ದರೋಡೆ, ವೃದ್ಧೆ ಕೊಲೆ ಪ್ರಕರಣ: ಆರೋಪಿ ಪತ್ತೆಗೆ 3 ವಿಶೇಷ ತಂಡ ರಚನೆ

Team Udayavani, Oct 24, 2021, 1:38 PM IST

crime

 ಹೊಸಪೇಟೆ: ನಗರದ ರಾಣಿಪೇಟೆಯಲ್ಲಿ ಶುಕ್ರವಾರ ಜರುಗಿದ ದರೋಡೆ, ವೃದ್ಧೆ ಕೊಲೆ ಪ್ರಕರಣಕ್ಕೆ ಸಂಬಂಧಿ ಸಿ ತನಿಖೆ ಚುರುಕುಗೊಳಿಸಲಾಗಿದೆ. ತನಿಖೆಗೆ ಮೂರು ವಿಶೇಷ ತಂಡ ರಚನೆ ಮಾಡಲಾಗಿದ್ದು, ಆರೋಪಿಗಳ ಶೀಘ್ರ ಪತ್ತೆ ಹಚ್ಚಲಾಗುವುದು ಎಂದು ವಿಜಯನಗರ ಜಿಲ್ಲಾ ಎಸ್ಪಿ ಅರುಣ್‌ ಕೆ. ತಿಳಿಸಿದರು.

ನಗರದ ಡಿವೈಎಸ್ಪಿ ಕಚೇರಿಯಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಐವರು ದರೋಡೆಕೋರರ ತಂಡ ಸೀರೆ ಖರೀದಿ ನೆಪದಲ್ಲಿ ಬಂದು ರಾಣಿಪೇಟೆ ನಿವಾಸಿ ಭುವನೇಶ್ವರಿ (68)ಯವರನ್ನು ಕೊಲೆ ಮಾಡಿ 3 ಲಕ್ಷ ರು. ನಗದು ಹಾಗೂ 100 ಗ್ರಾಂ. ಚಿನ್ನ ಕದ್ದು ಪರಾರಿಯಾಗಿದೆ. ಭುವನೇಶ್ವರಿ ಅವರ ಜೊತೆಗಿದ್ದ ಶಿವಭೂಷಣಮ್ಮ ಗಾಯಗೊಂಡಿದ್ದು, ಆಘಾತಕ್ಕೊಳಗಾಗಿದ್ದಾರೆ. ಅವರಿಗೆ ಚಿಕಿತ್ಸೆ ಕೊಡಿಸಲಾಗಿದ್ದು ಅವರು ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದರು.

ಹೊಸಪೇಟೆ ಡಿವೈಎಸ್ಪಿ ವಿಶ್ವನಾಥರಾವ್‌ ಕುಲಕರ್ಣಿ ನೇತೃತ್ವದಲ್ಲಿ ಪಟ್ಟಣ ಠಾಣೆ ಪಿಐ ಶ್ರೀನಿವಾಸ್‌, ಚಿತ್ತವಾಡ್ಗಿ ಪಿಐ ಜಯಪ್ರಕಾಶ ಮತ್ತು ಗ್ರಾಮೀಣ ಠಾಣೆ ಪಿಐ ಶ್ರೀನಿವಾಸ ಮೇಟಿ ಅವರನ್ನೊಳಗೊಂಡ ತಂಡ ತನಿಖೆ ಕೈಗೊಂಡಿದೆ. ಅಂತಾರಾಜ್ಯ ಇಲ್ಲವೇ ಅಂತರ್‌ ಜಿಲ್ಲಾ ದರೋಡೆಕೋರ ತಂಡ ಕೃತ್ಯ ನಡೆಸಿದೆಯೇ ಎಂಬುದನ್ನೂ ಪರಿಶೀಲಿಸಲಾಗುತ್ತಿದೆ. ಗುರುವಾರ ದಿನ ಇದೇ ತಂಡದ ಇಬ್ಬರು ರಾಣಿಪೇಟೆಯಲ್ಲಿರುವ ಭುವನೇಶ್ವರಿ ಅವರ ಮನೆಗೆ ಬಂದು ಹೋಗಿದೆ. ಶುಕ್ರವಾರ ಬಂದು ಸೀರೆ ಖರೀದಿ ನೆಪದಲ್ಲಿ ಕೊಲೆ ಮಾಡಿದೆ. ಸಿಸಿ ಕ್ಯಾಮೆರಾ ಪರಿಶೀಲನೆ ನಡೆಸಲಾಗುತ್ತಿದೆ. ಎಲ್ಲ ದಿಸೆಯಲ್ಲಿ ತನಿಖೆ ಕೈಗೊಳ್ಳಲಾಗುತ್ತಿದ್ದು, ಆರೋಪಿಗಳ ಪತ್ತೆಗೆ ಜಾಲ ಬೀಸಲಾಗಿದೆ ಎಂದರು. ದರೋಡೆಕೋರರು ಮನೆ ಬಾಗಿಲುಮುಚ್ಚಿ, ಬಾಯಿಗೆ ಬಟ್ಟೆ ಹಾಕಿದ್ದಾರೆ. ಬಾಯಿಗೆ ಬಟ್ಟೆ ಹಾಕಿದ್ದರಿಂದ ಭುವನೇಶ್ವರಿ ಅವರು ಉಸಿರಾಟದ ಸಮಸ್ಯೆಯಿಂದ ಮೃತಪಟ್ಟಿರಬಹುದು ಎಂದು ಮೇಲ್ನೋಟಕ್ಕೆ ಕಂಡುಬರುತ್ತದೆ. ಮೈಮೇಲೆ ಯಾವುದೇ ಗಾಯದ ಗುರುತುಗಳಿಲ್ಲ. ಪೋಸ್ಟ್‌ ಮಾರ್ಟಮ್‌ ವರದಿಯಿಂದ ಎಲ್ಲವೂ ತಿಳಿಯಲಿದೆ ಎಂದರು.

