ಹಾಲಿನ ವ್ಯಾಪಾರದಲ್ಲಿ ಯಶಸ್ಸು ಕಂಡ ಸ್ನಾತಕೋತ್ತರ ಪದವೀಧರ


Team Udayavani, Dec 1, 2021, 10:13 AM IST

ಸುಧೀರ್‌ ಶೆಟ್ಟಿ

ದಾಂಡೇಲಿ : ಅವರು ಸ್ನಾತಕೋತ್ತರ ಪದವಿಯನ್ನು ಪಡೆದ ಯುವಕ. ಬಹಳಷ್ಟು ಉದ್ಯೋಗದ ಅವಕಾಶಗಳು ಬಂದಿತ್ತಾದರೂ, ಅದನ್ನು ನಯವಾಗಿ ತಿರಸ್ಕರಿಸಿ, ಇದ್ದೂರಿನಲ್ಲಿದ್ದುಕೊಂಡೆ ಬದುಕು ಕಟ್ಟಿಕೊಳ್ಳಬೇಕೆಂದು ಬಯಸಿ, ಸ್ವ ಉದ್ಯೋಗದ ಮೂಲಕ ಸ್ವತಂತ್ರ ಸ್ವಾವಲಂಭಿಯಾಗಿ ಯಶಸ್ಸಿನೆಡೆಗೆ ಹೆಜ್ಜೆಯಿಟ್ಟ ಶ್ರಮಸಾಧಕನನ್ನು ಪರಿಚಯಿಸುವ ಸಣ್ಣ ಪ್ರಯತ್ನ.

ಈ ಶ್ರಮ ಸಾಧಕ ಬೇರೆ ಯಾರು ಅಲ್ಲ. ವಿದ್ಯಾರ್ಥಿ ದೆಸೆಯಲ್ಲೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು, ಹಲವಾರು ಸಾಮಾಜಿಕ ಹೋರಾಟ, ಚಳುವಳಿಗಳನ್ನು ಹಮ್ಮಿಕೊಂಡು ಸಮಾಜಮುಖಿಯಾಗಿ ಬೆಳೆದಿರುವ ಹಾಗೂ ಸೇವಾ ಸಂಕಲ್ಪ ತಂಡದ ಮೂಲಕ ಕೊರೊನಾ ಸಂಕಷ್ಟದ ಸಮಯದಲ್ಲಿ ಸದ್ದಿಲ್ಲದೆ ಸೇವಾ ಕೈಂಕರ್ಯವನ್ನು ನಡೆಸಿದ ಈಗಲೂ ಸೇವೆಗಾಗಿಯೆ ಹಾತೊರೆಯುವ ಯುವಕ. ಬಿಜೆಪಿ ಜಿಲ್ಲಾ ಯುವ ಮೋರ್ಚಾ ಉಪಾಧ್ಯಕ್ಷರಾಗಿರುವ ಸುಧೀರ ಶೆಟ್ಟಿಯವರೆ ಸ್ವಾವಲಂಬಿ ಬದುಕು ನಡೆಸಲು ಹೆಜ್ಜೆಯಿಟ್ಟು ಯಶಸ್ಸಿನೆಡೆಗೆ ಸಾಗುತ್ತಿರುವ ನಗುಮೊಗದ ಗಟ್ಟಿಧೈರ್ಯದ ಸಾಹಸಿ ಯುವಕ.

ದಾಂಡೇಲಿ ನಗರದ ಸಮೀಪದ ಕೋಗಿಲಬನ ಗ್ರಾಮದ ನಿವಾಸಿಯಾಗಿರುವ ಸುಧೀರ ಶೆಟ್ಟಿಯವರು ಪ್ರವಾಸೋದ್ಯಮ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿ, ಇದ್ದೂರಲ್ಲೆ ಇದ್ದು, ಏನನ್ನಾದರೂ ಸಾಧಿಸಬೇಕು, ಸಮಾಜಕ್ಕೆ ಒಳಿತನ್ನು ಮಾಡಬೇಕೆಂದು ಬಯಸಿ 2013 ರಲ್ಲಿ ಶುರವಚ್ಚಿಕೊಂಡಿದ್ದೆ ಹಾಲಿನ ವ್ಯಾಪಾರ.

