2020 ಸೆಪ್ಟೆಂಬರ್‌ಗೆ ಸಂಚಾರ ಮುಕ್ತ

Team Udayavani, Sep 6, 2019, 12:26 PM IST

ಕಾರವಾರ: ಸುರಂಗದ ಚಿತ್ರ.

ಕಾರವಾರ: ಬರುವ ವರ್ಷದ ಸೆಪ್ಟೆಂಬರ್‌ಗೆ ರಾಷ್ಟ್ರೀಯ ಹೆದ್ದಾರಿ 66 ರ ಕಾರವಾರ ನಗರದ ಬಳಿಯ ಸುರಂಗ ಮಾರ್ಗ ವಾಹನ ಸಂಚಾರಕ್ಕೆ ಮುಕ್ತವಾಗಲಿದೆ ಎಂದು ರಾ.ಹೆ. ಅಧಿಕಾರಿಗಳು ಹಾಗೂ ಐಡಲ್ ರೋಡ್‌ ಬಿಲ್ಡರ್ ಸಂಸ್ಥೆ ಜಿಲ್ಲಾಡಳಿತಕ್ಕೆ ಭರವಸೆ ನೀಡಿವೆ.

ಜಿಲ್ಲಾಧಿಕಾರಿ ಕಚೇರಿ ಬಂಗ್ಲೆಯ ಗುಡ್ಡದ ಕೆಳಭಾಗದಲ್ಲಿ 850 ಮೀಟರ್‌ ಉದ್ದದ ಎರಡು ಪ್ರತ್ಯೇಕ ಸುರಂಗ ಮಾರ್ಗಗಳು ಹಾದು ಹೋಗಿವೆ. ಈ ಸುರಂಗ ಮಾರ್ಗದ ಒಳಗೆ ಪ್ಲಾಸ್ಟರಿಂಗ್‌, ವಿದ್ಯುದ್ದೀಕರಣ ಕಾರ್ಯ ಪೂರ್ಣಗೊಳ್ಳುವ ಹಂತದಲ್ಲಿವೆ.

ಕಾರವಾರದಿಂದ ಹೊರಡುವ ಪ್ರವೇಶ ದ್ವಾರದ ಬಳಿ ಅಂತಿಮ ಕೆಲಸಗಳು ನಡೆದಿವೆ. ಅಲ್ಲದೇ ಮತ್ತೂಂದು ತುದಿ ಬಿಣಗಾದಿಂದ ಸುರಂಗ ಮಾರ್ಗದ ಕೆಲಸ ಮುಗಿಸುತ್ತಾ ಬರಲಾಗುತ್ತಿದೆ. ಈ ಸುರಂಗಗಳು ಹೆದ್ದಾರಿಯ ಪ್ರಮುಖ ಆಕರ್ಷಣೆಯಾಗಿಲಿವೆ. ಮಾಜಾಳಿಯಿಂದ ರಾ.ಹೆ. ಚತುಷ್ಪಥ ಅಗಲೀಕರಣ ಕಾರ್ಯ ಮುಕ್ತಾಯ ಹಂತದಲ್ಲಿದೆ. ಕಾರವಾರ ನಗರದ ಬಳಿಯ ಫ್ಲೈ ಓವರ್‌ ಸಹ 2020 ಸೆಪ್ಟೆಂಬರ್‌ಗೆ ಮುಗಿಸಬೇಕಿದೆ. ಬಾಳೇಗುಳಿ ಬಳಿ ಶುಲ್ಕ ವಸೂಲಿ ಕೇಂದ್ರದ ತಯಾರಿ ಸಹ ಮುಗಿಯುತ್ತಾ ಬಂದಿದೆ. ಹದಿನೈದು ಕಡೆ ಜನ ಅಂಡರ್‌ ಪಾಸ್‌ಗೆ ಒತ್ತಾಯಿಸಿದ್ದು, ಅವಶ್ಯವಿದ್ದಲ್ಲಿ ಅಂಡರ್‌ ಪಾಸ್‌ ಮಾಡಿ. ಜನರಿಗೆ ಮಣಿಯಬೇಡಿ. ಎಲ್ಲಾ ಕಡೆ ಬೇಡಿಕೆಗೆ ಮಣಿದರೆ ಜನರು ಕೆಲಸ ಮಾಡಲು ಬಿಡಲ್ಲ. ವೈಜ್ಞಾನಿಕವಾಗಿ ಅವಶ್ಯವಿದ್ದ ಕಡೆ ಮಾಡಿ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮನೀಷ್‌ ಮೌದ್ಗಿಲ್ ಹೇಳಿದ್ದಾರೆ. ಈ ಸೂಚನೆ ಆ.31 ರಂದು ಬಂದಿತ್ತು. ಜನ ಪರಿಹಾರ ಪಡೆದು ಭೂಮಿ ಬಿಟ್ಟುಕೊಡದ ಕಡೆ ಪೊಲೀಸ್‌ ಬಲ ಬಳಸಿ ಎಂಬ ಸೂಚನೆ ಸಹ ಕಾಮಗಾರಿ ಸಂಸ್ಥೆಗೆ ನೀಡಲಾಗಿದೆ. ಮಳೆ ಕಡಿಮೆಯಾಗುತ್ತಿದ್ದಂತೆ ರಾ.ಹೆ. ಕೆಲಸ ಚುರುಕುಗೊಳ್ಳಲಿದೆ.

