ಶಿರಸಿ: ಲಯನ್ಸ್ ಲೋಚನ ಕಾರ್ಯಕ್ರಮಕ್ಕೆ ಚಾಲನೆ


Team Udayavani, Jul 11, 2021, 9:59 AM IST

ಶಿರಸಿ: ಲಯನ್ಸ್ ಲೋಚನ ಕಾರ್ಯಕ್ರಮಕ್ಕೆ ಚಾಲನೆ

ಶಿರಸಿ: ಮಕ್ಕಳು ಜಗತ್ತಿನ ಭವಿಷ್ಯ. ಅವರ ಬದುಕು ಸುಂದರವಾಗಿರಬೇಕು ಎಂದು ಮಕ್ಕಳ ಹೃದ್ರೋಗ ತಜ್ಞೆ ಡಾ. ವಿಜಯಲಕ್ಷ್ಮೀ ಬಾಳೇಕುಂದ್ರಿ ಹೇಳಿದರು.

ಅವರು ಶನಿವಾರ ಶಿರಸಿ ಲಯನ್ಸ್ ಶಿಕ್ಷಣ ಸಂಸ್ಥೆಯ ಆಶ್ರಯದಲ್ಲಿ ಶಿರಸಿ ಲಯನ್ಸ್ ಕ್ಲಬ್, ಶಿರಸಿ ರೋಟರಿ ಕ್ಲಬ್‌ಗಳ ಸಹಯೋಗದೊಂದಿಗೆ ಮುನ್ನಡೆಯಲಿರುವ ಲಯನ್ಸ್ ಲೋಚನ’ ವಾರಾಂತ್ಯದ ಅಂತರ್ಜಾಲ ಸಂಚಿಕೆಗಳ ಪ್ರಸಾರದ ಪ್ರಥಮ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಲೋಚನ ಎಂಬುದು ಅದ್ಭುತ ಪರಿಕಲ್ಪನೆಯ ಕಾರ್ಯಕ್ರಮ .ಲೋಚನ ಅಂದರೆ ಕಣ್ಣು. ಕಣ್ಣು ಎರಡಾದರೂ ದೃಷ್ಟಿ ಒಂದೆ. ನಕಾರಾತ್ಮಕ ಚಿಂತನೆಯಿಂದ ಜನರು ನರಳಾಡುತ್ತಿದ್ದಾರೆ, ಸಕಾರಾತ್ಮಕ ಚಿಂತನೆಯಿಂದ ಬದುಕನ್ನು ಸುಂದರ ಸುಖಕರವನ್ನಾಗಿ ಮಾಡಿಕೊಳ್ಳಬೇಕು. ಶರೀರದ ಎರಡು ಕಣ್ಣುಗಳು ಚಿಕ್ಕದಾದರೂ ಬದುಕಿನಲ್ಲಿ ಅದರ ಮಹತ್ವ ದೊಡ್ಡದು. ಆದ್ದರಿಂದ ಸಕಾರಾತ್ಮಕ ವಿಶಾಲ ದೃಷ್ಠಿಕೋನ ಬೆಳೆಸಿಕೊಂಡು ಜಗತ್ತಿನಲ್ಲಿ ಮುಂದುವರೆಯಬೇಕು. ಜಗತ್ತನ್ನು ನೋಡುವ ದೃಷ್ಟಿ ಬದಲಾಗಬೇಕು. ಶಿಕ್ಷಣದಲ್ಲಿ ಕೇವಲ ಪುಸ್ತಕದ ಬದನೆಕಾಯಿಗಳಾಗಿ ಮಕ್ಕಳನ್ನು ತಯಾರಿ ಮಾಡುತ್ತಿರುವ ಇಂದಿನ ದಿನದಲ್ಲಿ ಮಕ್ಕಳಲ್ಲಿ ಸಕಾರಾತ್ಮಕ ದೃಷ್ಠಿಕೋನ ಬೆಳೆಸುವಲ್ಲಿ ರೋಟರಿ ಕ್ಲಬ್, ಲಯನ್ಸ್ ಕ್ಲಬ್, ಶಿರಸಿ ಲಯನ್ಸ್  ಶಿಕ್ಷಣ ಸಂಸ್ಥೆಗಳ ಈ  ಪ್ರಯತ್ನ ಶ್ಲಾಘನೀಯ ಎಂದರು.

