಕ್ಕೆ ಸೀಬರ್ಡ್‌ ವಿಮಾನ ನಿಲ್ದಾಣ ಕಾರ್ಯಾರಂಭ ಮಾಡಲಿದೆ. ಅಲ್ಲದೇ ವಿಮಾನಯಾನ ಟರ್ಮಿನಲ್, ಸಿವಿಲ್ ಸ್ಟೇಶನ್‌ಗಳ ನಿರ್ಮಾಣಕ್ಕೆ 40 ಎಕರೆ ಭೂಮಿ ಬೇಕು. ಇದನ್ನು ರಾಜ್ಯ ಸರ್ಕಾರವೇ ಖಾಸಗಿಯವರಿಂದ ಪಡೆದು ವ್ಯವಸ್ಥೆ ಮಾಡಿಕೊಳ್ಳಬೇಕಾಗುತ್ತದೆ. ವಿಮಾನ ನಿಲ್ದಾಣ ನಿರ್ಮಾಣದ ನಂತರ ಕಾರವಾರದ ಚಿತ್ರಣವೇ ಬದಲಾಗಲಿದೆ. ಪ್ರವಾಸೋದ್ಯಮ ಸೇರಿದಂತೆ ವಿಶ್ವದ ಇತರೆ ಭಾಗಗಳ ಜೊತೆ ಕಾರವಾರ ಬೆಸೆದುಕೊಳ್ಳಲಿದೆ ಎಂದರು.

ಏರ್‌ಕ್ರಾಫ್ಟ್‌ ಮ್ಯೂಜಿಯಂ: ಏರ್‌ಕ್ರಾಫ್ಟ್‌ ಮ್ಯೂಜಿಯಂ ಸ್ಥಾಪನೆಗೆ ನೌಕಾನೆಲೆ ಸಹಕಾರ ಎಂದರೆ ನಾವು ಬಳಸದೇ ಇರುವ ಏರ್‌ ಕ್ರಾಫ್ಟ್‌ನ್ನು ಉಚಿತವಾಗಿ ಜಿಲ್ಲಾಡಳಿತಕ್ಕೆ, ರಾಜ್ಯ ಸರ್ಕಾರಕ್ಕೆ ನೀಡಬಹುದು. ಆದರೆ ಮ್ಯೂಜಿಯಂ ಸ್ಥಾಪನೆಗೆ ಬೇಕಾಗುವ 12 ಕೋಟಿ ರೂ.ಗಳನ್ನು ನೇವಿ ಕೊಡುವುದು ಕಷ್ಟ. ಇದನ್ನು ರಾಜ್ಯ ಸರ್ಕಾರ ನಿಭಾಯಿಸಬೇಕು. ಕಾರವಾರ ಕಡಲತೀರದಲ್ಲಿ ಯುದ್ಧನೌಕೆ ಮ್ಯೂಜಿಯಂ ಬಳಿ ಸ್ಥಾಪಿಸಲು ಉದ್ದೇಶಿಸಲಾಗಿದ್ದ ವಿಮಾನ ಮ್ಯೂಜಿಯಂಗೆ ಜಿಲ್ಲಾಡಳಿತ 2 ಕೋಟಿ ರೂ. ಮಾತ್ರ ವಿನಿಯೋಗ ಮಾಡಲು ಸಾಧ್ಯ. ಉಳಿದ ವೆಚ್ಚ ನೌಕಾನೆಲೆಯವರೇ ಭರಿಸಿ ಎಂದು ನೌಕಾನೆಲೆಗೆ ಪತ್ರ ಬರೆದಿದೆ. ಈ ಸಂಬಂಧ ನಾವು ನೇವಿಯ ಪಶ್ಚಿಮ ವಲಯದ ಮುಖ್ಯಸ್ಥರಿಗೆ ಪತ್ರ ಬರೆದಿದ್ದೇವೆ ಎಂದರು.

