Udayavni Special

ಯಕ್ಷಗಾನ ಪ್ರಶಸ್ತಿಗೆ ‘ಸಂಖ್ಯಾ’ ಗ್ರಹಣ!


Team Udayavani, Dec 14, 2018, 3:17 PM IST

14-december-16.gif

ಶಿರಸಿ: ಕರ್ನಾಟಕ ಯಕ್ಷಗಾನ ಅಕಾಡೆಮಿ ಘೋಷಿಸಿದ 2017ರ ಪ್ರಶಸ್ತಿ ಪ್ರದಾನಕ್ಕೆ ಮುಹೂರ್ತ ಫಿಕ್ಸ್‌ ಆಗದೇ ಇರುವ ಬೆನ್ನಲ್ಲೇ ಇದೀಗ 2018ರ ವರ್ಷ ಮುಗಿಯುತ್ತ ಬಂದರೂ ಪ್ರಸಕ್ತ ಸಾಲಿನ ಪ್ರಶಸ್ತಿ ಇನ್ನೂ ಪ್ರಕಟವಾಗಿಲ್ಲ.

2017ರ ಪ್ರಶಸ್ತಿ ಘೋಷಣೆಗೆ ವಿಧಾನ ಸಭೆ ಚುನಾವಣೆ, ಸದಸ್ಯರ ನೇಮಕಾತಿ ವಿಳಂಬಗಳು ಕಾರಣವಾಗಿದ್ದರೆ ಅದರ ಪ್ರದಾನಕ್ಕೆ ಸಚಿವೆ ಜಯಮಾಲರ ದಿನಾಂಕ ಹೊಂದಾಣಿಕೆ ಆಗದೇ ಇರುವದು ವಿಳಂಬವಾಗಿದೆ. ಇನ್ನೊಂದೆಡೆ ಸರ್ಕಾರ ಅಕಾಡೆಮಿ ಪ್ರಶಸ್ತಿ ಸಂಖ್ಯೆ ಹೆಚ್ಚಳಗೊಳಿಸಿ ಸಲ್ಲಿಸಿದ ನೂತನ ಪ್ರಸ್ತಾವನೆಗೆ ಇನ್ನೂ ಅಧಿಕೃತ ಮುದ್ರೆ ಬೀಳದೇ ಇರುವುದು 2018ನೇ ಸಾಲಿನ ಗೌರವ ಪ್ರಶಸ್ತಿ ಘೋಷಣೆಗೂ ಮೀನಮೇಷ ಎಣಿಸಲಾಗುತ್ತಿದೆ.

ಯಕ್ಷಗಾನ ಅಕಾಡೆಮಿ ಕಳೆದ ಬಜೆಟ್‌ನಲ್ಲಿ ಬಯಲಾಟ ಅಕಾಡೆಮಿಯಿಂದ ಬೇರೆಯಾಗಿತ್ತು. ಬಯಲಾಟ ಹಾಗೂ ಯಕ್ಷಗಾನ ಅಕಾಡೆಮಿ 10ರ ಸಂಖ್ಯೆಯಲ್ಲಿದ್ದ ಪ್ರಶಸ್ತಿಯನ್ನೂ ಹಿಸ್ಸೆ ಮಾಡಲಾಯಿತು. ಯಕ್ಷಗಾನ ಅಕಾಡೆಮಿಗೆ 5 ಗೌರವ ಪ್ರಶಸ್ತಿ ಹಾಗೂ ಒಂದು ಪಾರ್ತಿಸುಬ್ಬ ಪ್ರಶಸ್ತಿಯನ್ನಷ್ಟೇ 2017ನೇ ಸಾಲಿನಲ್ಲಿ ಘೋಷಿಸಿತು. ಪಾರ್ತಿ ಸುಬ್ಬ 1 ಲಕ್ಷ ರೂ. ಆದರೆ, ಗೌರವ ಪ್ರಶಸ್ತಿ 50 ಸಾ.ರೂ. ಆಗಲಿದೆ.

