ಶಿರಸಿ : ಜಾತ್ರೆಯಲ್ಲಿ ಕೆಂಡ ಹಾಯ್ದ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್
Team Udayavani, May 10, 2022, 3:50 PM IST
ಶಿರಸಿ : ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಸ್ವ ಕ್ಷೇತ್ರದ ಪ್ರಮುಖ ದೇವಸ್ಥಾನದ ಜಾತ್ರೆಯಲ್ಲಿ ಪಾಲ್ಗೊಂಡ ವೇಳೆ ಕೆಂಡ ಹಾಯ್ದು ಭಕ್ತಿ ಭಾವದ ಸಮರ್ಪಣೆ ಸಲ್ಲಿಸಿದ ಘಟನೆ ಮಂಗಳವಾರ ನಡೆದಿದೆ.
ಐತಿಹಾಸಿಕ ಪ್ರಸಿದ್ಧ ಬನವಾಸಿ ಹೋಬಳಿಯ ನರೂರಿನ ವೀರಭದ್ರೇಶ್ವರ ಹಾಗೂ ಚೌಡೇಶ್ವರಿ ದೇವಸ್ಥಾನದ ಜಾತ್ರೆಯಲ್ಲಿ ಭಕ್ತರು ಕೆಂಡ ಹಾಯುವ ಸಂಪ್ರದಾಯ ಇದೆ.
ಭಕ್ತರು ಕೆಂಡ ಹಾಯುವ ವೇಳೆ ಜಾತ್ರೆಯಲ್ಲಿ ಭಾಗಿಯಾಗಿದ್ದ ಹೆಬ್ಬಾರ್ ಅವರೂ ಭಕ್ತಿ ಭಾವದಲ್ಲಿ ಕೆಂಡ ಹಾಯ್ದು ಸೇವೆ ಸಲ್ಲಿಸಿದರು.
ಇದನ್ನೂ ಓದಿ : 19 ವರ್ಷದ ಬಳಿಕ ವಿಜೃಂಭಣೆಯಿಂದ ನಡೆದ ನರಬಲಿ ಹಬ್ಬ: ಇಲ್ಲಿ ಸತ್ತವ ಬದುಕಿ ಬರುವುದೇ ಪವಾಡ!