ಕೇಂದ್ರ ಸರ್ಕಾರ ಸಹ ಈ ಯೋಜನೆ ಬೇಗ ಮುಗಿಯಲಿ ಎಂದು ಉತ್ಸುಕವಾಗಿದೆ. ಪರಿಹಾರ ಹಣ ನ್ಯಾಯಾಲಯದಲ್ಲಿ ಡೆಪಾಜಿಟ್ ಮಾಡಲು ಸೂಚಿಸಲಾಗಿದೆ. ಹಾಗಾಗಿ ರಾ.ಹೆ. 2020ಕ್ಕೆ ಒಂದು ಹದಕ್ಕೆ ಬರುವುದು ಖಚಿತವಾದಂತಾಗಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಕುಮಟಾ: ತಾಲೂಕಿನ ದಿವಗಿ ಗ್ರಾಮದಿಂದ ಕುಮಟಾ ಪಟ್ಟಣದವರೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ನಾಲ್ಕೈದು ಕಡೆಗಳಲ್ಲಿ ಬಸ್‌ ನಿಲುಗಡೆಯ ಸ್ಥಳಗಳಿದ್ದು, ಎಲ್ಲಿಯೂ ಪ್ರಯಾಣಿಕರ...

  • ಯಲ್ಲಾಪುರ: ಗ್ರಾಮ ಮಟ್ಟದಲ್ಲಿ ಮಹಿಳೆಯರ ಸ್ವಾವಲಂಬನೆಗೆ ಅನೇಕ ಯೊಜನೆಗಳಿದ್ದು, ಅದನ್ನು ಸದುಪಯೋಗ ಪಡಿಸಿಕೊಳ್ಳುವ ಮೂಲಕ ಮಹಿಳೆಯರು ಸ್ವಾವಲಂಬಿಗಳಾಗಬೇಕು...

  • ಶಿರಸಿ: ದಕ್ಷಿಣ ಭಾರತದ ಪ್ರಸಿದ್ಧ ಮಾರಿಕಾಂಬಾ ದೇವಿ ಜಾತ್ರಾ ಮಹೋತ್ಸವ ಮಾ.3 ರಿಂದ ನಡೆಯಲಿದ್ದು, ರಥಕ್ಕೆ ಬಳಸಲಾಗುವ ಮರವನ್ನು ಪೂಜಿಸಿ ಕಚ್ಚು ಹಾಕುವ ಸಂಪ್ರದಾಯವನ್ನು...

  • ಕಾರವಾರ: ರಾಜ್ಯದ ಏಕೈಕ ಕಪ್ಪು ಮರಳಿನ ಕಡಲತೀರ ಎನ್ನುವ ಖ್ಯಾತಿ ಪಡೆದಿರುವ ಕಾರವಾರ ತಾಲೂಕಿನ ಮಾಜಾಳಿಯ ತೀಳ್‌ ಮಾತಿ ಬೀಚ್‌ ಪ್ರವಾಸೋದ್ಯಮ ಪಟ್ಟಿಗೆ ಸೇರುವ ಭಾಗ್ಯದಿಂದ...

  • ಕಾರವಾರ: ಬೇಸಿಗೆ ಆರಂಭಕ್ಕೆ ಇನ್ನೇನು 75 ದಿನ ಬಾಕಿಯಿದೆ. ಆದರೆ, ಕಾರವಾರ ನಗರದ ನಿವಾಸಿಗಳಿಗೆ ಈಗಲೇ ಕುಡಿಯುವ ನೀರಿನ ಬರ ಎದುರಾಗುವ ಆತಂಕ ಕಾಡುತ್ತಿದೆ. ಜೊತೆಗೆ...

ಹೊಸ ಸೇರ್ಪಡೆ