ರಾಜ್ಯದಲ್ಲಿ ಸದ್ಯಕ್ಕೆ ಲಾಕ್ ಡೌನ್ ಸ್ಥಿತಿಯಿಲ್ಲ: ಸಚಿವ ಡಾ. ಕೆ.ಸುಧಾಕರ್
Team Udayavani, Mar 1, 2021, 2:14 PM IST
ಶಿರಸಿ (ಉತ್ತರ ಕನ್ನಡ): ರಾಜ್ಯದಲ್ಲಿ ಸದ್ಯಕ್ಕೆ ಲಾಕ್ ಡೌನ್ ಸ್ಥಿತಿ ಇಲ್ಲ ಎಂದು ಆರೋಗ್ಯ ಸಚಿವ ಡಾ. ಕೆ.ಸುಧಾಕರ್ ಹೇಳಿದರು.
ಸೋಮವಾರ ಅವರು ಉತ್ತರ ಕನ್ನಡದ ಶಿರಸಿಯಲ್ಲಿ ಕೋವಿಡ್ 19 ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಜನತೆ ಸಹಕಾರ ನೀಡಿದರೆ ಲಾಕ್ ಡೌನ್ ಇಲ್ಲ. ಅದರ ಅಗತ್ಯವೂ ಬರುವದಿಲ್ಲ. ಆದರೆ ಸಾಮಾಜಿಕ ಅಂತರ, ಮಾಸ್ಕ್ ಧರಿಸಿ ಸಹಕಾರ ನೀಡಿದರೆ ಈ ಅಪಾಯ ತಪ್ಪಿಸಿಕೊಳ್ಳಬಹುದು ಎಂದರು.
ರಾಜ್ಯದಲ್ಲಿ 273 ಲಸಿಕಾ ಕೇಂದ್ರದಲ್ಲಿ ಸುಮಾರು 50 ಲಕ್ಷ ಹಿರಿಯ ನಾಗರೀಕರಿಗೆ, 15 ಲಕ್ಷ 45 ವರ್ಷ ಮೇಲ್ಪಟ್ಟ ವ್ಯಕ್ತಿಗಳಿಗೆ ಲಸಿಕೆ ನೀಡಲಾಗುತ್ತದೆ. ನೋಂದಣಿ ಇದ್ದರೂ, ಇಲ್ಲದೇ ಇದ್ದರೂ ಲಸಿಕೆ ಕೊಡಲಾಗುತ್ತದೆ. ಲಸಿಕೆ ಕುರಿತು ಜನರಿಗೆ ತಿಳುವಳಿಕೆ ಕೂಡ ನೀಡಲಾಗುತ್ತದೆ ಎಂದರು.
ಇದನ್ನೂ ಓದಿ:ಕೋವಿಡ್ 19-ಲಸಿಕೆ ಪಡೆದ ನಂತರ ಪ್ರಧಾನಿ ಮೋದಿ… ಸಿಸ್ಟರ್ ನಿವೇದಾಗೆ ಹೇಳಿದ್ದೇನು?
ಮಹಾರಾಷ್ಟ್ರ ಸೇರಿದಂತೆ ಹೊರ ರಾಜ್ಯದಲ್ಲಿ ಕೋವಿಡ್ ಸೋಂಕು ಪ್ರಕರಣ ಪತ್ತೆಯಾಗಿದೆ. ಈ ಕಾರಣದಿಂದ ಅಂತಾರಾಜ್ಯ ಗಡಿಯಲ್ಲಿ ಕೋವಿಡ್ ಟೆಸ್ಟ್ ಮಾಡಲಾಗುತ್ತದೆ. ಬಿಗುವಾದ ಕ್ರಮವನ್ನು ಗಡಿಗಳಲ್ಲಿ ಕೈಗೊಳ್ಳಲಾಗಿದೆ. ಆದರೆ ಗಡಿ ಬಂದ್ ಇಲ್ಲ ಎಂದರು.
ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಆರೋಗ್ಯ ಕ್ಷೇತ್ರದ ಕುರಿತೂ ಸದನದಲ್ಲಿ ಚರ್ಚಿಸಬೇಕಾಗಿದೆ. ಕೊವಿಡ್ ಮುಗಿಯಿತೆಂಬ ಭಾವನೆ ಬೇಡ. ಸರಕಾರದ ಸೂಚನೆ ಪಾಲಿಸಬೇಕು. ಜನ ಜೀವನದಲ್ಲಿ ಹೆಚ್ಚು ಆರೋಗ್ಯವಂತರಾಗಿರಬೇಕು ಎಂದರು.
