ಹಳ್ಳಿ ಹಿಂಡುತ್ತಿದೆ ಮದ್ಯ -ಮಟ್ಕಾ 


Team Udayavani, Aug 30, 2018, 4:43 PM IST

30-agust-23.jpg

ಹೊನ್ನಾವರ: ಕುಟುಂಬವನ್ನು ಸರ್ವನಾಶದತ್ತ ತಳ್ಳುವ, ಹಳ್ಳಿಗಳನ್ನು ಹಿಂಡುವ ಮದ್ಯ, ಮಟ್ಕಾ, ಜುಗಾರಿಯನ್ನು ವಿರೋಧಿಸಿ ಇಲ್ಲಿನ ಮಹಿಳೆಯರು ಈಗ ಜಾಗೃತರಾಗುತ್ತಿದ್ದಾರೆ. ನಾಲ್ಕಾರು ಹಳ್ಳಿಗಳ ಮಹಿಳೆಯರು ಈಗಾಗಲೇ ಪ್ರತಿಭಟನೆ ನಡೆಸಿದ್ದಾರೆ. ತಾಲೂಕಿನ ಜನ ವಾರ್ಷಿಕ ಅಧಿಕೃತವಾಗಿ 25 ಕೋಟಿ ರೂ. ಮತ್ತು ಅನಧಿಕೃತವಾಗಿ 25 ಕೋಟಿ ರೂ. ಮದ್ಯ ಕುಡಿಯುತ್ತಿದ್ದಾರೆ.

ಸಾಧಾರಣವಾಗಿ ಸಹಿಸಿಕೊಳ್ಳುವ ಗುಣವುಳ್ಳ ಮಹಿಳೆಯರು ಹಳ್ಳಿಯ ವಾತಾವರಣ ಅಸಹನೀಯವಾಗುತ್ತಿರುವುದರಿಂದ ಬೆಳಗ್ಗೆ ಬಸ್‌ ಏರಿ ತಹಶೀಲ್ದಾರ್‌ ಕಾರ್ಯಾಲಯಕ್ಕೆ ಬಂದು ಪ್ರತಿಭಟನೆ ಆರಂಭಿಸುತ್ತಾರೆ. ಪೊಲೀಸರು, ಅಬಕಾರಿ ಅಧಿಕಾರಿಗಳು ಆಗಾಗ ಜಂಟಿಯಾಗಿ ದಾಳಿ ನಡೆಸುವುದು ನಿಂತು ಹೋಗಿದೆ. ಪೊಲೀಸ್‌ ಅಧಿಕಾರಿಗಳು ವರ್ಷಕ್ಕೊಮ್ಮೆ ಬದಲಾಗುತ್ತಾರೆ. ಚುನಾವಣೆ, ಬಂದೋಬಸ್ತ್, ನೆರೆ ತಾಲೂಕಿನ ಕರ್ತವ್ಯ ಹೀಗೆ ಪೊಲೀಸರಿಗೆ ಪುರಸೊತ್ತು ಇಲ್ಲ. ಅಬಕಾರಿಯವರಿಗೆ ಇದೆಲ್ಲ ಬೇಕಾಗಿಲ್ಲ. ಆಗೊಮ್ಮೆ ಈಗೊಮ್ಮೆ ನಾಲ್ಕಾರು ಬಾಟಲಿ ಗೋವಾ ಮದ್ಯ ಹಿಡಿದು ವರದಿ ಮಾಡಿ ಪತ್ರಿಕೆಯಲ್ಲಿ ಬರೆಸಿಕೊಂಡರೆ ಅವರ ಕೆಲಸ ಮುಗಿಯಿತು. ಆದ್ದರಿಂದ ಈಗ ಗೂಡಂಗಡಿಗಳಲ್ಲೂ, ಗಿಡಗಂಟಿಗಳ ಪೊದೆಗಳಲ್ಲಿ ಮದ್ಯ ಸಿಗುತ್ತಿದೆ. ಮಟ್ಕಾ ಚೀಟಿಯುಗದಲ್ಲಿ ಒಂದಿಷ್ಟು ಚೀಟಿ, ನಗದು ಹಿಡಿದು ಪೊಲೀಸರು ಪ್ರಕರಣ ದಾಖಲಿಸುತ್ತಿದ್ದರು. ಈಗ ಮೊಬೈಲ್‌ ಯುಗದಲ್ಲಿ ಬುಕ್ಕಿಂಗ್‌, ಪೇಮೆಂಟ್‌ ಎಲ್ಲವೂ ಮೊಬೈಲ್‌ನಿಂದ ನಡೆಯುತ್ತದೆ. ಪೊಲೀಸರಿಗೆ ಪ್ರಕರಣ ದಾಖಲಿಸುವುದು ಸಾಧ್ಯವಾಗುತ್ತಿಲ್ಲ. ಚೌತಿ ಹಬ್ಬ ಹತ್ತಿರ ಬಂದಂತೆ ಜುಗಾರಿ ಮಂಡಗಳು ಹಳೆ ಕಟ್ಟಡಗಳಲ್ಲಿ ಜೋರಾಗುತ್ತವೆ. ಊರ ಪ್ರಮುಖರ ಆಶ್ರಯ ಇರುವುದರಿಂದ ಪೊಲೀಸರಿಗೆ ಸುದ್ದಿ ಹೋಗುವುದಿಲ್ಲ.

