ಹಣ-ಹೆಂಡಕ್ಕೆ “ಮತ’ ಬಲಿಯಾಗದಿರಲಿ

Team Udayavani, Apr 14, 2019, 5:13 PM IST

nc-1
ಶಿರಸಿ: ಕಳೆದ ಎರಡೂವರೆ ದಶಕಗಳಿಂದ ಮದ್ಯಪಾನದ ವಿರುದ್ಧ ನಿರಂತರ ಜಾಗೃತಿ ಮೂಡಿಸುತ್ತಿರುವ ಜನ ಜಾಗೃತಿ ವೇದಿಕೆ ಈ ಬಾರಿ ಮದ್ಯಪಾನಕ್ಕೆ ಬಲಿಯಾಗದಂತೆ, ಕಡ್ಡಾಯ ಮತದಾನಕ್ಕೆ ಕೂಡ ವಿಶಿಷ್ಟ ಜಾಗೃತಿ ಕಾರ್ಯ ಆರಂಭಿಸಿದೆ.
ತಾಲೂಕು, ಪ್ರಮುಖ ಗ್ರಾಮೀಣ ಭಾಗದಲ್ಲಿ ಜನ ಜಾಗೃತಿಯ ಬ್ಯಾನರ್‌, ಸ್ಟಿಕರ್‌, ಕರಪತ್ರ ಹಾಗೂ ಸ್ವಯಂ ಸೇವಕರ ಮೂಲಕ ಮನೆ ಮನೆಗೂ ಕಡ್ಡಾಯ ಮತದಾನ ಹಾಗೂ ಮತ ಮಾರಾಟಕ್ಕೆ, ಆಮಿಷಕ್ಕೆ ಬಲಿಯಾಗದಂತೆ ಎಚ್ಚರಿಕೆ ವಹಿಸಿ ಎಂಬ ಸಂದೇಶ ಹೊತ್ತ ಅಭಿಯಾನ ಮಾಡುತ್ತಿದೆ. ಈ ಮೂಲಕ ಪ್ರಜಾಪ್ರಭುತ್ವದ ಉಳಿವಿಗೆ ತನ್ನದೇ ವ್ಯಾಪ್ತಿಯಲ್ಲಿ ಕಾರ್ಯ ಮಾಡುತ್ತಿದೆ.
ಏನಿದೆ ಸಂದೇಶ?: ಮತದಾರರಿಗೊಂದು ಮನವಿ, ಸಂದೇಶ ನೀಡುತ್ತಿರುವ ಅಖೀಲ ಕನಾಟಕ ಜನ ಜಾಗೃತಿ ವೇದಿಕೆ ರಾಜ್ಯದ ಮೂವತ್ತೂ ಜಿಲ್ಲೆಗಳಲ್ಲಿ ಆಯಾ ಜಿಲ್ಲಾ ಘಟಕಗಳ ಮೂಲಕ ಕರಪತ್ರ ಮೂಲಕ ಜನ ಜಾಗೃತಿ ಮೂಡಿಸುತ್ತಿದೆ.
ಸಾರಾಯಿ ಹಣ ನೋಡಬೇಡಿ, ಮತ ಹಾಕೋದು ಮರೀಬೇಡಿ, ಪ್ರತಿ ರಾಜಕಾರಣಗಳೊಂದು ಮಾತು ನಮ್ಮ ಮತ ಮಾರಾಟಕ್ಕಿಲ್ಲ, ನಿಮ್ಮ ಒಂದು ಮತ ರಾಜ್ಯದ ದೇಶದ ಭವಿಷ್ಯ ಬದಲಾಯಿಸುತ್ತದೆ ಎಂಬ ಸಂದೇಶದ ಬ್ಯಾನರ್‌ ಪ್ರಕಟಿಸಿದೆ, ಕರ ಪತ್ರ ಹಂಚಿದೆ, ಹಂಚುತ್ತಿದೆ.
ಏನಿದು ವೇದಿಕೆ?: ಮತದಾನದ ಜಾಗೃತಿ ಮೂಡಿಸುತ್ತಿರುವ ಜನ ಜಾಗೃತಿ ವೇದಿಕೆ ಧರ್ಮಸ್ಥಳ ಡಾ| ವೀರೇಂದ್ರ ಹೆಗ್ಗಡೆ ಅವರ ಕನಸು. ಕಳೆದ 27 ವರ್ಷಗಳಿಂದ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಕೆಲಸ ಮಾಡುತ್ತಿದೆ. 1997ರಿಂದ ಮದ್ಯಪಾನ ಮುಕ್ತಕ್ಕಾಗಿ ನಿರಂತರ ಕಾರ್ಯ ಮಾಡುತ್ತಿದೆ. 1400ಕ್ಕೂ ಅಧಿಕ ಮದ್ಯವರ್ಜನ ಶಿಬಿರ ನಡೆಸಿದೆ. ಸುಮಾರು 1.15 ಲಕ್ಷಕ್ಕೂ ಅಧಿಕ ಜನರು ಮದ್ಯವ್ಯಸನದಿಂದ ದೂರ ಹೋಗಿದ್ದಾರೆ.