ಆಂಧ್ರದ ವಿಶಾಖಪಟ್ಟಣದಲ್ಲಿ ಅಲ್ಲಿನ ಸರ್ಕಾರ 14 ಕೋಟಿ ವೆಚ್ಚದಲ್ಲಿ ವಿಮಾನ ಮ್ಯೂಜಿಯಂ ಸ್ಥಾಪಿಸಿತು. ಅದರ ವಾರ್ಷಿಕ ನಿರ್ವಹಣೆ 2.8 ಕೋಟಿ ಆಗುತ್ತದೆ. ಹಾಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದರಿಂದ ನಿರ್ಮಾಣಕ್ಕೆ ವೆಚ್ಚವಾದ ಹಣ ಒಂದೇ ವರ್ಷದಲ್ಲಿ ಸಂಗ್ರಹವಾಯಿತು. ಅಲ್ಲಿ ಪ್ಲೇನ್‌ ಮ್ಯೂಜಿಯಂ ಜೊತೆ ಡಿಸ್ನಿ ಲ್ಯಾಂಡ್‌, ಹೋಟೆಲ್, ಸಿನಿಮಾ ಮಂದಿರ ಸಹ ಇವೆ. ಹಾಗಾಗಿ ಪ್ರವಾಸಿಗರು ಇಡೀ ದಿನವನ್ನು ಪ್ಲೇನ್‌ ಮ್ಯೂಜಿಯಂ ಸುತ್ತ ಕಳೆಯುತ್ತಾರೆ ಎಂದರು.

ತುಂಬಾ ವಿಸ್ತಾರ ಕಲ್ಪನೆಯಲ್ಲಿ ಸ್ಥಾಪನೆಯಾದ ಮ್ಯೂಜಿಯಂ ಅದಾಗಿದ್ದು, ಆ ರೀತಿ ಸ್ಥಳಾವಕಾಶ ಇರುವಲ್ಲಿ ಗಗನ ಯಾನದ ಮ್ಯೂಜಿಯಂ ಸ್ಥಾಪನೆಗೆ ರಾಜ್ಯ ಸರ್ಕಾರ ಮುಂದೆ ಬಂದರೆ ಬಳಸದೇ ಬಿಟ್ಟ ವಿಮಾನವನ್ನು ಮ್ಯೂಜಿಯಂನಲ್ಲಿ ಇಡಲು ಉಚಿತವಾಗಿ ನೀಡಲಾಗುವುದು ಎಂದರು.

ಕಾರವಾರ ಕಡಲತೀರದಲ್ಲಿ ಯುದ್ಧನೌಕೆ ಮ್ಯೂಜಿಯಂ ಬಳಿ ಸ್ಥಾಪಿಸಲು ಉದ್ದೇಶಿಸಲಾಗಿದ್ದ ವಿಮಾನ ಮ್ಯೂಜಿಯಂಗೆ ಜಿಲ್ಲಾಡಳಿತ 2 ಕೋಟಿ ರೂ. ಮಾತ್ರ ವಿನಿಯೋಗ ಮಾಡಲು ಸಾಧ್ಯ. ಉಳಿದ ವೆಚ್ಚ ನೌಕಾನೆಲೆಯವರೇ ಭರಿಸಿ ಎಂದು ನೌಕಾನೆಲೆಗೆ ಪತ್ರ ಬರೆದಿದೆ. ಈ ಸಂಬಂಧ ನಾವು ನೇವಿಯ ಪಶ್ಚಿಮ ವಲಯದ ಮುಖ್ಯಸ್ಥರಿಗೆ ಪತ್ರ ಬರೆದಿದ್ದೇವೆ.•ಮಹೇಶ್‌ ಸಿಂಗ್‌ ಕದಂಬ ನೌಕಾನೆಲೆ ಕಮಾಂಡರ್‌

ಉದಯವಾಣಿ ಸುದ್ದಿ ಈಗ ಟೆಲಿಗ್ರಾಂನಲ್ಲೂ ಲಭ್ಯ; ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ವಿಜಯಪುರ: ಭೀಮಾ ತೀರದ ಹೆಸರಿನಲ್ಲಿ ಸುಲಿಗೆ ನಡೆಸಿದ ಮೂವರ ಬಂಧನ