ಕಳೆದ 40 ವರ್ಷಗಳಿಂದ ಭುವನೇಶ್ವರಿ ಹಾಗೂ ಶಿವಭೂಷಣಮ್ಮ ಅವರು ಮನೆಯಲ್ಲೇ ಬಟ್ಟೆ ವ್ಯಾಪಾರ ಮಾಡುತ್ತಿದ್ದರು. ಖರೀದಿ ನೆಪದಲ್ಲಿ ದರೋಡೆ ಮಾಡಲು ತಂಡ ಬಂದು ಕೃತ್ಯವೆಸಗಿದೆ. ಮನೆಯಲ್ಲಿ ಹಣ ಹಾಗೂ ಒಡವೆಗೂ ಹುಡುಕಾಟ ನಡೆಸಿದೆ. ಭುವನೇಶ್ವರಿ ಅವರ ಮೈಮೇಲಿದ್ದ ಒಡವೆ ಹಾಗೂ ಮನೆಯಲ್ಲಿದ್ದ 3 ಲಕ್ಷ ರು. ಕದ್ದು ಮನೆ ಹಿಂಬಾಗಿಲಿನಿಂದ ಪರಾರಿಯಾಗಿದೆ ಎಂದು ತಿಳಿಸಿದರು. ಜನವಸತಿ ಪ್ರದೇಶದಲ್ಲೇ ಕೊಲೆ ನಡೆದಿರುವ ಹಿನ್ನೆಲೆ ರಾಣಿಪೇಟೆ ಸೇರಿ ನಗರದ ಜನರು ಸಹಜವಾಗಿ ಆತಂಕಗೊಂಡಿದ್ದಾರೆ. ಆದರೆ ಜನ ಆತಂಕಗೊಳ್ಳುವುದು ಬೇಡ. ನಗರದಲ್ಲಿ ಪೊಲೀಸ್‌ ಗಸ್ತು ಹೆಚ್ಚಿಸಲಾಗುವುದು. ಮನೆಗಳಲ್ಲಿ ಬೆಲೆ ಬಾಳುವ ವಸ್ತುಗಳನ್ನು ಇಡಬಾರದು. ಬ್ಯಾಂಕ್‌ಗಳ ಲಾಕರ್‌ಗಳಲ್ಲಿ ಇಡಬೇಕು. ಶಂಕಾಸ್ಪದ ವ್ಯಕ್ತಿಗಳು ಕಂಡುಬಂದರೆ 112 ನಂಬರ್‌ಗೆ ಕರೆ ಮಾಡಬೇಕು. ನವೆಂಬರ್‌ ಒಂದರಿಂದ ನಗರದ ವಿದ್ಯಾನಗರದ ಡಾ| ಬಾಬು ಜಗಜೀವನರಾಂ ಭವನದಲ್ಲಿ ತಾತ್ಕಾಲಿಕ ಎಸ್ಪಿ ಕಚೇರಿ ಆರಂಭಗೊಳ್ಳಲಿದೆ. ಎಸ್ಪಿ ಕಚೇರಿಗೆ 120 ಸಿಬ್ಬಂದಿ ನಿಯೋಜನೆಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕೋಲಾರದ ಕೆಜಿಎಫ್‌ನ ಸಿಬ್ಬಂದಿಯನ್ನು ವಿಜಯನಗರಕ್ಕೆ ನಿಯೋಜನೆ ಮಾಡುವ ಪ್ರಕ್ರಿಯೆ ಸರ್ಕಾರದ ಹಂತದಲ್ಲಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಡಿವೈಎಸ್ಪಿ ವಿಶ್ವನಾಥ ರಾವ್‌ ಕುಲಕರ್ಣಿ ಇದ್ದರು.

