Udayavni Special

ಸೊರಗುತ್ತಿದ್ದಾಳೆ ಶರಾವತಿ-ಮುಂದೇನು?

•ಬೇಸಿಗೆಯಲ್ಲಿ ಪ್ರವಾಹದಿಂದ ಅಲ್ಲಲ್ಲಿ ಭಗ್ನವಾಗಿದೆ•ಒರತೆ ಸೇರಿ ಹಾಗೋ ಹೀಗೋ ಸಾಗಿದೆ

Team Udayavani, May 28, 2019, 7:28 AM IST

uk-tdy-2..

ಹೊನ್ನಾವರ: ಶಿವಮೊಗ್ಗಾ ಜಿಲ್ಲೆಯ ಅಂಬುತೀರ್ಥದಲ್ಲಿ ರಾಮನ ಬಾಣಕ್ಕೆ ಜನಿಸಿದ ತಾಯಿ ಶರಾವತಿ 130ಕಿಮೀ ಚಲಿಸಿ ಹೊನ್ನಾವರದಲ್ಲಿ ಸಮುದ್ರ ಸೇರುವ ಮಾರ್ಗದಲ್ಲಿ ವಿದ್ಯುತ್‌, ಜಲಪಾತ, ಲಕ್ಷಾಂತರ ಎಕರೆಗೆ ನೀರುಣ್ಣಿಸುತ್ತ ಬಂದಿದ್ದಾಳೆ. ಈ ಬೇಸಿಗೆಯಲ್ಲಿ ಶರಾವತಿಯ ಪ್ರವಾಹ ಅಲ್ಲಲ್ಲಿ ಭಗ್ನವಾಗಿದೆ. ಸ್ಥಳೀಯ ಒರತೆಗಳನ್ನು ಸೇರಿಕೊಂಡು ಹಾಗೋ ಹೀಗೋ ತೆವಳಿಕೊಂಡು ಸಾಗಿದೆ. ಮುಂದೇನು?

ರಾಜ್ಯದ ಜಲ ವಿದ್ಯುತ್ತಿನಲ್ಲಿ ಶೇ. 30ರಷ್ಟನ್ನು ಅತೀ ಅಗ್ಗದಲ್ಲಿ ಯುನಿಟ್‌ಗೆ 20 ಪೈಸೆಯಂತೆ ಒದಗಿಸುವ, ಜೋಗ ಜಲಪಾತ ಸೃಷ್ಠಿಸಿರುವ ಶರಾವತಿಯ ಪ್ರವಾಹ ಸೊರಗಿದೆ. ಈವರೆಗೆ ಇಂತಹ ಪರಿಸ್ಥಿತಿಯನ್ನು ಕಂಡಿರಲಿಲ್ಲ ಎಂದು ಜನ ಆಡಿಕೊಳ್ಳುತ್ತಿದ್ದಾರೆ.