ವಿಶೇಷ ಎಂದರೆ, ಒಂದೇ ಒಂದು ರೂ. ಹಣ ಪಡೆಯದೇ ಸ್ವಯಂ ಸೇವಕರಾಗಿ ಕಾರ್ಯ ಮಾಡುವವರ ಸಂಖ್ಯೆ ಏಳುವರೆ ಸಾವಿರ ದಾಟಿದೆ. ಇದು ತನ್ನೆಲ್ಲಾ ಘಟಕಗಳ ಮೂಲಕ ಈ ಅಭಿಯಾನ ನಡೆಸುತ್ತಿದೆ. ರಾಜ್ಯದ ಮೂವತ್ತೆರಡು ಲಕ್ಷಕ್ಕೂ ಅಧಿಕ ಕುಟುಂಬಗಳಿಗೆ ಈ ಸಂದೇಶ ತಲುಪಿಸುವುದು ಆಶಯವಾಗಿದೆ.
ಏನಿತ್ತು ಅಪಾಯ?: ಪ್ರತೀ ಚುನಾವಣೆಯಲ್ಲಿ ಒಂದು ಅಪಾಯ ಸಮಾಜದ ಮೇಲೆ ತಾಂಡವವಾಡುತ್ತದೆ. ಚುನಾವಣಾ ಆಯೋಗ ಎಷ್ಟೇ ಕಟ್ಟುಪಾಡು ಮಾಡಿದರೂ ಎಲ್ಲೋ ಒಳ ನುಸುಳುವ ಮದ್ಯದಿಂದ ಹೊಸ ಕುಡುಕರು ಸೃಷ್ಟಿಯಾಗುತ್ತಾರೆ. ಮದ್ಯವರ್ಜನ ಶಿಬಿರಕ್ಕೆ ಮದ್ಯ ಬಿಟ್ಟವರೂ ಮರಳಿ ಉಚಿತವಾಗಿ ಸಿಕ್ಕಿದೆ ಎಂದು ಮದ್ಯದ ದಾಸರಾಗಲು ಕಾರಣವಾಗುತ್ತಿದ್ದವು. ಹಣಕ್ಕೆ, ಹೆಂಡಕ್ಕೆ ಮತ ಮಾರಾಟ ಆದರೆ, ಪ್ರಜಾಪ್ರಭುತ್ವದ ಆಶಯವೇ ಬದಲಾವುಗುವ ಸಾಧ್ಯತೆ ಇದೆ. ಇದಕ್ಕಾಗಿ ಮತ ಚಲಾಯಿಸಿದರೆ ದೇಶದ ರಾಜಕೀಯ ಸ್ಥಿರತೆ ಕೂಡ ಬದಲಾಗುವ ಸಾಧ್ಯತೆ ಇದೆ.
ಮದ್ಯದಂಗಡಿ ಹೆಚ್ಚು ಹೆಚ್ಚು ಇಟ್ಟರೇ ಅಭಿವೃದ್ಧಿಯಲ್ಲ. ಮದ್ಯ ಪಾನ ಸಂಪೂರ್ಣ ನಿಷೇಧಿ ಸಬೇಕು, ಪ್ರಜಾಪ್ರಭುತ್ವದ ಉಳಿವಿಗೆ ನಾವೆಲ್ಲ ಬದ್ಧರಾಗಬೇಕು.
  ವಿನ್ಸಂಟ್‌ ಪ್ಯಾಸ್‌, ಕಾರ್ಯದರ್ಶಿ ಅಖೀಲ ಕರ್ನಾಟಕದ ಜನ ಜಾಗೃತಿ ವೇದಿಕೆ
ಮದ್ಯಪಾನದ ಕುರಿತು ನಿರಂತರವಾಗಿ ಜಾಗೃತಿ ಮೂಡಿಸುವ ವೇದಿಕೆಯ ಈ ಕಾರ್ಯ ಇನ್ನಷ್ಟು ಖುಷಿ ಕೊಟ್ಟಿದೆ. ಪ್ರಜಾ
ಪ್ರಭುತ್ವದ ಉಳಿವಿಗಾಗಿ ಒಂದು ನಡೆ.
 ಆರ್‌.ಎ. ಅಡಿ, ನಾಗರಿಕ 
„ರಾಘವೇಂದ್ರ ಬೆಟ್ಟಕೊಪ್ಪ