ಟಾಪ್ ನ್ಯೂಸ್

ಆಸ್ಟ್ರೇಲಿಯನ್‌ ಓಪನ್‌-2022: ನಾಲ್ಕನೇ ಸುತ್ತಿಗೆ ನೆಗೆದ ಮಿನೌರ್‌, ಮೆಡ್ವೆಡೇವ್‌, ಹಾಲೆಪ್‌

ಆಸ್ಟ್ರೇಲಿಯನ್‌ ಓಪನ್‌-2022: ನಾಲ್ಕನೇ ಸುತ್ತಿಗೆ ನೆಗೆದ ಮಿನೌರ್‌, ಮೆಡ್ವೆಡೇವ್‌, ಹಾಲೆಪ್‌

ಖ್ಯಾತ ಫುಟ್ಬಾಲಿಗ ಸುಭಾಷ್‌ ಭೌಮಿಕ್‌ ನಿಧನ

ಖ್ಯಾತ ಫುಟ್ಬಾಲಿಗ ಸುಭಾಷ್‌ ಭೌಮಿಕ್‌ ನಿಧನ

ಪ್ರೊ ಕಬಡ್ಡಿ: ಬೆಂಗಳೂರು ಬುಲ್ಸ್‌ಗೆ ಹ್ಯಾಟ್ರಿಕ್‌ ಸೋಲು

ಪ್ರೊ ಕಬಡ್ಡಿ: ಬೆಂಗಳೂರು ಬುಲ್ಸ್‌ಗೆ ಹ್ಯಾಟ್ರಿಕ್‌ ಸೋಲು

ಒಮಿಕ್ರಾನ್‌ನ ಉಪತಳಿ ಪತ್ತೆ; ಭಾರತಕ್ಕೂ ಹಬ್ಬಿರುವ ಸಾಧ್ಯತೆ

ಒಮಿಕ್ರಾನ್‌ನ ಉಪತಳಿ ಪತ್ತೆ; ಭಾರತಕ್ಕೂ ಹಬ್ಬಿರುವ ಸಾಧ್ಯತೆ

ಸೋಂಕು ದೃಢಪಟ್ಟವರಿಗೆ 3 ತಿಂಗಳ ಬಳಿಕವೇ ಮುನ್ನೆಚ್ಚರಿಕಾ ಡೋಸ್‌

ಕೋವಿಡ್‌ ಸೋಂಕು ದೃಢಪಟ್ಟವರಿಗೆ 3 ತಿಂಗಳ ಬಳಿಕವೇ ಮುನ್ನೆಚ್ಚರಿಕಾ ಡೋಸ್‌

ಗಣರಾಜ್ಯೋತ್ಸವ: ಅಬೈಡ್‌ ವಿತ್‌ ಮಿ ಗೀತೆ ಬಳಕೆಯಿಲ್ಲ

ಗಣರಾಜ್ಯೋತ್ಸವ: ಅಬೈಡ್‌ ವಿತ್‌ ಮಿ ಗೀತೆ ಬಳಕೆಯಿಲ್ಲ

ರಾಜ್ಯದಲ್ಲಿ ಇಂದು 42,470 ಕೋವಿಡ್ ಪ್ರಕರಣ ಪತ್ತೆ : 26 ಮಂದಿ ಸಾವು

ರಾಜ್ಯದಲ್ಲಿ ಇಂದು 42,470 ಕೋವಿಡ್ ಪ್ರಕರಣ ಪತ್ತೆ : 26 ಮಂದಿ ಸಾವುಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಚ್ಗಹಕಿ,ಮಹಗ್​ಸಅದೆಗ

ಗಗನಕ್ಕೇರಿದ ಬೆಲೆಗಳ ನಡುವೆ ಸಂಕ್ರಾಂತಿಗೆ ಅದ್ದೂರಿ  ಸ್ವಾಗತ 

ಮೇಲ್ಮನೆಯಲ್ಲಿ ಬಿಜೆಪಿಗೆ 16 ಸ್ಥಾನ ನಿಶ್ಚಿತ: ಕಾರಜೋಳ

ಮೇಲ್ಮನೆಯಲ್ಲಿ ಬಿಜೆಪಿಗೆ 16 ಸ್ಥಾನ ನಿಶ್ಚಿತ: ಕಾರಜೋಳ

ಹೊಸಪೇಟೆ: ಸೀರೆ ಖರೀದಿ ನೆಪದಲ್ಲಿ ಮನೆಗೆ ನುಗ್ಗಿ ವೃದ್ಧೆ ಕೊಲೆಗೈದು ಪರಾರಿಯಾದ ದರೋಡೆಕೋರರು.!

