Udayavni Special

ನಾಥಪಂಥ ಜೋಗಿ ಸಮುದಾಯ ಅಭಿವೃದ್ಧಿಗೆ ಆಗ್ರಹ


Team Udayavani, Mar 8, 2021, 5:58 PM IST

ನಾಥಪಂಥ ಜೋಗಿ ಸಮುದಾಯ ಅಭಿವೃದ್ಧಿಗೆ ಆಗ್ರಹ

ಯಲ್ಲಾಪುರ: ನಾಥ ಪಂಥ ಜೋಗಿ ಸಮುದಾಯದ ಅಭಿವೃದ್ಧಿ ದೃಷ್ಟಿಯಿಂದ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಉತ್ತರ ಕನ್ನಡ ಜಿಲ್ಲಾ ನಾಥಪಂಥ ಜೋಗಿ ಸಮುಜ ಸೇವಾ ಸಮಿತಿ ವತಿಯಿಂದ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಟಾರ್‌ ಅವರನ್ನು ಆಗ್ರಹಿಸಲಾಯಿತು.

ಈ ಕುರಿತು ಸಂಘದ ಪದಾಧಿಕಾರಿಗಳು ಯಲ್ಲಾಪುರ ಕಾರ್ಯಾಲಯದಲ್ಲಿ ಸಚಿವರನ್ನು ಸಮಾಜದ ವತಿಯಿಂದ ಗೌರವಿಸಿ, ವಿವಿಧ ಬೇಡಿಕೆಗಳ ಮನವಿ ನೀಡಿದರು. ಸಲ್ಲಿಸಿದ ಮನವಿಯಲ್ಲಿ, ಜೋಗಿ ಸಮುದಾಯ ಜಿಲ್ಲೆಯಲ್ಲಿಅನೇಕ ವರ್ಷಗಳಿಂದ ವಾಸವಾಗಿದ್ದು ಇರುತ್ತದೆ. ಅಲೆಮಾರಿ ಜನಾಂಗದವರಾದ ನಾವು ಆರ್ಥಿಕವಾಗಿ, ಸಾಮಾಜಿಕವಾಗಿ ಶೈಕ್ಷಣಿಕವಾಗಿ ಹಿಂದೆ ಇದ್ದೇವೆ. ಕೂಲಿನಾಲಿ ಮಾಡಿಕೊಂಡು ಜೀವನ ಸಾಗಿಸುತ್ತಿರುವ ಜನಾಂಗವನ್ನು ಹಿಂದುಳಿದ ಆಯೋಗವು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಸರಕಾರಕ್ಕೆ ಮನವಿ ಸಲ್ಲಿಸಿದರೂ ಈ ವರೆಗೂ ಅದು ಸಾಧ್ಯವಾಗಿಲ್ಲ. ಕಾರಣ ನಮ್ಮ ಜನಾಂಗವನ್ನು ಪರಿಶಿಷ್ಟಪಂಗಡಕ್ಕೆ ಸೇರಿಸಬೇಕು. ಜೋಗಿ ಸಮಾಜದ ಬಹುತೇಕರು ನಿರಾಶ್ರಿತರಾಗಿದ್ದು, ಈ ಬಗ್ಗೆ ಗಮನಹರಿಸಿ ವಸತಿ ಸೌಲಭ್ಯ ಕಲ್ಪಿಸಿಕೊಡಬೇಕು.

ಶಿರಸಿಯ ಅಚನಳ್ಳಿ ಗ್ರಾಮದಲ್ಲಿ ಜೋಗಿ ಸಮಾಜದ ಕಾಲನಿಗೆಂದು ಮಂಜೂರಾದ ಭೂಮಿಯಲ್ಲಿ ಜೋಗಿ ಸಮುದಾಯದ ಜನಪದ ಕಲಾ ಭವನ ನಿರ್ಮಿಸಿಕೊಡಬೇಕು. ಎಲ್ಲಾ ತಾಲೂಕುಗಳಲ್ಲೂ ಸಮಾಜ ಬಾಂಧವರಿಗಾಗಿಸಮುದಾಯ ಭವನ ನಿರ್ಮಿಸಿಕೊಡಬೇಕು. ಅಲೆಮಾರಿ ಜನಾಂಗದ ಹೆಣ್ಣು ಮಕ್ಕಳಿಗಾಗಿ ಸರಕಾರಿ ನೌಕರಿಯಲ್ಲಿ ಶೇ.1 ಮೀಸಲಾತಿ ನೀಡಬೇಕು.

