ಕುಡಿಯುವ ನೀರಿನ ಸಮಸ್ಯೆ ಪರಿಹರಿಸಿ
Team Udayavani, Apr 3, 2021, 9:11 PM IST
ದಾಂಡೇಲಿ: ಸಮೀಪದ ಅವೇಡಾ ಗ್ರಾಪಂ ವ್ಯಾಪ್ತಿಯ ಕೊಂಡಪಾ ಗ್ರಾಮಸ್ಥರಿಗೆ ಕಳೆದೆರಡು ವರ್ಷಗಳಿಂದ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು, ಸ್ಥಳೀಯರು ಬಸವಳಿದಿದ್ದಾರೆ. ಸ್ಥಳೀಯ ಪಂಚಾಯ್ತನವರಿಗೆ ನಾಲ್ಕು ಬಾರಿ ಮನವಿ ಸಲ್ಲಿಸಿದರೂ ಯಾವುದೇ ರೀತಿಯ ಸ್ಪಂದನೆ ದೊರೆಯದ್ದರಿಂದ ನೀರಿನ ಸಮಸ್ಯೆ ಕಳೆದೆರಡು ವರ್ಷಗಳಿಂದ ಹಾಗೆನೇ ಮುಂದುವರಿದಿದೆ.
ಇಲ್ಲಿ 11 ಮನೆಗಳಿದ್ದು, ಪ್ರತಿಮನೆಗಳಿಗೂ ಗ್ರಾಪಂನಿಂದ ನೀರಿನ ನಳದ ಸಂಪರ್ಕ ನೀಡಲಾಗಿತ್ತು. ಆದರೆ ಕಳೆದೆರಡು ವರ್ಷಗಳ ಹಿಂದೆ ಇಲ್ಲಿ ರಸ್ತೆ ಮತ್ತು ಗಟಾರ ನಿರ್ಮಾಣದ ಸಂದರ್ಭದಲ್ಲಿ ಕಾಮಗಾರಿ ನಡೆಯುವಾಗ ಕುಡಿಯುವ ನೀರಿನ ಪೈಪ್ ಒಡೆದು ಹೋಗಿದ್ದರಿಂದ ಸಮಸ್ಯೆ ತಲೆದೋರಿದೆ. ಇಲ್ಲಿರುವ 11 ಕುಟುಂಬಗಳಲ್ಲಿ ಸಧ್ಯಕ್ಕೆ ಲಕ್ಷ್ಮಣ ಸಾವಂತ ಅವರ ಮನೆಗೆ ಬರುವ ನೀರನ್ನೆ ಎಲ್ಲರೂ ಆಶ್ರಯಿಸಬೇಕಾದ ಸ್ಥಿತಿಯಿದೆ.
ಅಂದ ಹಾಗೆ ಇಲ್ಲಿ ಒಡೆದು ಹೋದ ಪೈಪನ್ನು ದುರಸ್ತಿಗೊಳಿಸಲು ನಿರಾಸಕ್ತಿ ಯಾಕೆ ಎಂಬ ಪ್ರಶ್ನೆಯೂ ಸ್ಥಳೀಯರನ್ನು ಕಾಡತೊಡಗಿದೆ. ಗ್ರಾಮದ ಸಮಸ್ಯೆಗಳಿಗೆ ಅದರಲ್ಲೂ ಮುಖ್ಯವಾಗಿ ಮೂಲಭೂತ ಸಮಸ್ಯೆಗಳಿಗೆ ತ್ವರಿತಗತಿಯಲ್ಲಿ ಸ್ಪಂದಿಸಬೇಕಾದ ಅವೇಡಾ ಗ್ರಾಪಂ ದಿವ್ಯ ನಿರ್ಲಕ್ಷé ಎದ್ದು ಕಾಣುತ್ತಿದೆ.