ಹೊಸಪೇಟೆ: ಸೀರೆ ಖರೀದಿ ನೆಪದಲ್ಲಿ ಮನೆಗೆ ನುಗ್ಗಿ ವೃದ್ಧೆ ಕೊಲೆಗೈದು ಪರಾರಿಯಾದ ದರೋಡೆಕೋರರು.!

ಸದಾಶಿವ ಆಯೋಗದ ವರದಿ ಜಾರಿಗೆ ಆಗ್ರಹ

ಸದಾಶಿವ ಆಯೋಗದ ವರದಿ ಜಾರಿಗೆ ಆಗ್ರಹ

Untitled-6

ಒಳ ರಸ್ತೆ ಅಭಿವೃದ್ಧಿಗೆ 5 ಕೋಟಿ ರೂ. ಅನುದಾನ

MUST WATCH

udayavani youtube

ಮಧ್ವರಾಜ್ ಮನದಾಳದ ಮಾತು

udayavani youtube

ಫಾರ್ಮ್‌ಹೌಸ್‌ನಲ್ಲಿ ಸಿನಿಮಾ ತಾರೆಯರ ಶವ ಸಮಾಧಿ ಆರೋಪ ! ನ್ಯಾಯಾಲಯದ ಮೊರೆ ಸಲ್ಲು

udayavani youtube

ಅಮಿತ್ ಶಾರಿಂದ ಮನೆ ಮನೆ ಪ್ರಚಾರ

udayavani youtube

ಗಣರಾಜ್ಯೋತ್ಸವ paradeಗಾಗಿ ಭಾರತೀಯ ನೌಕಾಪಡೆ ಉತ್ಸಾಹದಿಂದ ತಯಾರಿ ನಡೆಸುತ್ತಿದೆ

udayavani youtube

Viral Video: ನೀರಿನಲ್ಲಿ ಮುಳುಗುತ್ತಿದ್ದ ಜಿಂಕೆ ಮರಿಯನ್ನು ರಕ್ಷಿಸಿದ ನಾಯಿ

ಹೊಸ ಸೇರ್ಪಡೆ

ಆಸ್ಟ್ರೇಲಿಯನ್‌ ಓಪನ್‌-2022: ನಾಲ್ಕನೇ ಸುತ್ತಿಗೆ ನೆಗೆದ ಮಿನೌರ್‌, ಮೆಡ್ವೆಡೇವ್‌, ಹಾಲೆಪ್‌

ಆಸ್ಟ್ರೇಲಿಯನ್‌ ಓಪನ್‌-2022: ನಾಲ್ಕನೇ ಸುತ್ತಿಗೆ ನೆಗೆದ ಮಿನೌರ್‌, ಮೆಡ್ವೆಡೇವ್‌, ಹಾಲೆಪ್‌

ಖ್ಯಾತ ಫುಟ್ಬಾಲಿಗ ಸುಭಾಷ್‌ ಭೌಮಿಕ್‌ ನಿಧನ

ಖ್ಯಾತ ಫುಟ್ಬಾಲಿಗ ಸುಭಾಷ್‌ ಭೌಮಿಕ್‌ ನಿಧನ

ಪ್ರೊ ಕಬಡ್ಡಿ: ಬೆಂಗಳೂರು ಬುಲ್ಸ್‌ಗೆ ಹ್ಯಾಟ್ರಿಕ್‌ ಸೋಲು

ಪ್ರೊ ಕಬಡ್ಡಿ: ಬೆಂಗಳೂರು ಬುಲ್ಸ್‌ಗೆ ಹ್ಯಾಟ್ರಿಕ್‌ ಸೋಲು

ಒಮಿಕ್ರಾನ್‌ನ ಉಪತಳಿ ಪತ್ತೆ; ಭಾರತಕ್ಕೂ ಹಬ್ಬಿರುವ ಸಾಧ್ಯತೆ

ಒಮಿಕ್ರಾನ್‌ನ ಉಪತಳಿ ಪತ್ತೆ; ಭಾರತಕ್ಕೂ ಹಬ್ಬಿರುವ ಸಾಧ್ಯತೆ

ಸೋಂಕು ದೃಢಪಟ್ಟವರಿಗೆ 3 ತಿಂಗಳ ಬಳಿಕವೇ ಮುನ್ನೆಚ್ಚರಿಕಾ ಡೋಸ್‌

ಕೋವಿಡ್‌ ಸೋಂಕು ದೃಢಪಟ್ಟವರಿಗೆ 3 ತಿಂಗಳ ಬಳಿಕವೇ ಮುನ್ನೆಚ್ಚರಿಕಾ ಡೋಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.