ದೊಡ್ಡ ಮತಗಟ್ಟೆಗೆ ಬಂದಿಲ್ಲ ವಿಭಜನೆ ಭಾಗ್ಯ!

Team Udayavani, Dec 6, 2019, 12:59 PM IST

ಶಿರಸಿ: ತಾಲೂಕಿನ ಅತಿದೊಡ್ಡ ಮತಗಟ್ಟೆಗಳ ಪೈಕಿ ಒಂದಾದ ದಾಸನಕೊಪ್ಪ ಬಳಿ ಕುಪ್ಪಗಡ್ಡೆ ಹೊಸಕೊಪ್ಪದ ಮತಗಟ್ಟೆಗೆ ಇನ್ನೂ ವಿಭಜನೆ ಭಾಗ್ಯ ಬಾರದೇ ಮತದಾರರು ಪರಿತಪಿಸುವ ಸಂದರ್ಭ ಎದುರಾಗಿದೆ. ಬಹುಕಾಲದಿಂದ ಮತಗಟ್ಟೆ ವಿಭಾಗಿಸಿ ಕೊಡುವಂತೆ ಸಾಕಷ್ಟು ಸಲ ಸಾರ್ವಜನಿಕರು ಮನವಿ ಮಾಡಿಕೊಂಡರೂ ಪ್ರಯೋಜನವಾಗಿಲ್ಲ.

ಯಲ್ಲಾಪುರ ವಿಧಾನಸಭಾ ಉಪ ಚುನಾವಣೆ ಹಿನ್ನೆಲೆಯಲ್ಲಿ ತಾಲೂಕಿನ ದಾಸನಕೊಪ್ಪ ಬನವಾಸಿ ಮಾರ್ಗದ ನಡುವೆ ಸಿಗುವ ಕುಪ್ಪಗಡ್ಡೆ ಮತಗಟ್ಟೆಯಲ್ಲಿ ಈ ಸಮಸ್ಯೆ ಪ್ರತೀ ಚುನಾವಣೆಯಲ್ಲೂ ಸಾಮಾನ್ಯ. ಮುಂಜಾನೆಯಿಂದಲೇ ಮತದಾರರು ಸರತಿಯಲ್ಲಿ ನಿಂತು ಮತದಾನ ಮಾಡುವುದು ಮಾಮೂಲಾಗಿದೆ. ಸಂಜೆ ತನಕವೂ ಮತಗಟ್ಟೆ ತುಂಬಿಯೇ ಇರುತ್ತಿದ್ದು, ಅಧಿಕಾರಿಗಳ ಕೊರತೆ, ಊಟಕ್ಕೆ ಹೋಗಲೂ ಆಗದಷ್ಟು ಒತ್ತಡಗಳು ಮುಂದುವರಿಯುತ್ತವೆ ಎಂದು ಮತದಾರರು ಅಲವತ್ತುಕೊಳ್ಳುವಂತೆ ಆಗಿದೆ. ಮತದಾನದ ವೇಳೆ ಮಹಿಳೆಯರು, ಅನಾರೋಗ್ಯ ಪೀಡಿತರು, ವೃದ್ಧರು ಕೂಡ ಮತದಾನ ಮಾಡಲು ಸರತಿಯಲ್ಲಿ ನಿಂತು ಮತದಾನಕ್ಕೆ ನಿಂತು ಹಕ್ಕು ಚಲಾಯಿಸುವುದು ಯಾಕಪ್ಪಾ ಬಂತು ಚುನಾವಣೆ ಎಂಬಂತಾಗಿದೆ.

