3ನೇ ಹಂತ ವಿಸ್ತರಣೆ ಸರ್ವೇ ಶುರು

ನೌಕಾನೆಲೆ ಪಾಲಾಗಲಿದೆ‌ ಸಂಪದ್ಭರಿತ ಗಂಗಾವಳಿ ತಟ: ಜನತೆ ಕಂಗಾಲು

Team Udayavani, Oct 22, 2020, 12:33 PM IST

uk-tdy-1

ಅಂಕೋಲಾ: ಸೀಬರ್ಡ್‌ ನೌಕಾನೆಲೆ ಮೂರನೇ ಹಂತದ ವಿಸ್ತರಣೆಗೆ ಕೇಂದ್ರ ರಕ್ಷಣಾ ಇಲಾಖೆ ಆದೇಶದನ್ವಯ 3453 ಎಕರೆ ಪ್ರದೇಶವನ್ನು ಭೂಸ್ವಾಧೀನನೀಲನಕ್ಷೆ ಪ್ರಕ್ರಿಯೆಗೆ ಸರ್ವೇ ನಡೆಸಿ ವರದಿ ನೀಡುವಂತೆ ವಿಶೇಷ ನೌಕಾನೆಲೆ ಭೂಸ್ವಾಧೀನ ಇಲಾಖೆ ತಾಲೂಕಾಡಳಿತಕ್ಕೆ ಸೂಚನೆ ನೀಡುತ್ತಿದ್ದಂತೆ ಸ್ಥಳೀಯರು ಆತಂಕಗೊಂಡಿದ್ದಾರೆ.

ಈಗಾಗಲೇ ತಾಲೂಕಿನ ಬಹಳಷ್ಟು ಸಮುದ್ರ ತೀರಗಳು ನೌಕಾನೆಲೆ ಸುಪರ್ದಿಗೆಸೇರಿವೆ. ಇದರ ಜೊತೆಗೆ ಏಷ್ಯಾದ ಅತಿ ದೊಡ್ಡ ಸೀಬರ್ಡ್‌ ನೌಕಾನೆಲೆ ಮೂರನೇ ಹಂತದ ವಿಸ್ತರಣೆಗಾಗಿ ಮತ್ತೆ ಸಮುದ್ರ ತೀರ ಸರ್ವೇ ನಡೆಸಲು ಆದೇಶಿಸಿದೆ. ನೌಕಾನೆಲೆ 3ನೇ ಹಂತದ ವಿಸ್ತರಣೆಗೆ ಗಂಗಾವಳಿ ನದಿ ತೀರಕ್ಕೆ ಹೊಂದಿಕೊಂಡಿರುವ ಬಿಳಿಹೊಂಯ್ಗಿ, ಬಾಸಗೋಡ, ಮಂಜಗುಣಿ, ಸಿಂಗನಮಕ್ಕಿ, ವಾಡಿಬೊಗ್ರಿ ಹಾಗೂ ಹೊನ್ನೆಬೈಲ ಗ್ರಾಮದ ಪ್ರದೇಶದಲ್ಲಿರುವ ಮರ ಗಿಡಗಳೂ ಹೋಗಲಿವೆ. ಇವುಗಳ ಅಂದಾಜು ಮೌಲ್ಯದ ಕುರಿತು ಸರ್ವೇ ನಡೆಸುವಂತೆ ವಿಶೇಷ ಭೂಸ್ವಾಧೀನ ನೌಕಾನೆಲೆ ಕಾರ್ಯಾಲಯದಿಂದ ಅಧಿಕೃತ ಆದೇಶ ಹೊರಡಿಸಿದೆ.