ಟಾಪ್ ನ್ಯೂಸ್

ವರ್ಷದೊಳಗೆ 3.55 ಕೋಟಿವೆಚ್ಚದ ರಾಜಕಾಲುವೆ ನಿರ್ಮಾಣ ಭರವಸೆ : ಎಸ್.ಜಯರಾಂ

ವರ್ಷದೊಳಗೆ 3.55 ಕೋಟಿ ವೆಚ್ಚದ ರಾಜಕಾಲುವೆ ನಿರ್ಮಾಣ ಭರವಸೆ : ಎಸ್.ಜಯರಾಂ

ಹಿಪ್‌ಹಾಪ್‌ ನೃತ್ಯದ ಜೊತೆ ಹೈಬ್ರಿಡ್‌ ಭರತನಾಟ್ಯ : ನೆಟ್ಟಿಗರಿಂದ ಭಾರಿ ಮೆಚ್ಚುಗೆ

ಹಿಪ್‌ಹಾಪ್‌ ನೃತ್ಯದ ಜೊತೆ ಹೈಬ್ರಿಡ್‌ ಭರತನಾಟ್ಯ : ನೆಟ್ಟಿಗರಿಂದ ಭಾರಿ ಮೆಚ್ಚುಗೆ

ರೆನ್ಯೂ ಪವರ್​​ನಿಂದ 7 ವರ್ಷದಲ್ಲಿ 50 ಸಾವಿರ ಕೋಟಿ ರೂ. ಹೂಡಿಕೆಗೆ ಒಪ್ಪಂದ : ಸಿಎಂ ಬೊಮ್ಮಾಯಿ

ರೆನ್ಯೂ ಪವರ್​​ನಿಂದ 7 ವರ್ಷದಲ್ಲಿ 50 ಸಾವಿರ ಕೋಟಿ ರೂ. ಹೂಡಿಕೆಗೆ ಒಪ್ಪಂದ : ಸಿಎಂ ಬೊಮ್ಮಾಯಿ

ಶಿರಸಿ: ಚಾಲಿ ಅಡಿಕೆ ಕಳ್ಳತನ ಪ್ರಕರಣ; ಮತ್ತೋರ್ವ ಆರೋಪಿ ಬಂಧನ, ಆಟೋ ರಿಕ್ಷಾ ವಶಕ್ಕೆ

ಶಿರಸಿ: ಚಾಲಿ ಅಡಿಕೆ ಕಳ್ಳತನ ಪ್ರಕರಣ; ಮತ್ತೋರ್ವ ಆರೋಪಿ ಬಂಧನ, ಆಟೋ ರಿಕ್ಷಾ ವಶಕ್ಕೆ

ಶಿಕ್ಷಣವನ್ನು ಕೇಸರೀಕರಣಗೊಳಿಸಲು ಹೊರಟಿದೆ ಬಿಜೆಪಿ : ಪ್ರಿಯಾಂಕ್ ಖರ್ಗೆ ಆರೋಪ

ಶಿಕ್ಷಣವನ್ನು ಕೇಸರೀಕರಣಗೊಳಿಸಲು ಹೊರಟಿದೆ ಬಿಜೆಪಿ : ಪ್ರಿಯಾಂಕ್ ಖರ್ಗೆ ಆರೋಪ

ಬಿಜೆಪಿ ಕ್ಯಾನ್ಸರ್ ಇದ್ದಂತೆ ಮನುಕುಲ ನಾಶ ಮಾಡಲಿದೆ : ಸಿದ್ದರಾಮಯ್ಯ ವಾಗ್ದಾಳಿ

ಬಿಜೆಪಿ ಕ್ಯಾನ್ಸರ್ ಇದ್ದಂತೆ ಮನುಕುಲ ನಾಶ ಮಾಡಲಿದೆ : ಸಿದ್ದರಾಮಯ್ಯ ವಾಗ್ದಾಳಿ

ಆತ್ಮಹತ್ಯೆ ಪ್ರಕರಣ: ವಿಸ್ಮಯಾ ಪತಿಗೆ 10 ವರ್ಷ ಜೈಲುಶಿಕ್ಷೆ ವಿಧಿಸಿದ ಕೇರಳ ಕೋರ್ಟ್

ಆತ್ಮಹತ್ಯೆ ಪ್ರಕರಣ: ವಿಸ್ಮಯಾ ಪತಿಗೆ 10 ವರ್ಷ ಜೈಲುಶಿಕ್ಷೆ ವಿಧಿಸಿದ ಕೇರಳ ಕೋರ್ಟ್ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಶಿರಸಿ: ಚಾಲಿ ಅಡಿಕೆ ಕಳ್ಳತನ ಪ್ರಕರಣ; ಮತ್ತೋರ್ವ ಆರೋಪಿ ಬಂಧನ, ಆಟೋ ರಿಕ್ಷಾ ವಶಕ್ಕೆ

