ದಲ್ಲಾಳಿ ಮುಕ್ತ ಮಾರುಕಟ್ಟೆ ಒದಗಿಸಲು ಯತ್ನ

ಮಾವಿನ ಹಣ್ಣು ಕೆಡದಂತೆ ರಕ್ಷಿಸಲು ಶೀತಲಿಕರಣ ಘಟಕದ ವ್ಯವಸ್ಥೆಗೆ ಶೀಘ್ರ ಕ್ರಮ: ಸಚಿವ ಹೆಬ್ಟಾರ್‌

Team Udayavani, May 22, 2022, 2:10 PM IST

6

ಅಂಕೋಲಾ: ಬೆಳೆಗಾರರ ಸಮಿತಿ ಆಶ್ರಯದಲ್ಲಿ ದಲ್ಲಾಳಿ ಮುಕ್ತ ಮಾರುಕಟ್ಟೆ ಒದಗಿಸುವ ಹಿನ್ನೆಲೆಯಲ್ಲಿ ಏರ್ಪಡಿಸಲಾಗಿರುವ ಮಾವು ಮೇಳವನ್ನು ಕಾರ್ಮಿಕ ಸಚಿವ ಶಿವರಾಮ ಹೆಬ್ಟಾರ ಉದ್ಘಾಟಿಸಿ ಎರಡು ದಿನಗಳ ಮೇಳಕ್ಕೆ ಚಾಲನೆ ನೀಡಿದರು.

ನಂತರ ಮಾತನಾಡಿದ ಸಚಿವರು, ಅಂಕೋಲಾದ ಕರಿ ಈಶಾಡ ಮಾವಿನ ಹಣ್ಣು ಇಲ್ಲಿಯ ಮಣ್ಣಿನ ವಿಶೇಷ ಗುಣ ಹೊಂದಿದೆ. ಇಲ್ಲಿ ಬೆಳೆಯುವ ಕರಿ ಈಶಾಡದ ಸವಿ ಎಲ್ಲಿಯೂ ಸಿಗುವುದಿಲ್ಲ. ಕರಿ ಈಶಾಡ ಮತ್ತು ಬೇರೆ ಬೇರೆ ಜಾತಿಯ ಮಾವಿನ ಹಣ್ಣಿಗೆ ಸೂಕ್ತ ಮಾರುಕಟ್ಟೆ ಸಿಗಬೇಕು. ತಾಲೂಕಿನಾದ್ಯಂತ ಹೇರಳವಾಗಿ ಬೆಳೆಯುವ ವಿವಿಧ ಜಾತಿಯ ಅನೇಕ ಮಾವಿನ ಹಣ್ಣುಗಳನ್ನು ಕೆಡದಂತೆ ರಕ್ಷಿಸಲು ಶೀತಲಿಕರಣ ಘಟಕದ ವ್ಯವಸ್ಥೆಯಾಗಬೇಕಿದೆ ಎಂದರು.

ಬೆಳೆಗಾರರ ಸಮಿತಿ ಅಧ್ಯಕ್ಷ ನಾಗರಾಜ ನಾಯಕ ಪ್ರಾಸ್ತಾವಿಕ ಮಾತನಾಡಿ ಇಲ್ಲಿನ ಮಾವಿನ ಹಣ್ಣುಗಳು ಅತ್ಯಂತ ಜನಪ್ರಿಯತೆ ಪಡೆದಿದ್ದರೂ ಮಾರುಕಟ್ಟೆಯ ಕೊರತೆ ಇದೆ. ರೈತರಿಗೆ ಸೂಕ್ತ ಬೆಲೆ ಸಿಗುತ್ತಿಲ್ಲ ಲಾಭಾಂಶವೆಲ್ಲ ದಲ್ಲಾಳಿಗಳ ಪಾಲಾಗುತ್ತಿದೆ. ಅಂಕೋಲಾದಲ್ಲಿ ಹಣ್ಣುಗಳನ್ನು ಸಂರಕ್ಷಿಸಲು ಒಂದು ಐಸ್‌ ಪ್ಲಾಂಟ್‌ ಅವಶ್ಯಕತೆ ಇದೆ ಎಂದರು.

