ಶಿರಸಿ: ಈಜು ಕಲಿಯಲು ಹೋಗಿ ನೀರುಪಾಲಾದ ವಿದ್ಯಾರ್ಥಿ
Team Udayavani, Dec 9, 2021, 10:19 PM IST
ಶಿರಸಿ: ಈಜು ಕಲಿಯಲು ಹೋಗಿದ್ದ ಕಾಲೇಜು ವಿದ್ಯಾರ್ಥಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ತಾಲೂಕಿನ ಕೆಂಗ್ರೆ ಹೊಳೆಯಲ್ಲಿ ನಡೆದಿದೆ.
ಶಿರಸಿಯ ಸರ್ಕಾರಿ ಕಾಲೇಜೊಂದರ ಪ್ರಥಮ ಪಿಯುಸಿ ವಿದ್ಯಾರ್ಥಿ ಲಖನ್ ಶಿಂಧೆ (17) ಮೃತ ದುರ್ದೈವಿ ಎಂದು ತಿಳಿದು ಬಂದಿದೆ.
ಘಟನೆ ಸಂಬಂಧ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.