- Saturday 14 Dec 2019
ಬೆದ್ರಕೆರೆ ಅಭಿವೃದ್ಧಿಗೆ ಗ್ರಾಮಸ್ಥರ ಆಗ್ರಹ
Team Udayavani, May 20, 2019, 4:35 PM IST
ಕುಮಟಾ: ತಾಲೂಕಿನ ಕಲ್ಲಬ್ಬೆ ಪಂಚಾಯಿತಿ ವ್ಯಾಪ್ತಿಯ ಸಾಣಕಲ್ ಬಳಿ ಬೆದ್ರಕೆರೆ ಅಭಿವೃದ್ಧಿ ಕಾಮಗಾರಿಗೆ ಬಿಡುಗಡೆಯಾದ ಹಣ ಕೆರೆಯ ಅರ್ಧ ಹೂಳೆತ್ತಲೂ ಸಾಲದು. ಆದ್ದರಿಂದ ಹೆಚ್ಚಿನ ಅನುದಾನ ಕೊಟ್ಟು ಕೆರೆಯನ್ನು ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿ ಪಡಿಸುವಂತೆ ಸ್ಥಳೀಯರು ವಿನಂತಿಸಿದ್ದಾರೆ.
ಕಲ್ಲಬ್ಬೆ ಗ್ರಾಮದ ಎತ್ತರದ ಪ್ರದೇಶದಲ್ಲಿರುವ ಬೆದ್ರಕೆರೆ ಸುಮಾರು 9 ಗುಂಟೆಗೂ ಹೆಚ್ಚು ವಿಶಾಲವಾಗಿದೆ. ಊರಿನ ನಡುವೆ ಇರುವ ಈ ಕೆರೆಯಿಂದ ನೀರು ನಿರಂತರ ಹರಿಯುತ್ತಿತ್ತು. ಯಾವತ್ತೂ ಹೂಳೆತ್ತದೇ ಇದ್ದುದರಿಂದ ಜಲಮೂಲ ಕ್ಷೀಣಿಸಿದೆ. ಈ ಹಿನ್ನೆಲೆಯಲ್ಲಿ ಸ್ಥಳೀಯರ ಮನವಿಯ ಮೇರೆಗೆ ಜಿಪಂದಿಂದ ಕೆರೆಯನ್ನು ಅಭಿವೃದ್ಧಿಗೆ ಗುರುತಿಸಿ 5 ಲಕ್ಷ ರೂ. ಅನುದಾನ ಮಂಜೂರಿ ಮಾಡಿ ಕಾಮಗಾರಿ ಪ್ರಗತಿಯಲ್ಲಿದೆ.
ಬೆದ್ರಕೆರೆ ಜಾಗದ ಮಾಲಕ ಆರ್.ಜಿ. ಹೆಗಡೆ ಹೇಳುವಂತೆ, 9 ಗುಂಟೆ ಜಾಗದಲ್ಲಿರುವ ಈ ಕೆರೆಯ ಸಂಪೂರ್ಣ ಹೂಳೆತ್ತಿದರೆ ಮಾತ್ರ ನಿಜವಾದ ಪ್ರಯೋಜನವಿದೆ. ಆದರೆ ಲಭ್ಯವಿರುವ ಅನುದಾನದಲ್ಲಿ ಸದ್ಯ 4-5 ಗುಂಟೆಯಷ್ಟು ಜಾಗಕ್ಕೆ ಮಾತ್ರ ಹೂಳೆತ್ತಿ ಸುತ್ತಲೂ ಪಿಚಿಂಗ್ ಕಟ್ಟಲು ಸಾಧ್ಯ. ಬೆದ್ರಕೆರೆ ಸಂಪೂರ್ಣ ಹೂಳೆತ್ತಿ ಅಭಿವೃದ್ಧಿಯಾದರೆ ಇಡೀ ಕಲ್ಲಬ್ಬೆ ಗ್ರಾಮಕ್ಕೇ ಅನುಕೂಲವಿದೆ. ಸರ್ಕಾರ ಹೆಚ್ಚಿನ ಅನುದಾನ ಒದಗಿಸಬೇಕು ಎಂದು ಆಶಯ ವ್ಯಕ್ತಪಡಿಸಿದ್ದಾರೆ.
