ಅಣುವಿದ್ಯುತ್‌ ವಿಶ್ವ ದಾಖಲೆ ನೆನಪು

Team Udayavani, Nov 30, 2019, 3:50 PM IST

uk-tdy-1

ಕಾರವಾರ: ಕೈಗಾ ಅಣುವಿದ್ಯುತ್‌ ಸ್ಥಾವರದ ಒಂದನೇ ಘಟಕವು ವಿಶ್ವದ ಅಣುವಿದ್ಯುತ್‌ ಘಟಕಗಳ ಪೈಕಿ ಸತತವಾಗಿ 962 ದಿನಗಳವರೆಗೆ ಅಣು ವಿದ್ಯುತ್‌ ಉತ್ಪಾದಿಸಿದ ವಿಶ್ವ ದಾಖಲೆ ಬರೆದ ಹಿನ್ನೆಲೆಯಲ್ಲಿ ಭಾರತೀಯ ಪೋಸ್ಟಲ್‌ ಇಲಾಖೆ ಕೈಗಾ ಅಣುಸ್ಥಾವರದ ಅಂಚೆ ಚೀಟಿ ಹಾಗೂ ಕವರ್‌ಗಳನ್ನು ಬಿಡುಗಡೆ ಮಾಡಿದೆ.

5 ರೂ. ಬೆಲೆಯ ಅಂಚೆ ಚೀಟಿ ಹಾಗೂ ಅಂಚೆ ಕವರ್‌ಗಳನ್ನು ಅಂದವಾಗಿ ಮುದ್ರಿಸಿದೆ. ಈಅಂಚೆ ಚೀಟಿಗಳಲ್ಲಿ ಕೈಗಾ 1 ಇರುವ ಅಂಚೆ ಚೀಟಿ ಹಾಗೂ ಇಡೀ ಕೈಗಾದ ನೋಟವಿರುವ ಚಿತ್ರಗಳಿವೆ. ಕೈಗಾದಲ್ಲಿ ಇರುವ ನಾಲ್ಕು ಅಣುಸ್ಥಾವರ ಘಟಕಗಳ ಚಿತ್ರವನ್ನು ಅಂಚೆ ಚೀಟಿ ಹಾಗೂ ಕವರ್‌ನಲ್ಲಿ ಬಳಸಲಾಗಿದೆ.

ಭಾರತೀಯ ಅಣುವಿದ್ಯುತ್‌ ನಿಗಮದ ಮುಂಬೈ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿಮಹಾರಾಷ್ಟ್ರದ ಪೋಸ್ಟ್‌ಮಾಸ್ಟರ್‌ ಜನರಲ್‌ ಟಿ.ಎನ್‌. ವ್ಯಾಸ, ಅಣುವಿದ್ಯುತ್‌ ನಿಗಮದಅಧ್ಯಕ್ಷರು ಹಾಗೂ ಭಾರತೀಯ ಅಣುವಿದ್ಯುತ್‌ ಉತ್ಪಾದನಾ ನಿಗಮದ ಮ್ಯಾನೇಜಿಂಗ್‌ ಡೈರೆಕ್ಟರ್‌ಸತೀಶ್‌ ಕುಮಾರ್‌ ಶರ್ಮಾ ಸಮ್ಮುಖದಲ್ಲಿ ಕೈಗಾ ಅಣುಸ್ಥಾವರದ ಚಿತ್ರ ಇರುವ ಅಂಚೆ ಚೀಟಿಯನ್ನು ಬಿಡುಗಡೆ ಮಾಡಲಾಯಿತು.

ಕಳೆದ ವರ್ಷ ಕೈಗಾ ಅಣು ವಿದ್ಯುತ್‌ ಸ್ಥಾವರದಮೊದಲ ಘಟಕವು 962 ದಿನಗಳಿಂದ ನಿರಂತರ ವಿದ್ಯುತ್‌ ಉತ್ಪಾದಿಸಿ ವಿಶ್ವದಾಖಲೆ ಬರೆಯಿತು.ಈ ಮೂಲಕ ಇಂಗ್ಲೆಂಡ್‌ನ‌ ಹೇಶಮ್‌ ಅಣು ವಿದ್ಯುತ್‌ ಉತ್ಪಾದನಾ ಸ್ಥಾವರದ ದಾಖಲೆಯನ್ನುಅಳಿಸಿಹಾಕಿತ್ತು. ಕೈಗಾ ಅಣುಸ್ಥಾವರ ಸುರಕ್ಷತೆ ಮತ್ತು ಪರಿಸರ ರಕ್ಷಣೆಯಲ್ಲಿ ದೇಶದ ಇತರೆ ಅಣುಸ್ಥಾವರಗಳಿಗಿಂತ ಹೆಚ್ಚು ಮಾನ್ಯತೆ ಕಾಪಾಡಿಕೊಂಡಿದೆ.