ತಾಲೂಕಿನ ನೂರಾರು ಸ್ಥಳಗಳಲ್ಲಿ ಮದ್ಯ, ಬಿಯರ್‌ ಮಾರಾಟವಾಗುತ್ತದೆ. ಶಾಲೆ, ಕಾಲೇಜು ಮೈದಾನ, ಖಾಲಿ ಸ್ಥಳಗಳಲ್ಲಿ ಬೆಳಗಾಗುವಷ್ಟರಲ್ಲಿ ಬಾಟಲಿಗಳ ರಾಶಿ ಬಿದ್ದಿರುತ್ತದೆ. ಲಿವರ್‌ ಕೆಟ್ಟು ಆಸ್ಪತ್ರೆಗೆ ಹೋಗುವವರ ಸಂಖ್ಯೆ, ಗುಣವಾಗದವರ ಸಂಖ್ಯೆ ಹೆಚ್ಚುತ್ತಿದೆ ಎಂದು ಹಿರಿಯ ವೈದ್ಯರು ಹೇಳುತ್ತಾರೆ. ಕುಡುಕರನ್ನು ಕಟ್ಟಿಕೊಂಡ ಹೆಂಗಸರು ಮತ್ತು ಅವರ ಮಕ್ಕಳ ಗೋಳು ಅಸಹನೀಯ.

ಕೇವಲ 10 ಅಂಗಡಿ ಮಾತ್ರ ಅಧಿಕೃತ
ತಾಲೂಕಿನಲ್ಲಿ ವರ್ಷಕ್ಕೆ ಅಧಿಕೃತವಾಗಿ 25 ಕೋಟಿ ರೂ. ಗಳು ಸರ್ಕಾರಿ ಮಾನ್ಯತೆ ಪಡೆದ ಮದ್ಯ ಮಾರಾಟವಾಗುತ್ತದೆ. ಅಷ್ಟೇ ಪ್ರಮಾಣದಲ್ಲಿ ಕಳ್ಳಬಟ್ಟಿ, ಗೋವಾ ಮದ್ಯ ಸೇರಿ ಮಾರಾಟವಾಗುತ್ತದೆ. ಅಧಿಕೃತವಾಗಿ ತಾಲೂಕಿನಲ್ಲಿ ಕೇವಲ 10 ಅಧಿಕೃತ ಅಂಗಡಿಗಳಿವೆ. ಇಲ್ಲಿ ದಿನಕ್ಕೆ ಸರಾಸರಿ 160 ಪೆಟ್ಟಿಗೆ ಮದ್ಯದಂತೆ ವರ್ಷಕ್ಕೆ 58,400 ಪೆಟ್ಟಿಗೆ ಮದ್ಯ ಮತ್ತು ದಿನಕ್ಕೆ 90ರಂತೆ 32,850 ಬಿಯರ್‌ ಬಾಟಲಿಗಳು ಅಧಿಕೃತವಾಗಿ ಮಾರಾಟವಾಗುತ್ತವೆ. ಸೆಚೆಟ್ಸ್‌ ಮತ್ತು ಗೋವಾ, ಕಳ್ಳಬಟ್ಟಿ ಸೇರಿದರೆ ಲೆಕ್ಕ ಇಟ್ಟವರಿಲ್ಲ.