ಕಳೆದ ವರ್ಷ ಭರ್ಜರಿ ಮಳೆ ಬಂದು ಹಲವು ಬಾರಿ ಲಿಂಗನಮಕ್ಕಿ ಅಣೆಕಟ್ಟು ತುಂಬಿ ಟೇಲರೀಸ್‌ ಅಣೆಕಟ್ಟಿನ ಮುಖಾಂತರ ನೀರು ಬಿಡಲಾಗಿತ್ತು. ಶರಾವತಿ ಪಾತಳಿ ಮೀರಿ ಗದ್ದೆ, ಮನೆ, ತೋಟವನ್ನು ಆವರಿಸಿತ್ತು. ಈಗ ಲಿಂಗನಮಕ್ಕಿಯಲ್ಲಿ ನೀರು ಸಾಕಷ್ಟಿದೆ. ವಿದ್ಯುತ್‌ ಉತ್ಪಾದಿಸಿ ಬಿಟ್ಟ ನೀರು ಟೇಲರೀಸ್‌ ಅಣೆಕಟ್ಟಿಗೆ ಬಂದು ಸೇರಿಕೊಳ್ಳುತ್ತದೆ. ರಾಜ್ಯದ ವಿದ್ಯುತ್‌ ಬೇಡಿಕೆಯನ್ನು ಆಧರಿಸಿ ಟೇಲರೀಸ್‌ನಲ್ಲಿ ವಿದ್ಯುತ್‌ ಉತ್ಪಾದಿಸಲಾಗುತ್ತಿದ್ದ ಜಲಮಟ್ಟ 51.6ಅಡಿ ಇದೆ. ಎಲ್ಲ ಜನರೇಟರ್‌ಗಳನ್ನು ಆರಂಭಿಸಿದರೆ 5500 ಕ್ಯುಸೆಕ್‌ ನೀರು ಹೊರಬರುತ್ತದೆ. ಆ ನೀರು ಈಗ ಗೇರಸೊಪ್ಪಾ ಭಾಗದ ಜೀವಜಲ. ಎಲ್ಲ ಜನರೇಟರ್‌ ಆರಂಭಿಸಿ, ಗೇಟ್ ತೆರೆದು ನೀರು ಬಿಟ್ಟಾಗ ಸೇತುವೆಯ ಮೇಲಿಂದ ನೀರು ಹರಿದು ಹೋಗುತ್ತಿತ್ತು. ಈಗ ಸೇತುವೆಯ ಅಡಿ ಜುಳುಜುಳು ಹರಿಯುತ್ತಿದೆ. ನದಿಯ ಪಾತಳಿಯ ತಗ್ಗು ಪ್ರದೇಶದಲ್ಲಿ ದನ ಮೇಯುತ್ತಿದೆ. ಎಡಬಲ ದಂಡೆಯ ಮಾತ್ರವಲ್ಲ ಒಳಭಾಗದ ಅಂತರ್ಜಲವನ್ನು ಹೆಚ್ಚಿಸಲು ನಿಧಾನವಾಗಿ 35ಕಿಮೀ ಕೊಳ್ಳದಲ್ಲಿ ಸಾಗುತ್ತಿದ್ದ ಶರಾವತಿ ಸೊರಗಿದ ಕಾರಣ ತಾಲೂಕಿನ ಹಳ್ಳಗಳು ಮಾತ್ರವಲ್ಲ ಬಾವಿಗಳು ತಳ ಕಂಡಿವೆ.

ನಿರಂತರ ಅರಣ್ಯ ನಾಶ, ನೀರಿನ ದುರ್ಬಳಕೆ, ಕೊಳವೆ ಬಾವಿಗಳ ಹಾವಳಿ ಪ್ರಕೃತಿಯಲ್ಲಿ ಅಸಮತೋಲನ ಉಂಟುಮಾಡಿದೆ. ಅಣೆಕಟ್ಟಿನ ತಗ್ಗು ಪ್ರದೇಶದಲ್ಲಿ ಇಷ್ಟು ಕಡಿಮೆ ನೀರು ಇದ್ದರೆ ಗೇರುಸೊಪ್ಪಾದಿಂದ ಹೊನ್ನಾವರಕ್ಕೆ ಬರುವ 300ಕೋಟಿ ರೂಪಾಯಿ ವೆಚ್ಚದ ಬಹುಗ್ರಾಮ ನೀರಿನ ಯೋಜನೆ ಗತಿಯೇನು? ಅಣೆಕಟ್ಟಿನಿಂದಲೇ ಬೆಂಗಳೂರಿಗೆ ಕುಡಿಯುವ ನೀರು ಒಯ್ಯುವ ಯೋಜನೆ ಜಾರಿಗೆ ಬಂದರೆ ಏನಾದೀತು? ಬಹುಕಾಲ ನಿರ್ಲಕ್ಷಿಸಿ ರೋಗ ಉಲ್ಭಣವಾಗಿದೆ ಅನ್ನುವಾಗ ಸರಿಯಾಗಲು ಬಹುಕಾಲ ಚಿಕಿತ್ಸೆ ಬೇಕು. ಶರಾವತಿ ಮತ್ತೆ ಸುಧಾರಿಸಬಹುದೇ?