ಹಾಲಿನ ವ್ಯಾಪಾರ ಮಾಡಲು ಶುರವಚ್ಚಿಕೊಂಡಾಗ ಅಪಹಾಸ್ಯಕ್ಕೂ ಈಡಾಗಿದ್ದೂ ಇದೆ. ಹಾಲು ಮಾರ್ಲಿಕ್ಕೂ ಸ್ನಾತಕೋತ್ತರ ಪದವಿಯವರೆಗೆ ಓದಬೇಕೆ? ಎಂದು ಪ್ರಶ್ನಿಸಿದವರು ಇದ್ದಾರೆ.

ಹಾಗೆಂದು ಅವೆಲ್ಲವುಗಳನ್ನು ಮನಸ್ಸಿನೊಳಗಿನ ಸಹಿಸುವ ಚೀಲದಲ್ಲಿ ಮುಚ್ಚಿಟ್ಟು ಯಾರು ಏನೆ ಅಂದರೂ ತನ್ನ ಪಾಡಿಗೆ ವ್ಯವಹಾರವನ್ನು ಮುನ್ನಡೆಸುತ್ತಾ, ಇದೀಗ ದಾಂಡೇಲಿಯಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಹಾಲು ವಿತರಣೆ ಮಾಡುವವರಲ್ಲಿ ಅಗ್ರ ಹೆಸರನ್ನು ಸಂಪಾದಿಸಿಕೊಂಡಿದ್ದಾರೆ ಸುಧೀರ ಶೆಟ್ಟಿಯವರು.  ಶ್ರಮವಹಿಸಿ ದುಡಿದಾಗ ಫಲ ಸಾಧ್ಯ ಎನ್ನುವುದನ್ನು ತೋರಿಸಿಕೊಟ್ಟ ಸುಧೀರ ಶೆಟ್ಟಿಗೆ ಅಂದು ಚೇಷ್ಟೆ ಮಾಡಿದವರೂ ಇಂದು ಸುಧೀರ ಶೆಟ್ಟಿಯವರ ಶ್ರಮಸಾಧನೆಯನ್ನು ನೋಡಿ ಬೆರಗಾಗಿದ್ದಾರೆ.

ಮನಸ್ಸಿದ್ದರೇ ಮಾರ್ಗ, ಶಿಕ್ಷಣ ಪಡೆದ ಮೇಲೆ ಇನ್ನೊಂದು ಕಡೆ ಉದ್ಯೋಗ ಮಾಡಬೇಕೆಂದಿಲ್ಲ, ಅಚಲವಾದ ಗುರಿ, ಕೆಲಸದಲ್ಲಿ ಶ್ರದ್ದೆ ಮತ್ತು ಬದ್ದತೆ ಇದ್ದಲ್ಲಿ ಯಶಸ್ಸನ್ನು ಪಡೆಯಬಹುದು ಎನ್ನುವುದಕ್ಕೆ ಸುಧೀರ ಶೆಟ್ಟಿ ಸೂಕ್ತ ಉದಾಹರಣೆ.

