ಮನರಂಜಿಸಿದ ಯಕ್ಷಗಾನ
Team Udayavani, May 24, 2022, 5:27 PM IST
ಯಲ್ಲಾಪುರ: ತಾಲೂಕಿನ ಅಣಲಗಾರ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ ಕೆರೆಮನೆಯ ಕಲಾವಿದರಿಂದ ಪ್ರದರ್ಶನಗೊಂಡ ಹಿರಣ್ಯಾಕ್ಷವಧೆ ಯಕ್ಷಗಾನ ಪ್ರೇಕ್ಷಕರ ಮೆಚ್ಚುಗೆ ಗಳಿಸಿತು. ಹಿಮ್ಮೇಳದಲ್ಲಿ ಭಾಗವತರಾಗಿ ಅನಂತ ಹೆಗಡೆದಂತಳಿಗೆ, ಮದ್ದಲೆವಾದಕರಾಗಿ ನರಸಿಂಹ ಹೆಗಡೆ ಮೂರೂರು, ಚಂಡೆ ವಾದಕರಾಗಿಗಜಾನನ ಹೆಗಡೆ ಮೂರೂರು ಭಾಗವಹಿಸಿದ್ದರು.
ತಿಮ್ಮಪ್ಪ ಹೆಗಡೆ ಶಿರಳಗಿ, ಶ್ರೀಧರ ಹೆಗಡೆಚಪ್ಪರಮನೆ, ಕೆರೆಮನೆ ಶಿವಾನಂದ ಹೆಗಡೆ, ಈಶ್ವರ ಭಟ್ಟ ಅಂಸಳ್ಳಿ, ಕೆರೆಮನೆ ಶ್ರೀಧರ ಹೆಗಡೆ,ಮಹಾವೀರ ಇಂದ್ರಜೈನ್, ಚಂದ್ರಶೇಖರ.ಎನ್, ವಿನಾಯಕ ನಾಯ್ಕ, ಗಣಪತಿ ಕುಣಬಿಬಾರೆ, ಸದಾಶಿವ ಭಟ್ಟ ಮಲವಳ್ಳಿ, ನಕುಲ ಗೌಡ ಪಾತ್ರ ನಿರ್ವಹಿ ಸಿದರು. ಸಂಘಟಕರಾದತಿಮ್ಮಣ್ಣ ಭಾಗÌತ, ಪ್ರಸನ್ನ ಭಾಗÌತ, ಸುಹಾಸ ಭಾಗÌತ ಕಲಾವಿದರನ್ನು ಗೌರವಿಸಿದರು.