ವಿಜಯಪುರ: ಭೀಮಾ ತೀರದ ಹೆಸರಿನಲ್ಲಿ ಸುಲಿಗೆ ನಡೆಸಿದ ಮೂವರ ಬಂಧನ

ಭಾರತದಲ್ಲಿ ಟ್ರಂಪ್ ಕಾರ್ಯಕ್ರಮ ಮಾಡದಿದ್ದರೆ ಕೋವಿಡ್ ಹರಡುತ್ತಿರಲಿಲ್ಲ: ರಾಮಲಿಂಗಾ ರೆಡ್ಡಿ

ಭಾರತದಲ್ಲಿ ಟ್ರಂಪ್ ಕಾರ್ಯಕ್ರಮ ಮಾಡದಿದ್ದರೆ ಕೋವಿಡ್ ಹರಡುತ್ತಿರಲಿಲ್ಲ: ರಾಮಲಿಂಗಾ ರೆಡ್ಡಿ

ಬೆಂಗಳೂರಿನಲ್ಲಿ ವರುಣನ ಅಬ್ಬರ: ಸಂತೃಸ್ಥ ಕುಟುಂಬಗಳಿಗೆ ಪರಿಹಾರ ಘೋಷಿಸಿದ ಸಿಎಂ ಬಿಎಸ್ ವೈ

ಬೆಂಗಳೂರಿನಲ್ಲಿ ವರುಣನ ಅಬ್ಬರ: ಸಂತೃಸ್ಥ ಕುಟುಂಬಗಳಿಗೆ ಪರಿಹಾರ ಘೋಷಿಸಿದ ಸಿಎಂ ಬಿಎಸ್ ವೈ

ನಟ ಧನ್ವೀರ್ ರಾತ್ರಿ ಸಫಾರಿ ಮಾಡಿಲ್ಲ: ಬಂಡೀಪುರ ವಲಯ ಅರಣ್ಯಾಧಿಕಾರಿ ಸ್ಪಷ್ಟನೆ

ನಟ ಧನ್ವೀರ್ ರಾತ್ರಿ ಸಫಾರಿ ಮಾಡಿಲ್ಲ: ಬಂಡೀಪುರ ವಲಯ ಅರಣ್ಯಾಧಿಕಾರಿ ಸ್ಪಷ್ಟನೆ

ಪರಿಷತ್ ಚುನಾವಣಾ ಅಭ್ಯರ್ಥಿ, ಶಾಸಕಿ ಪೂರ್ಣಿಮಾ ಪತಿ ಶ್ರೀನಿವಾಸ್ ಬಿಜೆಪಿಯಿಂದ ಉಚ್ಛಾಟನೆ

ಪರಿಷತ್ ಚುನಾವಣಾ ಅಭ್ಯರ್ಥಿ, ಶಾಸಕಿ ಪೂರ್ಣಿಮಾ ಪತಿ ಶ್ರೀನಿವಾಸ್ ಬಿಜೆಪಿಯಿಂದ ಉಚ್ಛಾಟನೆ

ಧರ್ಮಸ್ಥಳದಲ್ಲಿ ಹೆಗ್ಗಡೆಯವರ ಪಟ್ಟಾಭಿಷೇಕದ 53ನೇ ವರ್ಷದ ವರ್ಧಂತ್ಯುತ್ಸವ ಸರಳ‌ ಸಮಾರಂಭ

ಧರ್ಮಸ್ಥಳದಲ್ಲಿ ಹೆಗ್ಗಡೆಯವರ ಪಟ್ಟಾಭಿಷೇಕದ 53ನೇ ವರ್ಷದ ವರ್ಧಂತ್ಯುತ್ಸವ ಸರಳ‌ ಸಮಾರಂಭ

ಬಿಹಾರ ಚುನಾವಣೆ2020: ಹತ್ತು ಲಕ್ಷ ಉದ್ಯೋಗ,ನಿರುದ್ಯೋಗಿಗಳಿಗೆ 1,500 ಭತ್ಯೆ: RJD ಪ್ರಣಾಳಿಕೆ

ಬಿಹಾರ ಚುನಾವಣೆ2020: ಹತ್ತು ಲಕ್ಷ ಉದ್ಯೋಗ,ನಿರುದ್ಯೋಗಿಗಳಿಗೆ 1,500 ಭತ್ಯೆ: RJD ಪ್ರಣಾಳಿಕೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