ಕುಪ್ಪಗಡ್ಡೆ ಮತಗಟ್ಟೆ ಹೊಸಕೊಪ್ಪ ಶಾಲೆಯಲ್ಲಿ ನಡೆಯುತ್ತಿದೆ. ಕುಪ್ಪಗಡ್ಡೆ, ಹೊಸಕೊಪ್ಪ, ಮಡಕೇಶ್ವರ ಹಾಗೂ ಬೆಳ್ಳನಕೇರಿಯಲ್ಲಿ ಸುಮಾರು 1270ಕ್ಕೂ ಅಧಿಕ ಮತಗಳಿವೆ. ಅವರಲ್ಲಿ ಕೆಲವರು ಮುಂಜಾನೆ 6ಕ್ಕೇ ಬಂದು ಸರತಿಯಲ್ಲಿ ನಿಂತು ಕೃಷಿ ಕಾರ್ಯಕ್ಕೆ ತೆರಳಲು ಯೋಜಿಸಿದ್ದೂ ಇದೆ. ಮತಗಟ್ಟೆಯಲ್ಲಿ ಕಳೆದ ಲೋಕಸಭೆ ಚುನಾವಣೆಯಲ್ಲಿ ಕೂಡ ಒತ್ತಡ ನಿರ್ಮಾಣವಾಗಿತ್ತು. ರಾತ್ರಿ 7ರತನವೂ ಮತದಾನಕ್ಕೆ ಅವಕಾಶ ಮಾಡಿದ ಘಟನೆಗಳೂ ಇದೆ ಎಂದು ಹಿರಿಯರು ನೆನಪಿಸಿಕೊಳ್ಳುತ್ತಾರೆ. ಮುಂದಿನ ವಿಧಾನಸಭೆ, ಲೋಕಸಭೆ ಚುನಾವಣೆಯಲ್ಲಿ ಕುಪ್ಪಗಡ್ಡೆ ಹಾಗೂ ದಾಸನಕೊಪ್ಪ ಬಿಡಕಿಬಯಲಿನ ಮತಗಟ್ಟೆ ವಿಭಾಗಿಸಿಕೊಡಬೇಕು.

ದಾಸನಕೊಪ್ಪದ ಬಿಡಕಿಬೈಲಿನ ಮತಘಟ್ಟೆಯಲ್ಲೂ ಒತ್ತಡ ನಿರ್ಮಾಣ ಇದ್ದು, ರಂಗಾಪುರ, ಕೋಟೆ, ಬಿಡಕಿಬೈಲು, ಬದನಗೋಡಿನ ಗ್ರಾಮಸ್ಥರೂ ಒಂದಾಗಿ ಮತದಾನ ಮಾಡುವಾಗ ಸಾವಿರ ಸಂಖ್ಯೆಗೂ ಅಧಿಕವಿದೆ. ಕಾರಣದಿಂದ ಒತ್ತಡ ನಿರ್ಮಾಣ ಆಗುತ್ತಿದೆ ಎಂದು ಉದಯವಾಣಿಗೆ ಸ್ಥಳೀಯರಾದ ಗಣಪತಿ ಗೌಡ ಕುಪ್ಪಗಡ್ಡೆ, ಅಹಮದ್‌ ಶರೀಪ ಶೇಖ್ ಇತರರು ಒತ್ತಾಯಿಸಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಅಂಕೋಲಾ: ಜಾನಪದ ಕೋಗಿಲೆ ಪದ್ಮಶ್ರೀ ಪುರಸ್ಕೃತೆ ತಾಲೂಕಿನ ಬಡಗೇರಿಯ ಸುಕ್ರಿ ಗೌಡರ ಮನೆಗೆ ಆಗಮಿಸಿದ ಜರ್ಮನ್‌ ಮತ್ತು ಆಸ್ಟ್ರೀಯಾ ಪ್ರಜೆಗಳು ಸುಕ್ರಜ್ಜಿ ಜಾನಪದ...

  • ಹೊನ್ನಾವರ: ಹೊನ್ನಾವರ ಪೋರ್ಟ್‌ ಕಂಪನಿ ಹೆಸರಿನಲ್ಲಿ ಆಂಧ್ರ ಗುತ್ತಿಗೆದಾರರೊಬ್ಬರು ಶರಾವತಿ ಸಂಗಮದ ಅಳವೆ ಸಹಿತ 100 ಎಕರೆ ಭೂಮಿ ಗುತ್ತಿಗೆ ಪಡೆದು ಬಂದರು ನಿರ್ಮಾಣ...

  • ಹೊನ್ನಾವರ: ಶಿಕ್ಷಕರು ಮತ್ತು ಮಕ್ಕಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಒಂದು ಗ್ರಾಪಂಗೆ ಒಂದು ಮಾದರಿ ಶಾಲೆ ಎಂಬ ವಿನೂತನ ಯೋಜನೆಯೊಂದನ್ನು ಜಾರಿಗೊಳಿಸಲು ಈಗಾಗಲೆ...