ಹೊನ್ನಾವರ ತಾಲೂಕಿನ ಹೊಸಕುಳಿ ಗ್ರಾಮದ ಸರ್ವೆ ನಂ.214/ಎ/ಎ/ಎ/ಎ ಕಂದಾಯ ಹಕ್ಕಿನ ಜಾಗೆಯನ್ನು ನಮ್ಮ ಸಮಾಜಕ್ಕೆ ಮಂಜೂರಿ ಮಾಡಿಕೊಡಬೇಕು. ಮುರ್ಡೇಶ್ವರ ಸರ್ವೆ ನಂ 731 ಮತ್ತು ಸರ್ವೆ ನಂ 782 ಗಳಲ್ಲಿ ನೂರಾರು ಎಕರೆ ಸರ್ಕಾರಿ ಜಾಗ ಇದ್ದು, ಇದರಲ್ಲಿ 2 ಎಕರೆ ಸ್ಥಳವನ್ನು ನಮ್ಮ ಸಮಿತಿಗೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಜಿಲ್ಲಾ ಸಂಘದ ಅಧ್ಯಕ್ಷ ಶಿವರಾಮ ಬಳೆಗಾರ ಮುರ್ಡೇಶ್ವರ, ಜಿಲ್ಲಾ ಕೋಶಾಧ್ಯಕ್ಷ ಗಣಪತಿ ಜೋಗಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಜೋಗಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ನಾಗರಾಜ ಜೋಗಿ, ಜಿಲ್ಲಾಕಾರ್ಯದರ್ಶಿ ಭರತೇಶ್‌ ಜೋಗಿ ಪ್ರಮುಖರಾದ ಪ್ರಕಾಶ ಜೋಗಿ ಮುಂತಾದವರು ಇದ್ದರು.

ಟಾಪ್ ನ್ಯೂಸ್

ವಿರಾರ್ ನ ಕೋವಿಡ್ ಆಸ್ಪತ್ರೆಯಲ್ಲಿ ಅಗ್ನಿ ದುರಂತ: 13 ಸೋಂಕಿತರ ದುರ್ಮರಣ!

ವಿರಾರ್ ನ ಕೋವಿಡ್ ಆಸ್ಪತ್ರೆಯಲ್ಲಿ ಅಗ್ನಿ ದುರಂತ: 13 ಸೋಂಕಿತರ ದುರ್ಮರಣ!

ಈ ರಾಶಿಯವರಿಗಿಂದು ಸಾರ್ವಜನಿಕ ಕಾರ್ಯದಲ್ಲಿ ಅವಮಾನ ಅಪಮಾನ ಪ್ರಸಂಗ ಎದುರಾಗಬಹುದು!

ಈ ರಾಶಿಯವರಿಗಿಂದು ಸಾರ್ವಜನಿಕ ಕಾರ್ಯದಲ್ಲಿ ಅವಮಾನ ಅಪಮಾನ ಪ್ರಸಂಗ ಎದುರಾಗಬಹುದು!

ಲಸಿಕೆ ನೀಡಲು 30,000 ಕೋಟಿ ಬೇಕು

ಲಸಿಕೆ ನೀಡಲು 30,000 ಕೋಟಿ ಬೇಕು

ರಾಷ್ಟ್ರೀಯ ತುರ್ತು ಪರಿಸ್ಥಿತಿಯಂತಿದೆ

ರಾಷ್ಟ್ರೀಯ ತುರ್ತು ಪರಿಸ್ಥಿತಿಯಂತಿದೆ

ದೇಶದಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ?

ದೇಶದಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ?

ಮೇಯಲ್ಲಿ ಹೆಚ್ಚು ಕೇಸ್‌!

ಮೇಯಲ್ಲಿ ಹೆಚ್ಚು ಕೇಸ್‌!