ಗಿಡ ಮರಗಳ ಸರ್ವೇ ಕಾರ್ಯವು ತಾಲೂಕಾಡಳಿತ, ತೋಟಗಾರಿಕೆ ಇಲಾಖೆ, ಅರಣ್ಯ ಇಲಾಖೆ ಹಾಗೂ ಭೂ ದಾಖಲೆಗಳ ಕಚೇರಿಗಳು ಜಂಟಿಯಾಗಿ ನಡೆಸಲಿದೆ. ಗಂಗಾವಳಿ ನದಿಯಲ್ಲಿ ಹೇರಳವಾಗಿ ದೊರೆಯುವ ಸಂಪತ್ತಿನಿಂದಲೆ ಈ ಭಾಗದ ಜನ ಅನಾದಿಕಾಲದಿಂದಲು ಬದುಕು ಕಟ್ಟಿಕೊಂಡಿದ್ದರು. ಅವರಿಗೆ ಈ ಯೋಜನೆ ಜಾರಿಗಾಗಿ ನಡೆಸು ಸರ್ವೇ ಕಾರ್ಯದಮಾಹಿತಿ ತಿಳಿಯುತ್ತಲೇ ಮುಂದಿನ ಜೀವನ ಹೇಗೆ ಎನ್ನುವ ಆತಂಕ ಶುರುವಾಗಿದೆ.

ಈಗಾಗಲೇ ನೌಕಾನೆಲೆ ಮತ್ತು ನಾಗರಿಕ ವಿಮಾನ ನಿಲ್ದಾಣದ ಹೆಸರಿನಲ್ಲಿ ಸಸ್ಯ ಸಂಪದ್ಭರಿತ ಗ್ರಾಮ ಅಲಗೇರಿಯನ್ನು ಕಬಳಿಸಿದೆ. ಈಗ ಇಲ್ಲಿಯೂ ಅನೇಕಹೋರಾಟದ ನಡುವೆಯೂ ಜನವಸತಿ ಪ್ರದೇಶವನ್ನು ಬಿಟ್ಟು ಕೃಷಿ ಜಮೀನು ಮಾತ್ರ ಬಳಕೆ ಮಾಡಿಕೊಂಡಿದ್ದಾರೆ. ಇದರಜೊತೆಯಲ್ಲಿಯೇ ನೌಕಾನೆಲೆ ಮೂರನೇ ಹಂತದ ವಿಸ್ತರಣೆ ಸರ್ವೇ ಕಾರ್ಯಕ್ಕೆ ಆದೇಶಿಸಿರುವುದು ಜನರ ನಿದ್ದೆಗೆಡಿಸಿದೆ.

ಹಲವು ಯೋಜನೆಗಳಿಗೆ ಅಂಕೋಲಾ ತಾಲೂಕು ಹರಿದು ಹೋಗಿದೆ. ಮತ್ತೆ ಈಗ ನೌಕಾನೆಲೆ ಮೂರನೇ ಹಂತ ಎಂದು ಜಮೀನು ಕಬಳಿಸಿದರೆ ಉಗ್ರ ಹೋರಾಟಕ್ಕೆ ಮುಂದಾಗಿ ನಮ್ಮ ಭೂಮಿ ಉಳಿಸಿಕೊಳ್ಳುತ್ತೇವೆ. – ಮಾದೇವ ಗೌಡ, ಬೆಳಂಬಾರ ಗ್ರಾ.ಪಂ ಮಾಜಿ ಅಧ್ಯಕ್ಷ

ಟಾಪ್ ನ್ಯೂಸ್

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’‌

ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’‌

Modi 3

PM Modi ಏ.28ರಂದು ಉತ್ತರಕನ್ನಡಕ್ಕೆ?; ಯಲ್ಲಾಪುರದಲ್ಲಿ ಬಹಿರಂಗ ಸಮಾವೇಶ?

Bhatkal: ಇಬ್ಬರು ಸಮುದ್ರಪಾಲು

Bhatkal: ಇಬ್ಬರು ಸಮುದ್ರಪಾಲು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

1-MB

Note Ban ವೇಳೆ ಮಹಿಳೆಯರು ಮಂಗಳಸೂತ್ರ ಅಡವಿಟ್ಟಾಗ ಮೋದಿ ಮೌನ: ಭಂಡಾರಿ

Exam

Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ

IMD

Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.