ಅಂಕೋಲಾದಲ್ಲಿ ನಲ್ಲಿ ನೀರು ಸರಬರಾಜು ಸ್ಥಗಿತ

Team Udayavani, May 22, 2019, 11:00 AM IST

ಅಂಕೋಲಾ: ತಾಲೂಕಿನ ಜನತೆಗೆ ನೀರುಣಿಸುವ ಗಂಗಾವಳಿ ನದಿ ನೀರು ಸಂಪೂರ್ಣ ಬತ್ತಿದ್ದು ಪುರಸಭಾ ವ್ಯಾಪ್ತಿಯ ಜನತೆಗೆ ನಲ್ಲಿ ಮೂಲಕ ನೀರು ಸರಬರಾಜು ಮಾಡುವುದನ್ನು ಸ್ಥಗಿತಗೊಳಿಸಲಾಗಿದೆ. ಈಗಾಗಲೇ ನೀರಿಲ್ಲದೆ ಹಿಂದೆಂದು ಕಂಡರಿಯದ ಭೀಕರ ಬರ ಎದುರಿಸುತ್ತಿರುವ ತಾಲೂಕಿನಲ್ಲೀಗ ನೀರು ಸ್ಥಗಿತ ಮಾಡಿರುವುದರಿಂದ ಜನತೆ ಕಂಗಾಲಾಗಿದ್ದಾರೆ.

ಈಗಾಗಲೇ ನಲ್ಲಿ ನೀರಿನ ಸರಬರಾಜು ಸ್ಥಗಿತ ಮಾಡಿರುವುದನ್ನು ಪುರಸಭೆಯ 23 ವಾರ್ಡ್‌ಗಳಲ್ಲಿ ಧ್ವನಿ ವರ್ಧಕದ ಮೂಲಕ ಹೇಳಲಾಗುತ್ತಿದೆ. ಈ ವಾರ್ಡ್‌ಗಳಿಗೆ ಇಂದಿನಿಂದ ಟ್ಯಾಂಕರ್‌ ಮೂಲಕ ನೀರು ಪೂರೈಸಲಾಗುತ್ತಿದೆ. ಟ್ಯಾಂಕರ್‌ನಿಂದ ಸರಬರಾಜು ಮಾಡುವ ನೀರು ಜನರಿಗೆ ಅಗತ್ಯಕ್ಕೆ ತಕ್ಕಷ್ಟು ಪೂರೈಸಲು ಸಾಧ್ಯವಾಗುತ್ತಿಲ್ಲ. ಗಂಗಾವಳಿ ನದಿಯಿಂದ ಪ್ರತಿನಿತ್ಯ ಪುರಸಭೆ ವ್ಯಾಪ್ತಿಯ 23 ವಾರ್ಡ್‌ಗಳಿಗೆ 20 ಲಕ್ಷಕ್ಕೂ ಅಧಿಕ ನೀರು ಬೇಕಿತ್ತು. ಆದರೆ ಗಂಗಾವಳಿ ನದಿಯಲ್ಲಿ ನೀರು ಬತ್ತಿರುವುದರಿಂದ ಮುಂದಿನ ದಿನದಲ್ಲಿ ಸಮಸ್ಯೆ ಇನ್ನಷ್ಟು ಹೆಚ್ಚಾಗಲಿದೆ.

ಇನ್ನೂ 20 ದಿನಗಳ ನಂತರ ಮಳೆ ಆರಂಭವಾಗಲಿದ್ದು ನೀರಿಗಾಗಿ ಜನ ಪರದಾಡಬೇಕಾಗಿದೆ. ತಾಲೂಕು ಆಡಳಿತ ಮತ್ತು ಪುರಸಭೆ ಜನರಿಗೆ ಸಮರ್ಪಕವಾಗಿ ಟ್ಯಾಂಕರ್‌ ಮೂಲಕ ನೀರನ್ನು ನೀಡಲು ಈಗಾಗಲೇ ಆರಂಭಿಸಿದ್ದಾರೆ. ಆದರೂ ಜನರಿಗೆ ನೀರಿನ ಅಭಾವ ಕಾಡ ತೊಡಗಿದೆ.

ಪ್ರಥಮಬಾರಿಗೆ ಅಲಗೇರಿ ಗ್ರಾಮಕ್ಕೆ ನೀರಿನ ಬಿಸಿ ತಟ್ಟಿದ್ದು ದೊಡ್ಡ ಅಲಗೇರಿ, ಸಣ್ಣ ಅಲಗೇರಿ ಭಾಗದ ಬಾವಿಗಳು ಹಿಂದೆಂದು ಬತ್ತಿರಲಿಲ್ಲ. ಗ್ರಾಮದ ಹಿರಿಯರು ಹೇಳುವ ಪ್ರಕಾರ ಯಾವ ಕಾಲದಲ್ಲಿಯೂ ಇಲ್ಲಿ ಬಾವಿ ಬತ್ತಿರುವುದನ್ನು ನೋಡಿಲ್ಲ. ಈಗ ಇಲ್ಲಿಯ ಬಾವಿಗಳು ಬತ್ತಿರುವುದು ನೀರಿನ ಬರ ತಟ್ಟಿದೆ. ಈ ಗ್ರಾ.ಪಂ ವ್ಯಾಪ್ತಿಯಲ್ಲಿ ಟ್ಯಾಂಕರ್‌ ಮೂಲಕ ನೀರನ್ನು ಸರಬರಾಜು ಮಾಡಲಾಗುತ್ತಿದೆ.