UK-TDY-1

ನೆರೆಯಿಂದ 37 ಗ್ರಾಮಗಳಿಗೆ ಹಾನಿ

uk-tdy-1

ಯಲ್ಲಾಪುರದಲ್ಲಿ ನಿವೃತ್ತ ಯೋಧರಿಗೆ ಸನ್ಮಾನ

ಕಾರವಾರ ನೌಕಾನೆಲೆಗೆ ಅಡ್ಮಿರಲ್‌ ಭೇಟಿ

ಕಾರವಾರ ನೌಕಾನೆಲೆಗೆ ಅಡ್ಮಿರಲ್‌ ಭೇಟಿ

ಕಾರವಾರ: ಟ್ಯಾಂಕರ್ ಹಾಗೂ ಬೈಕ್ ಡಿಕ್ಕಿ: ಸ್ಥಳದಲ್ಲೇ ಇಬ್ಬರ ಸಾವು

ಕಾರವಾರ: ಟ್ಯಾಂಕರ್ ಹಾಗೂ ಬೈಕ್ ಮುಖಾಮುಖಿ ಡಿಕ್ಕಿ: ಬೈಕ ಸವಾರರು ಸ್ಥಳದಲ್ಲೇ ಸಾವು

ಮರಳು ಸಾಗಾಣಿಕೆ ವ್ಯವಹಾರ ಆಗಬಾರದು :ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ ಜಿಲ್ಲಾಧಿಕಾರಿ

ಮರಳು ಸಾಗಾಣಿಕೆ ವ್ಯವಹಾರ ಆಗಬಾರದು :ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ ಜಿಲ್ಲಾಧಿಕಾರಿ

MUST WATCH

udayavani youtube

450 ಕ್ಕೂ ಅಧಿಕ ಬೀದಿ ಬದಿ ಶ್ವಾನಗಳಿಗೆ ನಿತ್ಯ ಆಹಾರ ನೀಡುತ್ತಾರೆ ರಜನಿ ಶೆಟ್ಟಿ!

udayavani youtube

The Sharada statue embodied in the artist’s finesse | Navaratri Special

udayavani youtube

ಮಲ್ಪೆ: ಬಲೆಗೆ ಬಿತ್ತು ಭಾರಿ ಗಾತ್ರದ ಎರಡು ಕೊಂಬು ತೊರಕೆ ಮೀನು

udayavani youtube

ಉಡುಪಿಯಲ್ಲಿ ಪ್ರಪ್ರಥಮ ಬಾರಿಗೆ ಪ್ರಾರಂಭವಾಗಿರುವ ದೇಶಿ ಉತ್ಪನ್ನಗಳ ಮಳಿಗೆ

udayavani youtube

ಸ್ವಾಮಿತ್ವ: ಹೊಸ ಯೋಜನೆಯಿಂದ ನಮಗೆ ಏನು ಲಾಭ ?ಹೊಸ ಸೇರ್ಪಡೆ

ವಿಜಯಪುರ: ಭೀಮಾ ತೀರದ ಹೆಸರಿನಲ್ಲಿ ಸುಲಿಗೆ ನಡೆಸಿದ ಮೂವರ ಬಂಧನ

ವಿಜಯಪುರ: ಭೀಮಾ ತೀರದ ಹೆಸರಿನಲ್ಲಿ ಸುಲಿಗೆ ನಡೆಸಿದ ಮೂವರ ಬಂಧನ

rn-tdy-1

ಜಿಲ್ಲೆಯಲ್ಲಿ ಅಂತರ್ಜಲ ಬಳಕೆ ಹೆಚ್ಚು

br-tdy-1

ಬೆಲೆ ಏರಿಕೆಗೆ ಗ್ರಾಹಕರು ಕಂಗಾಲು

ದಾಸ್ತಾನು ಖಾಲಿ: ಪಡಿತರಕ್ಕೆ ತಪ್ಪದ ಅಲೆದಾಟ

ದಾಸ್ತಾನು ಖಾಲಿ: ಪಡಿತರಕ್ಕೆ ತಪ್ಪದ ಅಲೆದಾಟ

ಭಾರತದಲ್ಲಿ ಟ್ರಂಪ್ ಕಾರ್ಯಕ್ರಮ ಮಾಡದಿದ್ದರೆ ಕೋವಿಡ್ ಹರಡುತ್ತಿರಲಿಲ್ಲ: ರಾಮಲಿಂಗಾ ರೆಡ್ಡಿ

ಭಾರತದಲ್ಲಿ ಟ್ರಂಪ್ ಕಾರ್ಯಕ್ರಮ ಮಾಡದಿದ್ದರೆ ಕೋವಿಡ್ ಹರಡುತ್ತಿರಲಿಲ್ಲ: ರಾಮಲಿಂಗಾ ರೆಡ್ಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.