ಟಾಪ್ ನ್ಯೂಸ್

1ahan

ಯುಎಇ: ಭಾರತೀಯ ವಿದ್ಯಾರ್ಥಿ ಅಹಾನ್ ಶೆಟ್ಟಿ, SAT ನಲ್ಲಿ ಇತಿಹಾಸ

1-gaa

‘ವೈ ಐ ಕಿಲ್ಡ್ ಗಾಂಧಿ’ ಸಿನಿಮಾ ಬ್ಯಾನ್ ಮಾಡಲು ಕಾಂಗ್ರೆಸ್ ಮನವಿ

ಸವದತ್ತಿ ಮಹಿಳಾ ಪೇದೆ ಈಗ ಪಿಎಸೈ : ಸೇವಾನಿರತ ಮೀಸಲಾತಿಯಡಿ ರಾಜ್ಯಕ್ಕೆ ಪ್ರಥಮ ಸ್ಥಾನ

ಸವದತ್ತಿಯ ಮಹಿಳಾ ಪೇದೆ ಈಗ ಪಿಎಸ್‍ಐ : ಸೇವಾನಿರತ ಮೀಸಲಾತಿಯಡಿ ರಾಜ್ಯಕ್ಕೆ ಪ್ರಥಮ ಸ್ಥಾನ

dk shi 2

ಸಂಪರ್ಕದಲ್ಲಿರುವ ಬಿಜೆಪಿ ಶಾಸಕರ ಮಾಹಿತಿ ಬಿಟ್ಟುಕೊಡಲ್ಲ:ಡಿಕೆಶಿ

28accident

ಕೊರಟಗೆರೆ: ಬಸ್ ಅಪಘಾತ, ಇಬ್ಬರು ಸಾವು; ಎಂಟು ಮಂದಿ ಗಂಭೀರ

ಪಾತಾಳಕ್ಕೆ ಕುಸಿದ  ಸೆನ್ಸೆಕ್ಸ್; ಮುಂಬಯಿ ಷೇರುಪೇಟೆ ಸೂಚ್ಯಂಕ 1,546 ಅಂಕ ಇಳಿಕೆ

ಪಾತಾಳಕ್ಕೆ ಕುಸಿದ  ಸೆನ್ಸೆಕ್ಸ್; ಮುಂಬಯಿ ಷೇರುಪೇಟೆ ಸೂಚ್ಯಂಕ 1,546 ಅಂಕ ಇಳಿಕೆ

CM @ 2

ಜಿಲ್ಲಾ ಉಸ್ತುವಾರಿ ಬದಲಾವಣೆ: ತವರು ಜಿಲ್ಲೆ ಬಹುತೇಕ ಸಚಿವರಿಗೆ ಇಲ್ಲಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಭಟ್ಕಳ : ಮನೆಯ ಬೀಗ ಮುರಿದು ನಗ ನಾಣ್ಯ ದೋಚಿ ಪರಾರಿಯಾದ ಕಳ್ಳರು

ಮನೆಗೆ ಕನ್ನ ಹಾಕಿದ ಕಳ್ಳರು, ಅಪಾರ ಪ್ರಮಾಣದ ಸೊತ್ತು ಕಳವು : ಪೊಲೀಸರಿಂದ ಶೋಧ ಕಾರ್ಯ

ಸೋಡಿಗದ್ದೆ ದೇವಿಯ ವಾರ್ಷಿಕ ಜಾತ್ರೆ ಆರಂಭ : ಭಕ್ತರ ಸಂಖ್ಯೆಯಲ್ಲಿ ಭಾರೀ ಇಳಿಮುಖ

ಸೋಡಿಗದ್ದೆ ದೇವಿಯ ವಾರ್ಷಿಕ ಜಾತ್ರೆ ಆರಂಭ : ಭಕ್ತರ ಸಂಖ್ಯೆಯಲ್ಲಿ ಭಾರೀ ಇಳಿಮುಖ

ಗೃಹ ರಕ್ಷಕ ದಳದ ವಿವಿಧ ಬೇಡಿಕೆ ಈಡೇರಿಕೆಗೆ ಸರ್ಕಾರದ ಜೊತೆ ಮಾತಾನಾಡುತ್ತೇನೆ: ಕಾಗೇರಿ ಭರವಸೆ

ಗೃಹ ರಕ್ಷಕ ದಳದ ವಿವಿಧ ಬೇಡಿಕೆ ಈಡೇರಿಕೆಗೆ ಸರ್ಕಾರದ ಜೊತೆ ಮಾತಾನಾಡುತ್ತೇನೆ: ಕಾಗೇರಿ ಭರವಸೆ

ಎಂಟು ದಿನಗಳಿಂದ ಶಾಲೆಗೆ ಹೋಗದಿದ್ದರೂ ಪಾಸಿಟಿವ್ ವರದಿ; ಆರೋಗ್ಯ ಸಿಬ್ಬಂದಿ ಎಡವಟ್ಟು ಬಹಿರಂಗ

ಎಂಟು ದಿನಗಳಿಂದ ಶಾಲೆಗೆ ಹೋಗದಿದ್ದರೂ ಪಾಸಿಟಿವ್ ವರದಿ; ಆರೋಗ್ಯ ಸಿಬ್ಬಂದಿ ಎಡವಟ್ಟು ಬಹಿರಂಗ

1-sddsa

ಕುತೂಹಲಕ್ಕೆ ಎಡೆಮಾಡಿದ ಆರ್.ವಿ.ದೇಶಪಾಂಡೆಯವರ ರಾಜಕೀಯ ನಡೆ

MUST WATCH

udayavani youtube

ಪ್ರಕೃತಿಯನ್ನು ಲೂಟಿ ಮಾಡಿದ ಪರಿಣಾಮ ಹೀಗೆಲ್ಲ ಆಗಿದೆ !!

