ಶಿರಸಿಗೂ 24×7 ನೀರಿಗೆ ಆದ್ಯತೆ : ವಿಶ್ವೇಶ್ವರ ಹೆಗಡೆ ಕಾಗೇರಿ
Team Udayavani, Jun 29, 2021, 1:40 PM IST
ಶಿರಸಿ: ನಗರದಲ್ಲಿ ದಿನದ 24 ಗಂಟೆ ನೀರು ಪೂರೈಸಲು ಆದ್ಯತೆಯಲ್ಲಿ ಕೆಲಸ ಮಾಡಲಾಗುತ್ತಿದೆ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.
ಅವರು ನಗರ ಸಭೆಯಲ್ಲಿ ಸಭೆ ನಡೆಸಿ ಶಿರಸಿಗೆ ಮಾರಿಗದ್ದೆ ಹಾಗೂ ಕೆಂಗ್ರೆಯಿಂದ ಶಿರಸಿಗೆ ಕುಡಿಯುವ ನೀರು ಬರುತ್ತಿದೆ. ನೀರಿನ ಪೈಪಿನ ಬದಲಾವಣೆ, ಪಂಪ್ ಅಳವಡಿಕೆ, ಐದು ಲಕ್ಷ ಸಾಮರ್ಥ್ಯ ದ ಮೂರು ಓವರ್ ಹೆಡ್ ಟ್ಯಾಂಕ್ ಅಳವಡಿಕೆ ಮಾಡಲಾಗುತ್ತದೆ.
ಕೆಂಗ್ರೆ ಹೊಳೆಯಿಂದ ೮ವರೆಕಿಮಿ ಶಿರಸಿಗೆ ಒಂದಡಿ ಗಾತ್ರದ ಪೈಪ್ ಅಳವಡಿಕೆ ಮಾಡಲಾಗುತ್ತದೆ ಎಂದರು.
೩೮ ಕೋಟಿ ರೂಪಾಯಿ ಮೊತ್ತದಲ್ಲಿ ಕಾಮಗಾರಿ ಜು.21ರಿಂದ ಪ್ರಾರಂಭ ಮಾಡಲಾಗುತ್ತದೆ. 18 ತಿಂಗಳ ಅವಧಿಯಲ್ಲಿ ಮುಗಿಯಲಿದೆ. ೧೦ ಸಾವಿರ ಮನೆಗಳಿಗೆ ಸಂಪರ್ಕ ಆಗಲಿದೆ. ಶೀಘ್ರ ಕಾಮಗಾರಿ ನಡೆಸಲಾಗುತ್ತದೆ. ಜಲ ಶುದ್ದೀಕರಣ ಘಟಕ ಪ್ರಸ್ತಾಪ ಕೂಡ ಇದೆ. ಈ ಬಗ್ಗೂ ಪ್ರಯತ್ನ ಮಾಡಲಾಗುತ್ತದೆ. ಎಂದರು.
ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ, ಉಪಾಧ್ಯಕ್ಷೆ ವೀಣಾ ಶೆಟ್ಟಿ, ಪೌರಾಯುಕ್ತ ಕೇಶವ ಚೌಗಳೆ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಮನೆಬಾಗಿಲಿಗೆ ರೈಲ್ವೆ ಪಾರ್ಸೆಲ್ ತರಲಿದ್ದಾನೆ ಅಂಚೆಯಣ್ಣ
ಬೊಮ್ಮಾಯಿಗೆ ಚೌತಿ ಚಂದ್ರನಂತಾದ ಜನೋತ್ಸವ: 28ರ ಜನೋತ್ಸವ ಮತ್ತೆ ಮುಂದಕ್ಕೆ..
ಕೋಡಿ ಹೊಸಬೆಂಗ್ರೆಯಲ್ಲಿ ಕಡಲ್ಕೊರೆತ : ಮನೆ, ರಸ್ತೆ ಅಪಾಯದಲ್ಲಿ; ತಾತ್ಕಾಲಿಕ ಪರಿಹಾರ
ಎಪಿಕ್ ಕಾರ್ಡ್ಗೆ ಆಧಾರ್ ನಂಬರ್ ಲಿಂಕ್ : ಪ್ರಕ್ರಿಯೆ ಚುರುಕುಗೊಳಿಸಲು ಡಿಸಿ ಸೂಚನೆ
ಹೆಚ್ಚುತ್ತಿರುವ ಅಪರಾಧ ಪ್ರಕರಣ : ಮತ್ತೆ ವಾಹನಗಳ ಟಿಂಟ್ ಮೇಲೆ ಪೊಲೀಸ್ ಕಣ್ಣು