ಪ್ರಥಮ ಲಸಿಕೆಯನ್ನು ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಅಶೀಸರ, ಜೀವ ಜಲ ಸಂರಕ್ಷಣೆಯಲ್ಲಿ ರಾಜ್ಯಕ್ಕೆ ಮಾದರಿ ಕಾರ್ಯ ಮಾಡಿದ ಶ್ರೀನಿವಾಸ ಹೆಬ್ಬಾರ, ಮಾಜಿ ಶಾಸಕ ವಿವೇಕಾನಂದ ವೈದ್ಯ ಇತರರು ಪಡೆದರು. ಜಿಲ್ಲಾಧಿಕಾರಿ ಮುಲ್ಲೈಮಹೀಲ್, ಜಿಲ್ಲಾ ಆರೋಗ್ಯಾಧಿಕಾರಿ ಶರತ್ ನಾಯಕ, ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಜಯಶ್ರೀ ಮೊಗೇರ, ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ವಿ.ವಿ.ಗಳಿಗೆ ಬೋಧಕರ ನೇಮಕಾತಿ: ಕೆಇಎ ಮೂಲಕ ಪರೀಕ್ಷೆ ; ಮೆರಿಟ್ ಪಟ್ಟಿಯಲ್ಲೇ ಆಯ್ಕೆ
ಕುಷ್ಟಗಿ : ತಡೆಗೋಡೆಗೆ ಢಿಕ್ಕಿ ಹೊಡೆದ ಬೈಕ್ : ತಂದೆ ಮಗಳು ಸ್ಥಳದಲ್ಲೇ ಸಾವು, ಇಬ್ಬರು ಗಂಭೀರ
ಚಿಕ್ಕಮಗಳೂರಿನಲ್ಲಿ ಮಳೆಯ ಆರ್ಭಟ : ಹಳ್ಳದಲ್ಲಿ ಕೊಚ್ಚಿ ಹೋದ 7 ವರ್ಷದ ಬಾಲಕಿ
ಗಂಗಾವತಿ : ಕುಮ್ಮಟ ದುರ್ಗದ ಸುತ್ತ ಗಣಿಗಾರಿಕೆಗೆ ಅವಕಾಶ ನೀಡದಂತೆ ಜಿಲ್ಲಾಡಳಿತಕ್ಕೆ ಸೂಚನೆ
ಅಂಕೋಲಾ: ನಿಯಂತ್ರಣ ತಪ್ಪಿ ವಿದ್ಯುತ್ ಟ್ರಾನ್ಸ್ ಫಾರ್ಮರ್ ಗೆ ಗುದ್ದಿದ ಕಾರು; ಓರ್ವ ಸಾವು
MUST WATCH
ಚಾರ್ಮಾಡಿ : ರಸ್ತೆ ಮಧ್ಯೆಯೇ ಮೋಜು ಮಸ್ತಿ, ಪ್ರವಾಸಿಗರ ಪುಂಡಾಟಕ್ಕೆ ವಾಹನ ಸವಾರರು ಸುಸ್ತು
ಭಾರಿ ಮಳೆಗೆ ಹೆಬ್ಬಾಳ ಸೇತುವೆ ಮುಳುಗಡೆ : ಕಳಸ – ಹೊರನಾಡು ಸಂಪರ್ಕ ಕಡಿತ
ಇಬ್ಬರು ಶಸ್ತ್ರ ಸಜ್ಜಿತ ಲಷ್ಕರ್ ಉಗ್ರರನ್ನು ಹಿಡಿದು ಕೊಟ್ಟ ಕಾಶ್ಮೀರದ ಗ್ರಾಮಸ್ಥರು
ಜಿಂಕೆಯನ್ನು ನುಂಗಿದ್ದ 80 ಕೆ.ಜಿ. ತೂಕದ 14 ಅಡಿ ಉದ್ದದ ಹೆಬ್ಬಾವು!
ವಿಟ್ಲದ ಈ ವಿದ್ಯಾರ್ಥಿನಿಯ ಕಾರ್ಯಕ್ಕೊಂದು ಮೆಚ್ಚುಗೆ ಇರಲಿ…
ಹೊಸ ಸೇರ್ಪಡೆ
ವಿ.ವಿ.ಗಳಿಗೆ ಬೋಧಕರ ನೇಮಕಾತಿ: ಕೆಇಎ ಮೂಲಕ ಪರೀಕ್ಷೆ ; ಮೆರಿಟ್ ಪಟ್ಟಿಯಲ್ಲೇ ಆಯ್ಕೆ
ಬಿಹಾರದ ಮಾಜಿ ಸಿಎಂ ಲಾಲು ಪ್ರಸಾದ್ ಯಾದವ್ ಗೆ ಐಸಿಯುನಲ್ಲಿ ಚಿಕಿತ್ಸೆ
ಕುಷ್ಟಗಿ : ತಡೆಗೋಡೆಗೆ ಢಿಕ್ಕಿ ಹೊಡೆದ ಬೈಕ್ : ತಂದೆ ಮಗಳು ಸ್ಥಳದಲ್ಲೇ ಸಾವು, ಇಬ್ಬರು ಗಂಭೀರ
ಅಗ್ನಿಪಥ ಯೋಜನೆ ಪ್ರಶ್ನಿಸಿ ಅರ್ಜಿ: ಮುಂದಿನ ವಾರ ಸುಪ್ರೀಂಕೋರ್ಟ್ ವಿಚಾರಣೆ
ದೆಹಲಿ ಶಾಸಕರ ವೇತನ ಶೇ.66ಕ್ಕೆ ಏರಿಕೆ: ವಿಧಾನಸಭೆಯಲ್ಲಿ ವಿಧೇಯಕ ಅಂಗೀಕಾರ