  • ಹೊನ್ನಾವರ: ಮನುಕುಲದ ಉದ್ದಾರಕ್ಕೆ ನಮ್ಮ ವಿಚಾರಧಾರೆಗಳು ಪುಟಿಯಲು ಸಾಂಸ್ಕೃತಿಕ ಉತ್ಸವಗಳು ಬೇಕು ಎಂದು ಉದ್ಯಮಿ ಎನ್‌.ಆರ್‌. ಹೆಗಡೆ ರಾಘೋಣ ಹೇಳಿದರು. ಸೇಂಟ್‌...

  • ಜೋಯಿಡಾ: ಉತ್ತರ ಕರ್ನಾಟಕದ ಸುಪ್ರಸಿದ್ಧ ಉಳವಿ ಚೆನ್ನಬಸವೇಶ್ವರ ಜಾತ್ರೋತ್ಸವಕ್ಕೆ ಕೆಲವೇ ದಿನಗಳು ಇದ್ದು, ತಯಾರಿ ಜೋರಾಗಿ ನಡೆದಿದೆ. ದೇವಸ್ಥಾನ, ಮುಖ್ಯದ್ವಾರಗಳ...

ಹೊಸ ಸೇರ್ಪಡೆ

  • ಬೆಂಗಳೂರು: ನಗರದಲ್ಲಿ ಆಸ್ತಿ ಮಾಲೀಕರಿಂದ ಆಸ್ತಿ ತೆರಿಗೆಯೊಂದಿಗೆ ಶೇ.2ರಷ್ಟು ಭೂ ಸಾರಿಗೆ ಉಪ ಕರ (ಸೆಸ್‌) ವಸೂಲಿ ಮಾಡುವ ಬಿಬಿಎಂಪಿ ನಿರ್ಣಯಕ್ಕೆ ಸಾರ್ವಜನಿಕ ವಲಯದಿಂದ...

  • ಬೆಂಗಳೂರು: ನೆರೆ ಸಂತ್ರಸ್ತರು ತ್ವರಿತವಾಗಿ ಎರಡನೇ ಕಂತಿನ ಹಣವನ್ನು ಪಡೆದು ಮನೆಗಳನ್ನು ಮೂರು ತಿಂಗಳಲ್ಲಿ ನಿರ್ಮಿಸಿಕೊಳ್ಳಬೇಕು ಎಂದು ಕಂದಾಯ ಸಚಿವ ಆರ್‌.ಅಶೋಕ್‌...

  • ಮುಖ್ಯಮಂತ್ರಿ ಯಡಿಯೂರಪ್ಪ ಅವರ ದೆಹಲಿ ಭೇಟಿ ಹಿನ್ನೆಲೆಯಲ್ಲಿ ರಾಜ್ಯ ಸಚಿವ ಸಂಪುಟ ವಿಸ್ತರಣೆ ಕುರಿತಾದ ಚರ್ಚೆ ಗರಿಗೆದರುತ್ತಿದ್ದು, ಸಚಿವಾಕಾಂಕ್ಷಿಗಳಲ್ಲಿ...

  • ಬೆಂಗಳೂರು: ಕಾರ್ಮಿಕ ಇಲಾಖೆಯಲ್ಲಿ ಖಾಲಿ ಇರುವ ಶೇ.49 ಹುದ್ದೆಗಳನ್ನು ಭರ್ತಿ ಮಾಡಿ ಕೊಳ್ಳುವ ಸಂಬಂಧ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರೊಂದಿಗೆ ಚರ್ಚಿಸಲಾಗುವುದು...

  • ಬೆಂಗಳೂರು: ಶಿಕ್ಷಣ ಇಲಾಖೆಯಲ್ಲಿ ಒಂದು ವಿಭಾಗದಿಂದ ಇನ್ನೊಂದು ವಿಭಾಗಕ್ಕೆ ವರ್ಗಾವಣೆ ಹೊಂದಿರುವ ಶಿಕ್ಷಕರು ಮುಂಬಡ್ತಿಯಿಂದಲೂ ವಂಚಿತರಾಗುತ್ತಿದ್ದಾರೆ. 2006ಕ್ಕಿಂತ...