ಶಿರಸಿ: ಚಾಲಿ ಅಡಿಕೆ ಕಳ್ಳತನ ಪ್ರಕರಣ; ಮತ್ತೋರ್ವ ಆರೋಪಿ ಬಂಧನ, ಆಟೋ ರಿಕ್ಷಾ ವಶಕ್ಕೆ

dfbfb

ಜೈವಿಕ ಸಂಪನ್ಮೂಲ ಸಂರಕ್ಷಣೆಗೆ ಕ್ರಮ ಅಗತ್ಯ

yallapura news

ಮನರಂಜಿಸಿದ ಯಕ್ಷಗಾನ

dfbsbdfbd

ಹಲಸಿನ ಮೌಲ್ಯವರ್ಧನೆಗೆ ದಿಟ್ಟಹೆಜ್ಜೆ; ರೈತರು ಖುಷ್‌

ಭಟ್ಕಳ: ಕೊಳೆತ ಸ್ಥಿತಿಯಲ್ಲಿ ಅಪರಿಚಿತ ಮಹಿಳೆ ಶವ ಪತ್ತೆ; ಅತ್ಯಾಚಾರ ಮಾಡಿ ಕೊಲೆಗೈದಿರುವ ಶಂಕೆ

ಭಟ್ಕಳ: ಕೊಳೆತ ಸ್ಥಿತಿಯಲ್ಲಿ ಅಪರಿಚಿತ ಮಹಿಳೆ ಶವ ಪತ್ತೆ; ಅತ್ಯಾಚಾರ ಮಾಡಿ ಕೊಲೆಗೈದಿರುವ ಶಂಕೆ

MUST WATCH

udayavani youtube

SSLC ಸಾಧಕರಿಗೆ ಉದಯವಾಣಿ ಸನ್ಮಾನ

udayavani youtube

ವೈದ್ಯರ ನಿರ್ಲಕ್ಷದಿಂದ ನೆಲದ ಮೇಲೆ ನರಳಾಡಿದ ಗರ್ಭಿಣಿ

udayavani youtube

ಎಸೆಸೆಲ್ಸಿ, ಪಿಯುಸಿ ನಂತರ ಅಗಾಧ ಅವಕಾಶ : “ಉದಯವಾಣಿ’ ವಿಶೇಷ ಕಾರ್ಯಕ್ರಮ

udayavani youtube

ದಾವೋಸ್ ನಲ್ಲಿ ಸಿಎಂ : ವರ್ಲ್ಡ್ ಎಕನಾಮಿಕ್ ಫೋರಮ್ ಸಮಾವೇಶದಲ್ಲಿ ಭಾಗಿ

udayavani youtube

ನಾಳೆಯ ಕನಸು ಹೊತ್ತ ಬಾಲಕನಿಗೆ ಬೇಕಿದೆ ಆರ್ಥಿಕ ನೆರವಿನ ಹಸ್ತ

ಹೊಸ ಸೇರ್ಪಡೆ

