ಮಂಗನ ಓಡಿಸಲು ಸ್ಪ್ರೇ ಏರ್‌ ಗನ್‌


Team Udayavani, Mar 20, 2019, 11:55 AM IST

20-march-18.jpg

ಹೊನ್ನಾವರ: ಹಳ್ಳಿಗಳು ಮಂಗನ ಕಾಟಕ್ಕೆ ಸೋತು ಹೋಗಿವೆ. ಮಂಗ ಹೊಕ್ಕುವ ತೆಂಗಿನ ತೋಟದ ಅರ್ಧದಷ್ಟು ತೆಂಗಿನ ಕಾಯಿ, ಪೂರ್ತಿ ಬಾಳೆಕಾಯಿ ಮಂಗನ ಹೊಟ್ಟೆ ಸೇರುತ್ತಒಂದಿಷ್ಟು ಬಿದ್ದು ಮಣ್ಣಾಗುತ್ತದೆ. ಕಾಲವೇ ಪರಿಹಾರ ಕಂಡುಕೊಂಡಂತೆ ಉಡುಪಿ ಹೆಬ್ರಿ ತಾಲೂಕಿನ ಕಬ್ಬಿನಾಲೆ ಕೆ. ಸುಬ್ಬರಾವ್‌ ಎಂಬ ರೈತರು ಅವರು ಪರಿಣಾಮಕಾರಿ ಸ್ಪ್ರೇ ಏರ್‌ ಗನ್‌ ಸಿದ್ಧಪಡಿಸಿ, ಮಾರಾಟ ಮಾಡುತ್ತಿದ್ದಾರೆ. ರೈತರಿಂದ ಭಾರೀ ಬೇಡಿಕೆ ವ್ಯಕ್ತವಾಗುತ್ತಿದೆ.

ಒಂದು ಅಗಲವಾದ ಗಟ್ಟಿ ಪಿವಿಸಿ ಪೈಪ್‌ನ ಒಂದು ಬದಿಗೆ ಲೈಟರ್‌ ಕೂಡ್ರಿಸಿದ್ದಾರೆ. ಅದಕ್ಕೆ ಜೋಡಿಸುವಂತೆ ಇನ್ನೊಂದು ಕಡಿಮೆ ಅಗಲದ ಪೈಪ್‌ ತುಂಡು ಸಿದ್ಧಪಡಿಸಿದ್ದಾರೆ. ಮೊದಲು ಕಡಿಮೆ ಅಗಲದ ಪೈಪ್‌ಗೆ ಒಂದು ಪುಟ್ಟ ರದ್ದಿ ಕಾಗದವನ್ನು ಒತ್ತಿ ತುಂಬಬೇಕು. ನಂತರ ಇನ್ನೊಂದು ಕಾಗದವನ್ನು ಒದ್ದೆಮಾಡಿ ತುಂಬಿ, ಕೆಲವು ಚಿಕ್ಕಚಿಕ್ಕ ಕಲ್ಲುಗಳನ್ನು ಸೇರಿಸಿ, ಜೊತೆಗೆ ನೀಡಿದ ಕೋಲಿನಿಂದ ಗಟ್ಟಿಮಾಡಬೇಕು. ನಂತರ ಅಗಲದ ಪೈಪ್‌ಗೆ ಅವರು ನೀಡುವ ಸ್ಪ್ರೇ ಸಿಂಪಡಿಸಿ ಎರಡೂ ಕೊಳವೆಯನ್ನು ಜೋಡಿಸಬೇಕು. ನಂತರ ಮಂಗ ಇದ್ದ ಕಡೆ ಮುಖಮಾಡಿ ದೊಡ್ಡ ಪೈಪ್‌ನ ಹಿಂಬದಿಯ ಲೈಟರ್‌ ಅದುಮಿದಾಗ ದೊಡ್ಡ ಸಪ್ಪಳದೊಂದಿಗೆ ಕಾಗದದ ಚೂರುಗಳು ಹಾರಿ ತೂರಿಹೋದರೆ ಕಲ್ಲುಗಳು 150ಅಡಿ ಚಿಮ್ಮಿ ಮಂಗಗಳಿಗೆ ತಗಲುತ್ತದೆ. ಶಬ್ಧ ಮತ್ತು ಕಾಗದದ ಚೂರಿನ ಹಾರಾಟ ಮತ್ತು ಕಲ್ಲಿನ ಪೆಟ್ಟಿನಿಂದ ಮಂಗಗಳು ದಿಕ್ಕೆಟ್ಟು ಓಡಿ ಹೋಗುತ್ತದೆ. 