ಇನ್ನಾದರೂ ನಿದ್ದೆಯಿಂದ ಎದ್ದು, ಇಲ್ಲಿಯ ನೀರಿನ ಸಮಸ್ಯೆಯಿಂದ ಬಸವಳಿದು ಸುಸ್ತು ಹೊಡೆದ ಕೊಂಡಪಾ ಜನತೆಗೆ ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕಾಗಿದೆ. ಸ್ಥಳೀಯರಾದ ಲಕ್ಷ್ಮಣ ಸಾವಂತ, ಸುಶೀಲಾ ಸಾವಂತ, ಗಂಗಪ್ಪಾ ವಡ್ಡರ, ಲಕ್ಷ್ಮೀಬಾಯಿ ವಡ್ಡರ, ಸುರೇಖಾ ಮೋರೆ, ಶಂಕರ ಸಿಂಧೆ, ರಾಮು ಸಿಂಧೆ, ಹನುಮಂತ ಅಪ್ಪಗೋಳ, ಬಾಳು ಕರಡಿ ಮತ್ತು ರಾಮಕ್ಕಾ ಜುಜ್ಜುವಾಡಕರ ನೀರಿನ ಸಮಸ್ಯೆ ಶೀಘ್ರ ಬಗೆಹರಿಸುವಂತೆ ಆಗ್ರಹಿಸಿದ್ದಾರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಉತ್ತರ ಕನ್ನಡದಲ್ಲಿ ಭಾರೀ ಮಳೆ: ಗುರುವಾರವೂ ಶಾಲಾ ಕಾಲೇಜಿಗೆ ರಜೆ ಘೋಷಣೆ
ಶಿರಸಿ: ಭಾರಿ ಮಳೆಗೆ ಶಾಲಾ-ಕಾಲೇಜುಗಳಿಗೆ ರಜೆ; ಕೊನೇ ಕ್ಷಣದ ಆದೇಶಕ್ಕೆ ಆಕ್ರೋಶ
ಉತ್ತರ ಕನ್ನಡ ಭಾರೀ ಮಳೆ: ಶಾಲಾ ಕಾಲೇಜಿಗೆ ರಜೆ ಘೊಷಣೆ
ಅಂಕೋಲಾ: ನಿಯಂತ್ರಣ ತಪ್ಪಿ ವಿದ್ಯುತ್ ಟ್ರಾನ್ಸ್ ಫಾರ್ಮರ್ ಗೆ ಗುದ್ದಿದ ಕಾರು; ಓರ್ವ ಸಾವು
ಭಟ್ಕಳ: ಉದಯಪುರ ಕನ್ನಯ್ಯಲಾಲ್ ಹತ್ಯೆ ಖಂಡಿಸಿ ಹಿಂದೂಪರ ಸಂಘಟನೆಗಳಿಂದ ಪ್ರತಿಭಟನೆ
MUST WATCH
ಹೊಸ ಸೇರ್ಪಡೆ
ಮಹಾ ಚುನಾವಣೆಯತ್ತ ಚಿತ್ತ: ಶಿಂಧೆ ಬಣದ 13, ಬಿಜೆಪಿಯ 25 ಶಾಸಕರಿಗೆ ಸಚಿವ ಸಂಪುಟದಲ್ಲಿ ಸ್ಥಾನ
ಚಿಕ್ಕೋಡಿ: ವಿದ್ಯುತ್ ಅವಘಡದಿಂದ ವಿದ್ಯಾರ್ಥಿನಿ ಸಾವು: ಪರಿಹಾರಕ್ಕಾಗಿ ಬೃಹತ್ ಪ್ರತಿಭಟನೆ
ಸುಳ್ಳು ಅನ್ನೋದು ಬಿಜೆಪಿಯವರಿಗೆ ರಕ್ತಗತವಾಗಿದೆ : ರಾಮಲಿಂಗಾ ರೆಡ್ಡಿ
ಫ್ರೀಡಂ ಪಾರ್ಕ್ ನಲ್ಲಿ ಆರೋಗ್ಯ ಸಿಬ್ಬಂದಿಗಳ ಪ್ರತಿಭಟನೆ; ಪೂರಕ ಸ್ಪಂದನೆ ಎಂದ ಸಚಿವ
ಕೆಲಸಕಿದ್ದ ಮನೆಯಲ್ಲಿ ನಗನಾಣ್ಯ ಕದ್ದ ತಾಯಿ-ಮಗಳು