ದಾಂಡೇಲಿ: ಲೆನಿನ್ ರಸ್ತೆಯಲ್ಲಿರುವ ಕಬ್ಬಿನ ಹಾಲಿನ ಅಂಗಡಿಯಲ್ಲಿ ಕಳ್ಳತನ
Team Udayavani, Oct 25, 2021, 12:45 PM IST
ದಾಂಡೇಲಿ: ನಗರದ ಲೆನಿನ್ ರಸ್ತೆಯಲ್ಲಿರುವ ಕಬ್ಬಿನ ಹಾಲು ಮಾರಾಟದ ಅಂಗಡಿಗೆ ಶನಿವಾರ ತಡರಾತ್ರಿ ಇಲ್ಲವೆ ಭಾನುವಾರ ನಸುಕಿನ ವೇಳೆಯಲ್ಲಿ ಕಳ್ಳರು ನುಗ್ಗಿ ನಗದನ್ನು ಕಳವು ಮಾಡಿದ ಘಟನೆ ನಡೆದಿದೆ.
ನಗರದ ಲೆನಿನ್ ರಸ್ತೆಯ ಕಾರ್ನರಿನಲ್ಲಿರುವ ಕಬ್ಬಿನ ಹಾಲು ಮಾರಾಟ ಮಾಡುವ ಅಂಗಡಿಯ ಮೇಲ್ಚಾವಣಿಯ ಸಿಮೇಂಟ್ ಶೀಟನ್ನು ಒಡೆದು ಕಳ್ಳರು ಅಂಗಡಿಯೊಳಗೆ ನುಗ್ಗಿ ಅಂದಾಜು ಮೂರು ಸಾವಿರ ನಗದನ್ನು ದೋಚಿ ಪರಾರಿಯಾಗಿದ್ದಾರೆ.
ಅಂಗಡಿಯ ಮಾಲೀಕರಾದ ದ್ಯಾನರಾಜ ಕಾನಿಟ್ಕರ್ ಅವರು ಭಾನುವಾರ ಎಂದಿನಂತೆ ಬೆಳಿಗ್ಗೆ ಅಂಗಡಿಯ ಬಾಗಿಲು ತೆರೆದು ನೋಡಿದಾಗ ಕಳ್ಳತನವಾಗಿರುವ ಘಟನೆ ಬೆಳಕಿಗೆ ಬಂದಿದೆ. ತಕ್ಷಣವೆ ಅಂಗಡಿ ಮಾಲೀಕ ದ್ಯಾನರಾಜ ಕಾನಿಟ್ಕರ್ ಅವರು ಈ ಬಗ್ಗೆ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ನಗರ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ, ಪರಿಶೀಲನೆ ನಡೆಸಿ, ಮುಂದಿನ ತನಿಖೆ ಕೈಗೊಂಡಿದ್ದಾರೆ.