ಪ್ರಸ್ತುತ ಲಿಂಗನಮಕ್ಕಿಯಲ್ಲಿ ನೀರು ಸಾಕಷ್ಟಿದೆ. ವಿದ್ಯುತ್‌ ಉತ್ಪಾದಿಸಿ ಬಿಟ್ಟ ನೀರು ಟೇಲರೀಸ್‌ ಅಣೆಕಟ್ಟಿಗೆ ಬಂದು ಸೇರಿಕೊಳ್ಳುತ್ತದೆ. ರಾಜ್ಯದ ವಿದ್ಯುತ್‌ ಬೇಡಿಕೆಯನ್ನು ಆಧರಿಸಿ ಟೇಲರೀಸ್‌ನಲ್ಲಿ ವಿದ್ಯುತ್‌ ಉತ್ಪಾದಿಸಲಾಗುತ್ತಿದ್ದ ಜಲಮಟ್ಟ 51.6ಅಡಿ ಇದೆ.
•ಜೀಯು, ಹೊನ್ನಾವರ

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಬಿಜೆಪಿ ಸಂಸ್ಥಾಪನಾ ದಿನ ಆಚರಿಸಲು ಕೋವಿಡ್ ಸಂಕಷ್ಟವನ್ನು ಉಪಯೋಗಿಸಿತೆ ಬಿಜೆಪಿ: ಎಚ್ ಡಿಕೆ

ಬಿಜೆಪಿ ಸಂಸ್ಥಾಪನಾ ದಿನ ಆಚರಿಸಲು ಕೋವಿಡ್ ಸಂಕಷ್ಟವನ್ನು ಉಪಯೋಗಿಸಿತೆ ಬಿಜೆಪಿ: ಎಚ್ ಡಿಕೆ

world-wide-covid19

ಕೋವಿಡ್-19 ಮರಣಮೃದಂಗ: ವಿಶ್ವದಾದ್ಯಂತ 64,720 ಬಲಿ, 12ಲಕ್ಷ ದಾಟಿದ ಸೋಂಕಿತರ ಸಂಖ್ಯೆ

donald-trump-jpeg

ಪರಿಸ್ಥಿತಿ ಬಿಗಡಾಯಿಸುತ್ತಿದೆ, ಸಾವಿನ ಪ್ರಮಾಣ ಹೆಚ್ಚಾಗುವ ಸಾಧ್ಯತೆ ದಟ್ಟವಾಗಿದೆ: ಟ್ರಂಪ್

ಮೃತ್ಯುಂಜಯನ ನೆನೆದು ದೀಪ ಹಚ್ಚೋಣ

ಮೃತ್ಯುಂಜಯನ ನೆನೆದು ದೀಪ ಹಚ್ಚೋಣ

ಲಾಕ್‌ಡೌನ್‌: ರಾಜ್ಯಾದ್ಯಂತ ಸಡಿಲಗೊಳ್ಳುತ್ತಿರುವ ಬಿಗಿ; ಹೆಚ್ಚಿದ ಭೀತಿ

ಲಾಕ್‌ಡೌನ್‌: ರಾಜ್ಯಾದ್ಯಂತ ಸಡಿಲಗೊಳ್ಳುತ್ತಿರುವ ಬಿಗಿ; ಹೆಚ್ಚಿದ ಭೀತಿ

ಅಂಡರ್‌-17 ವನಿತಾ ವಿಶ್ವಕಪ್‌ ಮುಂದೂಡಿಕೆ

ಅಂಡರ್‌-17 ವನಿತಾ ವಿಶ್ವಕಪ್‌ ಮುಂದೂಡಿಕೆ

Water-Drowning

ಜಾರಿ ಬಿದ್ದ ಮೊಬೈಲ್ ತೆಗೆಯಲು ಹೋಗಿ ನಾಲ್ಕು ಕಂದಮ್ಮಗಳು ನೀರುಪಾಲು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಆಯುಷ್ಮಾನ್‌ ಫಲಾನುಭವಿಗಳಿಗೆ ಕೋವಿಡ್ 19  ಕಂಟಕ