ರಾಜಕೀಯ ಪಥ ಬದಲಿಸಿದ ಅಣ್ಣಾ ಆಂದೋಲನಕ್ಕೆ ದಶಕ

ರಾಜಕೀಯ ಪಥ ಬದಲಿಸಿದ ಅಣ್ಣಾ ಆಂದೋಲನಕ್ಕೆ ದಶಕಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

gy66

108 ಆಂಬ್ಯುಲೆನ್ಸ್‌ ಒದಗಿಸಲು ಒತ್ತಾಯ!

fghytryr

ಪ್ರತಿ ತಾಲೂಕಿನಲ್ಲಿ ಕನ್ನಡ ಭವನ ನಿರ್ಮಾಣ

Untitled-1

ಕಾಮಗಾರಿ  ವಿಳಂಬ ಮಾಡಿದರೆ ಕಠಿಣ ಕ್ರಮ: ಶಾಸಕಿ ರೂಪಾಲಿ ಎಚ್ಚರಿಕೆ

ಅನಾನಸ್‌ ಬೆಳೆಗಾರರಿಗೆ ಕೋವಿಡ್ ಸಂಕಷ್ಟ

ಅನಾನಸ್‌ ಬೆಳೆಗಾರರಿಗೆ ಕೋವಿಡ್ ಸಂಕಷ್ಟ

gjgf

ಕೇರಳದಲ್ಲಿ ಮಾಟ-ಮಂತ್ರದ ಕಾರಣಕ್ಕೆ ಮಗಳ ಕೊಲೆ ಮಾಡಿದ ಆರೋಪಿ ಕಾರವಾರದಲ್ಲಿ ಬಂಧನ

MUST WATCH

udayavani youtube

ಬೈಕ್ ಗೆ ನಾಯಿಯನ್ನು ಕಟ್ಟಿ ಹೆದ್ದಾರಿಯಲ್ಲೇ ಎಳೆದುಕೊಂಡು ಹೋದ ಸವಾರರು ! |

udayavani youtube

ಅಘೋಷಿತ ಲಾಕ್ ಡೌನ್ ವಿರುದ್ಧ ಮಾಜಿ ಸಿಎಂ ಕುಮಾರ ಸ್ವಾಮಿ ಕೆಂಡಾಮಂಡಲ

udayavani youtube

ಮಂಗಳೂರಿನ ಮಾರುಕಟ್ಟೆ ಸುಧಾರಣೆ ಕುರಿತು ಉದಯವಾಣಿ ಫೋನ್ ಇನ್

udayavani youtube

ಕೊರೊನಾ 1 ವರುಷ !

udayavani youtube

ಆಕ್ಸಿಜನ್ ಮಹಾರಾಷ್ಟ್ರಕ್ಕೆ ಕಳುಹಿಸುವುದಕ್ಕೆ ಎಂ.ಬಿ.ಪಾಟೀಲ ಆಕ್ಷೇಪ

ಹೊಸ ಸೇರ್ಪಡೆ

ವಿರಾರ್ ನ ಕೋವಿಡ್ ಆಸ್ಪತ್ರೆಯಲ್ಲಿ ಅಗ್ನಿ ದುರಂತ: 13 ಸೋಂಕಿತರ ದುರ್ಮರಣ!

ವಿರಾರ್ ನ ಕೋವಿಡ್ ಆಸ್ಪತ್ರೆಯಲ್ಲಿ ಅಗ್ನಿ ದುರಂತ: 13 ಸೋಂಕಿತರ ದುರ್ಮರಣ!

ಈ ರಾಶಿಯವರಿಗಿಂದು ಸಾರ್ವಜನಿಕ ಕಾರ್ಯದಲ್ಲಿ ಅವಮಾನ ಅಪಮಾನ ಪ್ರಸಂಗ ಎದುರಾಗಬಹುದು!

ಈ ರಾಶಿಯವರಿಗಿಂದು ಸಾರ್ವಜನಿಕ ಕಾರ್ಯದಲ್ಲಿ ಅವಮಾನ ಅಪಮಾನ ಪ್ರಸಂಗ ಎದುರಾಗಬಹುದು!

ಕರಾವಳಿಯಲ್ಲೂ ಆಕ್ಸಿಜನ್‌ಗೆ ಹೆಚ್ಚಿದ ಬೇಡಿಕೆ!

ಕರಾವಳಿಯಲ್ಲೂ ಆಕ್ಸಿಜನ್‌ಗೆ ಹೆಚ್ಚಿದ ಬೇಡಿಕೆ!

ಲಸಿಕೆ ನೀಡಲು 30,000 ಕೋಟಿ ಬೇಕು

ಲಸಿಕೆ ನೀಡಲು 30,000 ಕೋಟಿ ಬೇಕು

ರಾಷ್ಟ್ರೀಯ ತುರ್ತು ಪರಿಸ್ಥಿತಿಯಂತಿದೆ

ರಾಷ್ಟ್ರೀಯ ತುರ್ತು ಪರಿಸ್ಥಿತಿಯಂತಿದೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.