ಜಿಪಂ ಮಾಜಿ ಅಧ್ಯಕ್ಷ ರಮಾನಂದ ನಾಯಕ ಅಧ್ಯಕ್ಷತೆ ವಹಿಸಿ, ಮಾವು ಮೇಳದ ಆಯೋಜನೆ ಪ್ರಾಯೋಗಿಕವಾಗಿದ್ದರೂ ಮುಂದಿನ ದಿನಗಳಲ್ಲಿ ಇದು ರೈತರಿಗೆ ಅನುಕೂಲ ಮಾಡಿಕೊಡಲಿದೆ ಎಂದರು.

ಬೆಳೆಗಾರರ ಸಮಿತಿ ಗೌರವಾಧ್ಯಕ್ಷ ಭಾಸ್ಕರ ನಾರ್ವೇಕರ, ಉಪಾಧ್ಯಕ್ಷ ಹನುಮಂತ ಗೌಡ, ದೇವರಾಯ ನಾಯಕ, ಜೈಹಿಂದ ಸಂಸ್ಥೆ ಅಧ್ಯಕ್ಷ ಪದ್ಮನಾಭ ಪ್ರಭು ಉಪಸ್ಥಿತರಿದ್ದರು.

ಹನುಮಂತ ಗೌಡ ವಿಶೇಷವಾಗಿ ತಯಾರಿಸಿದ ಮಾವಿನ ಹಣ್ಣಿನ ಹಾರವನ್ನು ಶಿವರಾಮ ಹೆಬ್ಟಾರರಿಗೆ ಹಾಕಿ ಸ್ವಾಗತಿಸಿದರು. ಬೆಳೆಗಾರರ ಸಮಿತಿ ಕಾರ್ಯದರ್ಶಿ ರಾಮಚಂದ್ರ ಹೆಗಡೆ ನಿರೂಪಿಸಿದರು. ರಾಘು ಕಾಕರಮಠ ವಂದಿಸಿದರು.

ಮಾವು ಮೇಳದಲ್ಲಿ ಅಂಕೋಲೆಯ ಪ್ರಸಿದ್ಧ ಕರಿ ಈಶಾಡು ಹಣ್ಣಿನ ಜೊತೆಗೆ ಆಪೂಸ್‌, ಚಾಲ್ತಿ, ನೀಲಂ, ರತ್ನಾಗಿರಿ ಆಪೂಸ್‌, ತೋತಾಪುರಿ ಸೇರಿದಂತೆ ವಿವಿಧ ಜಾತಿಯ ಮಾವಿನ ಹಣ್ಣುಗಳು ಮಾರಾಟಕ್ಕೆ ಬಂದಿದ್ದವು. ಕಸಿ ಮಾಡಿದ ಮಾವಿನ ಗಿಡಗಳು ಮಾರಾಟವಾದವು. ಮಾವಿನ ಉಪ ಉತ್ಪನ್ನಗಳಾದ ಮಾವಿನ ಉಪ್ಪಿನ ಕಾಯಿ, ಮಾವಿನ ಹುಳಿ, ಹಪ್ಪಳ ಮತ್ತಿತರ ಉತ್ಪನ್ನಗಳು ಗಮನ ಸೆಳೆದವು.