ಆದರೆ, ಯಕ್ಷಗಾನ, ಮೂಡಲಪಾಯ, ಗೊಂಬೆಯಾಟದಂತಹ ಅಪರೂಪದ ಹಾಗೂ ಇನ್ನೂ ಸರ್ಕಾರದ ಪ್ರೋತ್ಸಾಹ ಬೇಕಾದ ಕಲಾ ಪ್ರಕಾರದಲ್ಲಿ ಐದಾರು ದಶಕಗಳ ಕಾಲ ನಿರಂತರವಾಗಿ ಕಾರ್ಯ ಮಾಡಿದ ಸಾಧಕರಿಗೆ, ಕಲಾವಿದರಿಗೆ ಪ್ರಶಸ್ತಿ ಕೊಡಬೇಕಾದದ್ದು ಅವರ ಕಲಾರ್ಹತೆ ದೃಷ್ಟಿಯಲ್ಲಿ ಕೂಡ ಅಕಾಡೆಮಿ ಜವಾಬ್ದಾರಿ. ಆದರೆ, ಪ್ರಶಸ್ತಿ ಕೇವಲ ಐದು ಇದ್ದರೆ ಇರುವ ಸಾವಿರಾರು ಕಲಾವಿದರಿಗೆ ನ್ಯಾಯ ಕೊಡಲು ಸಾಧ್ಯವಿಲ್ಲ. ಈ ಕಾರಣದಿಂದ ಅಕಾಡೆಮಿ ಕಳೆದ ಆಗಸ್ಟ್‌ನಲ್ಲಿ ನೂತನ ಪ್ರಸ್ತಾವನೆ ಕಳುಹಿಸಿ ಪ್ರಶಸ್ತಿ ಸಂಖ್ಯೆ ಹೆಚ್ಚಳಕ್ಕೆ ಅನುಮತಿ ಕೊಡುವಂತೆ ಹಾಗೂ ಸರ್ಕಾರಕ್ಕೆ ವಿಶೇಷ ಹೊರೆ ಬಾರದಂತೆ ನೋಡಿಕೊಳ್ಳುವುದಾಗಿ ಭರವಸೆ ಕೊಟ್ಟಿದೆ.

ಇಲ್ಲಿ ಮಾತ್ರ ಕಡಿಮೆ: ನಾಟಕ ಅಕಾಡೆಮಿ ಗೌರವ ಪ್ರಶಸ್ತಿ 10, ವಾರ್ಷಿಕ ಪ್ರಶಸ್ತಿ 25, ಜಾನಪದ ಅಕಾಡೆಮಿ ಜಿಲ್ಲೆಗೊಂದು ವಾರ್ಷಿಕ ಪ್ರಶಸ್ತಿ (30), ಸಂಗೀತ ಅಕಾಡೆಮಿ ವಾರ್ಷಿಕ ಪ್ರಶಸ್ತಿ 16, ಲಲಿತಕಲಾ ಅಕಾಡೆಮಿ ವಾರ್ಷಿಕ ಪ್ರಶಸ್ತಿ 10 ಹೊಂದಿದೆ. ಆದರೆ ತೆಂಕು, ಬಡಗು, ಬಡಾ ಬಡಗಿ, ಮೂಡಲಪಾಯ, ಘಟ್ಟದ ಕೋರೆ, ಕೇಳಿಕೆ, ಗೊಂಬೆಯಾಟ, ತಾಳಮದ್ದಲೆ, ಯಕ್ಷಗಾನದಲ್ಲಿ ಹಿಮ್ಮೇಳ, ಮುಮ್ಮೇಳ, ಮುಮ್ಮೇಳದಲ್ಲಿ ನಾಯಕ, ಪ್ರತಿನಾಯಕ, ಹಾಸ್ಯ, ಪುಂಡು ವೇಷ, ಹಿಮ್ಮೇಳದಲ್ಲಿ ಭಾಗವತರು, ಮದ್ದಲೆ, ಚಂಡೆಯವರು, ಸಾಹಿತ್ಯ ರಚನೆ ಹೀಗೆ ವಿಭಾಗಗಳು ಹತ್ತು ಹಲವು. ಒಂದೊಂದು ವಿಭಾಗದಲ್ಲಿ ಒಬ್ಬರಿಗೆ ಅಂದರೂ 5 ಪ್ರಶಸ್ತಿ ಯಾವುದಕ್ಕೂ ಸಾಲದು. ಅಕಾಡೆಮಿ ಕಲಾವಿದರನ್ನು ತಲುಪುವದು ಕೇವಲ ಪ್ರಶಸ್ತಿಗಳ ಮೂಲಕ ಮಾತ್ರ. ರಾಜ್ಯ ಮಟ್ಟದಲ್ಲಿ ಸರ್ಕಾರ ಗುರುತಿಸಬೇಕಾದ ಕಾರ್ಯ ಕೂಡ ಇರುತ್ತವೆ. ಅದರ ಜೊತೆಗೆ ಕನಿಷ್ಠ 25 ವಾರ್ಷಿಕ ಪ್ರಶಸ್ತಿ ನೀಡಬೇಕು.