ಆಯುಷ್ಮಾನ್‌ ಫಲಾನುಭವಿಗಳಿಗೆ ಕೋವಿಡ್ 19 ಕಂಟಕ

uk-tdy-1

ಜಿಲ್ಲೆಯಲ್ಲಿ ಲಾಕ್‌ಡೌನ್‌ಗೆ ಉತ್ತಮ ಸ್ಪಂದನೆ

ಶಿರಸಿಯಲ್ಲಿ ಘರ್‌ ವಾಪಸಿ ಅಭಿಯಾನ

ಶಿರಸಿಯಲ್ಲಿ ಘರ್‌ ವಾಪಸಿ ಅಭಿಯಾನ

ಚಿಕಿತ್ಸೆಗೆ ಮನೆ ಬಾಗಿಲಿಗೇ ಬರಲಿದ್ದಾರೆ ವೈದ್ಯರು

ಚಿಕಿತ್ಸೆಗೆ ಮನೆ ಬಾಗಿಲಿಗೇ ಬರಲಿದ್ದಾರೆ ವೈದ್ಯರು

uk-tdy-1

ಕೋವಿಡ್ 19 ತಡೆಗಟ್ಟಲು ಜನರ ಸಹಕಾರ ಅಗತ್ಯ

MUST WATCH

udayavani youtube

Kundapura: ಖಾಲಿ ರಸ್ತೆಯಲ್ಲೂ ಅಪಘಾತ! CCTVಯಲ್ಲಿ ದಾಖಲಾಯ್ತು ಅಪಘಾತದ ದೃಶ್ಯ

udayavani youtube

Shivamogga ಜ್ವರದಿಂದ ಬಳಲುತ್ತಿದ್ದರೂ ಆದೇಶ ಉಲ್ಲಂಘಿಸಿ ನಮಾಜ್ ನಲ್ಲಿ ಭಾಗಿಯಾದರು

udayavani youtube

Covid 19 ಸೋಂಕು ತಡೆಗೆ ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಸಂದೇಶ

udayavani youtube

Udyavara Jamia Masjid ಮೈಕ್ ನಲ್ಲಿ ಮೊಳಗುತ್ತಿದೆ ಕೋವಿಡ್ ಮಹಾಮಾರಿ ಜಾಗೃತಿ ಸಂದೇಶ

udayavani youtube

ಒಂದೆರಡು ದಿನಗಳಲ್ಲಿ ರೈತರ ಎಲ್ಲಾ ಸಮಸ್ಯೆ ಸರಿಹೋಗಲಿದೆ : ಕೃಷಿ ಸಚಿವರಿಂದ ರೈತರಿಗೆ ಅಭಯ

ಹೊಸ ಸೇರ್ಪಡೆ

ಕೋವಿಡ್ 19 ಲಾಕ್‌ಡೌನ್‌  ಬಳಿಕ ಟೋಲ್‌ ಹೆಚ್ಚಳ ಬಿಸಿ

ಕೋವಿಡ್ 19 ಲಾಕ್‌ಡೌನ್‌  ಬಳಿಕ ಟೋಲ್‌ ಹೆಚ್ಚಳ ಬಿಸಿ

ಎ. 14ರೊಳಗೆ ಪರಿಸ್ಥಿತಿ ಸುಧಾರಿಸಿದರೆ ಲಾಕ್‌ಡೌನ್‌ ಸಡಿಲ

ಎ. 14ರೊಳಗೆ ಪರಿಸ್ಥಿತಿ ಸುಧಾರಿಸಿದರೆ ಲಾಕ್‌ಡೌನ್‌ ಸಡಿಲ

ಸಾರಿಗೆ ನಿಯಂತ್ರಣ ಕೊಠಡಿ: ಸವದಿ

ಸಾರಿಗೆ ನಿಯಂತ್ರಣ ಕೊಠಡಿ: ಸವದಿ

ಗಡಿ ಬಂದ್‌ ಸಡಿಲಿಕೆ ಇಲ್ಲ : ಬಿಎಸ್‌ವೈ

ಗಡಿ ಬಂದ್‌ ಸಡಿಲಿಕೆ ಇಲ್ಲ : ಬಿಎಸ್‌ವೈ

ನಮಾಜ್‌: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಅರ್ಜಿ

ನಮಾಜ್‌: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಅರ್ಜಿ