ವಿದ್ಯುತ್‌ ಉತ್ಪಾದನೆಯಲ್ಲಿ ದಾಖಲೆ ಮಾಡಿದೆ. 275 ಕ್ಕೂ ಹೆಚ್ಚುಪಕ್ಷಿಗಳ ನೆಲೆಯಾಗಿದೆ. ಪಶ್ಚಿಮ ಘಟ್ಟಗಳಲ್ಲಿ ಅಡಗಿರುವ ಕೈಗಾ ಸ್ಥಾವರ ಇದೀಗ 5-6 ನೇ ಘಟಕಗಳ ನಿರ್ಮಾಣಕ್ಕೆ ಮುನ್ನುಡಿ ಬರೆದಿದ್ದು,

ನೂತನ ಘಟಕಗಳು 750 ಮೆಗಾ ವ್ಯಾಟ್‌ ಸಾಮರ್ಥ್ಯವನ್ನು ಹೊಂದಿವೆ. ಇದೇ ವೇಳೆ ಕೆಲ ದಿನಗಳ ಹಿಂದೆ ನಿರ್ಹಣೆಗಾಗಿ ಸ್ಥಗಿತಗೊಂಡಿದ್ದ ಕೈಗಾಘಟಕ-3 ಮತ್ತೆ ಆರಂಭಗೊಂಡಿದೆ. ರಾಜ್ಯದ ಕೈಗಾ ಅಣು ವಿದ್ಯುತ್‌? ಉತ್ಪಾದನಾ ಕೇಂದ್ರದಲ್ಲಿ (ಕೆಜಿಎಸ್‌) 220 ಮೆಗಾವ್ಯಾಟ್‌? ಸಾಮರ್ಥ್ಯದ 3ನೇ ಪರಮಾಣು ವಿದ್ಯುತ್‌ ಘಟಕವು ಬುಧವಾರ (ನ.27) ಸಂಜೆಯಿಂದ ತನ್ನ ವಿದ್ಯುತ್‌ ಉತ್ಪಾದನೆ ಪುನರಾರಂಭಿಸಿದೆ ಎಂದು ಪವರ್‌ ಸಿಸ್ಟಮ್‌ಆಪರೇಷನ್‌ ಕಾರ್ಪೋರೇಷನ್‌ ಲಿಮಿಟೆಡ್‌ ವಿಭಾಗ ಹೇಳಿದೆ. ನ್ಯೂಕ್ಲಿಯರ್‌ ಪವರ್‌ ಕಾರ್ಪೋರೇಷನ್‌ ಆಫ್‌ ಇಂಡಿಯಾ ಲಿಮಿಟೆಡ್‌ಗೆ (ಎನ್‌ಪಿಸಿಐಎಲ್‌) ಸೇರಿದ ಘಟಕವು ಕಳೆದ ನವೆಂಬರ್‌ 5 ರಂದು ರಿಯಾಕ್ಟರ್‌ ನಿರ್ವಹಣೆಗಾಗಿ ಅಣು ವಿದ್ಯುತ್‌ ಉತ್ಪಾದನೆಯನ್ನು ಕೆಲ ದಿನಗಳ ಮಟ್ಟಿಗೆ ಸ್ಥಗಿತಗೊಳಿಸಿತ್ತು.

ಟಾಪ್ ನ್ಯೂಸ್

BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ

BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ

Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ

Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ

ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ

Loksabha; ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

Anil Kumble Reveals His IPL Bid 2008

IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ

11-belthangady

LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’‌

ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’‌

Modi 3

PM Modi ಏ.28ರಂದು ಉತ್ತರಕನ್ನಡಕ್ಕೆ?; ಯಲ್ಲಾಪುರದಲ್ಲಿ ಬಹಿರಂಗ ಸಮಾವೇಶ?

Bhatkal: ಇಬ್ಬರು ಸಮುದ್ರಪಾಲು

Bhatkal: ಇಬ್ಬರು ಸಮುದ್ರಪಾಲು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ

BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ

We Are The Bad Boys song from Vidyarthi Vidyarthiniyare

Kannada Cinema; ಬ್ಯಾಡ್‌ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…

Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ

Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ

14-fusion

Rural Life: ಗ್ರಾಮೀಣ ಬದುಕಿನ ಮೆಲುಕು

Belagavi; ಸವದಿ ಮನೆಗೆ ಭೇಟಿ ನೀಡಿದ ರಣದೀಪ್ ಸುರ್ಜೆವಾಲಾ

Belagavi; ಸವದಿ ಮನೆಗೆ ಭೇಟಿ ನೀಡಿದ ರಣದೀಪ್ ಸುರ್ಜೆವಾಲಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.