ನಡೆಯಬೇಕಿದೆ ಸಾಮಾಜಿಕ ಜಾಗೃತಿ
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಸೇಂಟ್‌ ಇಗ್ನೇಷಿಯಸ್‌ ಆಸ್ಪತ್ರೆ ಮದ್ಯಪಾನ ನಿವಾರಣ ಶಿಬಿರಗಳನ್ನು ಸತತ ನಡೆಸುತ್ತಿದ್ದರೂ ಶಿಬಿರಕ್ಕೆ ಹೋದವರಲ್ಲಿ ಹೆಚ್ಚಿನವರು ಕುಡಿತ ಬಿಟ್ಟರು, ಕೆಲವರು ಪುನಃ ಆರಂಭಿಸಿದರು. ಸರ್ಕಾರದ ಶಿಸ್ತುಕ್ರಮದ ಜೊತೆ ಸಾಮಾಜಿಕ ಜಾಗೃತಿ ಮೂಡಿಸುವ ಕೆಲಸ ಆಗಬೇಕಿದೆ. ಪರಿಸ್ಥಿತಿ ಗಂಭೀರವಾಗಿದೆ. ಸಮಾಜದ ಸ್ವಾಸ್ಥ್ಯ ಕೆಡಿಸುತ್ತಿರುವ ಮದ್ಯ, ಗುಟ್ಕಾ, ಮಟ್ಕಾಗಳನ್ನು ನಿಯಂತ್ರಿಸದಿದ್ದರೆ ಹಳ್ಳಿಗಳು ಹಾಳಾಗಿ ಹೋಗುವುದರಲ್ಲಿ ಸಂಶಯವಿಲ್ಲ. 

ಜೀಯು ಹೊನ್ನಾವರ

ಟಾಪ್ ನ್ಯೂಸ್

9

6.69 ಕೋಟಿ ರೂ. ಖೋಟಾನೋಟು ವಶಕ್ಕೆ: ಕೇಂದ್ರ ಏಜೆನ್ಸಿ ತನಖೆ ಆರಂಭ

1-a-DK-SHI

D.K. Suresh ಅವರದ್ದು ಹೃದಯವಂತಿಕೆಯಲ್ಲವೇ?: ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ

1-wewqeqwe

Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

1—-wewqe

Punjab ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಹೆಣ್ಣು ಮಗುವಿನ ಜನನ

8

ʼAadujeevithamʼ Twitter review: ಪೃಥ್ವಿರಾಜ್‌ ಅಭಿನಯಕ್ಕೆ ಬಹುಪರಾಕ್; ಹೇಗಿದೆ ಸಿನಿಮಾ?