ಮಂಗಗಳನ್ನು ಕೊಲ್ಲುವುದನ್ನು ನಿಷೇಧಿಸಲಾಗಿದೆ. ಹಿಡಿದು ಬೇರೆ ಕಡೆ ಬಿಟ್ಟು ಬಂದರೆ ಮರಳಿ ಬರುತ್ತವೆ. ಕೊಂದರೂ ಕಡಿಮೆಯಾಗದಷ್ಟು ಸಂಖ್ಯೆಯಲ್ಲಿ ಮಂಗಗಳ ಸಂತತಿ ಹಳ್ಳಿಗರಿಗೆ ದುಸ್ವಪ್ನವಾಗಿದೆ. ಆನೆ ಹೊಕ್ಕ ಕಬ್ಬಿನಗದ್ದೆಯಂತೆ ಮಂಗ ಹೊಕ್ಕ ತೋಟದ ಫಲಗಳು ಮಂಗಮಾಯವಾಗುತ್ತಿವೆ. ಬಂದೂಕು ತೋರಿಸಿದರೂ ಹೆದರುವುದಿಲ್ಲ. ಪೇಟೆಯಲ್ಲಿ ಸಿಗುವ ಏರ್‌ಗನ್‌ಗಳು ಒಂದೇ ಚಿಕ್ಕ ಗುಂಡು ಹಾರಿಸುತ್ತದೆ, ಸಪ್ಪಳ ಕಡಿಮೆ. ಅದೆಲ್ಲದಕ್ಕಿಂತ ಈ ಉಪಕರಣದ ಬೆಲೆ ಕಡಿಮೆ, ಪರಿಣಾಮ ಖಚಿತ ಎಂಬುದು ರೈತರ ಅಭಿಪ್ರಾಯ. ಕೇವಲ
1400ರೂಪಾಯಿಗಳಿಗೆ ಒಂದು ಗನ್‌, ಸ್ಪ್ರೇ ಜೊತೆ ಸಿಗುತ್ತದೆ. 350ಸಲ ಸ್ಪ್ರೇ  ಪ್ರಯೋಗಿಸಬಹುದು. ನಂತರ ಸ್ಪ್ರೇ ತರಿಸಿಕೊಳ್ಳಬುದು. ಒಂದು ರೂ.ಗಿಂತ ಕಡಿಮೆ ವೆಚ್ಚದಲ್ಲಿ ಒಮ್ಮೆ ಮಂಗನನ್ನು ಬೆದರಿಸಬಹುದಾಗಿದೆ. ಸದ್ಯ ಈ ಉಪಕರಣ ಭಾರೀ ಬೇಡಿಕೆಯಲ್ಲಿದೆ. ಕಲ್ಲಡ್ಕ ಪ್ರಭಾಕರ ಭಟ್‌ ಸಹಿತ ಹಲವು ಗಣ್ಯರು, ಮಠಾಧೀಶರು, ರೈತರು ಇದನ್ನು ಬಳಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಹೊನ್ನಾವರದಲ್ಲಿ ನಡೆದ ಕೃಷಿ ಮೇಳ ಮತ್ತು ಮಲೆನಾಡು ಗಿಡ್ಡ ಹಬ್ಬದಲ್ಲಿ ಈ ಬಂದೂಕಿನ ಸಪ್ಪಳ, ಮಾರಾಟ ಜೋರಾಗಿತ್ತು. ಸಂಪರ್ಕ ಮೊ.9483246036 ಮತ್ತು 9448623696.