ಅಭಿವೃದ್ಧಿಗೆ ಕೆರೆಯನ್ನು ಗುರುತಿಸಿ ಕಡಿಮೆ ಅನುದಾನಕೊಟ್ಟು ಅರೆಬರೆ ಹೂಳೆತ್ತಿ ಪಿಚಿಂಗ್ ಕಟ್ಟಿದರೆ ಕೆರೆ ಅಭಿವೃದ್ಧಿಯ ಮೂಲ ಆಶಯವೇ ವ್ಯರ್ಥವಾಗಲಿದೆ. ಈಗ ತೆಗೆದಿರುವ ಹೂಳು ಮಳೆಗಾಲ ಮುಗಿದ ನಂತರ ಪುನಃ ತುಂಬಿಕೊಳ್ಳುತ್ತದೆ. ಒಮ್ಮೆ ಅಭಿವೃದ್ಧಿ ಮಾಡಿದ ಕೆರೆಯೆಂದು ಮತ್ತೆ ಅನುದಾನ ಮಂಜೂರಿಗೂ ಕಷ್ಟ, ಮಂಜೂರಿ ದೊರೆತರೂ ಅಲ್ಪ ಪ್ರಮಾಣದಲ್ಲಿ ಮಾತ್ರ ಸಿಗಬಹುದು. ಒಟ್ಟಾರೆ ಕೆರೆಯ ನಿಜವಾದ ಪ್ರಯೋಜನಕಾರಿ ಪೂರ್ಣ ಸ್ವರೂಪ ಮತ್ತೆಂದೂ ಕಾಣಲು ಸಾಧ್ಯವೇ ಇಲ್ಲದಂತೆ ಆಗುತ್ತದೆ. ಬೊಕ್ಕಸದ ಹಣ ವ್ಯರ್ಥ ಮಾಡಿದಂತಾಗುತ್ತದೆ. ಹೀಗಾಗಿ ಇಂಥ ಕೆರೆಗಳ ಅಭಿವೃದ್ಧಿಯನ್ನು ಒಂದೇ ಹಂತದಲ್ಲಿ ಪೂರ್ಣ ಪ್ರಮಾಣದಲ್ಲಿ ಮಾಡುವ ಬಗ್ಗೆ ಸಂಬಂಧಪಟ್ಟವರು ಮುತುವರ್ಜಿ ವಹಿಸಬೇಕು ಎಂದು ಸ್ಥಳೀಯರು ಕೋರಿದ್ದಾರೆ.
ಕಲ್ಲಬ್ಬೆ ಬೆದ್ರಕೆರೆ ಹಾಗೂ ಇತರ ನಾಲ್ಕು ಕೆರೆಗಳ ಅಭಿವೃದ್ಧಿಗೆ ಜಿ.ಪಂ ಅನುದಾನದಿಂದ ಕಾಮಗಾರಿ ಪ್ರಗತಿಯಲ್ಲಿದೆ. ಪೂರ್ಣ ಕೆರೆ ಅಭಿವೃದ್ಧಿಗೆ ಅನುದಾನ ಸಾಲದು. ಪೂರ್ಣ ಕೆರೆ ಅಭಿವೃದ್ಧಿಯ ಕ್ರಿಯಾಯೋಜನೆ ಅನ್ವಯಿಸಿ ಹೆಚ್ಚಿನ ಹಣ ಲಭ್ಯವಾದರೆ ಮಾತ್ರ ಜನರ ಆಶಯದಂತೆ ಕೆಲಸ ಮಾಡಲು ಸಾಧ್ಯ.
•ಗಜಾನನ ಪೈ, ಜಿ.ಪಂ ಸದಸ್ಯ
ಈ ವಿಭಾಗದಿಂದ ಇನ್ನಷ್ಟು
-
ಶಿರಸಿ: ಮೂಲ ಸೌಕರ್ಯ, ವಾರ್ಷಿಕ ಅಗತ್ಯ ಕಾಮಗಾರಿ, ಸೂಕ್ತ ಕ್ರೀಡಾಂಗಣ ಸಾಮಗ್ರಿ ಕೊರತೆ, ಸಿಬ್ಬಂದಿ ವೇತನ ವಿಳಂಬದ ನೀತಿ ಖಂಡಿಸಿ ಜ.1 ರಂದು ಇಲ್ಲಿನ ಮಾರಿಕಾಂಬಾ ಜಿಲ್ಲಾ...
-
ಸಿದ್ದಾಪುರ: ತಾಲೂಕಿ ಹೆಗ್ಗರಣಿ ವಿವೇಕಾನಂದ ಪ್ರೌಢಶಾಲೆಗೆ ಭೇಟಿ ನೀಡಿದ ಶಿಕ್ಷಣ ಸಚಿವ ಸುರೇಶ ಕುಮಾರ ಮುಕ್ಕಾಲು ಗಂಟೆಗೂ ಅಧಿಕ ಕಾಲ ಹತ್ತನೇ ತರಗತಿ ವಿದ್ಯಾರ್ಥಿಗಳೊಂದಿಗೆ...