ಕಾರಣ ಇದೇ!: ಯಕ್ಷಗಾನ ಅಕಾಡೆಮಿ 2018ರ ಪ್ರಶಸ್ತಿ ಘೋಷಣೆ ಮಾಡದೇ ಹಿಂದೇಟು ಹಾಕುವದಕ್ಕೂ ಸರ್ಕಾರ ಪ್ರಶಸ್ತಿ ಸಂಖ್ಯೆ ನಿಗದಿಗೊಳಿಸದೇ ಇರುವುದು ಕಾರಣ ಎನ್ನಲಾಗಿದೆ. ಸರ್ಕಾರಕ್ಕೆ ಆರ್ಥಿಕ ಹೊರೆ ಆಗದಂತೆ ಅಕಾಡೆಮಿ ಪ್ರಶಸ್ತಿ ಸಂಖ್ಯೆ ಹೆಚ್ಚಳಕ್ಕೆ ಬದ್ಧವಾಗಿದೆ. ತಲಾ 25 ಸಾವಿರ ರೂ.ಗಳ ಹೆಚ್ಚುವರಿ ವಾರ್ಷಿಕ ಪ್ರಶಸ್ತಿಗಾಗಿ ಸರ್ಕಾರದ ಅನುಮತಿಗೆ ಅಕಾಡೆಮಿ ಕಾಯುತ್ತಿದೆ. ಈ ಮೂಲಕ ಕಲೆಯ ಅನಾವರಣದಲ್ಲಿ ತೊಡಗಿಕೊಂಡವರಿಗೆ ಬೆಂಬಲ ಕೊಡಬೇಕು ಎಂಬುದು ಯಕ್ಷಗಾನ ಪ್ರಿಯರ ಒತ್ತಾಸೆಯಾಗಿದೆ.

ಗೌರವ ಪ್ರಶಸ್ತಿ ಜತೆಗೆ ಹತ್ತು ವಾರ್ಷಿಕ ಪ್ರಶಸ್ತಿಗಳಿಗೆ ಅನುಮತಿ ಕೇಳಿದ್ದೇವೆ. ಸರ್ಕಾರಕ್ಕೆ ಯಾವುದೇ ಆರ್ಥಿಕ ಹೊರೆ ಇಲ್ಲ. ಅಕಾಡೆಮಿ ಅನುದಾನದಲ್ಲೇ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಅನುಮತಿ ಬಳಿಕ ಪ್ರಶಸ್ತಿ ಘೋಷಣೆ ಮಾಡುತ್ತೇವೆ.
 ಪ್ರೊ. ಎಂ.ಎ.ಹೆಗಡೆ,
ಅಧ್ಯಕ್ಷರು ಯಕ್ಷಗಾನ ಅಕಾಡೆಮಿ

ಕನಿಷ್ಟ 10 ಯಕ್ಷಶ್ರೀ ಪ್ರಶಸ್ತಿ ನೀಡಲು ಅವಕಾಶ ನೀಡುವಂತೆ ಅವಕಾಶ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು ನಿಜ. ಶೀಘ್ರ ಅನುಮತಿ ಸಿಗುವ ನಿರೀಕ್ಷೆ ಇದೆ.
ಬಲವಂತರಾವ್‌ ಪಾಟೀಲ,
ನಿರ್ದೇಶಕರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ 