12-baikampady

Fire; ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಅಗ್ನಿ ಅವಘಡ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kumta: ರಾಜಕೀಯದಲ್ಲಿ ಧರ್ಮ ಇರಬೇಕು, ಧರ್ಮದಲ್ಲಿ ರಾಜಕೀಯ ಇರಬಾರದು: ಡಿ.ಕೆ.ಶಿವಕುಮಾರ್

Kumta: ರಾಜಕೀಯದಲ್ಲಿ ಧರ್ಮ ಇರಬೇಕು, ಧರ್ಮದಲ್ಲಿ ರಾಜಕೀಯ ಇರಬಾರದು: ಡಿ.ಕೆ.ಶಿವಕುಮಾರ್

ಪಾದುಕೆ ದರ್ಶನ: ಸಂಭ್ರಮ ಹೆಚ್ಚಿಸಿದ ಮಂತ್ರಾಲಯ ಶ್ರೀಗಳ ಸಂಚಾರ

ಪಾದುಕೆ ದರ್ಶನ: ಸಂಭ್ರಮ ಹೆಚ್ಚಿಸಿದ ಮಂತ್ರಾಲಯ ಶ್ರೀಗಳ ಸಂಚಾರ

Karnataka Politics: ಜೆಡಿಎಸ್ ಸರ್ವನಾಶ, ಒಡೆದು ಮನೆಯಂತಾದ ಬಿಜೆಪಿ : ಡಿ.ಕೆ ಶಿವಕುಮಾರ್

Karnataka Politics: ಜೆಡಿಎಸ್ ಸರ್ವನಾಶ, ಒಡೆದು ಮನೆಯಂತಾದ ಬಿಜೆಪಿ : ಡಿ.ಕೆ ಶಿವಕುಮಾರ್

ಪೂರ್ಣಗೊಳ್ಳದ ಸೇತುವೆ… ಗೂಗಲ್ ಮ್ಯಾಪ್ ನಂಬಿ ವಾಪಸ್ಸಾಗುತ್ತಿರುವ ವಾಹನ ಸವಾರರು

Google Map: ಪೂರ್ಣಗೊಳ್ಳದ ಸೇತುವೆ… ಗೂಗಲ್ ಮ್ಯಾಪ್ ನಂಬಿ ಪರದಾಡಿದ ವಾಹನ ಸವಾರರು

Sirsi Marikamba: ಗದ್ದುಗೆಯಿಂದ ಎದ್ದು, ಜಾತ್ರಾ ಚಪ್ಪರ ಬಿಟ್ಟು ಹೊರ ನಡೆಯುತ್ತಿರುವ ದೇವಿ

Sirsi Marikamba: ಗದ್ದುಗೆಯಿಂದ ಎದ್ದು, ಜಾತ್ರಾ ಚಪ್ಪರ ಬಿಟ್ಟು ಹೊರ ನಡೆಯುತ್ತಿರುವ ದೇವಿ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

9

6.69 ಕೋಟಿ ರೂ. ಖೋಟಾನೋಟು ವಶಕ್ಕೆ: ಕೇಂದ್ರ ಏಜೆನ್ಸಿ ತನಖೆ ಆರಂಭ

ಲೋಕಸಭೆ ಅಖಾಡ 2024: ಸವಾಲು ಗೆದ್ದ ಶೆಟ್ಟರ್‌ ಮುಂದಿದೆ ಅಗ್ನಿ ಪರೀಕ್ಷೆ

ಲೋಕಸಭೆ ಅಖಾಡ 2024: ಸವಾಲು ಗೆದ್ದ ಶೆಟ್ಟರ್‌ ಮುಂದಿದೆ ಅಗ್ನಿ ಪರೀಕ್ಷೆ

ಬಾಗಲಕೋಟೆ: ಕೋಟೆ ನಾಡಿನ ದಾಹ ತೀರಿಸುವ ದಾನಿಗಳು!

ಬಾಗಲಕೋಟೆ: ಕೋಟೆ ನಾಡಿನ ದಾಹ ತೀರಿಸುವ ದಾನಿಗಳು!

1-a-DK-SHI

D.K. Suresh ಅವರದ್ದು ಹೃದಯವಂತಿಕೆಯಲ್ಲವೇ?: ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ

1-wewqeqwe

Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.