ತಾಲೂಕಿನಲ್ಲೀಗ ಖಾಸಗಿ ನೀರಿನ ಟ್ಯಾಂಕರ್‌ಗಳು ಹೆಚ್ಚಾಗಿ ಕಂಡುಬರುತ್ತಿದೆ. ಪಟ್ಟಣದ ಹೋಟೆಲ್ ಮತ್ತು ತಂಪುಪಾನೀಯ ಮಳಿಗೆಗಳಿಗೆ ಮನೆಮನೆಗಳಿಗೆ ಈ ಖಾಸಗಿ ನೀರಿನ ಮಾಲಕರು ನೀರನ್ನು ಸರಬರಾಜು ಮಾಡುತ್ತಾರೆ. ನೀರನ್ನು ದುಬಾರಿ ವೆಚ್ಚದಲ್ಲಿ ನೀಡದೆ ಜನರಿಗೆ ಇವರು ಸಹಕರಿಸುತ್ತಿದ್ದಾರೆ. ಇದರ ಜೊತೆಯಲ್ಲಿ ಖಾಸಗಿ ಸಂಘ ಸಂಸ್ಥೆ ದಾನಿಗಳು ನೀರನ್ನು ಉಚಿತವಾಗಿ ನೀಡುತ್ತಿದ್ದಾರೆ.

ಮುಂದಿನ ದಿನದಲ್ಲಿ ನೀರಿನ ಬೇಡಿಕೆ ದುಪ್ಪಟ್ಟು ಆಗುವ ಹಿನ್ನೆಲೆಯಲ್ಲಿ ಈ ಸಮಸ್ಯೆಗೆ ಸರಕಾರ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಿದೆ.

•ಅರುಣ ಶೆಟ್ಟಿ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಶಿರಸಿ: ಪೇಟೆಗೆ ಬಂದು ಅನಗತ್ಯ ಸಂಚಾರ ಮಾಡುತ್ತಿರುವವರಿಗೆ ಪೊಲೀಸರು ಘರ್‌ ವಾಪಸಿ ಅಭಿಯಾನ ನಡೆಸಿ ಮರಳಿ ಮನೆಗೆ ಕಳಿಸಿದರು. ಬದನಗೋಡ ಗ್ರಾಪಂ ವ್ಯಾಪ್ತಿಯ ದಾಸನಕೊಪ್ಪ...

  • ಕಾರವಾರ: ಭಟ್ಕಳದಲ್ಲಿ ಕೋವಿಡ್ 19 ವೈರಸ್‌ ಹರಡುವಿಕೆ ಆತಂಕ ಮನೆ ಮಾತಾಗಿರುವ ಸಂದರ್ಭದಲ್ಲಿ ಮನೆ ಬಾಗಿಲಿಗೆ ವೈದ್ಯರನ್ನು ಕಳಿಸಿ ಚಿಕಿತ್ಸೆ ಕೊಡಿಸುವ ವಿನೂತನ...

  • ಕಾರವಾರ: ಸರ್ಕಾರದೊಂದಿಗೆ ಪ್ರತಿಯೊಬ್ಬ ವ್ಯಕ್ತಿಯೂ ಸಹಕರಿಸಿದಾಗ ಮಾತ್ರ ಕೋವಿಡ್ 19  ಮಹಾಮಾರಿಯ ನಿರ್ಮೂಲನೆ ಸಾಧ್ಯವಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವೆ...

  • ಭಟ್ಕಳ: ಪಟ್ಟಣದಲ್ಲಿ ವಿವಿಧ ಅಂಗಡಿಕಾರರು ಮನೆಮನೆಗೆ ದಿನಸಿ, ತರಕಾರಿ ಸೇರಿದಂತೆ ಔಷಧವನ್ನು ವಿತರಣೆ ಮಾಡಲಿದ್ದಾರೆ ಎಂದು ಉಪ ವಿಭಾಗಾಧಿಕಾರಿ ಭರತ್‌ ಎಸ್‌. ತಿಳಿಸಿದ್ದಾರೆ. ತಮ್ಮ...

  • ಕಾರವಾರ: ಕೋವಿಡ್ 19 ತಡೆಗಟ್ಟಲು ಅಗತ್ಯ ಕ್ರಮ ಕೈಗೊಳ್ಳುವ ಸಲುವಾಗಿ ಭಟ್ಕಳ ತಾಲೂಕಿನ ಸಹಾಯಕ ಕಮಿಷನರ್‌ ಅವರಿಗೆ ಕೋಟಿ ರೂ. ಬಿಡುಗಡೆ ಮಾಡಿ ಜಿಲ್ಲಾಧಿಕಾರಿ ಡಾ|...

ಹೊಸ ಸೇರ್ಪಡೆ