ರಾಘವೇಂದ್ರ ಬೆಟ್ಟಕೊಪ್ಪ 

ಟಾಪ್ ನ್ಯೂಸ್

ಆತ್ಮಹತ್ಯೆ – ಉಪ್ಪಿನಂಗಡಿ

ಕಣ್ಣಿಗೆ ಬಟ್ಟೆಕಟ್ಟಿ ನೇತ್ರಾವತಿ ನದಿಗೆ ಹಾರಿದ ವ್ಯಕ್ತಿ

fire

5 ಅಂತಸ್ತಿನ ಕಟ್ಟದಲ್ಲಿ ಬೆಂಕಿ ಅವಘಡ : 2 ಬಲಿ,70 ಮಂದಿ ರಕ್ಷಣೆ

230 ದಿನಗಳಲ್ಲಿ ಭಾರೀ ಇಳಿಕೆ;ಭಾರತದಲ್ಲಿ ಕಳೆದ 24ಗಂಟೆಗಳಲ್ಲಿ 13,596 ಕೋವಿಡ್ ಪ್ರಕರಣ ಪತ್ತೆ

230 ದಿನಗಳಲ್ಲಿ ಭಾರೀ ಇಳಿಕೆ;ಭಾರತದಲ್ಲಿ ಕಳೆದ 24ಗಂಟೆಗಳಲ್ಲಿ 13,596 ಕೋವಿಡ್ ಪ್ರಕರಣ ಪತ್ತೆ

ಸಿನಿಮಾಗಳು ಗೆದ್ದರೂ ಸಂಭ್ರಮಿಸುವ ಮೂಡ್‌ನಿಂದ ದೂರ ..

ಸಿನಿಮಾಗಳು ಗೆದ್ದರೂ ಸಂಭ್ರಮಿಸುವ ಮೂಡ್‌ನಿಂದ ದೂರ ..

ಟಿ20 ವಿಶ್ವಕಪ್: ಬಾಂಗ್ಲಾದೇಶಕ್ಕೆ ಸೋಲಿನ ರುಚಿ ತೋರಿಸಿದ ಸ್ಕಾಟ್ಲೆಂಡ್

ಟಿ20 ವಿಶ್ವಕಪ್: ಬಾಂಗ್ಲಾದೇಶಕ್ಕೆ ಸೋಲಿನ ರುಚಿ ತೋರಿಸಿದ ಸ್ಕಾಟ್ಲೆಂಡ್

gtjuyjuhygfds

ಕಾಪು : ಅಕಾಲಿಕ ಮಳೆಯಿಂದಾಗಿ ಗದ್ದೆಯಲ್ಲೇ ಮಲಗಿದ ಭತ್ತದ ಪೈರುಗಳು ; ಅಪಾರ ಬೆಳೆ ಹಾನಿ

ಕಾಶ್ಮೀರದಲ್ಲಿ ಮುಂದುವರಿದ ನಾಗರಿಕರ ಹತ್ಯೆ: ಇಬ್ಬರು ಕಾರ್ಮಿಕರನ್ನು ಕೊಂದ ಉಗ್ರರು!

ಕಾಶ್ಮೀರದಲ್ಲಿ ಮುಂದುವರಿದ ನಾಗರಿಕರ ಹತ್ಯೆ: ಇಬ್ಬರು ಕಾರ್ಮಿಕರನ್ನು ಕೊಂದ ಉಗ್ರರು!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

fcgdftgrt

ಬಿಜೆಪಿ ಅವಧಿಯಲ್ಲಿಯೇ ಅಲ್ಪಸಂಖ್ಯಾತರಿಗೆ ಹೆಚ್ಚು ಅನುದಾನ : ಮುಝಮ್ಮಿಲ್ ಬಾಬು

hfghtyht

ದಾಂಡೇಲಿ :  ಅಪರಿಚಿತ ವಾಹನ ಡಿಕ್ಕಿ : ಪಾದಚಾರಿ ಸಾವು

ಬಿಜೆಪಿ ಅಧಿಕಾರವಧಿಯಲ್ಲಿಯೇ ಅಲ್ಪಸಂಖ್ಯಾತರ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಬಿಡುಗಡೆಯಾಗಿದೆ