ಮಕ್ಕಳಲ್ಲಿ ಸಕಾರಾತ್ಮಕ ದೃಷ್ಠಿಕೋನ ಬೆಳೆಯ ಬೇಕಾದರೆ ಆರೋಗ್ಯಪೂರ್ಣ ಆಹಾರ, ಧ್ಯಾನ, ಪ್ರಾಣಾಯಾಮಗಳು ಬೇಕು. ಮೊದಲಿಗೆ ಗುರುಕುಲ ಪದ್ಧತಿಯಲ್ಲಿ ಗುರುವಿನ ಸ್ಥಾನ ಶ್ರೇಷ್ಠವಾಗಿತ್ತುಎಂದ ಅವರು, ಮಕ್ಕಳಿಗೆ ಒಳ್ಳೆಯ ಆಹಾರ, ಶಿಕ್ಷಣ, ಆರೈಕೆ, ಯೋಗ, ಪ್ರಾಣಾಯಾಮ ಇವುಗಳ ಜೊತೆ ನೈತಿಕ ಮೌಲ್ಯಗಳನ್ನು ನೀಡುವ ನೀತಿ ಶಿಕ್ಷಣವೂ ಬೇಕಿದೆ. ಉತ್ತಮ ಸಂಸ್ಕಾರ ಅವಶ್ಯವಾಗಿದೆ. ಮಕ್ಕಳಿಗೆ ಭದ್ರತೆ, ವಾತ್ಸಲ್ಯ, ಮಾರ್ಗದರ್ಶನ, ಶಿಕ್ಷಣ ಹಾಗೂ ಸಂಸ್ಕಾರ ನೀಡುವುದು ಪಾಲಕರ, ಶಿಕ್ಷಕರ ಹಾಗೂ ಸರ್ವರ ಜವಬ್ದಾರಿ ಎಂದರು.

ಶಿರಸಿ ಲಯನ್ಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎನ್. ವಿ. ಜಿ. ಭಟ್, ಶಿರಸಿ ಲಯನ್ಸ್ ಕ್ಲಬ್ ಅಧ್ಯಕ್ಷ ಉದಯ ಸ್ವಾದಿ, ಗೌರವ ಕಾರ್ಯದರ್ಶಿ ರವಿ ನಾಯಕ, ಶಿರಸಿ ರೋಟರಿ ಅಧ್ಯಕ್ಷ ಪಾಂಡುರಂಗ ಪೈ, ನೇತ್ರತಜ್ಞರಾದ ರೊಟೇರಿಯನ್ ಡಾ| ಕೆ.ವಿ. ಶಿವರಾಮ್, ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಪ್ರಭಾಕರ ಹೆಗಡೆ, ಲಯನ್ಸ್  ಕ್ಲಬ್ ಕಾರ್ಯದರ್ಶಿ ವಿನಯ ಹೆಗಡೆ ಬಸವನಕಟ್ಟೆ ಉಪಸ್ಥಿತರಿದ್ದರು.

ರಮಾ ಪಟವರ್ಧನ್ ಪರಿಚಯಿಸಿದರು. ಮುಖ್ಯಾಧ್ಯಾಪಕ ಶಶಾಂಕ ಹೆಗಡೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಿಕ್ಷಕಿಯರಾದ ಮುಕ್ತಾ ನಾಯ್ಕ, ರೇಷ್ಮಾ ಮಿರಾಂದಾ ನಿರ್ವಹಿಸಿದು. ಲಯನ್ಸ್  ಶಾಲೆಯ ಯೂಟ್ಯೂಬ್ ವಾಹಿನಿ ಹಾಗೂ ಜೂಮ್ ಆಪ್ ಮೂಲಕ ಪ್ರಸಾರವಾದ ಈ ಕಾರ್ಯಕ್ರಮವನ್ನು ನಾಲ್ಕು ಸಾವಿರಕ್ಕೂ ಮಿಕ್ಕಿ ಮಕ್ಕಳು, ಪಾಲಕರು, ಶಿಕ್ಷಕರು ಹಾಗೂ ಶಿಕ್ಷಣಾಸಕ್ತರು ವೀಕ್ಷಿಸಿದರು.

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’‌

ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’‌

Modi 3

PM Modi ಏ.28ರಂದು ಉತ್ತರಕನ್ನಡಕ್ಕೆ?; ಯಲ್ಲಾಪುರದಲ್ಲಿ ಬಹಿರಂಗ ಸಮಾವೇಶ?

Bhatkal: ಇಬ್ಬರು ಸಮುದ್ರಪಾಲು

Bhatkal: ಇಬ್ಬರು ಸಮುದ್ರಪಾಲು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.