-
ಕಾರವಾರ: ಹಾಲಕ್ಕಿ ಒಕ್ಕಲಿಗರ ಸಾಂಸ್ಕೃತಿಕ ವೈಭವ ಪ್ರದರ್ಶನಕ್ಕೆ ಮ್ಯೂಜಿಯಂ ಸ್ಥಾಪನೆಗೆ ಸರ್ಕಾರ 3 ಕೋಟಿ ರೂ. ಮಂಜೂರು ಮಾಡಿದೆ. ಪ್ರವಾಸಿಗರಿಗೆ ಶಾಶ್ವತವಾಗಿ ಹಾಲಕ್ಕಿ...
-
ಹುಬ್ಬಳ್ಳಿ: ಉತ್ತರ ಕನ್ನಡ ಜಿಲ್ಲೆ ಮುಂಡಗೋಡದಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲೆಂದು ಇಲ್ಲಿನ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಟಿಬೇಟಿಯನ್...
-
ಉತ್ತರಕನ್ನಡ: ಕರ್ಕಿ ಯಕ್ಷಗಾನ ಪರಂಪರೆಯ ಅಗ್ರಮಾನ್ಯ ಕಲಾವಿದ ಮತ್ತು ಉತ್ತರಕನ್ನಡ ಸಭಾಹಿತ ಮಟ್ಟಿನ ಸಮರ್ಥ ಪ್ರತಿನಿಧಿ ದಿ. ಪಿ. ವಿ. ಹಾಸ್ಯಗಾರ, ಕರ್ಕಿ ಇವರ ನೆನಪಿನಲ್ಲಿ...
ಹೊಸ ಸೇರ್ಪಡೆ
-
ಶಿವಮೊಗ್ಗ: ಸಂಘಟನೆಯಿಂದಾಗಿ ಉಪ ಚುನಾವಣೆಯಲ್ಲಿ ನಾವು ಹೆಚ್ಚು ಸ್ಥಾನ ಗಳಿಸಿದ್ದೇವೆ. ಮೂಲ ಬಿಜೆಪಿ ಹಾಗೂ ವಲಸೆ ಬಿಜೆಪಿ ಎಂಬ ಭಿನ್ನಾಭಿಪ್ರಾಯವಿಲ್ಲ ಎಂದು ಸಚಿವ...
-
ಧಾರವಾಡ: ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ರೈತಾಪಿ ಸಮದಾಯದ ಜೀವನಾಡಿ ಜಾನುವಾರುಗಳು ಸಾಂಕ್ರಾಮಿಕ ರೋಗಗಳಿಗೆ ತುತ್ತಾಗದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು...
-
ಹೊನ್ನಾಳಿ: ಸಾಮೂಹಿಕ ವಿವಾಹಗಳಿಂದ ದುಂದುವೆಚ್ಚಕ್ಕೆ ಕಡಿವಾಣ ಹಾಕಬಹುದು ಎಂದು ಮಾಜಿ ಶಾಸಕ ಡಿ.ಜಿ. ಶಾಂತನಗೌಡ ಹೇಳಿದರು. ತಾಲೂಕಿನ ಕೂಲಂಬಿ ಗ್ರಾಮದ ಶ್ರೀ ಗುರು...
-
ದಾವಣಗೆರೆ: ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳು ಮತ್ತು ಗರ್ಭಿಣಿಯರ ನಿಖರವಾದ ದಾಖಲಾತಿ ಮಾಹಿತಿಗಾಗಿ ಸ್ನೇಹ ಆ್ಯಪ್ ಪರಿಚಯಿಸಲಾಗುತ್ತಿದೆ ಎಂದು ಮಹಿಳಾ ಮತ್ತು...
-
ಹೊಸನಗರ: ಇಲ್ಲಿಗೆ ಸಮೀಪದ ಚಂಗೋಳ್ಳಿ ಎಂಬಲ್ಲಿ ಕೆಸ್ ಆರ್ ಟಿಸಿ ಬಸ್ ಮತ್ತು ಮಿನಿ ಬಸ್ ನಡುವೆ ಶನಿವಾರ ಬೆಳಿಗ್ಗೆ ಮುಖಾಮುಖಿ ಡಿಕ್ಕಿ ಸಂಭವಿಸಿ ಎರಡೂ ವಾಹನಗಳು...