ಟಾಪ್ ನ್ಯೂಸ್

ಕರಾವಳಿಯಲ್ಲಿ ಭಾರೀ ಮಳೆ; ಜೂನ್. 26ರವರೆಗೆ ಆರೆಂಜ್ ಅಲರ್ಟ್​ ಘೋಷಣೆ

ಕರಾವಳಿಯಲ್ಲಿ ಭಾರೀ ಮಳೆ; ಜೂನ್. 26ರವರೆಗೆ ಆರೆಂಜ್ ಅಲರ್ಟ್​ ಘೋಷಣೆ

ವಿರಾಜಪೇಟೆ: ಹುಲಿ ದಾಳಿ: ಎರಡು ಹಸು ಸಾವು: ಪಾಲಿಬೆಟ್ಟದಲ್ಲೂ ಆತಂಕ

ವಿರಾಜಪೇಟೆ: ಹುಲಿ ದಾಳಿ: ಎರಡು ಹಸು ಸಾವು: ಪಾಲಿಬೆಟ್ಟದಲ್ಲೂ ಆತಂಕ

ಪ್ರತಿ ಜಿಲ್ಲೆಯಲ್ಲೂ ಕಾಂಗ್ರೆಸ್‌ ಪಾದಯಾತ್ರೆ : ಧ್ರುವನಾರಾಯಣ

ಪ್ರತಿ ಜಿಲ್ಲೆಯಲ್ಲೂ ಕಾಂಗ್ರೆಸ್‌ ಪಾದಯಾತ್ರೆ : ಧ್ರುವನಾರಾಯಣ

ಅಗ್ನಿಪಥ ಸೇವೆ ಬಳಿಕ ಯುವಕರಿಗೆ ಹೆಚ್ಚಿನ ಉದ್ಯೋಗಾವಕಾಶ: ನಳಿನ್‌

ಅಗ್ನಿಪಥ ಸೇವೆ ಬಳಿಕ ಯುವಕರಿಗೆ ಹೆಚ್ಚಿನ ಉದ್ಯೋಗಾವಕಾಶ: ನಳಿನ್‌

ಮಂಗಳೂರು ಏರ್‌ಪೋರ್ಟ್‌ಗೆ ಸರಕಾರಿ ಬಸ್‌ ಸೇವೆ

ಮಂಗಳೂರು ಏರ್‌ಪೋರ್ಟ್‌ಗೆ ಸರಕಾರಿ ಬಸ್‌ ಸೇವೆ

ಶಿಕ್ಷಕನಿಂದ ಹಲ್ಲೆ ಆರೋಪ: ಇಬ್ಬರು ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲು

ಶಿಕ್ಷಕನಿಂದ ಹಲ್ಲೆ ಆರೋಪ: ಇಬ್ಬರು ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲು

ಕಸಬಾ ಬಜಾರ್: ಮೊಬೈಲ್‌ ಟವರನ್ನೇ ಕದ್ದೊಯ್ದರು!

ಕಸಬಾ ಬಜಾರ್: ಮೊಬೈಲ್‌ ಟವರನ್ನೇ ಕದ್ದೊಯ್ದರು!ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-werwr