ವರ್ಷದೊಳಗೆ 3.55 ಕೋಟಿವೆಚ್ಚದ ರಾಜಕಾಲುವೆ ನಿರ್ಮಾಣ ಭರವಸೆ : ಎಸ್.ಜಯರಾಂ

ವರ್ಷದೊಳಗೆ 3.55 ಕೋಟಿ ವೆಚ್ಚದ ರಾಜಕಾಲುವೆ ನಿರ್ಮಾಣ ಭರವಸೆ : ಎಸ್.ಜಯರಾಂ

ಹಿಪ್‌ಹಾಪ್‌ ನೃತ್ಯದ ಜೊತೆ ಹೈಬ್ರಿಡ್‌ ಭರತನಾಟ್ಯ : ನೆಟ್ಟಿಗರಿಂದ ಭಾರಿ ಮೆಚ್ಚುಗೆ

ಹಿಪ್‌ಹಾಪ್‌ ನೃತ್ಯದ ಜೊತೆ ಹೈಬ್ರಿಡ್‌ ಭರತನಾಟ್ಯ : ನೆಟ್ಟಿಗರಿಂದ ಭಾರಿ ಮೆಚ್ಚುಗೆ

ರೆನ್ಯೂ ಪವರ್​​ನಿಂದ 7 ವರ್ಷದಲ್ಲಿ 50 ಸಾವಿರ ಕೋಟಿ ರೂ. ಹೂಡಿಕೆಗೆ ಒಪ್ಪಂದ : ಸಿಎಂ ಬೊಮ್ಮಾಯಿ

ರೆನ್ಯೂ ಪವರ್​​ನಿಂದ 7 ವರ್ಷದಲ್ಲಿ 50 ಸಾವಿರ ಕೋಟಿ ರೂ. ಹೂಡಿಕೆಗೆ ಒಪ್ಪಂದ : ಸಿಎಂ ಬೊಮ್ಮಾಯಿ

ಶಿರಸಿ: ಚಾಲಿ ಅಡಿಕೆ ಕಳ್ಳತನ ಪ್ರಕರಣ; ಮತ್ತೋರ್ವ ಆರೋಪಿ ಬಂಧನ, ಆಟೋ ರಿಕ್ಷಾ ವಶಕ್ಕೆ

ಶಿರಸಿ: ಚಾಲಿ ಅಡಿಕೆ ಕಳ್ಳತನ ಪ್ರಕರಣ; ಮತ್ತೋರ್ವ ಆರೋಪಿ ಬಂಧನ, ಆಟೋ ರಿಕ್ಷಾ ವಶಕ್ಕೆ

ಶಿಕ್ಷಣವನ್ನು ಕೇಸರೀಕರಣಗೊಳಿಸಲು ಹೊರಟಿದೆ ಬಿಜೆಪಿ : ಪ್ರಿಯಾಂಕ್ ಖರ್ಗೆ ಆರೋಪ

ಶಿಕ್ಷಣವನ್ನು ಕೇಸರೀಕರಣಗೊಳಿಸಲು ಹೊರಟಿದೆ ಬಿಜೆಪಿ : ಪ್ರಿಯಾಂಕ್ ಖರ್ಗೆ ಆರೋಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.