ಜೀಯು, ಹೊನ್ನಾವರ

ಟಾಪ್ ನ್ಯೂಸ್

24 ಗಂಟೆಯಲ್ಲಿ ದೇಶದಲ್ಲಿ 14,306 ಕೋವಿಡ್ ಸೋಂಕು ಪ್ರಕರಣಗಳು ಪತ್ತೆ

24 ಗಂಟೆಯಲ್ಲಿ ದೇಶದಲ್ಲಿ 14,306 ಕೋವಿಡ್ ಸೋಂಕು ಪ್ರಕರಣಗಳು ಪತ್ತೆ

bhajarangi 2

ಭಜರಂಗಿ ಜೊತೆ ಸಂಭ್ರಮಿಸಲು ಶಿವಣ್ಣ ಫ್ಯಾನ್ಸ್‌ ರೆಡಿ

siddaramaiah vs h d kumaraswamy

ಕರ್ನಾಟಕದಲ್ಲಿ ಜಾತಿ ವಿಷ ಬೀಜ ಬಿತ್ತಿದ್ದೆ ಸಿದ್ದರಾಮಯ್ಯ: ಕುಮಾರಸ್ವಾಮಿ ಆರೋಪ

ಇಂದಿನಿಂದ ‘ಕ್ರಾಂತಿ’ ಶುರು: ಶೂಟಿಂಗ್‌ ಮೂಡ್‌ಗೆ ದರ್ಶನ್‌

ಇಂದಿನಿಂದ ‘ಕ್ರಾಂತಿ’ ಶುರು: ಶೂಟಿಂಗ್‌ ಮೂಡ್‌ಗೆ ದರ್ಶನ್‌

ಮುಂದಿನ ಪಂದ್ಯಕ್ಕೆ ರೋಹಿತ್ ಶರ್ಮಾರನ್ನು ಕೈಬಿಡಿ ಎಂದವರಿಗೆ ಕೊಹ್ಲಿ ಹೇಳಿದ್ದೇನು?

ಮುಂದಿನ ಪಂದ್ಯಕ್ಕೆ ರೋಹಿತ್ ಶರ್ಮಾರನ್ನು ಕೈಬಿಡಿ ಎಂದವರಿಗೆ ಖಡಕ್ ಉತ್ತರ ಕೊಟ್ಟ ಕೊಹ್ಲಿ

ಮೈಸೂರಿನಲ್ಲಿ ಮಳೆಯ ಆರ್ಭಟ: ಕುಟುಂಬಸ್ಥರ ಕಣ್ಣೆದುರೇ ನೀರುಪಾಲಾದ ವ್ಯಕ್ತಿ!

ಮೈಸೂರಿನಲ್ಲಿ ಮಳೆಯ ಆರ್ಭಟ: ಕುಟುಂಬಸ್ಥರ ಕಣ್ಣೆದುರೇ ನೀರುಪಾಲಾದ ವ್ಯಕ್ತಿ!

hgfjhgfds

ಪುಟಾಣಿಗಳು ಶಾಲೆಯತ್ತ : ಇಂದಿನಿಂದ 1ರಿಂದ 5ನೇ ತರಗತಿ ಆರಂಭ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

dandeli news

ದ್ವಿಚಕ್ರ ವಾಹನಗಳ ಪೆಟ್ರೋಲ್ ಕಳ್ಳತನ: ಅಳಲು ತೋಡಿಕೊಳ್ಳುತ್ತಿರುವ ಸ್ಥಳೀಯರು

25award

ಎಂ.ಎ.ಹೆಗಡೆ ಅವರಿಗೆ‌ ಮರಣೋತ್ತರ ಚಂದುಬಾಬು‌ ಪ್ರಶಸ್ತಿ ಪ್ರದಾನ‌

ದಾಂಡೇಲಿ: ಕಾಳಿ ನದಿ ದಂಡೆಯ ಮೇಲೆ ಮೀನು ಹಿಡಿಯುತ್ತಿದ್ದ ಬಾಲಕನನ್ನು ಎಳೆದೊಯ್ದ ಮೊಸಳೆ.!