ಪ್ರತಿಷ್ಠಿತ ಕೆ. ಶ್ಯಾಮರಾವ್ ಪ್ರಶಸ್ತಿಗೆ ಅಶೋಕ ಹಾಸ್ಯಗಾರ ಆಯ್ಕೆ

20

ಗೊಂದಲ ನಿವಾರಣೆಗೆ ಕಾಲಾವಕಾಶ

ಭಟ್ಕಳ : ಜಾತಿ ಪ್ರಮಾಣ ಪತ್ರ ನೀಡುವಲ್ಲಿ ವಿಳಂಬ ನೀತಿ : ಜಿಲ್ಲಾಧಿಕಾರಿ ಕಚೇರಿಗೆ ಪಾದಯಾತ್ರೆ

ಭಟ್ಕಳ : ಜಾತಿ ಪ್ರಮಾಣ ಪತ್ರ ನೀಡುವಲ್ಲಿ ವಿಳಂಬ ನೀತಿ : ಜಿಲ್ಲಾಧಿಕಾರಿ ಕಚೇರಿಗೆ ಪಾದಯಾತ್ರೆ

28

ಕೋಡಿ ಕಡಿದ ನದಿಬಾಗ ಗ್ರಾಮಸ್ಥರು

27

ಐಆರ್‌ಬಿ ವಿರುದ್ಧ ರೂಪಾಲಿ ಅಸಮಾಧಾನ

MUST WATCH

udayavani youtube

ಗೃಹ ಪ್ರವೇಶ ಸಂದರ್ಭ ಅವಾಂತರ |ಮಂಗಳಮುಖಿಯರ ರಂಪಾಟ

udayavani youtube

ಕಿನ್ನಿಗೋಳಿ :ಪತ್ನಿ ಸೇರಿ ಮೂವರು ಮಕ್ಕಳನ್ನು ಬಾವಿಗೆ ತಳ್ಳಿ ತಾನೂ ಆತ್ಮಹತ್ಯೆ ಯತ್ನಿಸಿದ ಪತಿ

udayavani youtube

ನೀವು ಬಿಜೆಪಿಗೆ ಸೇರಿ, ನಾವು ಶಿವಸೇನೆಯನ್ನು ಮತ್ತೆ ಕಟ್ಟುತ್ತೇವೆ : ರಾವತ್

udayavani youtube

13,940 ಮೊಳೆಗಳಲ್ಲಿ ಕಲಾಕೃತಿ : India Book of Records ಗೆ ದಾಖಲಾದ ಕಾಪುವಿನ ಶಶಾಂಕ್

udayavani youtube

ಮನುಷ್ಯನ ಮನಸ್ಸು ಒಂದೇ ರೀತಿ ಇರುವುದಿಲ್ಲ.. ಯಾಕೆ ?

ಹೊಸ ಸೇರ್ಪಡೆ

ಕರಾವಳಿಯಲ್ಲಿ ಭಾರೀ ಮಳೆ; ಜೂನ್. 26ರವರೆಗೆ ಆರೆಂಜ್ ಅಲರ್ಟ್​ ಘೋಷಣೆ

ಕರಾವಳಿಯಲ್ಲಿ ಭಾರೀ ಮಳೆ; ಜೂನ್. 26ರವರೆಗೆ ಆರೆಂಜ್ ಅಲರ್ಟ್​ ಘೋಷಣೆ

ವಿರಾಜಪೇಟೆ: ಹುಲಿ ದಾಳಿ: ಎರಡು ಹಸು ಸಾವು: ಪಾಲಿಬೆಟ್ಟದಲ್ಲೂ ಆತಂಕ

ವಿರಾಜಪೇಟೆ: ಹುಲಿ ದಾಳಿ: ಎರಡು ಹಸು ಸಾವು: ಪಾಲಿಬೆಟ್ಟದಲ್ಲೂ ಆತಂಕ

ಪ್ರತಿ ಜಿಲ್ಲೆಯಲ್ಲೂ ಕಾಂಗ್ರೆಸ್‌ ಪಾದಯಾತ್ರೆ : ಧ್ರುವನಾರಾಯಣ

ಪ್ರತಿ ಜಿಲ್ಲೆಯಲ್ಲೂ ಕಾಂಗ್ರೆಸ್‌ ಪಾದಯಾತ್ರೆ : ಧ್ರುವನಾರಾಯಣ

ಅಗ್ನಿಪಥ ಸೇವೆ ಬಳಿಕ ಯುವಕರಿಗೆ ಹೆಚ್ಚಿನ ಉದ್ಯೋಗಾವಕಾಶ: ನಳಿನ್‌

ಅಗ್ನಿಪಥ ಸೇವೆ ಬಳಿಕ ಯುವಕರಿಗೆ ಹೆಚ್ಚಿನ ಉದ್ಯೋಗಾವಕಾಶ: ನಳಿನ್‌

ಮಂಗಳೂರು ಏರ್‌ಪೋರ್ಟ್‌ಗೆ ಸರಕಾರಿ ಬಸ್‌ ಸೇವೆ

ಮಂಗಳೂರು ಏರ್‌ಪೋರ್ಟ್‌ಗೆ ಸರಕಾರಿ ಬಸ್‌ ಸೇವೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.