udayavani youtube

ಒಂದೇ ವಾಹನಕ್ಕೆ ಒಂದು ತಿಂಗಳ ಅಂತರದಲ್ಲಿ ಪೊಲೀಸರಿಂದ 16 ನೋಟಿಸ್

udayavani youtube

ರಾಷ್ಟ್ರೀಯ ಬಾಲ ಪುರಸ್ಕಾರ : ಪ್ರಧಾನಿ ಜೊತೆ ಮಂಗಳೂರಿನ ರೆಮೋನಾ ಪರೇರಾ ಮಾತುಕತೆ

udayavani youtube

ಬೆಳ್ಳಂಬೆಳಗ್ಗೆ ಟ್ರಾಫಿಕ್ ಜಾಮ್ ! ಕೆಲಸಕ್ಕೆ ಹೋಗುವವರ ಪರದಾಟ ಹೇಳತೀರದು…

udayavani youtube

ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಕೊನೆಗೂ ಸೆರೆ, ಅರಣ್ಯ ಇಲಾಖೆಯ ಯಶಸ್ವಿ ಕಾರ್ಯಾಚರಣೆ

ಹೊಸ ಸೇರ್ಪಡೆ

ರಸ್ತೆ ಅಗಲಿಕರಣದ ಕಾಮಗಾರಿ ಅಪೂರ್ಣ: ವಾಹನ ಸವಾರರ ಗೋಳು ಕೇಳುವರ್ಯಾರು?

ರಸ್ತೆ ಅಗಲಿಕರಣದ ಕಾಮಗಾರಿ ಅಪೂರ್ಣ: ವಾಹನ ಸವಾರರ ಗೋಳು ಕೇಳುವರ್ಯಾರು?

ಗೂಗಲ್ ಕೋಡ್ ಟು ಕಾಂಟೆಸ್ಟ್  2021″ ಸ್ಫರ್ಧೆಯಲ್ಲಿ ಗಮನ ಸೆಳೆದ ಗೋವಾದ ವಿದ್ಯಾರ್ಥಿಗಳು

‘ಗೂಗಲ್ ಕೋಡ್ ಟು ಕಾಂಟೆಸ್ಟ್  2021’ ಸ್ಫರ್ಧೆಯಲ್ಲಿ ಗೋವಾ ವಿದ್ಯಾರ್ಥಿಗಳ ಸಾಧನೆ

1ahan

ಯುಎಇ: ಭಾರತೀಯ ವಿದ್ಯಾರ್ಥಿ ಅಹಾನ್ ಶೆಟ್ಟಿ, SAT ನಲ್ಲಿ ಇತಿಹಾಸ

ಜಗದಾಳ ಪಂಚಾಯ್ತಿ ಕಾರ್ಯಾಲಯ ಉದ್ಘಾಟನೆ ಹಿನ್ನಲೆ; ಉದ್ವಿಗ್ನ ಪರಿಸ್ಥಿತಿ

ಜಗದಾಳ ಪಂಚಾಯ್ತಿ ಕಾರ್ಯಾಲಯ ಉದ್ಘಾಟನೆ ಹಿನ್ನಲೆ; ಉದ್ವಿಗ್ನ ಪರಿಸ್ಥಿತಿ

ಪ್ರಥಮ ಪ್ರಯತ್ನದಲ್ಲೆ ಪಿಎಸ್‍ಐ ಆದ ಕಂಡಕ್ಟರ್ ಮಗ

ಪ್ರಥಮ ಪ್ರಯತ್ನದಲ್ಲೆ ಪಿಎಸ್‍ಐ ಆದ ಕಂಡಕ್ಟರ್ ಮಗ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.