ದಾಂಡೇಲಿ: ಕಾಳಿ ನದಿ ದಂಡೆಯ ಮೇಲೆ ಮೀನು ಹಿಡಿಯುತ್ತಿದ್ದ ಬಾಲಕನನ್ನು ಎಳೆದೊಯ್ದ ಮೊಸಳೆ.!

23kannada

ಕನ್ನಡಕ್ಕಾಗಿ ಗೀತಗಾಯನ ಅಭಿಯಾನ

22nort

ಹಗ್ಗ-ಸೀಮೆ ಎಣ್ಣೆ ಹಿಡಿದು ಗ್ರಾಮಸ್ಥರ ಪ್ರತಿಭಟನೆ

MUST WATCH

udayavani youtube

ದಾಂಡೇಲಿ ನಗರದಲ್ಲಿ ಸಕ್ರೀಯಗೊಳ್ಳುತ್ತಿದೆ ಪೆಟ್ರೋಲ್ ಕಳ್ಳರ ಹಾವಳಿ

udayavani youtube

ಕಾಳಿ ನದಿ ದಂಡೆಯಿಂದ ಬಾಲಕನನ್ನು ಎಳೆದೊಯ್ದ ಮೊಸಳೆ : ಆತಂಕದಲ್ಲಿ ಸ್ಥಳೀಯರು

udayavani youtube

ರಸ್ತೆ ಬದಿ ಮಲಗಿದ್ದ ಗೋವು ಕಳ್ಳತನ : ಘಟನೆ ಕೃತ್ಯ ಸಿಸಿ ಕ್ಯಾಮೆರಾದಲ್ಲಿ ಬಯಲು

udayavani youtube

ಶಾರುಖ್ ಖಾನ್ ಬಿಜೆಪಿ ಸೇರಿದರೆ ಡ್ರಗ್ಸ್ ಪೌಡರ್ ಶುಗರ್ ಪೌಡರ್ ಆಗಿ ಬದಲಾಗಲಿದೆ

udayavani youtube

ಕುಮ್ಕಿ ಹಕ್ಕು ಅಂದ್ರೇನು?

ಹೊಸ ಸೇರ್ಪಡೆ

9power

ನಿರಂತರ ವಿದ್ಯುತ್‌ ನೀಡಲು ಮನವಿ

ಡ್ರೋನ್‌ ಪರೀಕ್ಷೆ

ಯಶಸ್ಸಿನ ಹಾದಿಯತ್ತ ದೇಸಿ ಡ್ರೋನ್‌ಗಳು

24 ಗಂಟೆಯಲ್ಲಿ ದೇಶದಲ್ಲಿ 14,306 ಕೋವಿಡ್ ಸೋಂಕು ಪ್ರಕರಣಗಳು ಪತ್ತೆ

24 ಗಂಟೆಯಲ್ಲಿ ದೇಶದಲ್ಲಿ 14,306 ಕೋವಿಡ್ ಸೋಂಕು ಪ್ರಕರಣಗಳು ಪತ್ತೆ

8LAW-NKOWLEDGE

ಕಾನೂನು ಅರಿವಿಲ್ಲದಿದ್ದರೆ ಸಂಕಷ್ಟ ನಿಶ್ಚಿತ: ರೆಡ್ಡಿ

7basavanna

ಬಸವಣ್ಣನ ಚಿಂತನೆ ದಿವ್ಯೌಷಧ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.