ಅಲ್ಪಸಂಖ್ಯಾತರ ಅಭಿವೃದ್ಧಿಗೆ ಬಿಜೆಪಿ ಅಧಿಕಾರವಧಿಯಲ್ಲಿಯೇ ಹೆಚ್ಚಿನ ಅನುದಾನ ಬಿಡುಗಡೆಯಾಗಿದೆ

ಸಂವಿಧಾನ ಓದು ಅಭಿಯಾನದಡಿ ಮನೆ-ಮನೆಗೂ ಸಂವಿಧಾನ ಕಾರ್ಯಕ್ರಮ

ಸಂವಿಧಾನ ಓದು ಅಭಿಯಾನದಡಿ ಮನೆ-ಮನೆಗೂ ಸಂವಿಧಾನ ಕಾರ್ಯಕ್ರಮ

ಹಸನ್ಮಾಳದಲ್ಲಿ ದನಗರ ಗೌಳಿ ಸಮುದಾಯದವರಿಂದ ಶಿಲಂಗಾಣ ಕಾರ್ಯಕ್ರಮ

ಹಸನ್ಮಾಳದಲ್ಲಿ ದನಗರ ಗೌಳಿ ಸಮುದಾಯದವರಿಂದ ಶಿಲಂಗಾಣ ಕಾರ್ಯಕ್ರಮ

MUST WATCH

udayavani youtube

ಅರರೆ… ಬಾಳೆ ಕಾಯಿ ಶ್ಯಾವಿಗೆ.. ರುಚಿ ಬಾಯಿಗೆ, ಉತ್ತಮ ಆರೋಗ್ಯಕ್ಕೆ

udayavani youtube

ದಾಂಡೇಲಿ : ಜನಮನ ಸೂರೆಗೊಂಡ ದನಗರ ಗೌಳಿ ನೃತ್ಯ

udayavani youtube

ಭತ್ತದ ಕೃಷಿ ಭರಪೂರ ಲಾಭ ತಂದು ಕೊಡುತ್ತಾ ?

udayavani youtube

ಸಮಾಜ ಮೆಚ್ಚುವಂತೆ ಬಾಳುವೆ: ಆರ್ಯನ್‌ ಖಾನ್ |UDAYAVANI NEWS BULLETIN|17/10/2021

udayavani youtube

ಅರಕಲಗೂಡು: ಅಕ್ರಮವಾಗಿ ಗೋಮಾಂಸ ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ಪೊಲೀಸರ ದಾಳಿ

ಹೊಸ ಸೇರ್ಪಡೆ

5

ಪ್ರಾಧ್ಯಾಪಕರ ಬಡ್ತಿ ಅನ್ಯಾಯ ಸರಿಪಡಿಸಲು ಮನವಿ

ಆತ್ಮಹತ್ಯೆ – ಉಪ್ಪಿನಂಗಡಿ

ಕಣ್ಣಿಗೆ ಬಟ್ಟೆಕಟ್ಟಿ ನೇತ್ರಾವತಿ ನದಿಗೆ ಹಾರಿದ ವ್ಯಕ್ತಿ

fire

5 ಅಂತಸ್ತಿನ ಕಟ್ಟದಲ್ಲಿ ಬೆಂಕಿ ಅವಘಡ : 2 ಬಲಿ,70 ಮಂದಿ ರಕ್ಷಣೆ

4

ಮಳೆಗೆ ಮಣ್ಣು ಪಾಲಾದ ವಾಣಿಜ್ಯ ಬೆಳೆ

230 ದಿನಗಳಲ್ಲಿ ಭಾರೀ ಇಳಿಕೆ;ಭಾರತದಲ್ಲಿ ಕಳೆದ 24ಗಂಟೆಗಳಲ್ಲಿ 13,596 ಕೋವಿಡ್ ಪ್ರಕರಣ ಪತ್ತೆ

230 ದಿನಗಳಲ್ಲಿ ಭಾರೀ ಇಳಿಕೆ;ಭಾರತದಲ್ಲಿ ಕಳೆದ 24ಗಂಟೆಗಳಲ್ಲಿ 13,596 ಕೋವಿಡ್ ಪ್ರಕರಣ ಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.